ನವದೆಹಲಿ; ತೆರಿಗೆ ಹಂಚಿಕೆಯಲ್ಲಿ ದಕ್ಷಿಣದ ರಾಜ್ಯಗಳಿಗೆ ತಾರತಮ್ಯವಾಗಿದೆ ಎಂದು ನವದೆಹಲಿಯಲ್ಲಿ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.
ತೆರಿಗೆ ಹಂಚಿಕೆಯಲ್ಲಿ ದಕ್ಷಿಣದ ರಾಜ್ಯಗಳಿಗೆ ತಾರತಮ್ಯವಾಗಿದೆ.ದಕ್ಷಿಣದ ಐದು ರಾಜ್ಯಗಳಿಗೆ 28ಸಾವಿರ ಕೋಟಿ ಹಂಚಿದ್ದಾರೆ.ಉತ್ತರಪ್ರದೇಶ ರಾಜ್ಯವೊಂದಕ್ಕೆ 31 ಸಾವಿರ ಕೋಟಿ ಕೊಟ್ಟಿದ್ದಾರೆ.ನಾವು 100 ಕೊಟ್ಟರೆ 13ರೂ ವಾಪಸ್ ಸಿಗುತ್ತದೆ. ಸುರೇಶ್ ಅವ್ರ ಹೇಳಿಕೆಯನ್ನು ತಿರುಚಿ ಬಿಜೆಪಿ ಅವರು ಮಾತಾಡ್ತಾರೆ. ಐಟಿ ಸೆಲ್ ,ವಾಟ್ಸ್ ಅಪ್ ವಿವಿ ಮೂಲಕ ತಿರುಚುತ್ತಾರೆ. ನಾವು ರಕ್ತ ಬೆವರು ಸುರಿದಿದ ಹಣ ನಮಗೆ ವಾಪಾಸ್ ಬರುತ್ತಿಲ್ಲ ಎಂದು ಗುಡುಗಿದ್ದಾರೆ
ಇನ್ನು ಹುಬ್ಬಳ್ಳಿ ಗಲಭೆ ಕೇಸ್ ಗಳನ್ನು ವಾಪಾಸ್ ಪಡೆದ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಒಂದೂವರೆ ವರ್ಷದಲ್ಲಿ ಸರಕಾರ ಒಂದು ಒಳ್ಳೆ ಕೆಲಸ ಮಾಡಿದೆ.ಒಳ್ಳೆ ಕೆಲಸದ ಮೊದಲ ಹಜ್ಜೆ.ಬಿಜೆಪಿಗೆ ಬೆಂಬಲ ಕೊಡುವ ಕಿಡಿಗೇಡಿಗಳು ಅಮಾಯಕರ ಮೇಲೆ ಕೇಸ್ ಹಾಕಿದ್ರು.ಪರೇಶ್ ಮೆಸ್ತಾ ಕೇಸ್ ನಲ್ಲಿ ಡಿಐಜಿ ಕಾರ್ ಸುಟ್ಟಾಗಿದ್ರು.ಅವರ ಮೇಲೆ ಕೇಸ್ ಹಾಕಲಿಲ್ಲ. ಒಂದು ಸಮುದಾಯವನ್ನು ಟಾರ್ಗೆಟ್ ಮಾಡಿ ಕೇಸ್ ಹಾಕಿದ್ರು.ಜಾತ್ಯಾತೀತ ರಾಷ್ಟ್ರ ಎನ್ನುವುದಕ್ಕೆ ಸರಕಾರದ ಮೊದಲ ಹೆಜ್ಜೆ ಎಂದಿದ್ದಾರೆ.
ಇನ್ನು ಪ್ರಹ್ಲಾದ್ ಜೋಷಿ ಹೇಳಿಕೆಗೆ ಹರಿಪ್ರಸಾದ್ ತಿರುಗೇಟು ಕೊಟ್ಟಿದ್ದು, ದೇಶದ ಮೊಟ್ಟಮೊದಲ ಭಯೋತ್ಪಾದಕ ನಾಥೂರಾಮ್ ಗೋಡ್ಸೆ.ಗೋಡ್ಸೆಯನ್ನು ಪೂಜೆ ಮಾಡುವ ಜೋಷಿಯವರಿಂದ ಏನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.ಸರಕಾರದ ನಿರ್ಣಯ ಸರಿಯಾಗಿದೆ.ಶಾಲೆ,ಕಾಲೇಜು, ಕಾರ್ಖಾನೆಗಳಲ್ಲಿ ಕನ್ನಡ ಧ್ವಜ ಹಾರಿಸುವ ನಿರ್ಧಾರ ಸರಿಯಾಗಿದೆ ಎಂದಿದ್ದಾರೆ.
ಇಡೀ ದೇಶದಲ್ಲಿ ತೆರಿಗೆ ಪಾವತಿಯಲ್ಲಿ 2ನೇ ಸ್ಥಾನದಲ್ಲಿ ಕರ್ನಾಟಕ ಇದೆ;ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆ
ಬೆಂಗಳೂರು; ಇಡೀ ದೇಶದಲ್ಲಿ ತೆರಿಗೆ ಪಾವತಿಯಲ್ಲಿ 2ನೇ ಸ್ಥಾನದಲ್ಲಿ ಕರ್ನಾಟಕ ಇದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆ ನೀಡಿದ್ದಾರೆ.
ಇಡೀ ದೇಶದಲ್ಲಿ ತೆರಿಗೆ ಪಾವತಿಯಲ್ಲಿ 2ನೇ ಸ್ಥಾನದಲ್ಲಿ ಕರ್ನಾಟಕ ಇದೆ. ಹಲವು ವರ್ಷಗಳಿಂದ ಹೇಳ್ತಿದಾರೋದು ತೆರಿಗೆಗೆ ಸೂಕ್ತ ಮರು ಪಾವತಿ ಮಾಡಿ ಎಂದು.ಉತ್ತರ ಪ್ರದೇಶ 100 ರೂಪಾಯಿ ತೆರಿಗೆ ಪಾವತಿ ಮಾಡಿ 300 ರೂಪಾಯಿ ಪಡೆಯುತ್ತಿದೆ.ಮಧ್ಯ ಪ್ರದೇಶ ನೂರು ರೂಪಾಯಿ ತೆರಿಗೆ ಪಾವತಿ ಮಾಡಿ 290 ರೂಪಾಯಿ ಪಡೆಯುತ್ತಿದೆ .ಬಿಹಾರ ನೂರು ರೂಪಾಯಿ ತೆರಿಗೆ ಪಾವತಿ ಮಾಡಿ 918 ರೂಪಾಯಿ ಪಡೆಯುತ್ತಿದೆ.ರಾಜ್ಯಕ್ಕೆ13 ರೂಪಾಯಿ ಅಷ್ಟೇ ಸಿಕ್ತಿದೆ .ನಾಲ್ಕೂವರೆ ಲಕ್ಷ ರೂಪಾಯಿ ಐಟಿ ಹಣ ಕೂಡ ಕರ್ನಾಟಕಕ್ಕೆ ಬರ್ತಿಲ್ಲ.ತೆರಿಗೆ ತಾರತಮ್ಯ ನಿವಾರಣೆಯಿಂದ ಮೂಲಸೌಕರ್ಯ, ಉದ್ಯೋಗಕ್ಕೂ ಅನುಕೂಲ ಆಗಲಿದೆ ಎಂದಿದ್ದಾರೆ.
ಹಣಕಾಸು ಆಯೋಗಕ್ಕೂ ರಾಜ್ಯದ ತೆರಿಗೆ ತಾರತಮ್ಯದ ಬಗ್ಗೆ ಮನವಿ ಮಾಡಿದ್ದೇವೆ. ಮೋದಿಯವರಿಂದ ಆಗ್ತಿರೋ ಅನ್ಯಾಯದ ಬಗ್ಗೆ ಮಾತನಾಡಲು ಬಿಜೆಪಿ ಸಂಸದರ ಬಾಯಿಗೆ ಹೊಲಿಗೆ ಬಿದ್ದಿದ್ಯಾ?ನಿರ್ಮಲ ಸೀತಾರಾಮ ಕೂಡ ಮಾತಾಡ್ತಿಲ್ಲ ಅವರಿಗೂ ವೈಜ್ಞಾನಿಕವಾಗಿ ಮಾಡಿ ಎಂದು ಹೇಳ್ತೇವೆ.ತಮ್ಮ ವೈಯಕ್ತಿಕ ಸಿಟ್ಚುನ್ನ ಕನ್ನಡಿಗರ ಮೇಲೆ ತೀರಿಸಿಕೊಳ್ಳಬೇಡಿ.ತೆರಿಗೆ ವಿಚಾರದ ಬಗ್ಗೆ ನಮ್ಮ ಹೋರಾಟ ಮುಂದುವರಿಸ್ತೇವೆ.ಕನ್ನಡಿಗರ ಪರವಾಗಿ ಸಂಸದರು ಧ್ವನಿ ಎತ್ತುತ್ತಿಲ್ಲ.ದಕ್ಷಿಣ ಭಾರತ ಆರ್ಥಿಕ ಕೊಡುಗೆಯಲ್ಲಿ ನಾವು ಮುಂದಿದ್ದೇನೆ.ಇಂತಹ ರಾಜ್ಯಗಳ ಪೋಷಣೆ ರಾಷ್ಟ್ರಕ್ಕೆ ಲಾಭ.ರಾಜ್ಯದ ಮೇಲೆ ತೆರಿಗೆ ಮೂಲಕ ಕೇಂದ್ರ ಸರ್ಕಾರ ದ್ವೇಷ ತೀರಿಸಿಕೊಳ್ತಿದ್ದಾರೆ ಎಂದಿದ್ದಾರೆ.