ಬೆಂಗಳೂರು; ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯುತ್ತಾರೆ ಅಂದರೆ ಅದರಲ್ಲಿ ತಪ್ಪೇನಿದೆ ಎಂದು ಬೆಂಗಳೂರಿನಲ್ಲಿ ಬಮೂಲ್ ಅಧ್ಯಕ್ಷ ಡಿ.ಕೆ ಸುರೇಶ್ ಹೇಳಿದ್ದಾರೆ.
ಐದು ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಸಿಎಂ ಹೇಳಿದ್ದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ. ಹೈಕಮಾಂಡ್ ತೀರ್ಮಾನ ಮಾಡಿ ಸಿಎಂ ಆಗಿದ್ದಾರೆ. ಸಿಎಂ ಹೇಳುವುದಲ್ಲಿ ತಪ್ಪೇನಿದೆ. ಮೊದಲಿನಿಂದಲೂ ಡಿಕೆಶಿ ಅದನ್ನೇ ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ನಿರ್ಧಾರಕ್ಕೆ ಬದ್ಧನಾಗಿರುತ್ತೀನಿ ಅಂತಾ ಹಿಂದೆನೂ ಹೇಳಿದ್ದಾರೆ. ಈಗಲೂ ಅದನ್ನೇ ಹೇಳಿದ್ದಾರೆ. ಪಕ್ಷದ ಆದೇಶವನ್ನು ಒಪ್ಪಲೇಬೇಕಾಗುತ್ತೆ.ಇವತ್ತು ಭರವಸೆ ಇದೆ, ನಾಳೆನೂ ಭರವಸೆ ಇದೆ. ನಂಬಿಕೆ ಇಲ್ಲ ಅಂದ್ರೆ ಜೀವನ ಮಾಡೊದೇ ಕಷ್ಟ. ಮುಂದೆ ಯಾವಾತ್ತಾದ್ರೂ ಪ್ರತಿಫಲ ಸಿಕ್ಕೆ ಸಿಗುತ್ತೆ. ಡಿಕೆಶಿ ಅಸಹಾಯಕತೆಯಿಂದ ಮಾತು ಹೇಳಿಲ್ಲ,ಪಕ್ಷದ ನಾಯಕತ್ವಕ್ಕೆ ಗೌರವಕೊಟ್ಟಿದ್ದಾರೆ ಎಂದಿದ್ದಾರೆ.
ಪಕ್ಷದ ಅಧ್ಯಕ್ಷರಾಗಿ ತಮ್ಮ ನಿಲುವನ್ನು ಸ್ಪಷ್ಟವಾಗಿದ್ದಾರೆ. ನನಗೆ ಮಾಹಿತಿ ಇಲ್ಲ, ಸಿಎಂ ಬದಲಾವಣೆ ಮಾತನಾಡುವಷ್ಟು ದೊಡ್ಡವನಲ್ಲ. ಪಕ್ಷದ ಒಳಗಡೆನೆ ಎಲ್ಲರೂ ಆಯ್ಕೆಯಾಗುವುದು. ಪಕ್ಷವನ್ನು ಬಲಪಡಿಸಬೇಕಾಗುತ್ತೆ. ಪಕ್ಷದ ಆಚಾರ ವಿಚಾರಕ್ಕೆ ಬದ್ಧರಾಗಿರಬೇಕು. ನಮ್ಮ ಅಣ್ಣ ಸಿಎಂ ಆಗಬೇಕು ಎನ್ನುವುದು ಆಸೆ ಇದೆ. ಇಂದು ಇದೆ ,ನಾಳೆನೂ ಇದೆ ಮುಂದೆಯೂ ಇರುತ್ತೆ. ಸೀಟ್ ಖಾಲಿ ಇಲ್ಲ ಏನ್ ಮಾಡಬೇಕು. ಈ ಅವಧಿಗೆ ಆಗ್ತಾರಾ ಅನ್ನೋದನ್ನು ನಾನ್ ಹೇಳೋಕೆ ಆಗಲ್ಲ. ಅದನ್ನು ಹೇಳೊಕೆ ನಾನು ಸಣ್ಣವನು. ಬಿಜೆಪಿಯವರಿಗೆ ನಮ್ಮನ್ನು ಟೀಕೆ ಮಾಡುವುದೆ ಗುರಿ.ಎಲ್ಲಿ ಹೋಯ್ತು ಅವರ 75 ವರ್ಷದ ಪಾಲಿಸಿ. ಯಡಿಯೂರಪ್ಪ ಇಳಿಸುವಾಗ ಚರ್ಚೆಯಾಯ್ತಲ್ಲ. ಈಗೇಕೆ ಚರ್ಚೆ ಮಾಡುತ್ತಿಲ್ಲ. ಜನರನ್ನು ಕೆರಳಿಸುವುದು ಬಿಜೆಪಿಯ ಕೆಲಸ ಎಂದು ಅವರು ಹೇಳಿದ್ದಾರೆ.
ನಮ್ಮ ಪಕ್ಷಕ್ಕೆ ಗುರಿ, ಉದ್ದೇಶ ಇದೆ. ಉತ್ತಮ ಆಡಳಿತ ಕೊಡಬೇಕು ಅನ್ನುವುದು ನಮ್ಮ ಗುರಿ ಎಂದಿದ್ದಾರೆ. ಜನ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದಾರೆ. ಮಂತ್ರಿಗಳು, ನಾಯಕರು ಜನರ ಹಿತ ಇಟ್ಟು ಕೆಲಸ ಮಾಡಬೇಕು. ಪಕ್ಷದ ಹಿತದೃಷ್ಟಿಯಿಂದ ಒಗ್ಗಟ್ಟಾಗಿ ಹೊಗಬೇಕಾಗುತ್ತೆ. ಶಿವಕುಮಾರ್, ಸಿದ್ದರಾಮಯ್ಯ ಹಿಂದೆಯೂ ಚೆನ್ನಾಗಿದ್ರು, ನಾಳೆಯೂ ಚೆನ್ನಾಗಿರ್ತಾರೆ. ಎಂಎಲ್ ಎ, ಸಿಎಂ ಆಗಬೇಕು ಅಂದ್ರೆ ಹಣೆಯಲ್ಲಿ ಬರೆದಿರಬೇಕು. ಭಗವಂತನ ಇಚ್ಚೆ ಏನ್ ಆಗಬೇಕು ಆಗುತ್ತೆ. ಸದಾನಂದ ಗೌಡರು ಕೆಎಂಎಫ್ ಅಧ್ಯಕ್ಷರಾಗಲು ಹೋರಾಡುತ್ತಿದ್ರು, ಸಿಎಂ ಆದರು ಎಂದು ಹೇಳಿದ್ದಾರೆ.
ಬಿಜೆಪಿ ನಾಯಕರ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ತತ್ವ ಸಿದ್ಧಾಂತಗಳನ್ನ ಗಾಳಿಗೆ ತೂರಿದ್ದಾರೆ. ಯಾಕೆ ಬಿಜೆಪಿಯವರು ಪಾಲಿಸಿ ಬಗ್ಗೆ ಮಾತನಾಡಲ್ಲ.ಯಡಿಯೂರಪ್ಪ ೭೫ ವರ್ಷದ ಬಗ್ಗೆ ಯಾಕೆ ಮಾತನಾಡ್ತಿಲ್ಲ. ಅವರವರ ಅನುಕೂಲಕ್ಕೆ ತಕ್ಕಂತೆ ರಾಜಕಾರಣ ಮಾಡ್ತಾರೆ. ಅವರ ಮಾತನಾಡೋದು ಬೇಡ . ಯಾವ ತತ್ವ ಸಿದ್ಧಾಂತಗಳನ್ನ ಇಟ್ಕೊಂಡಿದ್ದಾರೆ.ಅವರಿಗೆ ಯಾವ ಸಿದ್ಧಾಂತ ಇದೆ. ಅನುಕೂಲಕ್ಕೆ ತಕ್ಕಂತೆ ಬದಲಿಸಿಕೊಳ್ತಾರೆ ಎಂದಿದ್ದಾರೆ.
ಹಾಸನ ಹೃದಯಾಘಾತ ಪ್ರಕರಣದ ಬಗ್ಗೆ ಮಾತನಾಡಿದ ಅವರು ನೀವು ತೋರಿಸೋದು ಸ್ವಲ್ಪ ಕಡಿಮೆ ಮಾಡಿದರೆ ಒಳ್ಳೆಯದು. ಇಲ್ಲದೇ ಹೋದ್ರೆ ವೀಕ್ ಆದವರಿಗೆ ಸಮಸ್ಯೆ.ಬರಿ ಹಾಸನದಲ್ಲಿ ಹೆಚ್ಚು ಸಾವಾಗ್ತಿಲ್ಲ. ಇಡಿ ದೇಶದಲ್ಲಿ ಹೆಚ್ಚಿನ ಸಾವು ಆಗ್ತಿವೆ. ಕೋವಿಡ್ ವ್ಯಾಕ್ಸಿನ್ ಪರಿಣಾಮ ಎಂಬ ಸಿಎಂ ಹೇಳಿದ್ದಾರೆ. ಅವರ ಹೇಳಿಕೆ ಗಂಭೀರವಾಗಿ ಪರಿಗಣಿಸಬೇಕು. ವ್ಯಾಕ್ಸಿನೇಷನ್ ಭಾರತದಲ್ಲೂ ತಯಾರಾಗಿದೆ. ವಿಶ್ವಮಟ್ಟದಲ್ಲೂ ವ್ಯಾಕ್ಸಿನ್ ತಯಾರಾಗಿದೆ. ವೈಜ್ಙಾನಿಕವಾಗಿ ಅದನ್ನ ಪರಿಶೀಲಿಸಬೇಕು. ಸಾರ್ವಜನಿಕವಾಗಿ ಗೊಂದಲ ಇದೆ. ನೀವು ಜನರಿಗೆ ಹತ್ತಿರವಾದವರು. ಗೊಂದಲ ಇದ್ದರೆ ಜನರಿಗೆ ತಿಳಿಸಬೇಕು. ನನಗೆ ವಯಸ್ಸಾಯ್ತು,ಗೊಂದಲದ ಬಗ್ಗೆ ಹೇಗೆ ಹೇಳಲಿ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.