ಬೆಂಗಳೂರು: ನಮ್ಮ ದೇಶದ ಸೈನಿಕರಿಗೆ ನಾನು ಇಡೀ ರಾಜ್ಯದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಆಪರೇಷನ್ ಸಿಂಧೂರ್ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ನಮ್ಮ ದೇಶದ ರಕ್ಷಣಾ ಪಡೆ ಪಾಕಿಸ್ತಾನ ಮತ್ತು ಪಿಒಕೆ ಮೇಲೆ ದಾಳಿ ಮಾಡಿದೆ. ಉಗ್ರರ ನೆಲೆಗಳನ್ನ ನಾಶ ಮಾಡಿ ಪರಾಕ್ರಮ ಮೆರೆದಿದ್ದಾರೆ.ನಮ್ಮ ದೇಶದ ಸೈನಿಕರಿಗೆ ನಾನು ಇಡೀ ರಾಜ್ಯದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.
ಭಾರತದ ಸೈನ್ಯ ಸಿಂಧೂರ್ ಆಪರೇಷನ್ ಅಂತೇಳಿ ಮಾಡಿದೆ. ಸುಮಾರು 9 ಉಗ್ರರ ನೆಲೆ ಮೇಲೆ ದಾಳಿ ಮಾಡಿದೆ. ಈ ದಾಳಿ ಮಾಡೋವಾಗಿ ಬೇರೆ ಅವರ ಮೇಲೆ ನಮ್ಮ ಸೈನಿಕರು ದಾಳಿ ಮಾಡಿಲ್ಲ. ಯಾಕಂದ್ರೆ ಪಾಕಿಸ್ತಾನದವರಿಗೆ ಉಗ್ರರ ನೆಲೆ ಗೊತ್ತಿದೆ, ಆದ್ರೂ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಸುಮಾರು ೨೬ ಜನ ಅಮಾಯಕರನ್ನ ಕೊಂದಿದ್ದರು. ಹೀಗಾಗಿ ಇವರನ್ನ ಬೆಂಬಲಿಸುತ್ತಿರೋದು ಪಾಕಿಸ್ತಾನದವರು. ಹೀಗಿದರೂ ಅವರನ್ನ ಬೆಂಬಲಿಸೋದು ನಿಲ್ಲಿಸಿಲ್ಲ. ಅದಕ್ಕಾಗಿ ಭಾರತ ಸರ್ಕಾರ ೯ ಉಗ್ರರ ನೆಲೆಗಳನ್ನ ಧ್ವಂಸ ಮಾಡಿದೆ. ಈ ಅಂತರಾಷ್ಟ್ರೀಯ ಮಟ್ಟದಲ್ಲಿ ಇದನ್ನ ಯಾವತ್ತೂ ವಿರೋಧ ಮಾಡಿಲ್ಲ. ಹಠಮಾರಿ ತನ ವಿರೋಧಿಸಿ ಭಾರತ ದಾಳಿ ಮಾಡಿದೆ, ಇದನ್ನನಾನು ಬೆಂಬಲಿಸುತ್ತೇನೆ ಎಂದಿದ್ದಾರೆ.
ಮುಂದುವರೆದು ಮಾತನಾಡಿದ ಸಿಎಂ ಇದೊಂದು ಎಚ್ಚರಿಕೆ ಗಂಟೆ ಪಾಕಿಸ್ತಾನಕ್ಕೆ. ಬಹಳ ಮೆಚ್ಚುವ ವಿಚಾರ ಏನಂದ್ರೆ ಉಗ್ರರ ನೆಲೆ ಮೇಲೆ ಮಾತ್ರ ದಾಳಿ ಮಾಡಿದ್ದಾರೆ. ಪತ್ತೆ ಹಚ್ಚಿ ದಾಳಿ ಮಾಡಿದ್ದಾರೆ, ಅಮಾಯಕರಮೇಲೆ ದಾಳಿ ಮಾಡಿಲ್ಲ. ಅದಕ್ಕಾಗಿ ಸೈನಿಕರ ಕಾರ್ಯದಕ್ಷತೆ ಗೆ ಪರಿಣತೆಗೆ ನಮ್ಮ ಸರ್ಕಾರ ದೊಡ್ಡ ಸಲಾಂ ನೀಡುತ್ತದೆ. ನಾನು ಕೂಡ ಸರ್ಕಾರದ ಪರವಾಗಿ ಬೆಂಬಲ ಘೋಷಿಸುತ್ತೇನೆ. ನಮ್ಮ ರಾಜ್ಯ ಕೂಡ ಬೆಂಬಲ ನೀಡುತ್ತದೆ. ನಾವೆಲ್ಲಾ ಎಚ್ಚರ ವಹಿಸೋ ಕೆಲಸ ಮಾಡುತ್ತೇವೆ. ನಾವು ಕೇಂದ್ರದ ಜೊತೆ ಇರ್ತೇವೆ. ಅವರ ಜೊತೆ ಮಾತಾಡಿ ಸಂಪರ್ಕ ಬೆಳೆಸಿ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ. ನಮ್ಮ ರಾಜ್ಯದಲ್ಲಿ ಎಲ್ಲ ಎಚ್ಚರಿಕಾ ಕ್ರಮ ತೆಗೆದುಕೊಳ್ಳುತ್ತೇವೆ. ಉಗ್ರರ ನೆಲೆ ಮೇಲೆ ದಾಳಿ ನಡೆದಿದೆ.ಹೀಗಾಗಿ ನಾವು ರಾಯಚೂರಲ್ಲಿ ಪ್ರತಿಭಟನೆ ರ್ಯಾಲಿ ಹಮ್ಮಿಕೊಂಡಿದ್ವಿ, ಅದನ್ನ ರದ್ದು ಗೊಳಿಸಿದ್ದೇವೆ. ಸಂವಿಧಾ ಜಾಗೃತಿ, ಬೆಲೆ ಏರಿಕೆ ವಿರುಧ್ಧ ಪ್ರತಿಭಟನೆ ಮಾಡೋದು ಸರಿಯಿಲ್ಲ ಅಂತ ರದ್ದು ಮಾಡಿದ್ಸೇವೆ. ದೇಶದ ಸೈನಿಕರಿಗೊಸ್ಕರ, ಈ ಕ್ರಮಕ್ಕೆ ಬೆಂಬಲ ನೀಡೋದಕ್ಕೆ ರದ್ದು ಆಗಿದೆ.ಹೀಗಾಗಿ ಎಲ್ಲರೂ ಕೇಂದ್ರದ ಜೊತೆ ನಿಲ್ಲಬೇಕು ಅಂತೇಳಿ ರಾಜ್ಯದ ಜನರಿಗೆ ಮನವಿ ಮಾಡಿದ್ದೇವೆ ಎಂದರು.
ಬೆಂಗಳೂರಲ್ಲಿ ಮಾಕ್ ಡ್ರಿಲ್ ಮಾಡುತ್ತೇವೆ. ಮೈಸೂರು, ಕೊಡಗು, ರಾಯಚೂರು, ಕಾರವಾರದಲ್ಲಿ ಮಾಕ್ ಡ್ರಿಲ್ ಮಾಡುತ್ತಿದ್ದೇವೆ. ನಮ್ಮ ರಾಜ್ಯ ವನ್ನ ಅಲರ್ಟ್ ಆಗಿ ಇಡಬೇಕು ಎಂಬ ಕಾರಣಕ್ಕೆ ಮಾಕ್ ಡ್ರಲ್ ಮಾಡುತ್ತೇವೆ. ರಾಷ್ಟ್ರೀಯ ಭದ್ರತೆ ಬಹಳ ಮುಖ್ಯ. ಅದರಲ್ಲಿ ಯಾವುದೇ ರಾಜೀ ಇಲ್ಲ. ನಾವು ಇಂತಹ ಸಂದರ್ಭದಲ್ಲಿ ನಾವು ರಾಷ್ಟ್ರದ ಜೊತೆ ಇರ್ತೇವೆ. ಇದು ಗಾಂಧಿ, ಬಸವಣ್ಣನ ಕಾಲ ಅಲ್ಲ. ಈಗ ಕಾಲ ಬದಲಾಗಿದೆ.ಅವರು ಕಾಲು ಕೆರೆದು ಜಗಳಕ್ಕೆ ಬಂದರೆ ಸುಮ್ಮನೆ ಇರಲು ಆಗುತ್ತಾ ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಸುದ್ದಿಗೋಷ್ಟಿ ಗೆ ಸಿಎಂ ಸಿದ್ದರಾಮಯ್ಯ ಸಿಂಧೂರ್ ಇಟ್ಕೊಂಡು ಬಂದಿದ್ದು ವಿಶೇಷವಾಗಿತ್ತು. ಜಯನಗರದ ದೇವಸ್ಥಾನಕ್ಕೆ ಹೋಗಿದ್ದ ಸಿಎಂ ಅಲ್ಲಿಂದ ಸುದ್ದಿಗೋಷ್ಟಿಗೆ ಬರುವಾಗ ಹಣೆಗೆ ಸಿಂಧೂರ್ ಇಟ್ಟುಕೊಂಡು ಬಂದಿದ್ದರು.