ಬೆಂಗಳೂರು:ಕಳೆದ ಬಾರಿಯ ಬಜೆಟ್ ಗಿಂತ ಈ ಬಾರಿ 38,166 ಕೋಟಿ ಹೆಚ್ಚಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬಜೆಟ್ ಮಂಡನೆಯ ಬಳಿಕ ಮಾತನಾಡಿದ ಅವರು ೨೦೨೫-೨೬ ನೇ ಸಾಲಿನ ಮುಂಗಡ ಪತ್ರ ಮಂಡಿಸಿದ್ದೇನೆ.ಕಳೆದ ಸಾಲಿನಲ್ಲಿ ೩,೭೧,೧೨೧ ಕೋಟಿ ಬಜೆಡ್ ಮಂಡಿಸಿದ್ದೆ. ಈ ಸಾಲಿನ ಬಜೆಟ್ ಗಾತ್ರ ೪,೦೯,೫೪೯ ಕೋಟಿ. ಕಳೆದ ಬಾರಿಯ ಬಜೆಟ್ ಗಿಂತ ಈ ಬಾರಿ ೩೮,೧೬೬ ಕೋಟಿ ಹೆಚ್ಚಾಗಿದೆ. ಬೆಳವಣಿಗೆ ದರ ಹೆಚ್ಚಾಗಿದೆ,೧೦.೩% ನಷ್ಟು.ರಾಜಸ್ವಿ ಸ್ವೀಕೃತಿ 292476 ಕೋಟಿ, ಬೆಳವಣಿಗೆ ೧೧.೧%. ರಾಜಸ್ವ ವೆಚ್ಚ ೩೧೧೭೩೮ ಕೋಟಿ ಎಂದಿದ್ದಾರೆ.
ಸಾಲ ಹೆಚ್ಚಾಗಿದೆ ಎಂದು ವಿಪಕ್ಷದವರು ಹೇಳ್ತಾರೆ. ಜಿಎಸ್ಡಿಪಿಯ ೨೫% ಒಳಗಡೆ ಸಾಲದ ಪ್ರಮಾಣ ಇರಬೇಕು.ಆರ್ಥಿಕ ಶಿಸ್ತು ಕಾಪಾಡಬೇಕು ಎಂದರೆ ೨೫% ಒಳಗಡೆ ಇರಬೇಕು. ಫಿಸ್ಕಲ್ ರೆಸ್ಪಾನ್ಸಿಬಿಲಿಟಿ ಮ್ಯಾನೇಜ್ಮೆಂಟ್ ಆ್ಯಕ್ಟ್ ಪ್ರಕಾರವೇ ನಾವು ಸಾಲ ಮಾಡಿದ್ದೇವೆ. ೨೪.೯೧% ಪ್ರಮಾಣದಲ್ಲಿಯೇ ಸಾಲ ಮಾಡಿದ್ದೇವೆ. ಅವಕಾಶ ಇರುವ ಮಾನದಂಡದ ಮಿತಿಯ ಒಳಗೇ ಸಾಲ ಮಾಡಿದ್ದೇವೆ ಎಂದ್ರು.
ವಿತ್ತೀಯ ಕೊರತೆ ೩% ಗಿಂತ ಜಾಸ್ತಿ ಹೋಗಬಾರದು.೨.೯೫% ಒಳಗಡೆಯೇ ವಿತ್ತೀಯ ಕೊರತೆ ಇಟ್ಟಿದ್ದೇವೆ. ಪಾಪ ಅಶೋಕ ಅವರಿಗೆ ಗೊತ್ತಿದೆಯೋ ಇಲ್ವೋ ಗೊತ್ತಿಲ್ಲ ಇದೆಲ್ಲ. ಫಿಸಿಕಲ್ ರೆಸ್ಪಾನ್ಸಿಬಿಲಿಟಿ ಆ್ಯಕ್ಡ್ ಓದಿಕೊಂಡು ಮಾತನಾಡಲಿ ಅವರೆಲ್ಲ. ರೆವೆನ್ಯು ಸರ್ಪ್ಲಸ್ ಇರಬೇಕು. ವಿತ್ತೀಯ ಕೊರತೆ ೧೯,೨೫೮ ಕೋಟಿ.ಮುಂದಿನ ವರ್ಷಕ್ಕೆ ರೆವೆನ್ಯು ಸರಪ್ಲಸ್ ಬರುತ್ತೇವೆ. ಇಷ್ಟೆಲ್ಲ ಮಾತಾಡ್ತಾರಲ್ಲ ಅಶೋಕ ಕೇಂದ್ರ ಸರ್ಕಾರದ ಫಿಸ್ಕಲ್ ಡಿಪಿಸಿಟ್ ಎಷ್ಟಿದೆ ಗೊತ್ತಾ ಅವರಿಗೆ?. ೪.೬೧% ಕೇಂದ್ರದ ಫಿಸ್ಕಲ್ ಡಿಪಿಸಿಟ್. ಅಶೋಕ್ ಶುಡ್ ನೋ ದಿಸ್ ಎಂದು ಹೇಳಿದ್ದಾರೆ.
೫೩ ಲಕ್ಷ ಕೇಂದ್ರದ ಸಾಲ ಇತ್ತು,ಈಗ ೨ ಲಕ್ಷ ಕೋಟಿ ಸಾಲ ಆಗಿದೆ ಕೇಂದ್ರದ್ದು.ಯಾಕಪ್ಪ ಇಷ್ಟು ಸಾಲ ಆಯ್ತು ಅಂತ ನಾವು ಕೇಂದ್ರ ವನ್ನು ಕೇಳಬೇಕು. ಗೊತ್ತಿದ್ದೂ ಕೂಡ ರಾಜಕೀಯ ಮಾತಾಡುತ್ತಿರಬಹುದು.ನಾವು ಆರ್ಥಿಕ ಶಿಸ್ತನ್ನು ಪಾಲನೆ ಮಾಡಿದ್ದೇವೆ.ಮಹಿಳೆಯರು ದುರ್ಬಲ ವರ್ಗದವರು ಶ್ರಮಿಕರು ಎಲ್ಲರ ಆರ್ಥಿಕ ಶಕ್ತಿ ನೀಡುವ ಯೋಜನೆ ನೀಡಿದ್ದೇವೆ. ಗ್ಯಾರಂಟಿ ಯೋಜನೆಯಿಂದ ದಿವಾಳಿ ಆಗ್ತೇವೆ ಅಂತ ಬಿಜೆಪಿ ಆರೋಪ ಮಾಡುತ್ತಿತ್ತು.ದಿವಾಳಿ ಆಗಿದೆಯಾ ರಾಜ್ಯ? ದಿವಾಳಿ ಅನ್ನೋ ಪದದ ಅರ್ಥ ಗೊತ್ತಿದೆಯಾ ಅವರಿಗೆ,ಆರ್ಥಿಕ ಶಿಸ್ತು ಕಾಪಾಡಿಕೊಂಡಿದ್ದೇವೆ ಎಂದರು.
ಸಾಲ ಪ್ರಮಾಣ ಎಷ್ಟಿರಬೇಕು ಎಂದು ನಿಗದಿ ಮಾಡುವವರು ಆರ್.ಬಿ.ಐ ನವರು.ನುಡಿದಂತೆ ನಡೆದಿದ್ದೇವೆ.ಜೊತೆಗೆ ಶಿಸ್ತು ಕಾಪಾಡಿಕೊಂಡು ಅಭಿವೃದ್ಧಿ ಗೆ ಹಣ ಖರ್ಚು ಮಾಡಿದ್ದೇವೆ.ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ಕಳೆದ ಬಾರಿ ವೆಚ್ಚ ಮಾಡಿದ್ದೆವು.ಎಲ್ಲಯೋಜನೆಗಳನ್ನೂ ಕೂಡ ಹಿಂದೆಯೂ ಮಾಡಿದ್ದೇವೆ ಮುಂದೆಯೂ ಮಾಡ್ತೇವೆ.ಮುಂದಿನ ವರ್ಷಕ್ಕೆ ೫೧ ಸಾವಿರ ಕೋಟಿ ಗ್ಯಾರಂಟಿ ಗೆ ಮೀಸಲಿಟ್ಟಿದ್ದೇವೆ.ಕೇಂದ್ರದ ಅಕ್ಕಿ ಸಿಗುತ್ತಿರುವುದರಿಂದ ಅಕ್ಕಿ ದರ ೨೨.೫% ಆಗಿದೆ.ಇದರಿಂದ ನಮಗೆ ಸ್ವಲ್ಪ ಕಡಿಮೆ ವೆಚ್ಚ. ೨೮ ಸಾವಿರ ಕೋಟಿ ಗೃಹ ಲಕ್ಷ್ಮಿಗೆ ಖರ್ಚು ಮಾಡ್ತಿದ್ದೇವೆ.ಎಲ್ಲ ಇಲಾಖೆಗೂ ಕೂಡ ಹಣ ಹೆಚ್ಚು ನೀಡಿದ್ದೇವೆ.ಅಭಿವೃದ್ಧಿ ಕೆಲಸಗಳಿಗೆ ಹಣ ಇಲ್ಲ ಎಂದು ಬಿಜೆಪಿ ಹೇಳುತ್ತಿರುವುದು ಸುಳ್ಳು. ಅವರು ರಾಜಕೀಯ ಕಾರಣಕ್ಕೆ ಆರೋಪ ಮಾಡ್ತಿದ್ದಾರೆ.ಸರ್ಕಾರ ದಿವಾಳಿ ಆಗುತ್ತಿದೆ ಎಂಬ ಆರೋಪ ಸುಳ್ಳು. ನಮ್ಮ ಗ್ಯಾರಂಟಿ ಗಳನ್ನೇ ಬೇರೆ ರಾಜ್ಯದಲ್ಲಿ ಬಿಜೆಪಿ ಕಾಪಿ ಮಾಡಿದ್ದಾರೆ ಎಂದರು.
ಅಲ್ಪಸಂಖ್ಯಾತ ರಿಗೂ ಹಣ ಜಾಸ್ತಿ ಮಾಡಿದ್ದೇವೆ.ಅಲ್ಪಸಂಖ್ಯಾತ ಅಂದ್ರೆ ಬರೀ ಮುಸಲ್ಮಾನರು ಬರಲ್ಲ. ಕ್ರಿಶ್ಚಿಯನ್ ಅಭಿವೃದ್ಧಿ ಗೂ ೫೦೦₹ ಕೋಟಿ ಮೀಸಲಿಡಿದ್ದೇವೆ.ಹಲಾಲ್ ಬಜೆಟ್ ಅಂತಿದ್ದಾರೆ.ಅವರ ಮನಸ್ಸಿನ ಕೊಳಕು ಭಾವನೆ ಹೊರಗೆ ಬರುತ್ತಿದೆ.ಎಸ್ಸಿಪಿ ಟಿಎಸ್ಪಿ 42 ಸಾವಿರ ಕೋಟಿ.ಅಲ್ಪಸಂಖ್ಯಾತ ತರಿಗೆ ೪೫೦೦₹, ಓಬಿಸಿ ೪೩೦೦ ಕೋಟಿ. ಬಹಳ ಮಾತಾಡ್ತಾರೆ ಅವರು ಬಿಜೆಪಿಯವರು.ಕೇಂದ್ರದ ಬಿಜೆಪಿ ಯವರು ಎಸ್.ಸಿಪಿ ಟಿಎಸ್ಪಿ ಎಲ್ಲಿ ಮಾಡಿದ್ದಾರೆ?.ಎಸ್.ಸಿ ಎಸ್.ಟಿಯವರಿಗೆ ಕೇಂದ್ರ ಎಲ್ಲಿ ಹಣ ಮೀಸಲಿಟ್ಟಿದೆ?.ಯಾವ ನೈತಿಕತೆ ಇದೆ ಬಿಜೆಪಿಯವರಿಗೆ?.ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಡೋದು ಬೇಡ್ವಾ?.ಅಲ್ಪಸಂಖ್ಯಾತರಿಗೆ ಶಿಕ್ಷಣ ಸರಿಯಾಗಿಲ್ಲ ಸವರ ಶೈಕ್ಷಣಿಕ ಪ್ರಮಾಣ ಕಡಿಮೆ.ನಾವು ಸಮಾನತೆಯಲ್ಲಿ ನಂಬಿಕೆ ಇಟ್ಟುಕೊಂಡವರು ಅದಕ್ಕೆ ಮಾಡಿದ್ದೇವೆ.ಹಲಾಲ್ ಬಜೆಟ್ ಪಾಕಿಸ್ತಾನ್ ಬಜೆಟ್ ಎನ್ನುವುದೆಲ್ಲ ಅವರು ಸೆಕ್ಯುಲರ್ ಅಲ್ಲ ಎಂಬುದನ್ನು ತೋರಿಸುತ್ತದೆ.ಜಾತ್ಯಾತೀತೆಯ ವಿರುದ್ದವೇ ಇದ್ದಾರೆ ಅವರು,ಸಂವಿಧಾನ ಹೇಳಿದಂತೆ ನಾವು ನಡೆದುಕೊಳ್ತಿದ್ದೇವೆ.ಬಿಜೆಪಿಯವರಿಗೆ ಅಸೆಂಬ್ಲಿಯಲ್ಲೇ ಉತ್ತರ ಹೇಳುತ್ತೇನೆ.ಬಹಿತ್ವಕ್ಕೆ ಸಂವುಧಾನಕ್ಕೆ ವಿರುದ್ದವಾಗಿದ್ದಾರೆ ಬಿಜೆಪಿಯವರು.ಬಜೆಟ್ ದೂರದೃಷ್ಟಿ ಬಜೆಟ್ ಸಮಾನತೆ ಆರ್ಥಿಕ ಸಾಮಾಜಿಕ ಬೆಳವಣಿಗೆ ಇರುವ ಬಜೆಟ್ ಇದು ಎಂದಿದ್ದಾರೆ.