ಬೆಂಗಳೂರು; ಸದ್ಯ ಚಂದನವನದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಖ್ಯಾತ ನಟ ತರುಣ್ ಸುಧೀರ್ ಹಾಗೂ ಕರಾವಳಿ ಬೆಡಗಿ ನಟಿ ಸೋನಲ್ ಮಂಥೆರೋ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಮದುವೆಗೆ ಇನ್ನು ಕೇವಲ ಒಂದೇ ಒಂದು ದಿನ ಬಾಕಿ ಇದೆ. ಇಬ್ಬರೂ ಕೂಡ ಮದುವೆ ಎಲ್ಲರನ್ನೂ ಆಮಂತ್ರಿಸೋದರಲ್ಲಿ ಬ್ಯುಸಿಯಾಗಿದ್ದಾರೆ.
ಇದರ ಮಧ್ಯೆ ನಟಿ ಸೋನಲ್ ಗೆ ಆಕೆಯ ಮನೆಯವರು ಹಾಗೂ ಸ್ನೇಹಿತೆಯರು ಸೇರಿ ಭರ್ಜರಿಯಾಗಿ ಸಪ್ರೈಸ್ ಬ್ಯಾಚುಲರ್ ಪಾರ್ಟಿಯನ್ನು ಅರೆಂಜ್ ಮಾಡಿದ್ದಾರೆ. ಈ ವೀಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೇ ಅದಕ್ಕೊಂದು ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ. ನನ್ನನ್ನು ಇವರೆಲ್ಲಾ ಶುಕ್ರವರ ನಿನ್ನನ್ನು ಕರೆದುಕೊಂಡು ಹೋಗಿ ಶನಿವಾರ ವಾಪಾಸ್ ಬಿಡ್ತೀವಿ ಅಂದರು. ಅದರ ಮಧ್ಯೆ ಇದೆಲ್ಲಾ ನಡೆಯಿತು ಅಂತಾ ಬ್ಯಾಚುಲರ್ ಪಾರ್ಟಿಯ ಸುಂದರವಾದ ವೀಡಿಯೋವನ್ನು ಸೋನಲ್ ಶೇರ್ ಮಾಡಿದ್ದಾರೆ.ಅತ್ಯಂತ ಸುಂದರವಾಗಿ ಹಾಗೇನೆ ಕ್ರಿಯೇಟಿವ್ ಆಗಿ ತರುಣ್ ಸುಧೀರ್ ಅವರ ಫೋಟೋಗಳನ್ನು ಬಳಸಿಕೊಂಡು ಈ ಬ್ಯಾಚುಲರ್ ಪಾರ್ಟಿಯನ್ನು ಅರೆಂಜ್ ಮಾಡಲಾಗಿತ್ತು. ಸದ್ಯ ವೀಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು ಸೋನಲ್ ಗೆ ಶುಭಾಶಯಗಳ ಮಹಾ ಪೂರವೇ ಹರಿದು ಬರುತ್ತಿದೆ. ಮದುವೆಗೆ ಒಂದೇ ದಿನ ಬಾಕಿ ಇರೋದರಿಂದ ಇಬ್ಬರು ಕೂಡ ಅಂತಿಮ ಹಂತದ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿದೆ ಸೋನಲ್ – ತರುಣ್ ಸುಧೀರ್ ವೆಡ್ಡಿಂಗ್ ಕಾರ್ಡ್
ಖ್ಯಾತ ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಲ್ ಮಂಥೆರೋ ವಿವಾಹಕ್ಕೆ ದಿನಗಣನೆ ಶುರುವಾಗಿದೆ. ಮೊನ್ನೆ ಮೊನ್ನೆ ತಾವಿಬ್ಬರು ವಿವಾಹವಾಗುತ್ತಿರುವ ವಿಚಾರವನ್ನು ಸೋನಲ್ ಹಾಗೂ ತರುಣ್ ಸುಧೀರ್ ಒಂದು ಸುಂದರ ವೀಡಿಯೋ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು. ಇದೀಗ ಅವರ ವೆಡ್ಡಿಂಗ್ ಕಾರ್ಡ್ ಕೂಡ ಅಷ್ಟೇ ಭಿನ್ನವಾಗಿದ್ದು ಭಾರೀ ಗಮನೆಸೆಳೆಯುತ್ತಿದೆ.
ತರುಣ್ ಹಾಗೂ ಸೋನಾಲ್ ಪರಿಸರ ಸ್ನೇಹಿ ಇನ್ವಿಟೇಷನ್ ಕಾರ್ಡ್ ಮಾಡಿಸಿದ್ದಾರೆ.ಈ ಮೂಲಕ ಸೋನಾಲ್ ಮತ್ತು ತರುಣ್ ಮಾದರಿಯಾಗಿದ್ದಾರೆ.ಈ ವೆಡ್ಡಿಂಗ್ ಕಾರ್ಡ್ ಜೊತೆಗೆ ಒಂದು ಖಾಲಿ ಪುಸ್ತಕ ಅದರಲ್ಲಿ ಬರೆಯೋದಕ್ಕೆ ಎರಡು ಪೆನ್ಸಿಲ್ ಹಾಗೂ ಎರಡು ಪೆನ್ ಮತ್ತು ಒಂದು ಸೀಡ್ ಬಾಲ್ ಗಳನ್ನು ಇಡಲಾಗಿದೆ. ಇದರ ವಿಶೇಷತೆ ಅಂದ್ರೆ ಮದುವೆ ಮುಗಿದ ನಂತ್ರ ಈ ಮದುವೆ ಆಹ್ವಾನ ಪತ್ರಿಕೆ ಏನ್ ಮಾಡೋದು ಅಂತ ಯೋಚನೆ ಮಾಡೋರಿಗೆ ಇದರಲ್ಲಿ ಸೆಲ್ಯೂಷನ್ ಇದೆ. ಸೋನಾಲ್ ಮತ್ತು ತರುಣ್ ಮದ್ವೆ ಬಳಿಕ ಈ ಮದುವೆ ಆಹ್ವಾನ ಪತ್ರಿಕೆಯನ್ನ ಒಂದು ಮಣ್ಣಿನ ಪಾಟ್ ನಲ್ಲಿ ಹಾಕಿದ್ರೆ ಅದು ಮಣ್ಣಿನಲ್ಲಿ ಬೆರೆದು ಗಿಡವಾಗಿ ಬೆಳೆಯುತ್ತೆ. ಜೊತೆಗೆ ಖಾಲಿ ಪುಸ್ತಕದಲ್ಲಿ ಬರೆದು ಹಾಳೆ ಖಾಲಿ ಆದ ನಂತ್ರ ಅದನ್ನು ಮಣ್ಣಲ್ಲಿ ಹಾಕಿದ್ರೆ ಅದ್ರಿಂದಲೂ ಹೂವಿನ ಗಿಡ ಬೆಳೆಯುತ್ತೆ. ಇನ್ನು ಕೊಟ್ಟಿರೋ ಪೆನ್ ಮತ್ತು ಪೆನ್ಸಿಲ್ ಬೆರೆದು ಖಾಲಿ ಆದ್ರೆ ಅದನ್ನು ಮಣ್ಣಿಗೆ ಹಾಕಿದ್ರೆ ಚಂದದ ಹೂವಿನ ಹಾಗೂ ತರಕಾರಿ ಗಿಡ ಬೆಳೆಯುತ್ತಂತೆ.
ಹೀಗೆ ತುಂಬಾ ಸ್ಪೆಷಲ್ ವಿವಾಹದ ಆಹ್ವಾನ ಪತ್ರಿಕೆ ಸಖತ್ ಸ್ಪೆಷಲ್ ಮತ್ತು ಪರಿಸರ ಸ್ನೇಹಿ ಆಗಿರಲಿ ಅಂತ ತರುಣ್ ಈ ರೀತಿ ಪ್ಲಾನ್ ಮಾಡಿದ್ದಾರೆ.ಆಗಸ್ಟ್ 10 ಹಾಗೂ 11 ರಂದು ತರುಣ್ ಮತ್ತು ಸೋನಾಲ್ ವಿವಾಹ ನಡೆಯಲಿದೆ. ಈಗಾಗಲೇ ಮದುವೆಗೆ ಭರ್ಜರಿ ತಯಾರಿಗಳು ನಡೆಯುತ್ತಿವೆ.