ಮನೆ Latest News ಶ್ರೀರಾಮುಲು ಜೊತೆ ಸಂಪರ್ಕದಲ್ಲಿದ್ದೇನೆ: ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ

ಶ್ರೀರಾಮುಲು ಜೊತೆ ಸಂಪರ್ಕದಲ್ಲಿದ್ದೇನೆ: ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ

0

ಬೆಂಗಳೂರು;  ಮಾಜಿ ಸಚಿವ ಬಿ ಶ್ರೀರಾಮುಲು ಅವರು ಕಾಂಗ್ರೆಸ್ ಸೇರಲ್ಲ, ಅಲ್ಲೇ ಏನೇನೋ‌ ಇದೆ.ಅಲ್ಲಿಗೆ ಯಾಕೆ ಹೋಗುತ್ತಾರೆ? ಶ್ರೀರಾಮುಲು ಜೊತೆ ಸಂಪರ್ಕದಲ್ಲಿದ್ದೇನೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.

ಶ್ರೀರಾಮುಲು ಇಲ್ಲಿ ಕೋರ್ ಕಮಿಟಿ ಸದಸ್ಯರು. ಎಲ್ಲವೂ ಸುಖಾಂತ್ಯ ಆಗಲಿದೆ. ಸಂಡೂರು ಬೈ ಎಲೆಕ್ಷನ್ ಗೆಲ್ಲಬಹುದಿತ್ತು ಅಂತ ಚರ್ಚೆ ಆಗುತ್ತಿತ್ತು. ಆ ವೇಳೆ ಈ ಮಾತು ಚರ್ಚೆಗೆ ಬಂದಿದೆ ಅಷ್ಟೇ. ಜನಾರ್ದನ ರೆಡ್ಡಿ ಬಳಿಯೂ ಮಾತಾಡುತ್ತೇನೆ. ಶ್ರೀರಾಮುಲು ಪಕ್ಷ ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಇನ್ನು ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ತನಿಖೆ ವಿಚಾರದ ಬಗ್ಗೆ ಮಾತನಾಡಿದ ಅವರು ಸೋಮವಾರ ಕೋರ್ಟ್ ಗೆ ವರದಿ ಸಲ್ಲಿಸುತ್ತಾರೆ ಎಂಬ ಮಾಹಿತಿ ಇದೆ. ನನಗೆ ಅನ್ನಿಸುವ ಪ್ರಕಾರ ಕ್ಲೀನ್ ಚಿಟ್ ಅಂತಾ ಇದೆ.ಬಿಜೆಪಿ ಮೊದಲಿನಿಂದಲೂ ಸಿಬಿಐ ತನಿಖೆಗೆ ಆಗ್ರಹ ಮಾಡಿತ್ತು. ಅಧಿಕಾರಿಗಳು ಯಾಕೆ ಅವರ ಕುಟುಂಬಕ್ಕೋಸ್ಕರ ಮಾಡುತ್ತಾರಾ?.ಪ್ರಕರಣವನ್ನು ಮುಚ್ಚಿ ಹಾಕಲು ಲೋಕಾಯುಕ್ತ ಪ್ರಯತ್ನ ಮಾಡಿದೆ ಎಂದ ಅವರು ಇಡಿ‌ ಕೂಡಾ ತನಿಖೆ ನಡೆಸುತ್ತಿದೆ.ಸಾವಿರಕ್ಕೂ ಹೆಚ್ಚು ಸೈಟ್ ಗಳು ಮುಡಾಗೆ ವಾಪಸ್‌ ಬರಬೇಕು.ಈವರೆಗೂ‌ ಲೋಕಾಯುಕ್ತ ಒಂದು ಸೈಟ್ ಕೂಡ ಮುಟ್ಟುಗೋಲು ಹಾಕಿಲ್ಲ. ಇಡಿ ಅವರು ಅಷ್ಟೊಂದು ಆಸ್ತಿ ಸೀಜ್ ಮಾಡಿದ್ದಾರೆ.ಈ‌ ಲೋಕಾಯುಕ್ತ ಯಾಕೆ ಸೀಜ್ ಮಾಡುತ್ತಿಲ್ಲ?.ಮೊದಲಿನಿಂದಲೂ ಲೋಕಾಯುಕ್ತ ಕೇಸ್ ಮುಚ್ಚಿ ಹಾಕುತ್ತಾರೆ ಅಂತಾ ಮೊದಲೇ ಹೇಳಿದ್ದೆವು.ಹೀಗಾಗಿಯೇ ಸಿಬಿಐ ತನಿಖೆಗೆ ನಾವು ಮತ್ತು ಜೆಡಿಎಸ್ ಒತ್ತಾಯಿಸಿದ್ದೆವು ಎಂದು ಅವರು ಹೇಳಿದ್ದಾರೆ.

ಶ್ರೀರಾಮುಲು ಯಾವತ್ತಾದ್ರೂ ಸಾಯುವವರೆಗೂ ಸ್ನೇಹಿತ, ಶತ್ರು ಆಗೊಲ್ಲ: ಜನಾರ್ದನ್ ರೆಡ್ಡಿ ಹೇಳಿಕೆ

ಬೆಂಗಳೂರು: ಶ್ರೀರಾಮುಲು ಯಾವತ್ತಾದ್ರೂ ಸಾಯುವವರೆಗೂ ಸ್ನೇಹಿತ, ಶತ್ರು ಆಗೊಲ್ಲ ಎಂದು ಶಾಸಕ  ಜನಾರ್ದನ್ ರೆಡ್ಡಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಈ ಹಿಂದೆಯೂ ಪಕ್ಷ ಕಟ್ಟಿದ್ರು. ಇದೆಲ್ಲ ಮೀರಿದ್ರೂ ಅವರ ಜೊತೆಗಿದ್ದೆ. 14 ವರ್ಷ ನಾನು ಬಳ್ಳಾರಿಯಲ್ಲಿ ಇರಲಿಲ್ಲ. ನಾನು ಇಲ್ಲದ ವೇಳೆ ಎಷ್ಟು ಜನರ ವಿಶ್ವಾಸಗಳಿಸಿಕೊಳ್ಳಬಹುದಿತ್ತು. ಇದನ್ನ ಶ್ರೀರಾಮುಲು‌ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಯಾರೋ‌ ಶಿಫಾರಸ್ಸು ಮಾಡಿ ಬೆಳೆದ ವ್ಯಕ್ತಿ ನಾನಲ್ಲ. ಶಕ್ತಿ ಇಲ್ಲಾಂದ್ರೂ ಕಟ್ಟಿಗೆ ಇಟ್ಟು ಕೆಲಸ ಮಾಡ್ತೀನಿ. ಪಕ್ಷಕ್ಕೆ ತನ್ನದೇ ಆತ ಬಿಜೆಪಿ ಹೆಚ್ಚು ನೋಂದಣಿ ಇರುವ ಪಕ್ಷ. ಇಂಟಲಿಜನ್ಸ್ ಮೂಲಕ ಮಾಹಿತಿ ಪಡೆದುಕೊಂಡಿರುತ್ತೆ. ಸದಾನಂದಗೌಡರ ಸಮ್ಮುಖದಲ್ಲಿ ಕಮಿಟಿ‌ ರಚನೆ ಆಗುತ್ತೆ. ಯಾವ ಪ್ರಶ್ನೆ ಕೇಳಿದ್ದಾರೋ ನನಗೆ ಗೊತ್ತಿಲ್ಲ ಎಂದಿದ್ದಾರೆ.

ಕಮಿಟಿಗೆ ನನ್ನ ಅಭಿಪ್ರಾಯ ನಾನು ಕೊಟ್ಟಿದ್ದೆ. ಬೇರೆಯವರ ಮೇಲೆ ಮಾಡುವಷ್ಟು ನಾನು ಇಲ್ಲ. ಜನಾರ್ದನ್ ರೆಡ್ಡಿ ಪ್ರಚಾರದಿಂದ ಗೆಲ್ಲುತ್ತಾರೆ ಅನ್ನೋದಲ್ಲ. ರಾಜಕೀಯವನ್ನ ಮೀರಿ ನಾನು ನನ್ನ ಮಕ್ಕಳ ಮೇಲಿನ ವಿಶ್ವಾಸವನ್ನೇ ಇಟ್ಟಿಕೊಂಡಿದ್ದೇನೆ.14 ವರ್ಷಗಳಲ್ಲಿ ಹಲವು ವಿಚಾರ ರಾಮುಲು ಮೈಮೇಲೆ ಎಳೆದುಕೊಂಡಿದ್ದಾರೆ.ಎಜೆನ್ಸಿಗಳ ತನಿಖೆಗೆ ಬಂದ್ರೆ ವರ್ಷಗಳೂ ಸಾಕಾಗುವುದಿಲ್ಲ. ಆಸ್ತಿ‌ ದ್ರೋಹ, ನಂಬಿಕೆ ದ್ರೋಹ, ವಿಶ್ವಾಸ ದ್ರೋಹ ಈ‌‌ ಸಮಯದಲ್ಲಿ ನಾನು ಏನೂ ಹೇಳೊಲ್ಲ.ಬಳ್ಳಾರಿಯ ಸ್ಲಂ ಏರಿಯಾದಿಂದ ಹಿಡಿದು ಎಲ್ಲಾದ್ರೂ ಹೋಗಿ ಕೇಳಿ‌ ಎಲ್ಲರು ಹೇಳ್ತಾರೆ. ದಾಖಲೆಗಳ ಸಮೇತ ಮುಂದೆ ಮತ್ತಷ್ಟು ವಿಚಾರ ತಿಳಿಸುತ್ತೇನೆ. ಪಕ್ಷ ಜವಾಬ್ದಾರಿ ಕೊಟ್ಟಾಗ ಕೆಲಸ ಮಾಡ್ಬೇಕು. ಟಿಕೆಟ್ ಕೊಟ್ಟಾಗ ಅಭ್ಯರ್ಥಿ ಪರ ಕೆಲಸ ಮಾಡ್ಬೇಕು.ಶ್ರೀರಾಮುಲು ಪರವಾಗಿ ಕೆಲಸ ಮಾಡ್ಬೇಕು ಅಂತ ಪಕ್ಷ ಹೇಳಿದ್ರೆ ಮುಂದೆಯೂ ಮಾಡ್ತೀನಿ. ಪಕ್ಷದಲ್ಲಿ ನಾನು ನಿಷ್ಠಾವಂತನಾಗಿ ಕೆಲಸ ಮಾಡ್ತಿದ್ದೀನಿ.ಇನ್ನೊಬ್ಬರ ಮೇಲೆ ಹೇಳಿ ನಾನು ಬೆಳೆಯುವವನಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.

40 ವರ್ಷಗಳ ಕತೆ ಒಂದೇ ದಿನ‌ ಹೇಳಲು ಬರೊಲ್ಲ. ಬಂಗಾರು ಹನುಮಂತ ಪರ ಕೆಲಸ ಮಾಡಿ ಅಂತ ಪಕ್ಷ ಹೇಳಿತ್ತು, ಮಾಡಿದ್ದೇನೆ. ಶ್ರೀರಾಮುಲು ಯಾವತ್ತಾದ್ರೂ ಸಾಯುವವರೆಗೂ ಸ್ನೇಹಿತ, ಶತ್ರು ಆಗೊಲ್ಲ. ಆದ್ರೆ ಶತ್ರುಗಳೊಂದಿಗೆ ಕೈ ಜೋಡಿಸಿದ್ದಾರೆ. ಪಕ್ಷ ಬಿಡುವುದು, ಇರೋದು ಅವರ ವೈಯುಕ್ತಿಕ ವಿಚಾರ. ಅವರು ಹೋಗಬೇಕು ಅಂದ್ರೆ ಹೋಗಲಿ.ನನ್ನ ಮೇಲೆ‌ ಆರೋಪ ಯಾಕೆ? ಇದು ಎಷ್ಟು‌ ಸರಿ?. ಡಿಕೆಶಿ, ಸತೀಶ್ ಜಾರಕಿಹೊಳಿ ಮಣಿಸಲು ಏನಾದ್ರೂ ಮಾಡ್ತಿದ್ದಾರೆ. ಟಿವಿ ಮಾಧ್ಯಮಗಳಲ್ಲೇ ಇದು ಬಂದಿದೆ. ಇವರು ಇರೋದು ಹೋಗೋದು ಅವರ ವಿಚಾರ. ಭಗವಂತನ ಮುಂದೆ ಹೋಗಿ, ಬಳ್ಳಾರಿ‌ ದುರ್ಗಾ ದೇವಸ್ಥಾನ ಹೋಗಿ. ದೇವರ ಬಳಿ‌ ಹೋಗಿ‌ ಪ್ರಾರ್ಥನೆ ಮಾಡಿಕೊಳ್ಳಿ. ನಾನು ಕರ್ಮದ ಮೇಲೆ ನಂಬಿಕೆ ಇಟ್ಟಿರುವ ವ್ಯಕ್ತಿ. ಕರ್ಮ, ಭಗವದ್ಗೀತೆಯಲ್ಲಿ ನಾನು ನಂಬಿಕೆ‌ ಇಟ್ಟವರು.ಕರ್ಮ‌ ಯಾರನ್ನೂ ಬಿಡುವುದಿಲ್ಲ.ಪಕ್ಷ ಯಾರೇ ಆಗಲಿ ಕೆಲಸ ಮಾಡು ಅಂದ್ರೆ ನಾನು‌ ಶ್ರೀರಾಮುಲು‌ಸೇರಿ‌ ಎಲ್ಲರ ಒರ ಕೆಲಸ ಮಾಡ್ತೀನಿ.ಈ‌ ಆರೋಪಗಳು ನಿರಾಧಾರ ಎಂದಿದ್ದಾರೆ.

ಜನಾರ್ದನ್ ರೆಡ್ಡಿ, ವಿಜಯೇಂದ್ರ ಬಗ್ಗೆ ಮಾತಾಡುವುದು ದಡ್ಡತನ.ಅಸಮಾಧಾನಿತರ ಪರ ಸೇರಿಕೊಂಡು ಮಾತಾನಾಡುವುದು ತಪ್ಪು.ಕೇಂದ್ರದ ಬಿಜೆಪಿ ನಾಯಕರ ಬಳಿ‌ ದೂರು ನೀಡೋದು ಸರಿಯಲ್ಲ.ಕುಣಿಯಲು ಆಗದವರಿಗೆ ನೆಲ‌ ಡೊಂಕು ಅನ್ನೋ ಹಾಗೆ ಆಯ್ತು.ಕುಟುಂಬದಲ್ಲಿ ಒಬ್ಬರು ಅಂತ ಇಷ್ಟು ದಿನ‌ ಭಾವಿಸಿದ್ದೆ.ಅನಾವಶ್ಯಕವಾಗಿ ಈ ರೀತಿ ಮಾಡೋದು ಸರಿಯಲ್ಲ.ಪಕ್ಷ ಉತ್ತರ ಕೇಳಿದ್ರೆ ಕೊಡ್ತೀನಿ ಎಂದ ಅವರು  ರಾಮುಲು ಜೊತೆಗೆ ಸ್ನೇಹ ಮುಂದುವರೆಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ ಪಕ್ಷ ಏನು ಹೇಳಿದ್ರೂ ಮಾಡ್ತೀನಿ. ಪಕ್ಷ ಯಾರ ಪರ ಕೆಲಸ ಮಾಡಿ ಅನ್ನುತ್ತೋ ಅವರ ಪರ ಕೆಲಸ ಮಾಡ್ತೀನಿ ಎಂದಿದ್ದಾರೆ.