ಮನೆ Latest News ಕೆಲ‌ ಯತ್ನಾಳ್ ಬೆಂಬಲಿಗರಿಂದ ಬಿಜೆಪಿ ವಿರುದ್ದವೇ ಅಸಮಾಧಾನ;ಯತ್ನಾಳ್ ಉಚ್ಚಾಟನೆ ವಿರೋಧಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್

ಕೆಲ‌ ಯತ್ನಾಳ್ ಬೆಂಬಲಿಗರಿಂದ ಬಿಜೆಪಿ ವಿರುದ್ದವೇ ಅಸಮಾಧಾನ;ಯತ್ನಾಳ್ ಉಚ್ಚಾಟನೆ ವಿರೋಧಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್

0

ಬೆಂಗಳೂರು; ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಛಾಟಿಸಿರೋದಕ್ಕೆ ಬಿಜೆಪಿಯಿಂದಲೇ ಭಾರೀ ವಿರೋಧ ವ್ಯಕ್ತವಾಗಿದೆ. ಕೆಲ‌ ಯತ್ನಾಳ್ ಬೆಂಬಲಿಗರು ಬಿಜೆಪಿ ವಿರುದ್ದವೇ ಅಸಮಾಧಾನ ಹೊರ ಹಾಕಿದ್ದಾರೆ. ಯತ್ನಾಳ್ ಉಚ್ಚಾಟನೆ ವಿರೋಧಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದಾರೆ.

“ಬಿಜೆಪಿಗೆ ಭಾವಪೂರ್ಣ ಶ್ರದ್ದಾಂಜಲಿ” ಎಂದು ಪೋಸ್ಟ್ ಮಾಡಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೇ ಐ ಸ್ಟ್ಯಾಡ್ ವಿತ್ ಯತ್ನಾಳ್ ಎಂದು ಬೆಂಬಲಿಗರಿಂದ ಕ್ಯಾಂಪೇನ್ ಶುರು ಮಾಡಿದ್ದಾರೆ.

ಇನ್ನು ಇತ್ತ ಬೆಂಗಳೂರಿನಲ್ಲಿ ಶನೈಶ್ಚರ ಸ್ವಾಮಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಶೇಷ ಪೂಜೆ ಸಲ್ಲಿಸಿದ್ದಾರೆ.ಸುಮಾರು ಮೂರು ಗಂಟೆಗಳ ಕಾಲ ಪೂಜೆಯಲ್ಲಿ ಭಾಗಿಯಾದ ಯತ್ನಾಳ್ ಭಾಗಿಯಾಗಿದ್ದಾರೆ. ಬೆಂಗಳೂರಿನ ನವರಂಗ್ ನಲ್ಲಿರುವ ಶನೈಶ್ಚರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಮಾಡಿದ್ದಾರೆ. ಇಂದು ಶನಿವಾರವಾಗಿರುವ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಯತ್ನಾಳ್.ಶನೈಶ್ಚರ ಸ್ವಾಮಿಗೆ ಅಭಿಷೇಕ ಪೂಜೆ ನೆರವೇರಿಸಿದ್ದಾರೆ.

ಏಪ್ರಿಲ್ 2 ರಿಂದ ಬೆಲೆ ಏರಿಕೆ ಖಂಡಿಸಿ ಸರ್ಕಾರದ ವಿರುದ್ಧ ಅಹೋರಾತ್ರಿ ಧರಣಿ ಮಾಡ್ತೀವಿ;  ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ

ಬೆಂಗಳೂರು; ಏಪ್ರಿಲ್ 2 ರಿಂದ ಬೆಲೆ ಏರಿಕೆ ಖಂಡಿಸಿ ಸರ್ಕಾರದ ವಿರುದ್ಧ ಅಹೋರಾತ್ರಿ ಧರಣಿ ಮಾಡ್ತೀವಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಫ್ರೀಡಂ ಪಾರ್ಕ್ ನಲ್ಲಿ ಸರ್ಕಾರದ ವಿರುದ್ಧ ಧರಣಿ ಮಾಡ್ತೀವಿ.ಎಲ್ಲಾ ಶಾಸಕರು ಪರಿಷತಗ ಸದಸ್ಯರು ಪದಾಧಿಕಾರಿಗಳು ಭಾಗಿಯಾಗ್ತಾರ . ಏಪ್ರಿಲ್ 4ನೇ ತಾರೀಕು ಜಿಲ್ಲೆ ಹಾಗೂ ಏಪ್ರಿಲ್ 3 ನೇ ತಾರಿಕು ತಾಲೂಕು ಕೇಂದ್ರ ದಲ್ಲಿ ಪ್ರತಿಭಟನೆ ಮಾಡ್ತೀವಿ ಎಂದು ತಿಳಿಸಿದ್ರು.

ಅಧಿವೇಶನದ ಕೊನೆ ದಿನ ಸ್ಪೀಕರ್ 18 ಶಾಸಕರನ್ನ ಅಮಾನತ್ತು ಮಾಡಿದ್ದಾರೆ.ಇದು ಸಂವಿಧಾನ ವಿರೋಧ. ಅಕ್ಟೋಬರ್ ಎರಡರಂದು ವಿಧಾನಸೌಧದ ಗಾಂಧಿ ಪ್ರತಿಭಟನೆ ಎದರು ಶಾಸಕರು ಪರಿಷತ್ ಸದಸ್ಯರು ಪ್ರತಿಭಟನೆ ಮಾಡ್ತೀವಿ.ಎಲ್ಲಿಯವರೆಗೂ ಶಾಸಕರ ಅಮಾನತ್ತು ವಾಪಸ್ ತೆಗೆದುಕೊಳ್ಳುವವರೆಗೂ ಬಿಜೆಪಿ ಶಾಸಕರು ಯಾವುದೇ ಸದನ ಕಾಲಪ ಸಮಿತಿ, ಸ್ಥಾಯಿ ಸಮಿತಿ ಸಭೆಯಲ್ಲಿ ಭಾಗವಹಿಸೋದಿಲ್ಲ. ಅಧಿವೇಶನದಲ್ಲಿ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ 4% ಮುಸ್ಲಿಂ ಮೀಸಲಾತಿ ಕೊಟ್ಟಿದ್ದಾರೆ.ಇದು ಸಂವಿಧಾನ ವಿರೋಧಿ ನಡೆ ಎಂದ್ರು.

ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಎಂಬಂತಾಗಿದೆ.ರಾಜ್ಯದ ಸಿಎಂ ನಡೆಯನ್ನ ಬಿಜೆಪಿ ವಿರೋಧಿಸ್ತಾ ಇದೆ. ಏಪ್ರಿಲ್ 10 ರ ಬಳಿಕ ರಾಜ್ಯಾಧ್ಯಕ್ಷ ನಾಗಿ ವಿರೋಧ ಪಕ್ಷ ನಾಯಕರು ಶಾಸಕರ ಜತೆ ಎಲ್ಲಾ ಜಿಲ್ಲಾ ಪ್ರವಾಸ ಮಾಡ್ತೀವಿ.ರಾಜ್ಯ ಸರ್ಕಾರದ ಧೋರಣೆ ಇದೆಯಲ್ಲ. ಸ್ಲಿಂ ಒಲೈಕೆ ಹಾಗೂ ಹಿಂದೂಗಳ ಅನ್ಯಾಯದ ವಿರುದ್ದ ಹೋರಾಟ ಮಾಡ್ತೇವೆ ಎಂದು ತಿಳಿಸಿದ್ರು.

ಇದೇ ವೇಳೆ ಮಾತನಾಡಿದ ಅವರು ಜನ ವಿರೋಧಿ ಸರ್ಕಾರದ ಬಣ್ಣವನ್ನ ಬಯಲು ಮಾಡಬೇಕು.ಜನ ಜಾಗೃತಿ ಮಾಡಲು ತೀರ್ಮಾನಿಸಿದ್ದೇವೆ ಎಂದರು. ಯತ್ನಾಳ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಕೇಂದ್ರದ ವರಿಷ್ಠರು ಯತ್ನಾಖ್ ಅವರಿಗೆ ನೋಟಿಸ್ ಕೊಟ್ಟು ತಿದ್ದುವ ಪ್ರಯತ್ನ ಮಾಡಿದ್ದಾರೆ.ನಾನು ಅಧ್ಯಕ್ಷನಾಗಿ ಒಂದು ಹೆಜ್ಜೆ ಮುಂದೆ ಹೋಗಿ ರವಿ ಕುಮಾರ್ ಜತೆ ಸಮಸ್ಯೆ ಬಗೆ ಹರಿಸಲು ಯತ್ನಿಸಿದ್ದೆ.ಪಕ್ಷದ ದೃಷ್ಠಿಯಿಂದ ಎಲ್ಲ ಸರಿ ಪಡಿಸಲು ಹೇಳಿದ್ದೆ. ಸದನ ನಡೆಯಬೇಕಾದರೂ ವೈಯಕ್ತಿಕ ವಾಗಿ ಭೇಟಿಯಾಗಿ ಭೋಜನ ಕೂಟಕ್ಕೂ ಆಹ್ವಾನಿಸಿ ಸಮಸ್ಯೆ ಬಗೆ ಹರಿಸಿಕೊಂಡು ಹೋಗಲು ಯತ್ನಿಸಿದ್ದೆ. ಎಲ್ಲರನ್ನು ಒಟ್ಟಾಗಿ ಕರೆದೊಯ್ಯಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ.ನಾನು ಹಿಂದೆ ಒಂದು ಮುಂದೊಂದು ಮಾತನಾಡುವ ವ್ಯಕ್ತಿಯಲ್ಲ.ಯಡಿಯೂರಪ್ಪ ನವರು ಎಲ್ಲರನ್ನು ಬೆಳೆಸಿದ್ದಾರೆ ವಿನಯ ತುಳಿಯುವ ಕೆಲಸ ಮಾಡಿಲ್ಲ.ಇದನ್ನ ವಿಧಿ ಆಟ ಅಂತಿರೋ ಏನು ಗೊತ್ತಿಲ್ಲ .ಇಂದು ಅಪ್ಪ ಮಕ್ಕಳ ಬಗ್ಗೆ ಮಾತನಾಡ್ತಾ ಇದಾರೋ ಅನಂತ ಕುಮಾರ್ ಆದಿಯಾಗಿ ಯಡಿಯೂರಪ್ಪ ಆಚಾರ್ಯ, ತಂಗಾ ಎಲ್ಲರ ಶ್ರಮದಿಂದ ಪಕ್ಷ ಕಟ್ಟಿದ್ದಾರೆ. ಯಡಿಯೂರಪ್ಪ ಹೋರಾಟ ಮಾಡಿದ್ದಾರೆ.ಯಡಿಯೂರಪ್ಪ ವಿರುದ್ದ ಮಾಡಿದ ಅಪಮಾನವನ್ನ ಪಕ್ಷದ ದೃಷ್ಠಿಯಿಂದ ಒಂದು ವರ್ಷದಿಂದ ಸಹಿಸಿದ್ದೇನೆ.ಕೇಂದ್ರದ ನಾಯಕರು ತೆಗೆದುಕೊಂಡಿರುವ ಕ್ರಮ ನಾನಾಗಲಿ ಯಡಿಯೂರಪ್ಪ ಅವರಾಗಲಿ ತೆಗೆದುಕೊಂಡಿಲ್ಲ ಎಂದ್ರು.

ಯತ್ನಾಳ್ ಉಚ್ಚಾಟನೆ ಸಂಭ್ರಮಿಸ್ತಾ ಇಲ್ಲ.ಆ ರೀತಿ ವರ್ತಿಸಿದರೆ ರಾಜ್ಯಾಧ್ಯಕ್ಷ ನಾಗಲು ನಾನು ನಾಲಯಕ್ ಅದನ್ನೂ ಹೇಳ್ತೇನೆ.ನಾನು ಸಿಎಂ ಆಗಲು ಹೊರಟಿಲ್ಲ. ಪಕ್ಷ ಸಂಘಟಿಸಿ ಅಧಿಕಾರಕ್ಕೆ ತರಲು ಯತ್ನಿಸಿಸುತ್ತಿದ್ದೇನೆ.ಕಳೆದ ಒಂದು ವರ್ಷದಿಂದ ಯಾರ್ಯಾರು ಏನೇನು ಮಾತನಾಡಿದ್ದಾರೆ ಎಲ್ಲವನ್ನು ನೋಡಿದ್ದಿರಾ.ನಾನು ಎಲ್ಲವನ್ನು ಸಹಿಸಿಕೊಂಡಿದ್ದೇನೆ.ನನ್ನ ಈ ಸಹನೆಯನ್ನ ನೀವು ಶ್ಲಾಘಿಸಬೇಕಲ್ಲವೇ? ಎಂದು ಪ್ರಶ್ನಿಸಿದ್ರು.

ಯತ್ನಾಳ್ ಪಕ್ಷಕ್ಕೆ ವಾಪಸ್ ವಿಚಾರದ ಬಗ್ಗೆ ಮಾತನಾಡಿ ಇದರ ಬಗ್ಗೆ ನಾನು ಏನು ಮಾತನಾಡೋಲ್ಲ.ಯಾವುದೇ ಪ್ರತಿಕ್ರಿಯೆ ನೀಡಲು ಬಯಸೋಲ್ಲ.ಪಕ್ಷದ ಹೈಕಮಾಂಡ್ ತೆಗೆದುಕೊಂಡ ನಿರ್ಧಾರವನ್ನ ಗೌರವಿಸುವಷ್ಟೇ ನನ್ನ ಕೆಲಸ ಎಂದ್ರು.