ಮನೆ Latest News ಏಪ್ರಿಲ್ ೧೭ ರಂದು ವಿಶೇಷ ಸಚಿವ ಸಂಪುಟ ಸಭೆ : ಜಾತಿ ಗಣತಿ ವಿಚಾರವಾಗಿಯೇ ಚರ್ಚಿಸಲು...

ಏಪ್ರಿಲ್ ೧೭ ರಂದು ವಿಶೇಷ ಸಚಿವ ಸಂಪುಟ ಸಭೆ : ಜಾತಿ ಗಣತಿ ವಿಚಾರವಾಗಿಯೇ ಚರ್ಚಿಸಲು ವಿಶೇಷ ಸಭೆ

0

ಬೆಂಗಳೂರು; ಜಾತಿ ಜನಗಣತಿ ಅನುಷ್ಠಾನ ವಿಚಾರಕ್ಕೆ  ಸಂಬಂಧಿಸಿ ಮುಂದಿನ ಕ್ಯಾಬಿನೆಟ್ ನಲ್ಲಿ ತೀರ್ಮಾನಿಸಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಅದರಂತೆ ಏಪ್ರಿಲ್ ೧೭ ರಂದು ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ. ಜಾತಿ ಗಣತಿ ವಿಚಾರವಾಗಿಯೇ ಚರ್ಚಿಸಲು ವಿಶೇಷ ಸಭೆ ಕರೆಯಲಾಗಿದೆ.

ಇಂದು ಸಂಪುಟ ಸಭೆಯಲ್ಲಿ ವರದಿಯ ಸಾರಾಂಶ ಮಂಡನೆ ಮಾಡಲಾಗಿದೆ. ಏಪ್ರಿಲ್ 17 ರಂದು ಚರ್ಚೆಗೆ ತಯಾರಿ ನಡೆಸಿ ಬರುವಂತೆ ಸಚಿವರಿಗೆ ಸೂಚನೆ ನೀಡಲಾಗಿದ. ಜಾತಿ ಗಣತಿ ಚರ್ಚಿಸಲೆಂದೇ ಎಪ್ರಿಲ್ 17 ರ ಸಂಜೆ 4 ಗಂಟೆಗೆ ಸಿಎಂ ಸಭೆ ಕರೆದಿದ್ದಾರೆ. ಸಂಪುಟ ಸಭೆಯಲ್ಲಿ ಸಚಿವರು ಯಾವ ಅಭಿಪ್ರಾಯ ಮಂಡಿಸಿಲ್ಲ, ಪರ ವಿರೋಧ ಚರ್ಚೆಯನ್ನು ಸಚಿವರು ಮಾಡಿಲ್ಲ. ಕೇವಲ ವರದಿ ಮಂಡಿಸಿ ಅಧಿಕಾರಿಗಳಿಂದ ಸಚಿವರು ಸಾರಾಂಶ ಕೇಳಿದ್ದಾರೆ.

ಇನ್ನು ಸಭೆ ಬಳಿಕ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ‌ ಜಾತಿ ಜನಗಣತಿ ವಿಚಾರದ ಬಗ್ಗೆ ಮಾತನಾಡಿ ಕ್ಯಾಬಿನೆಟ್ ನಲ್ಲಿ ಮಂಡಿಸಿದ್ದಾರೆ.. ಆದ್ರೆ ಏ. ೧೭ಕ್ಕೆ ಅದಕ್ಕಾಗಿ ಸಂಪುಟ ಸಭೆ ನಡೆಯಲಿದೆ. ಏ. ೧೭ಕ್ಕೆ ಒಂದೇ ವಿಷ್ಯಕ್ಕೆ ಚರ್ಚೆ ಮಾಡಬೇಕು. ಹೀಗಾಗಿ ಅಂದೇ ಎಲ್ಲಾ ನಿರ್ಧಾರ ಆಗಬಹುದು. ಯಾರೂ ಕೂಡ ವಿರೋಧ ಮಾಡಿಲ್ಲ, ನೋಡಿಯೇ ಇಲ್ಲ. ಸಮರ್ಗವಾಗಿ ಚರ್ಚೆ ಮಾಡೋಕೆ ಸಿಎಂ ಸೂಚನೆ ನೀಡಿದ್ದಾರೆ.ನಾವೇ ಏಪ್ರಿಲ್ ೧೭ ಕ್ಕೆ ಸಮಗ್ರ ಚರ್ಚೆ ಮಾಡುತ್ತೇವೆ. ಕ್ಯಾಬಿನೆಟ್ ನಲ್ಲಿ ಮಂಡಿಸಿದ್ದಾರೆ. ೧೭ಕ್ಕೆ ಚರ್ಚೆ ಮಾಡಬೇಕು ಎಂದಿದ್ದಾರೆ. ಅಂದು ಒಂದೇ ದಿನ ಚರ್ಚೆ ಮಾಡಬೇಕು, ಒಂದೇ ವಿಷ್ಯ ಇದೆ. ಅಧ್ಯಯನ ಕುರಿತು ಸಮರ್ಥವಾಗಿ ಚರ್ಚೆ ಮಾಡಬೇಕು ಎಂದು ತಿಳಿಸಿದ್ರು.

ಗುತ್ತಿಗೆದಾರರ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ಸಾಬೀತು ಮಾಡಬೇಕು, ಪ್ರೂ ಮಾಡಬೇಕು ಅನ್ನೋದು ಅದು ನಮ್ಮ ಕೈಯಲ್ಲಿ ಇಲ್ಲ, ನಾವು ಅಥಾರಟಿ ಅಲ್ಲ. ನ್ಯಾಯ ಸಿಗಬೇಕಾದ್ರೆ ಬಹಳ ಅಥಾರಿಟಿ ಇದೆ. ಗುತ್ತಿಗೆದಾರರಿಗೆ ನ್ಯಾಯ ಸಿಗಬೇಕು ಅಂದ್ರೆ ಅದಕ್ಕೆ ಹಲವು ಪ್ಲಾಟ್ ಫಾರ್ಮ್ ಇದೆ. ಅದು ಅಲ್ಲಿಯೇ ಹೇಳಬೇಕು, ನಮ್ಮ ಮುಂದೆ ಹೇಳಿದ್ರೆ ಹೇಗೆ? ಆಲ್ ಇಸ್ ವೆಲ್ ಅಂತ ಹೇಳುವವರು ಎಂದ್ರು.

೪೦% ಕಮಿಷನ್ ಆರೋಪ ಪರಿಶೀಲನೆಗೆ ಎಸ್ಐಟಿ ರಚನೆಗೆ ನಿರ್ಧಾರ; ಸಚಿವ ಹೆಚ್ ಕೆ ಪಾಟೀಲ್ ಹೇಳಿಕೆ

ಬೆಂಗಳೂರು: ೪೦% ಕಮಿಷನ್ ಆರೋಪ ಪರಿಶೀಲನೆಗೆ ಎಸ್ಐಟಿ ರಚನೆಗೆ ನಿರ್ಧಾರ ಮಾಡಲಾಗಿದೆ ಎಂದು ಸಚಿವ ಹೆಚ್ ಕೆ ಪಾಟೀಲ್ ಹೇಳಿದ್ದಾರೆ.

೪೦% ಕಮಿಷನ್ ಆರೋಪ ಪರಿಶೀಲನೆಗೆ ಎಸ್ಐಟಿ ರಚನೆಗೆ ನಿರ್ಧಾರ ಮಾಡಿದ ಬಗ್ಗೆ ಮಾತನಾಡಿದ ಅವರು ೨೧ ವಿಷಯಗಳ ಮೇಲೆ ನಿರ್ಣಯ ಕೈಗೊಂಡಿದ್ದೇವೆ. ಗುತ್ತಿಗೆದಾರರ ಸಂಘದ ಆರೋಪಗಳ ಬಗ್ಗೆ ರಾಜ್ಯ ಸರ್ಕಾರ ಎಚ್ ಎನ್ ನಾಗಮೋಹನ್ ದಾಸ್ ನೇತೃತ್ವದಲ್ಲಿ ವಿಚಾರಣಾ ಆಯೋಗ ಮಾಡಿತ್ತು. ವಿಚಾರಣಾ ವರದಿಯನ್ನು ಸಲ್ಲಿಸಿದ್ದಾರೆ. ವರದಿಯನ್ನು ಸಂಪುಟಕ್ಕೆ ಮಂಡಿಸಲಾಯಿತು. ಕೆಲವು ವಿವರಗಳನ್ನು ಸಚಿವ ಸಂಪುಟದಲ್ಲಿ ಚರ್ಚೆ ಮಾಡಲಾಯಿತು.ಇನ್ನಷ್ಟು ವಿವರ ಚರ್ಚೆಯ ಅಗತ್ಯವಿದೆ. ವಿಶೇಷ ಶಿಫಾರಸುಗಳನ್ನು ನೀಡಿದೆ. ದೂರುಗಳ ಮಾಹಿತಿ ಕಲೆ ಹಾಕಿ ವರದಿಯನ್ನು ನೀಡಲಾಗಿದೆ. ೩ ಲಕ್ಷ ಕಾಮಗಾರಿಗಳಲ್ಲಿ ೧೭೨೯ ಕಾಮಗಾರಿಗಳ ಬಗ್ಗೆ ವಿವರವಾದ ಆಪಾದನೆಗಳಿವೆ ಎಂದರು.

ಯೋಜನೆ, ಹಣ ಬಿಡುಗಡೆ, ಎಲ್ಓಸಿ ಬಿಡುಗಡೆ ಸರಿಯಾದ ರೀತಿಯಲ್ಲಿ ಇಲ್ಲ ಎಂಬುದು ವರದಿಯಲ್ಲಿ ಇದೆ. ಸಚಿವ ಸಂಪುಟ ಗಂಭೀರವಾಗಿ ಪರಿಗಣಿಸಿ ಯಾವ ಪ್ರಮಾಣದಲ್ಲಿ ವ್ಯತ್ಯಾಸಗಳಾಗಿವೆ ಎಂಬುದನ್ನು ಚರ್ಚಿಸಿದೆ. ಅನುದಾನಕ್ಕಿಂತ ಹೆಚ್ಚು ಬಿಲ್ ಆಗಿದೆ, ಕಾಮಗಾರಿ ಗಳ ಬಗ್ಗೆಯೇ ಕೆಲವು‌ಕಡೆ ಸಂಶಯಗಳಿವೆ. ಕೆಲವು ಕಡೆ ಟೆಂಡರ್ ಹಂಚಿಕೆ ವೇಳೆಯೇ ಮಧ್ಯವರ್ತಿಗಳ ಕೆಲಸ ಆಗಿದೆ. ಗಂಭೀರವಾದ ವರದಿಯ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ಎಸ್ಐಟಿ ಯನ್ನು ರಚನೆ ಮಾಡಲು ತೀರ್ಮಾನ ಮಾಡಿದ್ದೇವೆ.ಎರಡು ತಿಂಗಳಲ್ಲಿ ಕ್ರಮ ಕೈಗೊಳ್ಳಲು ಎಸ್ಐಟಿಗೆ ಸೂಚನೆ ನೀಡಲಾಗಿದೆ ಎಂದರು.

ಬಿಜೆಪಿಯ ಅವಧಿಯ 40% ಕಮಿಷನ್ ವಿಚಾರದ ಬಗ್ಗೆ ಸಂಪುಟ ಸಭೆ ನಾಗಮೋಹನ್ ದಾಸ್ ವರದಿ ಅಂಗೀಕರಿಸಿದೆ. ನಾಗಮೋಹನ್ ದಾಸ್ ಸಮಿತಿ ವರದಿ ಆಧರಿಸಿ ಎಸ್ ಐ ಟಿ ರಚನೆಗೆ ನಿರ್ಧಾರ ಮಾಡಲಾಗಿದೆ. ಗುತ್ತಿಗೆದಾರರ ಸಂಘದ ಆರೋಪ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲು ಸಂಪುಟ ನಿರ್ಧಾರ ಮಾಡಲಾಗಿದೆ. NICE ಬಗ್ಗೆ ಇವತ್ತು ಕ್ಯಾಬಿನೆಟ್ ನಲ್ಲಿ ವಿಷಯ ಪ್ರಸ್ತಾಪ ಆಯಿತು. ನೈಸ್ ರಸ್ತೆ ವಿಚಾರಕ್ಕೆ ಸುಪ್ರೀಂ ಕೋರ್ಟ್ ಹೈಕೋರ್ಟ್ ನಲ್ಲಿ ವಿಚಾರಣೆ ಆಗಿದೆ. ರಸ್ತೆ ನಿರ್ಮಾಣ ಮುಂದೆ ಆಗಬೇಕಾ ಬೇಡ್ವಾ ಎಂಬ ಬಗ್ಗೆ ಸಂಪೂರ್ಣ ಚರ್ಚೆ ಒಂದು ಸಭೆಯಲ್ಲಿ ಸಾಧ್ಯವಿಲ್ಲ. ಕಾನೂನಾತ್ಮಕ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಸಚಿವ ಸಂಪುಟ ಉಪ ಸಮಿತಿ ನೇಮಕ ಮಾಡಿ ಮುಂದಿನ ತೀರ್ಮಾನ ಮಾಡ್ತೇವೆ ಎಂದರು.

೧೬೯೯ ಎಕರೆ ಯನ್ನು ನೈಸ್ ಸಂಸ್ಥೆಯವರು ಬೇರೆಯವರಿಗೆ ಶುದ್ದ ಕ್ರಯ ಮಾಡಿಕೊಡಲು‌ ಮುಂದಾಗಿದ್ದಾರೆ. ಇದನ್ನೂ ಕೂಡ ಕ್ಯಾಬಿನೆಟ್ ಸಬ್ ಕಮಿಟಿ ನಿರ್ಧಾರ ಮಾಡಲಿದೆ. ಕ್ಯಾಬಿನೆಟ್ ಸಬ್ ಕಮಿಟಿ ರಚನೆಯನ್ನು ಸಿಎಂ ಸಿದ್ದರಾಮಯ್ಯ ಮಾಡಲಿದ್ದಾರೆ. ಜಾತಿಗಣತಿ ವರದಿ ಮಂಡನೆ ಆಗಿದೆ.ಹಲವು ಸಚಿವರು ಏನೇನು ಶಿಫಾರಸು ಇದೆ ಅಂತ ನೋಡಬೇಕು ಅಂತ  ಹೇಳಿದ್ದಾರೆ.