ಮನೆ Latest News ಮಂಗಳೂರು ಕೋಮು ಹತ್ಯೆಗಳ ಕುರಿತು ಅಧ್ಯಯನ ನಿಯೋಗದಿಂದ ವರದಿ ಸಲ್ಲಿಕೆ

ಮಂಗಳೂರು ಕೋಮು ಹತ್ಯೆಗಳ ಕುರಿತು ಅಧ್ಯಯನ ನಿಯೋಗದಿಂದ ವರದಿ ಸಲ್ಲಿಕೆ

0
ಬೆಂಗಳೂರು : ಮಂಗಳೂರು ಕೋಮು ಹತ್ಯೆಗಳ ಕುರಿತು ಅಧ್ಯಯನ ನಿಯೋಗ ಇಂದು  ಕೆಪಿಸಿಸಿ ಕಚೇರಿಯಲ್ಲಿ ಮಧ್ಯಂತರ ವರದಿ ಸಲ್ಲಿಸಿದೆ.
ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ನೇತೃತ್ವದಲ್ಲಿ ರಚಿಸಲಾಗಿದ್ದ ನಿಯೋಗ  ಉಡುಪಿ ಹಾಗೂ ಮಂಗಳೂರಿಗೆ ಭೇಟಿ ನೀಡಿತ್ತು.
ಇಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೆ  ನಿಯೋಗ ಮಧ್ಯಂತರ ವರದಿ ಸಲ್ಲಿಸಿದೆ.
ವರದಿ ಸ್ವೀಕರಿಸಿದ ಬಳಿಕ ಮಾತನಾಡಿದ ಡಿ ಕೆ ಶಿವಕುಮಾರ್ ನಿಯೋಗದ ಹಲವಾರು ಕರಾವಳಿ ಗೆ ಹೋಗಿದ್ದರು. ರಾಜ್ಯದ ಹಿತಕ್ಕೆ ಕರಾವಳಿ ಪ್ರದೇಶದ ಬದುಕಿಗೆ ಕಾರ್ಯಕ್ರಮ ರೂಪಿಸಬೇಕೆಂದು ನಮ್ಮ ಆಸೆ. ಈ ರೀತಿಯ ಘಟನೆಗಳು ಆತಂಕ ಹುಟ್ಟುಹಾಕಿದೆ. ಜನರಲ್ಲಿ ದ್ವೇಷ ಹುಟ್ಟಿದಿದೆ, ಸರಣಿ ಕೊಲೆ‌ಆಗಿದ್ದು ನೋಡಿದ್ದೇವೆ. ಈಗಾಗಲೇ ನಮ್ಮ ಸರ್ಕಾರ ಅನೇಕ ಕ್ರಮ ತೆಗೆದುಕೊಂಡಿದೆ.
ಅದರಂತೆ ಪಕ್ಷದ ವತಿಯಿಂದ ಜನರ ಭಾವನೆ, ಪರಿಸ್ಥಿತಿ ಬಗ್ಗೆ ಅರ್ಥ ಮಾಡಿಕೊಳ್ಳಲು ನಿಯೋಗ ಕಳಿಸಿದ್ವಿ. ಅದರಂತೆ ಅನೇಕ ಸಲಹೆ ಬಂದಿದೆ ಎಂದರು
ನಾಸೀರ್ ಹುಸೇನ್ ಮಾತನಾಡಿ  ಮಂಗಳೂರಲ್ಲಿ ಮೂರು ದಿನ ಇದ್ದು ಮಾತುಕತೆ ಮಾಡಿದ್ವಿ. ಸಮುದಾಯವಾರು ಸಭೆ, ಸಮಾರಂಭ ಮಾಡಿದ್ವಿ. ಎಲ್ಲರ ಜೊತೆ ಚರ್ಚೆ ಮಾಡಿದ್ವಿ. ಯಾಕೆ ಈ ರೀತಿ ಆಗ್ತಿದೆ? ಯಾಕೆ ಕೊಲೆಯಾಗ್ತಿದೆ, ಯಾಕೆ ಹೀಗೆ ಆಗ್ತಿದೆ. ಕರಾವಳಿಯಲ್ಲಿ ಇಂತಹ ಘಟನೆ ಏಕೆ ನಡೀತಿದೆ ಅನ್ನೋದರ ಬಗ್ಗೆ ಚರ್ಚೆ ಮಾಡಿದ್ವಿ. ಸುದರ್ಶನ್, ಹ್ಯಾರಿಸ್ ಅವರು ಕೂಡ ಬಂದಿದ್ದರು. ಆಡಳಿತ ಮತ್ತು ಕಾನೂನಾತ್ಮಕ ವಾಗಿ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು?. ಹೀಗೆ ಹತ್ತಾರು ವಿಷ್ಯಗಳ ಬಗ್ಗೆ ಚರ್ಚೆ ಮಾಡಿದ್ವಿ. ಎಜುಕೇಷನ್ ಹಬ್ ಆಗಿದೆ ಕರಾವಳಿ. ಈಗ ಇರೋ ಪರಿಸ್ಥಿತಿ ಏನು? ಸಮುದಾಯ ಗಳಿಗೆ ಹೇಗೆ ಸಂದೇಶ ನೀಡಬೇಕು ಎಂದು ಚರ್ಚೆ ಮಾಡಿದ್ವಿ ಎಂದು ತಿಳಿಸಿದ್ರು.
ದಕ್ಷಿಣಕನ್ನಡ ಜಿಲ್ಲೆ ಸಾಂಸ್ಕೃತಿಕ ಶೈಕ್ಷಣಿಕ ಮತ್ತು ಆರ್ಥಿಕ ವಾಗಿ ದೊಡ್ಡ ಕೊಡುಗೆ ನೀಡಿದೆ. ಜನ ವಲಸೆ‌ ಹೋಗ್ತಿದ್ದಾರೆ, ಉಡುಪಿ, ದ ಕ ಮುಖ್ಯ. ಇದುವರೆಗೂ ನಾವು ಏನು ಮಾಡಬೇಕು ಎಂದು ನಾನು ಕಲಿಸಿಕೊಟ್ಟಿದೆ. ಈಗ ಮಧ್ಯಂತರ ವರದಿ ನೀಡಿದ್ದಾರೆ, ಅದನ್ನ ಸ್ಟಡಿ ಮಾಡಬೇಕು. ಏನು ತೀರ್ಮಾನ ಮಾಡಿದ್ದೇವೆ ಎಂದು ಹೇಳುತ್ತೇನೆ. ನಿಮ್ಮ ಎದುರಿಗೆ ರಿಪೋರ್ಟ್ ನೀಡಿದ್ದಾರೆ, ಅದನ್ನ ಓದಬೇಕು. ಅವರು ರಾಜ್ಯದ ಹಿತಕ್ಕೆ ವರದಿ ನೀಡಿದ್ದಾರೆ. ಅದನ್ನ ಓದಿ ನಾನು ನಿಮಗೆ ತಿಳಿಸುತ್ತೇವೆ. ಭಾವನೆ‌ ಮೇಲೆ ರಾಜಕಾರಣ ಮಾಡಬೇಡಿ,ದ್ವೇಷ ಮನೋಭಾವನೆ‌ ಇರಬಾರದು ಸಂವಿಧಾನದ ವಿರೋಧ ನೀತಿ ಇದಕ್ಕೆ ಕಾರಣ. ಸ್ಪೀಕರ್ ಮೇಲೆ ಮಾತನಾಡುವುದಕ್ಕೆ  ಶಕ್ತಿ ನನ್ನಲ್ಲಿ ಇಲ್ಲ ಎಂದಿದ್ದಾರೆ.