ಮನೆ Latest News ಸಿದ್ದರಾಮಯ್ಯ ಅಧಿಕಾರ ಕೊಡಲ್ಲ, ಡಿ.ಕೆ. ಶಿವಕುಮಾರ್ ಟೆಂಪಲ್ ರನ್ ಬಿಡಲ್ಲ : ವಿಧಾನಸಭೆ...

ಸಿದ್ದರಾಮಯ್ಯ ಅಧಿಕಾರ ಕೊಡಲ್ಲ, ಡಿ.ಕೆ. ಶಿವಕುಮಾರ್ ಟೆಂಪಲ್ ರನ್ ಬಿಡಲ್ಲ : ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆ

0

ಬೆಂಗಳೂರು: ಸಿದ್ದರಾಮಯ್ಯ ಅಧಿಕಾರ ಕೊಡಲ್ಲ, ಡಿ.ಕೆ. ಶಿವಕುಮಾರ್ ಟೆಂಪಲ್ ರನ್  ಬಿಡಲ್ಲ  ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಆರ್. ಅಶೋಕ್ ಉತ್ತರ ಕರ್ನಾಟಕಕ್ಕೆ ಅಭಿವೃದ್ಧಿಯ ಮಹಾಪೂರ ಬರಬೇಕು ಅಂತಾ ಬೆಳಗಾವಿಯಲ್ಲಿ ಅಧಿವೇಶನ ಆರಂಭ ಆಯಿತು. ಎಲ್ಲದಕ್ಕೂ ಮುಕ್ತಿ ಸಿಗುತ್ತದೆ ಅಂತಾ ಜನ ಕಾಯುತ್ತಿದ್ದರು. ಸಿಎಂ ಉತ್ತರ ಕರ್ನಾಟಕಕ್ಕೆ ಏನಾದರೂ ಘೋಷಣೆ ಮಾಡುತ್ತಾರೆ ಅಂತಾ ಭರವಸೆ ಇಟ್ಟಿದ್ದರು. ಆದರೆ ಸಿಎಂ ಭಾಷಣದಲ್ಲಿ ಯಾವುದೇ ಘೋಷಣೆ ಮಾಡಲಿಲ್ಲ. ಕುರ್ಚಿ ಕಿತ್ತಾಟದಲ್ಲಿ ಸಿಎಂಗೆ ಸಮಯ ಸಿಕ್ಕಿಲ್ಲ ಅಂತಾ ಕಾಣುತ್ತದೆ. ಹಣ ಬಿಡುಗಡೆ ಬದಲಾಗಿ ಹಣ ಹೊಡೆಯುವ ಕೆಲಸ ಮಾಡಿದರು.ಗೃಹ ಲಕ್ಷ್ಮಿ ಹಣ 5000 ಕೋಟೊ ಕೋಟಿ ಯಾಮಾರಿಸಿದ್ದರು, ಆರ್ಥಿಕ ಇಲಾಖೆ ಮುಚ್ಚಿಟ್ಟಿತ್ತು ಎಂದಿದ್ದಾರೆ.

ಫೆಬ್ರವರಿ, ಮಾರ್ಚ್ ಹಣ ಏನಾಯಿತು ಅಂತಾ ಇದುವರೆಗೆ ಮಂತ್ರಿ ಬಾಯಿ ಬಿಟ್ಟಿಲ್ಲ. ಮಂತ್ರಿ ಬೆಂಗಳೂರಿಗೆ ಬರುವುದನ್ನೇ ಬಿಟ್ಟು ಬಿಟ್ಟಿದ್ದಾರೆ.ಗೃಹ ಲಕ್ಷ್ಮಿ ಹಣ ಫಲಾನುಭವಿಗಳ ಖಾತೆಗೆ ಬರುವವರೆಗೂ ಹೋರಾಟ ಮಾಡುತ್ತೇವೆ. ನಾವು ದಾಖಲೆಗಳನ್ನು ತೆಗೆದುಕೊಂಡಿದ್ದೆವು. ಇನ್ನು‌ ಕೆಲವು ಜಿಲ್ಲೆಗಳಲ್ಲಿ ಬಿಜೆಪಿಯವರಿಗೆ ದಾಖಲೆ ಕೊಡದಂತೆ ಮಂತ್ರಿಗಳ ಕಚೇರಿಯಿಂದ ಧಮಕಿ ಹಾಕಲಾಗಿದೆ. ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಚಾರವಾಗಿ ಡ್ರಗ್ಸ್ ಬಗ್ಗೆ ಮಾಹಿತಿ ಕೇಳಿದ್ದರೆ ಗೃಹ ಸಚಿವರು ರಾಷ್ಟ್ರದ ಬಗ್ಗೆ ಉತ್ತರ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ಏನೋ ಮುಚ್ಚಿಡುವ ಕೆಲಸ ಸರ್ಕಾರ ಮಾಡಿತು. ತರಾತುರಿಯಲ್ಲಿ ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕ ಅಂಗೀಕಾರ ಮಾಡಲಾಗಿದೆ. ವಿಪಕ್ಷ ನಾಯಕ ಮಾತನಾಡುತ್ತಿರುವಾಗಲೇ ಅಂಗೀಕಾರ ಮಾಡಲಾಗಿದೆ. ವಿಪಕ್ಷಗಳ‌ ನಾಯಕರನ್ನು ಜೈಲಿಗೆ ಕಳುಹಿಸುವ ಕಾಯಿದೆ ಇದು. ಕಾಂಗ್ರೆಸ್ ಮತ್ತೊಂದು ಬಾರಿ ವಾಕ್ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುತ್ತಿದೆ. ವಿಪಕ್ಷ ಮತ್ತು‌ ಮಾಧ್ಯಮದವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ರಾಜ್ಯಪಾಲರನ್ನು ಭೇಟಿ ಮಾಡಿ ವಿಧೇಯಕಕ್ಕೆ ಸಹಿ ಹಾಕದಂತೆ ಮನವಿ ಮಾಡುತ್ತೇವೆ. ರಾಜ್ಯದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಜನ ಎರಡೂವರೆ ವರ್ಷಗಳ ಆಡಳಿತಕ್ಕೆ ಬೇಸತ್ತು ಬಿಜೆಪಿಗೆ ಬೆಂಬಲ‌ ಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರ ತೊಲಗಲು ಇದು ಮುನ್ಸೂಚನೆ. ಹೀಗೆ ಕಿತ್ತಾಡುತ್ತಿದ್ದಾರೆ ಇವರು ಮನೆಗೆ ಹೋಗುವುದು ಗ್ಯಾರಂಟಿ. ನೀನು ಬೆಂಕಿಗೆ ತುಪ್ಪ ಸುರಿಯಬೇಡ ಎಂದು ಸಿದ್ದರಾಮಯ್ಯ ಅಧಿವೇಶನದಲ್ಲಿ ನನಗೆ ಹೇಳಿದರು. ಈಗ ಅವರ ಶಿಷ್ಯ ರಾಜಣ್ಣ ಕಾಂಗ್ರೆಸ್ ಪಕ್ಷಕ್ಕೆ ಕೊಳ್ಳಿ ಇಡಲು ಹೋಗುತ್ತಿದ್ದಾರೆ.ಕೇಂದ್ರದ ಕಾಂಗ್ರೆಸ್ ನಾಯಕತ್ವಕ್ಕೂ ರಾಜ್ಯದ ಸಮಸ್ಯೆ ಬಗೆ ಹರಿಸುವ ಆಸಕ್ತಿ‌ ಇಲ್ಲ ಎಂದು ತಿಳಿಸಿದ್ದಾರೆ.

ಅಧಿವೇಶನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಆಡಳಿತ ಪಕ್ಷವನ್ನು ಸಮರ್ಥವಾಗಿ ಎದುರಿಸಿದ್ದೇವೆ. ಸಮಯ ಕಡಿಮೆ ಇದ್ದ ಕಾರಣ ಹೆಚ್ಚು ವಿಚಾರ ಚರ್ಚೆ ಮಾಡಲು ಆಗಲಿಲ್ಲ. ಬೆಳಗಾವಿ ಅಧಿವೇಶನ ಕಾಂಗ್ರೆಸ್ ಕಿತ್ತಾಟದ ಅಧಿವೇಶನ ಆಗಿ ಹೋಯಿತು . ಪ್ರತಿ ದಿನ ಮಧ್ಯರಾತ್ರಿ 12-1 ಗಂಟೆಯವರೆಗೆ ಡಿನ್ನರ್ ಪಾರ್ಟಿ. ಮರುದಿನ ಅಧಿವೇಶನದಲ್ಲಿ ಖಾಲಿ ಖಾಲಿ ಇರುತ್ತಿತ್ತು. ಸ್ವತಃ ಸಿದ್ದರಾಮಯ್ಯ ಅಧಿವೇಶನಕ್ಕೇ ಬಂದಿದ್ದು ಕಡಿಮೆ. ಡಿ.ಕೆ. ಶಿವಕುಮಾರ್ ದೆಹಲಿ ಸುತ್ತುತ್ತಿದ್ದಾರೆ, ಬೆಂಗಳೂರಿಗೆ ಬರುತ್ತಿಲ್ಲ. ದೆಹಲಿಗೆ ಹೋದರೆ ಎಲ್ಲಿ ಬದಲಾವಣೆಗೆ ಹೇಳುತ್ತಾರೋ ಅಂತಾ ಸಿದ್ದರಾಮಯ್ಯ ದೆಹಲಿಗೇ ಹೋಗುತ್ತಿಲ್ಲ ಎಂದಿದ್ದಾರೆ.

ನಾನು ಕಾರ್ಯಕರ್ತನಾಗಿ ಇರಲು ಇಷ್ಟ ಪಡುತ್ತೇನೆ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಕಾರ್ಯಕರ್ತರಾಗಿ ಇರಬೇಕಾದರೆ ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಸಿದ್ದರಾಮಯ್ಯ ಅಧಿಕಾರ ಕೊಡಲ್ಲ, ಡಿ.ಕೆ. ಶಿವಕುಮಾರ್ ಟೆಂಪಲ್ ರನ್  ಬಿಡಲ್ಲ. ಕರ್ನಾಟಕದಲ್ಲಿ ಈಗ ಟೆಂಪಲ್ ರನ್, ಡಿನ್ನರ್ ಪಾರ್ಟಿ ಎರಡೇ ಪಿಕ್ಚರ್ ನಡೆಯುತ್ತದೆ. ಅಧಿವೇಶನದ ಸಮಯದಲ್ಲಿ ಟೆಂಪಲ್ ರನ್ ಮಾಡಿದ್ದು ಸರಿಯಲ್ಲ. ಅಧಿವೇಶನದಲ್ಲಿ ಉತ್ತರ ಕೊಡಬೇಕಾದ ಸಮಯದಲ್ಲಿ ಟೆಂಪಲ್ ರನ್ ಒಳ್ಳೆಯದಲ್ಲ ಎಂದು ಹೇಳಿದ್ದಾರೆ.

ರಾಜಸ್ತಾನ ಡ್ರಗ್ಸ್ ಪ್ರಕರಣದಲ್ಲಿ ದಾವಣಗೆರೆ ಮೂಲದವರ ಅರೆಸ್ಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಹೊಸ ವರ್ಷಕ್ಕೆ ಬೆಂಗಳೂರಿಗೆ ಡ್ರಗ್ಸ್ ಬರುತ್ತಿದೆ ಎಂಬ ಮಾಹಿತಿ ಇದೆ . ಸರ್ಕಾರ ಇದನ್ನು ತಡೆಯುವ ಕೆಲಸ ಮಾಡಲಿ. ಮೊದಲು ನಮ್ಮ ರಾಜ್ಯದ ಗಡಿಗಳನ್ನು ಭದ್ರ ಮಾಡಿಕೊಳ್ಳಬೇಕಿತ್ತು. ಗೃಹ ಲಕ್ಷ್ಮಿ ವಿಚಾರದಲ್ಲಿ ಪ್ರತಿ ಜಿಲ್ಲೆಯಲ್ಲಿ ಹೋರಾಟ ಮಾಡುತ್ತೇವೆ ಎಂದ ಅವರು  ಭದ್ರಾ ಮೇಲ್ದಂಡೆ ಯೋಜನೆ 5300 ಕೋಟಿ ಪ್ರಸ್ತಾವನೆ ಅಷ್ಟೇ .ಅದು ತಿರಸ್ಕಾರ ಆಗಿದೆ ಅಂತಾ ನಿರ್ಮಲಾ ಸೀತಾರಾಮನ್ ಹಿಂದೆಯೇ ಹೇಳಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಎಲ್ಲಾ ಪ್ರಸ್ತಾವನೆಗಳಿಗೂ ಒಪ್ಪಿಗೆ ಸಿಗಲ್ಲ. ಕಾಂಗ್ರೆಸ್ ಸಂಸದರು ಯಾಕೆ ಅದನ್ನು ಸಂಸತ್ತಿನಲ್ಲಿ ಮಾತಾಡಿಲ್ಲ. ಕಾಂಗ್ರೆಸ್ ಪಕ್ಷದ ನವಗ್ರಹಗಳು ಇದ್ದಾರಲ್ವಾ, ಸಂಸತ್ತಿನಲ್ಲಿ ಅದನ್ನು ಚರ್ಚೆ ಮಾಡಲಿ ಎಂದು ಹೇಳಿದ್ದಾರೆ.

ವೋಟ್ ಚೋರಿ ಬಗ್ಗೆ ಮಾತಾಡುವವರು ಗೃಹ ಲಕ್ಷ್ಮಿ ಚೋರಿ ಬಗ್ಗೆ ಯಾಕೆ ಮಾತಾಡಲ್ಲ. ಚೋರಿ ಮಾಡಲು ಬಜೆಟ್ ನಲ್ಲಿ ಗೃಹಲಕ್ಷ್ಕಿಗೆ ಹಣ ಇಟ್ಟಿಲ್ವಾ?. ವಾಲ್ಮೀಕಿ ನಿಗಮದ ಹಣದ ರೀತಿ ಇದು ಕೂಡಾ ಯಾವುದಾದರೊ ಬ್ಯಾಂಕ್ ಗೆ ಹೋಗಿಬಿಡಬಹುದು. ಈ ಹಣ ಎಲ್ಲಿ ಹೋಯಿತು ಅಂತಾ ಹಣಕಾಸು ಇಲಾಖೆಗೆ ಪತ್ರ ಬರೆಯುತ್ತೇನೆ. ನಮ್ಮ ಸರ್ಕಾರ ಬಂದ ಮೇಲೆ ಅಭಿವೃದ್ಧಿ ಕೆಲಸ ಮಾಡುತ್ತೇವೆ. ಉಚಿತ ಯೋಜನೆಗಳಲ್ಲಿ ಜನಪರ ಯೋಜನೆಗಳು ಯಾವ್ಯಾವುದು ಕೊಡಬಹುದು ಅಂತಾ ನೋಡುತ್ತೇವೆ ಎಂದು ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಎರಡು ವರ್ಷಗಳ ಹಿಂದೆಯೇ ನೇಮಕ ಆಗಿದೆ. ಎಷ್ಟು ದಿನಗಳ ಕಾಲ ಇರಬೇಕು ಅಂತಾ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಬದಲಾವಣೆ ಮಾಡಬೇಕು ಅಂತಾ ನಾವ್ಯಾರೂ ಕೇಳಿಲ್ಲ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ.ರಾಷ್ಟ್ರೀಯ ಕಾರ್ಯಾಧ್ಯಕ್ಷರಿಗೆ ಅಭಿನಂದಿಸಲು ಅವರು ದೆಹಲಿಗೆ ಹೋಗಿರುತ್ತಾರೆ. ನಾನು ಕೂಡಾ ಕಾರ್ಯಾಧ್ಯಕ್ಷರಿಗೆ ಅಭಿನಂದಿಸಲು ದೆಹಲಿಗೆ ಹೋಗುತ್ತೇನೆ ಎಂದು ಅವರು ತಿಳಿಸಿದ್ದಾರೆ