ಬೆಂಗಳೂರು: ಕಾಲ್ತುಳಿತ ಪ್ರಕರಣದ ಬಗ್ಗೆ ವಿಧಾನಸಭೆಲ್ಲಿ ಗೃಹ ಸಚಿವ ಪರಮೇಶ್ವರ ಉತ್ತರ ನೀಡಿದರು. ಕರ್ನಾಟಕದ ಕ್ರೀಡಾ ಇತಿಹಾಸದಲ್ಲೇ ಇಂತಹ ಘಟನೆ ನಡೆದಿರಲಿಲ್ಲ. ಇಡೀ ದೇಶವೇ ನೋಡುವಂತೆ ಚಿನ್ನಸ್ವಾಮಿ ಕ್ರೀಡಾಂಗಣದ ಘಟನೆ ಮಾಡ್ತು. ಕಾಲ್ತುಳಿತದಿಂದ ಹನ್ನೊಂದು ಮಂದಿ ಸಾವನ್ನಪ್ಪಿದರು. ಬಹಳ ನೋವಿನ ಸಂಗತಿ ಇದು. ಯಾವುದೇ ಸಮಾಜ ಇದನ್ನು ಲಘುವಾಗಿ ತಗೊಳ್ಳೋಕೆ ಆಗಿಲ್ಲ. ಮೊದಲ ದಿನವೇ ಹನ್ನೊಂದು ಮಂದಿಗೆ ಸಂತಾಪ ಸೂಚಿಸಿದ್ದೇವೆ. ಇವಾಗ್ಲೂ ಸಂತಾಪ ಸೂಚಿಸ್ತಾ, ದುಃಖತಪ್ತ ಕುಟುಂಬದ ವರಿಗೆ ದುಃಖ ಭರಿಸುವ ಶಕ್ತಿ ಕೊಡಲಿ. ಬಹುಶಃ ನಮ್ಮ ಪ್ರಾರ್ಥನೆ ಯಿಂದ ಸತ್ತಿರೋರು ಏನು ಬದುಕಿ ಬರಲ್ಲ.ಆದರೆ ಅವರಿಗೆ ಒಂದಿಷ್ಟು ಧೈರ್ಯ ತುಂಬಬಹದು ಅದಕ್ಕೆ ಆ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇವೆ ಎಂದರು.
ಅಶೋಕ್ ಅವರ ಮಾತನ್ನು ನಾನು ಅನೇಕ ಬಾರಿ ಕೇಳಿದ್ದೇನೆ. ಅವರ ರಾಜಕೀಯ ಜೀವನದಲ್ಲಿ ಒಳ್ಳೆಯ ಚೆನ್ನಾಗಿ ಮಾತಾಡಿದ್ದಾರೆ. ಎಲ್ಲಿ ತಪ್ಪಾಗಿದೆ ಎಂದು ಸರಿಯಾಗಿ ಎಳೆ ಎಳೆಯಾಗಿ ಮಾತಾಡಿದ್ದಾರೆ ಎಂದು ಅಶೋಕ್ ರನ್ನು ಪರಮೇಶ್ವರ್ ಹೊಗಳಿದ್ದಾರೆ.ಕಾಲ್ತುಳಿತ ಆಗುವಂತದ್ದನ್ನು ಯಾರು ಊಹಿಸೋಕೆ ಆಗಲ್ಲ. ಆಕಸ್ಮಿಕವಾಗಿ ಆಗುವಂತ ಸಂದರ್ಭ ಅಷ್ಟೇ. ದೇಶದ ಅನೇಕ ಕಡೆಗಳಲ್ಲಿ ಕಾಲ್ತುಳಿತ ಘಟನೆ ಗಳಾಗಿವೆ. ಹಾಗಂತ ನಾನು ಸಮರ್ಥನೆ ಮಾಡಿಕೊಳ್ಳೋದಿಲ್ಲ.ರಾಜ್ ಕುಮಾರ್ ನಿಧನರಾದಾಗ 7 ಸಾವನ್ನಪ್ಪುತ್ತಾರೆ. ಆಕಸ್ಮಿಕವಾಗಿ ನಡೆದಾಗ ಆದಂತ ಘಟನೆಗಳು ಇವು ಎಂದು ಹೇಳಿದರು.
ಕಾಲ್ತುಳಿತ ಪ್ರಕರಣದಲ್ಲಿ ಕಾನೂನು ಪ್ರಕಾರ ಕೇಸ್ ನಡೀತಿದೆ. ಮ್ಯಾಜಿಸ್ಟ್ರಿಯಲ್ ತನಿಖೆಯಲ್ಲಿ ಆರ್‌ಸಿಬಿ ವರ್ಸಸ್ ಪಂಜಾಬ್ ನಡುವೆ ಫೈನಲ್ ಆಟ ನಡೆಯುವಾಗಲೇ ಆರ್‌ಸಿಬಿ ಗೆದ್ದರೆ ಏನ್ ಮಾಡಬೇಕು ಅಂತ ಅಲ್ಲಿಯೇ ಚರ್ಚೆ ಮಾಡಿದ್ದಾರೆ. ನಂತರ ಆರ್‌ಸಿಬಿನವ್ರು ಕೆಎಸ್‌ಸಿಎ ಜತೆ ಚರ್ಚೆ ಮಾಡಿ ಸನ್ಮಾನ ಮಾಡಲು ತೀರ್ಮಾನಿನಿಸ್ತಾರೆ. ಕೆಎಸ್‌ಸಿಎ ಕಾರ್ಯಕ್ರಮ ಸರ್ಕಾರದ ನಿರ್ಧಾರ ಅಲ್ಲ ಸ್ಪಷ್ಟ ಪಡಿಸಿದರು.
ಕಾಲ್ತುಳಿತ ಯಾರೂ ಊಹೆ ಮಾಡಿಲ್ಲ, ಆಕಸ್ಮಿಕವಾಗಿ ಆಗಿದೆ. ಅನೇಕ ಕಡೆ ಕಾಲ್ತುಳಿತಗಳು ಆಗಿವೆ, ಹಾಗಂತ ನಾನು ಸಮರ್ಥನೆ ಮಾಡಿಕೊಳ್ತಿಲ್ಲ. ವೈದ್ಯನಾಥ ಜ್ಯೋತಿರ್ಲಿಂಗ ಕಾಲ್ತುಳಿತಕ್ಕೆ 10 ಜನ ಸಾವು, ತಿರುವಣ್ಣಾಮಲೈ ಕಾಲ್ತುಳಿತ 4 ಜನ ಸಾವು, ಮಹಾಕುಂಭಮೇಳ 6 ಜನ ಸಾವು, ವೈಷ್ಣೋದೇವಿ ಉತ್ಸವ 12 ಸಾವು, ಪುರಿ ಉತ್ಸವ 9 ಜನ ಸಾವು, ಕೇರಳ ಸಂಗೀತೋತ್ಸವದಲ್ಲಿ 4 ಜನ, ಇಂದೋರ್ ರಾಮನವಮಿ 36 ಜನ ಸಾವು, ಯುಪಿಯ ಹತ್ರಾಸ್ ನಲ್ಲಿನ ಕಾಲ್ತುಳಿತಕ್ಕೆ 121 ಜನ ಸಾವು, ತಿರುಮಲ ಬೆಟ್ಟದಲ್ಲಿ ಕಾಲ್ತುಳಿತಕ್ಕೆ 6 ಜನ, ಇತ್ತೀಚೆಗೆ ಮಹಸಕುಂಭಮೇಳದಲ್ಲಿ 39 ಜನ ಕಾಲ್ತುಳಿತಕ್ಕೆ ಸಾಯ್ತಾರೆ. ರಾಜ್ಯದಲ್ಲಿ ಡಾ.ರಾಜ್ ನಿಧನ ವೇಳೆ 7 ಜನ ಸಾವು, ಕಾರ್ಲಟನ್ ಟವರ್ ಕಟ್ಟಡ ದುರಂತದಲ್ಲಿ 9 ಸಾವು, ಗಂಗಾರಾಮ್ ಕಟ್ಟಡ ದುರಂತ 127 ಸಾವು ಆಗುತ್ತೆ. ಇವೆಲ್ಲ ಆಕಸ್ಮಿಕವಾಗಿ ನಡೆದ ದುರಂತಗಳು ಅಂತ ಹೇಳೋದಿಕ್ಕೆ ಇವನ್ನು ಪ್ರಸ್ತಾಪ ಮಾಡಿದ್ದೇನೆ ಎಂದು ತಿಳಿಸಿದರು.
ಗುಜರಾತ್ ಟೈಟಾನ್ ಗೆದ್ದಾಗ ಗುಜರಾತ್ ಸರ್ಕಾರ ಸನ್ಮಾನ ಮಾಡ್ತು. ಆಗ ಮೋದಿಯವ್ರೂ ಭಾಗವಹಿಸಿದ್ರು ಚೆನ್ನೈನಲ್ಲಿ ಅಲ್ಲಿನ ಸಿಎಂ ಭಾಗವಹಿಸಿದ್ರು, ಸ್ಟಾಲಿನ್ ಕಪ್ ಹಿಡಿದಿದ್ರು ಎಂದು ಪರಮೇಶ್ವರ್ ಉದಾಹರಣೆ ನೀಡಿದ್ದಾರೆ. ಈವೇಳೆ ಡಿಕೆಶಿ ಕಪ್ ಗೆ ಮುತ್ತಿಟ್ಟಂತೆ ಸ್ಟಾಲಿನ್ ಮುತ್ತಿಡಲಿಲ್ವಲ್ಲ ಅಂತ ಅಶೋಕ್ ಕಾಲೆಳೆದಿದ್ದಾರೆ. ಕಾಲ್ತುಳಿತಕ್ಕೆ ನಮ್ಮ ಅಧಿಕಾರಿಗಳೂ ಕಾರಣ ಅಂತ ಅವರ ಮೇಲೂ ಕ್ರಮವಾಗಿದೆ, ಇಲಾಖಾ ತನಿಖೆ ನಡೀತಿದೆ. ಗೋವಿಂದರಾಜು ಅವರನ್ನೂ ಅವರ ಹುದ್ದೆಯಿಂದ ತೆಗೆದಿದ್ದಾರೆ ಸಿಎಂ. ತಪ್ಪು ಮಾಡಿದವರ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿದೆ. ಮೃತ 11 ಜನರ ಕುಟುಂಬಕ್ಕೆ ಸರ್ಕಾರ ತಲಾ 25 ಲಕ್ಷ ಪರಿಹಾರ ಕೊಟ್ಟಿದ್ದೇವೆ ಎಂದರು. ಗಾಯಾಳುಗಳ ಚಿಕಿತ್ಸೆ ವೆಚ್ಚವನ್ನು ಸರ್ಕಾರ ಭರಿಸಿದೆ. ಗುಪ್ತಚರ ವಿಭಾಗದ ವೈಫಲ್ಯಕ್ಕೂ ಅದರ ಮುಖ್ಯಸ್ಥರನ್ನು ಬೇರೆಡೆ ವರ್ಗಾವಣೆ ಮಾಡಲಾಯಿತು. ಈ ಪ್ರಕರಣ ಹೈಕೋರ್ಟ್ ನಲ್ಲಿ ನಡೀತಿದೆ, ಅದರ ಫಲಿತಾಂಶ ಎದುರು ನೋಡ್ತಿದ್ದೇವೆ ಎಂದರು.











