ಮನೆ Latest News ಬೆಳಗಾವಿ ಸುವರ್ಣಸೌಧದಲ್ಲಿ ಇತಿಹಾಸ ಮರುಸೃಷ್ಟಿಸಿದ ಸ್ಪೀಕರ್ ಯು ಟಿ ಖಾದರ್

ಬೆಳಗಾವಿ ಸುವರ್ಣಸೌಧದಲ್ಲಿ ಇತಿಹಾಸ ಮರುಸೃಷ್ಟಿಸಿದ ಸ್ಪೀಕರ್ ಯು ಟಿ ಖಾದರ್

0

ಬೆಳಗಾವಿ; ಬೆಳಗಾವಿ ಸುವರ್ಣಸೌಧದಲ್ಲಿ ಸ್ಪೀಕರ್ ಯು ಟಿ ಖಾದರ್ ಇತಿಹಾಸ ಮರುಸೃಷ್ಟಿಸಿದ್ದಾರೆ. ಸುವರ್ಣಸೌಧದ ಒಳಗೆ ಐತಿಹಾಸಿಕ ಕ್ಷಣವೊಂದು ಶಾಶ್ವತವಾಗಿ ದಾಖಲಿಸಿದ್ದಾರೆ.

ವಿಶ್ವಗುರು ಶ್ರೀ ಬಸವಣ್ಣನವರು  ಸ್ಥಾಪಿಸಿದ, “ವಿಶ್ವದ ಮೊದಲ ಸಂಸತ್ತು”  ಎಂಬ ಖ್ಯಾತಿಯ, “ಅನುಭವ ಮಂಟಪದ” ಬೃಹತ್ ತೈಲವರ್ಣ ಚಿತ್ರ ಅನಾವರಣವು ಶ್ರೀ ಯು. ಟಿ. ಖಾದರ್ ಅವರ ಅಧ್ಯಕ್ಷತೆಯಲ್ಲಿ, ಚಳಿಗಾಲ ಅಧಿವೇಶನದ ಮೊದಲ ದಿನದಂದು, ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರ ಅಮೃತ ಹಸ್ತದಿಂದ ಅನಾವರಣಗೊಳ್ಳಲಿದೆ.

ಇದು ಕೇವಲ ಒಂದು ತೈಲವರ್ಣ ಚಿತ್ರ ಅನಾವರಣ ಕಾರ್ಯಕ್ರಮವಲ್ಲ, ಬದಲಾಗಿ ನಮ್ಮ ಪ್ರಜಾಪ್ರಭುತ್ವದ ಮೂಲ ಆಶಯಗಳು, ಸಮಾನತೆ, ಮಾನವೀಯ ಸಂದೇಶಗಳನ್ನು ಜಗತ್ತಿಗೆ ಮತ್ತೊಮ್ಮೆ ಪರಿಚಯಿಸುವ ಹಾಗೂ ಶ್ರೀ ಮಹಾತ್ಮಾ ಗಾಂಧೀಜಿಯವರು ಅಧಿವೇಶನದಲ್ಲಿ ಪಾಲ್ಗೊಂಡ  ಶತಮಾನೋತ್ಸವದ, ಸ್ಮರಣಾರ್ಥವಾಗಿ  ನಡಯುವ  ಒಂದು ಮಹತ್ವದ ಐತಿಹಾಸಿಕ ಕ್ಷಣವಾಗಿದೆ.  ಕ್ಯಾನ್ವಾಸ್ ಮೇಲೆ ತೈಲ ಮಾಧ್ಯಮದ ಮೂಲಕ ರಚಿಸಲ್ಪಟ್ಟ 20 ಅಡಿ ಉದ್ದ ಮತ್ತು 10 ಅಡಿ ಅಗಲದ ಈ ವಿಶೇಷ ಚಿತ್ರಕ್ಕೆ  ಬಿ.ಎಲ್. ಶಂಕರ್ ನೇತೃತ್ವದಲ್ಲಿ, ಪ್ರಖ್ಯಾತ ಕಲಾವಿದರಾದ –  ಬೆಂಗಳೂರು ಚಿತ್ರಕಲಾ ಪರಿಷತ್ ನ ಶ್ರೀ ಸತೀಶ್ ರಾವ್  ಶಿವಮೊಗ್ಗ  ಶ್ರೀಕಾಂತ್ ಹೆಗಡೆ ಸಿದ್ದಾಪುರ,  ಶೇಷಾದ್ರಿಪುರಂ ಕೆನ್ ಸ್ಕೂಲ್ ಕಲಾಶಾಲೆಯ  ಶ್ರೀ ಅಶೋಕ್ ಯು,  ಜಗಳೂರು ರಾಜಾ ರವಿವರ್ಮ ಕಲಾಶಾಲೆಯ ರೂಪಾ ಎಂ.ಆರ್,  ಶ್ರೀ ವೀರಣ್ಣ ಮಡಿವಾಳಪ್ಪ ಬಬ್ಲಿ, ಬೈಲಹೊಂಗಲ ಮತ್ತು ಶ್ರೀ ಮಹೇಶ ನಿಂಗಪ್ಪ, ದಫಲಾಪುರ, ಜಮಖಂಡಿ ಅವರು ಜೀವಂತಿಗೆ ಮತ್ತು ನೈಜತೆ ತುಂಬಿದ್ದಾರೆ.

ಮೊದಲ ಸಭಾಧ್ಯಕ್ಷರಾದ  ಶ್ರೀ ಅಲ್ಲಮಪ್ರಭು ಅವರ  ಮುಂದಾಳುತ್ವದಲ್ಲಿ   ಅಜರಾಮರ ಚಿಂತನೆಗಳನ್ನು ಮತ್ತು ಅನನ್ಯ ತತ್ತ್ವಜ್ಞಾನವನ್ನು ಪ್ರತಿಬಿಂಬಿಸಿದ ಈ ಪವಿತ್ರ ವೇದಿಕೆಯು,  ಕೇವಲ ಶರಣ ಚಿಂತನೆಗಳ ಕೇಂದ್ರವಾಗಿರದೆ,  ಸಮಸ್ತ ಮನುಕುಲದ ಏಳಿಗೆಗೆ ಶಾಶ್ವತ ಆದರ್ಶಗಳನ್ನು ನೀಡಿ,  ಮಾನವೀಯತೆ ಮತ್ತು  ಸಮಾನತೆಯ ಮಹಾನ್  ಸಂದೇಶವನ್ನು ಸಮಸ್ತ ವಿಶ್ವಕ್ಕೆ ತೋರಿಸಿಕೊಟ್ಟ  ಶಕ್ತಿ ಕೇಂದ್ರವಾಗಿತ್ತು.   ಇದು ಸರ್ವಜಾತಿ, ಧರ್ಮಗಳ ಶರಣರನ್ನು ಸ್ವೀಕರಿಸಿದ ಪವಿತ್ರ ತಾಣವಾಗಿದ್ದು, ಅಕ್ಕಮಹಾದೇವಿ, ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯ, ಸಿದ್ದರಾಮೇಶ್ವರ, ಮಡಿವಾಳ ಮಾಚಿದೇವ, ದೋಹರ ಕಕ್ಕಯ್ಯ, ಮೇದಾರ ಕೇತಯ್ಯ, ಬಹುರೂಪಿ ಚೌಡಯ್ಯ, , ಕೇತಲದೇವಿ, ದುಗ್ಗಳೆ, ಕಾಳವ್ವ  ಮೊದಲಾದ ಶರಣರ ದಿವ್ಯ ಚಿಂತನೆಯನ್ನು ಮತ್ತು  ಅನುಭವಗಳನ್ನು ಜಗತ್ತಿಗೆ ಪರಿಚಯಿಸಿದ ಪುಣ್ಯ ಸ್ಥಳವಾಗಿದೆ.

ಬೆಳಗಾವಿ ಸುವರ್ಣಸೌಧದಲ್ಲಿ ಸೋಮವಾರ,  ಡಿಸೆಂಬರ್ 9,  2024ರಂದು,  ಬೆಳಿಗ್ಗೆ 10.30ಕ್ಕೆ  ನಡೆಯುವ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯ ಅತಿಥಿಯಾಗಿರುವರು. ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ, ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ಹಾಗೂ ವಿರೋಧಪಕ್ಷದ ನಾಯಕ ಆರ್. ಅಶೋಕ್  ಅವರು ಉಪಸ್ಥಿತರಿದ್ದು, ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.