ಮನೆ Latest News ಶೀಘ್ರದಲ್ಲೇ ಎಸ್ ಐ ಟಿ ಅಧಿಕಾರಿಗಳು ತನಿಖೆ ಆರಂಭಿಸ್ತಾರೆ: ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್...

ಶೀಘ್ರದಲ್ಲೇ ಎಸ್ ಐ ಟಿ ಅಧಿಕಾರಿಗಳು ತನಿಖೆ ಆರಂಭಿಸ್ತಾರೆ: ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿಕೆ

0

ಬೆಂಗಳೂರು; ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ ಐಟಿ ರಚನೆಗೆ ಸಂಬಂಧಪಟ್ಟಂತೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದು  ಎಸ್ಐಟಿ ತಂಡಕ್ಕೆ ಸೂಚನೆ ಕೊಡಲಾಗಿದೆ. ಕೂಡಲೇ ಧರ್ಮಸ್ಥಳಕ್ಕೆ ಹೋಗಿ ತ‌ನಿಖಾ ಪ್ರಕ್ರಿಯೆ ಶುರು ಮಾಡಲು ತಿಳಿಸಲಾಗಿದೆ. ಸದ್ಯದಲ್ಲೇ ಎಸ್ಐಟಿ ತಂಡ ಧರ್ಮಸ್ಥಳಕ್ಕೆ ಹೋಗಲಿದೆ. ಇನ್ನು ಧರ್ಮಸ್ಥಳದ ಪೊಲೀಸರಿಗೂ ಈ ಸಂಬಂಧ ಸೂಚನೆ ಕೊಡಲಾಗಿದೆ. ಎಸ್ಐಟಿ ತಂಡದಿಂದ ಯಾರೂ ಹೊರಗುಳಿಯಲ್ಲ. ಯಾರಾದ್ರೂ ಹೊರಗೆ ಉಳಿಯುವುದಾದರೆ ನಮಗೆ ತಿಳಿಸಲಿ, ಆ ಬಗ್ಗೆ ಕ್ರಮ ತಗೋತೇವೆ. ಇನ್ನೂವರೆಗೆ ಯಾರೂ ನಮ್ಮನ್ನು ಈ ವಿಚಾರದಲ್ಲಿ ಏನೂ ಮಾಹಿತಿ ಕೊಟ್ಟಿಲ್ಲ. ಬಿಜೆಪಿಯವರು ಎಸ್ಐಟಿಗೆ ಯಾಕೆ ಆಕ್ಷೇಪ ಮಾಡ್ತಿದ್ದಾರೆ. ಈಗಿಂದಲೇ ಯಾಕೆ ಅವರು ಏನೇನೋ ಫ್ರೇಮ್ ಮಾಡ್ತಿದ್ದಾರೆ. ಎಸ್ಐಟಿ ರಚನೆಯಲ್ಲಿ ರಾಜಕೀಯ ಉದ್ದೇಶ ಇದೆ ಅಂತ ಈಗಲೇ ಹೇಗೆ ಹೇಳ್ತಾರೆ ಅವ್ರು?. ಅಂದ ಮೇಲೆ ಅವರ ಮನಸಲ್ಲಿ ಏನೋ ಇದೆ ಅಂತ ಆಯ್ತಲ್ಲ ಎಂದು ಬಿಜೆಪಿ ನಾಯಕರ ಆರೋಪಕ್ಕೆ ಪರಮೇಶ್ವರ್ ತಿರುಗೇಟು ಕೊಟ್ಟಿದ್ದಾರೆ.

ಇನ್ನು ಸುಪ್ರೀಂಕೋರ್ಟ್ ನಿಂದ ಇಡಿ ಸಮನ್ಸ್ ರದ್ದು ವಿಚಾರದ ಬಗ್ಗೆ ಮಾತನಾಡಿದ  ಇನ್ನೂ ನ್ಯಾಯ ಇದೆ ಅನ್ನೋದನ್ನು ಪುನರುಚ್ಚಾರ ಮಾಡಿದೆ ಕೋರ್ಟ್. ಪ್ರಕರಣದಲ್ಲಿ ತಮ್ಮ ಪಾತ್ರ ಇಲ್ಲ ಅಂತ ಸಿಎಂ ಹೇಳ್ತಿದ್ರು. ತಮ್ಮ ಪತ್ನಿ ಪಾತ್ರವೂ ಇಲ್ಲ ಅಂತಿದ್ರು. ಈಗ ಅದೇ ಸತ್ಯ ಅಂತಾಗಿದೆ ಎಂದರು. ಸಿಎಂಗೆ ಬಿಜೆಪಿಯವರು ಕ್ಷಮೆ ಕೇಳಬೇಕೆಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಪರಮೇಶ್ವರ್ ಕೆಲವರು ಅವರ ಅಭಿಪ್ರಾಯ ಹೇಳಿದ್ದಾರೆ. ಸುಪ್ರೀಂಕೋರ್ಟ್ ತೀರ್ಪಿನಿಂದ ಬಿಜೆಪಿಯವರಿಗೆ ಅರ್ಥ ಆಗಿದೆ. ಮುಡಾ ಪ್ರಕರಣದಲ್ಲಿ ಸತ್ಯಾಸತ್ಯ, ನ್ಯಾಯ ಅನ್ಯಾಯ ತೀರ್ಮಾನ ಆಗಿದೆ. ಇದು ಬಿಜೆಪಿಯವರಿಗೆ ಅರ್ಥವಾಗಿದೆ. ಸುಪ್ರೀಂಕೋರ್ಟ್ ಕೋರ್ಟ್ ತೀರ್ಪಿನಿಂದ ಖುಷಿ ಆಗಿದೆ ಅಂತಲ್ಲ. ಆದರೆ ನ್ಯಾಯ ಅನ್ಯಾಯದ ಪ್ರಶ್ನೆ ಇದು ಅಷ್ಟೇ. ಪ್ರಣವ್ ಮೊಹಂತಿ ತಂಡ ಇಂದು ಅಥವಾ ನಾಳೆ ಧರ್ಮಸ್ಥಳಕ್ಕೆ ಹೋಗಬಹುದು ಎಂದು ತಿಳಿಸಿದ್ದಾರೆ.

ಉಗ್ರಪ್ಪ ನೇತೃತ್ವದ ತಂಡದ ವರದಿಯಲ್ಲಿ ಬೆಳ್ತಂಗಡಿಯಲ್ಲಿ ಅಸಹಜ ಸಾವುಗಳ ಸಂಖ್ಯೆ ಹೆಚ್ಚಾಗಿರುವ ಬಗ್ಗೆ ಉಲ್ಲೇಖ ವಿಚಾರದ ಬಗ್ಗೆ ಮಾತನಾಡಿ ಆ ಥರದ ವರದಿ ಏನಾದ್ರೂ ಸರ್ಕಾರಕ್ಕೆ ಸಲ್ಲಿಕೆ ಆಗಿದ್ದರೆ ಪರಿಶೀಲನೆ ಮಾಡ್ತೇವೆ. ಸರ್ಕಾರದ ವತಿಯಿಂದ ಆಗಿರುವ ವರದಿಯಾ ಅಂತ ನೋಡ್ತೇವೆ. ಸತ್ಯ ಹೊರಗೆಳೆಯಲು ಸರ್ಕಾರ ಎಸ್ಐಟಿ ರಚಿಸಿದೆ. ಈಗಲೇ ಬಿಜೆಪಿಯವ್ರು ಅದೂ ಇದೂ ಹೇಳಿದ್ರೆ ಹೇಗೆ?. ಸತ್ಯ ಹೊರಗೆ ಬರಲಿ ಅಂತ ಎಸ್ಐಟಿ ಮಾಡಿದ್ದೇವೆ, ಅಷ್ಟಕ್ಕೇ ಎಲ್ರೂ ಸೀಮಿತ ಆದ್ರೆ ಸಾಕು ಎಂದಿದ್ದಾರೆ.

ಸಿಎಂ-ಡಿಸಿಎಂ ದೆಹಲಿ ಪ್ರವಾಸದ ಬಗ್ಗೆ ಮಾತನಾಡಿ ಜುಲೈ 25ರಂದು ಒಬಿಸಿ ಸಲಹಾ ಸಮಿತಿ ಸಭೆಗಾಗಿ ದೆಹಲಿ ಹೋಗ್ತಿದ್ದಾರೆ. ಹೋದಾಗ ಸ್ವಾಭಾವಿಕವಾಗಿ ಹೈಕಮಾಂಡ್ ಭೇಟಿಯಾಗಿ ಬರ್ತಾರೆ. ಈ ಹಿಂದೆ ನಿಗಮ ಮಂಡಳಿ ಅಧ್ಯಕ್ಷರ ನೇಮಕ್ಕೆ ಪರಂ ಲೀಸ್ಟ್ ಕೊಟ್ಟಿದ್ದ ವಿಚಾರ. ನಾನು ಲೀಸ್ಟ್ ಕೊಟ್ಟು 6 ತಿಂಗಳಾಯ್ತು. ಯಾಕೆ ವಿಳಂಬ ಆಗ್ತಿದೆ ಗೊತ್ತಿಲ್ಲ. ಅಂತಿಮ ಹಂತಕ್ಕೆ ಬಂದಿದೆ ಫೈನಲ್ ಆಗಿ ಮಾಡ್ತಾರೆ. ನಮಗೆ ಒಂದು ಜವಾಬ್ದಾರಿ ಕೊಟ್ಟಿದ್ರು. 11 ಜನ ಸದಸ್ಯರಿದ್ದೆವು, ನಾವು ಶಾಸಕರ ಅಭಿಪ್ರಾಯ ಪಡೆದು ವರದಿ ಕೊಟ್ಟಿದ್ದೆವು. ಅದರ ಮುಂದಿನ ಭಾಗ ಸಿಎಂ ಮತ್ತು ಅಧ್ಯಕ್ಷರದ್ದು. ಅದನ್ನ ನಾವು ಪ್ರಶ್ನೆ ಮಾಡೊಲ್ಲ ಎಂದಿದ್ದಾರೆ.

ಬಿಕ್ಲು ಶಿವು ಪ್ರಕರಣದ ಎ1ಆರೋಪಿಯನ್ನ ಇದುವರೆಗೂ ಬಂಧಿಸದ ವಿಚಾರದ ಬಗ್ಗೆ ಮಾತನಾಡಿದ ಅವರು ಹುಡುಕ್ತಾ ಇದ್ದಾರೆ ರೀ, ಏನ್ ನಿಗದಿ ಮಾಡ್ತಾರಾ . ಒಂದು ದಿನದಲ್ಲಿ, ಎರಡ್ ದಿನದಲ್ಲಿ ಮಾಡ್ತೇವೆ ಎಂದು. ಹುಡುಕ್ತಾ ಇದ್ದಾರೆ ಪೊಲೀಸರು, ಸಿಗೊಹಾಗೆ ಮಾಡಬೇಕಲ್ವಾ ಎಂದು ಗರಂ ಆಗಿದ್ದಾರೆ.