ಮನೆ Latest News ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ; ಸಚಿವ ಹೆಚ್ ಸಿ ಮಹದೇವಪ್ಪ ಹೇಳಿಕೆ

ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ; ಸಚಿವ ಹೆಚ್ ಸಿ ಮಹದೇವಪ್ಪ ಹೇಳಿಕೆ

0

ಬೆಂಗಳೂರು; ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಸಚಿವ ಹೆಚ್ ಸಿ ಮಹದೇವಪ್ಪ ಹೇಳಿದ್ದಾರೆ.

5 ವರ್ಷ ನಾನೇ ಸಿಎಂ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಶಾಸಕಾಂಗ ಪಕ್ಷದ ಸಭೆ ಕರೆದು ಅಭಿಪ್ರಾಯ ಪಡೆದು  ಹೈಕಮಾಂಡ್ ಸಿದ್ದರಾಮಯ್ಯರನ್ನ ಆಯ್ಕೆ ಮಾಡಿದ್ದು ಅದಕ್ಕೆ ಅಲ್ವಾ. ಹೈಕಮಾಂಡ್ ಏನ್ ತೀರ್ಮಾನ ಮಾಡಿದೆ ಅದನ್ನೇ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅವರ ಹೇಳಿಕೆಯನ್ನು ನಾನು ಸ್ವಾಗತ ಮಾಡ್ತೀನಿ ಎಂದರುಯ

ಸಿಎಂ ಹೇಳಿಕೆಗೆ ಕಾಂಗ್ರೆಸ್ ನಲ್ಲಿ ಸನ್ನಿವೇಶ ಸಂದರ್ಭ ಸೃಷ್ಟಿಯಾಗಿದೆಯಾ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಕಾಂಗ್ರೆಸ್ ನಲ್ಲಿ ಯಾವ ಸನ್ನಿವೇಶ ಗೊಂದಲ ಏನು ಇಲ್ಲವೇ ಇಲ್ಲ, ಎಲ್ಲಾ ಕರೆಕ್ಟಾಗಿ ಇದ್ಯಲ್ಲ. ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ ಸಿಎಂ ಬದ್ಲಾವಣೆ ಇಲ್ಲ ಅಂತ . ಇಂಚಾರ್ಜ್ ಸೆಕ್ರೆಟರಿನೂ ಹೇಳಿದ್ದಾರೆ. ಸಿಎಂ, ಡಿಸಿಎಂ ಎಲ್ರೂ ಹೇಳಿದ್ದಾರೆ. ಅವರುಗಳು ಹೇಳಿದ್ಮೇಲೆ ಇನ್ನೇನಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾರೆ. ಮುಂದುವರಿತಾರೆ ಬೇರೆ ಇನ್ನೇನಿದೆ ಎಂದರು.

ಈ ಎಲ್ಲಾ ಗೊಂದಲಗಳು ಮಾಧ್ಯಮಗಳಿಂದಲೂ ಸೃಷ್ಟಿಯಾಗುತ್ತೆ. ಕೆಲವು ಶಾಸಕರಿಂದಲೂ ಸೃಷ್ಟಿಯಾಗುತ್ತೆ. ಕಾಂಗ್ರೆಸ್ ಪಕ್ಷ ಐದು ವರ್ಷ ಆಡಳಿತ ಮಾಡಬೇಕು ಅಂತ ಜನ ಸ್ಪಷ್ಟ ಬಹುಮತ ಕೊಟ್ಟಿದ್ದಾರೆ. ಜನರ ಬಹುಮತವನ್ನ ಬದಲಾವಣೆ ಮಾಡ್ಬೇಕು ಅಂತ . ಈ ಆಪರೇಷನ್ ಕಮಲ ಮಾಡಿದ್ರಲ್ಲ ಇವ್ರು ಮೆಧ್ಯ ಮಧ್ಯ ಹೇಳುತ್ತಾರೆ. ಬಿಜೆಪಿಯವರೇ ಕಾಂಗ್ರೆಸ್ ಹೈಕಮಾಂಡ್ ತರ ಮಾತಾಡ್ತಾರೆ. ಹೀಗಾಯ್ತು ಹಾಗಾಯಿತು ಅಂತ. ಬಿಜೆಪಿಯವರು ಹಿಂದೆ ಎರಡು ಸಲಿ ರುಚಿ ನೋಡಿದರಲ್ಲ.  ಈ ಸಲ ಏನಾದ್ರೂ ಆಗುತ್ತೆ ಅನ್ನೋದು ಅವರ ಅನಿಸಿಕೆ ಇರಬಹುದು. ಬಿಜೆಪಿಯವರ ಯಾವುದೇ ಆಸೆ ಈಡೇರಲ್ಲ ಕಾಂಗ್ರೆಸ್ ಸರ್ಕಾರ ಐದು ವರ್ಷ ಇರುತ್ತೆ ಎಂದರು.

ಅಧಿಕಾರ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ಮಟ್ಟದಲ್ಲಿ ಒಳ ಒಪ್ಪಂದ ಆಗಿದ್ಯಾ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ನಿಮಗೆ ಗೊತ್ತಾ ಎಂದು ಮಾಧ್ಯಮದವರನ್ನೇ ಮಹಾದೇವಪ್ಪ ಪ್ರಶ್ನೆ ಮಾಡಿದ್ದಾರೆ. ಸುರ್ಜೇವಾಲ ಮುಂದೆ ಶಾಸಕರ ಶಾಸಕರು ಸಚಿವರ ಮೇಲೆ ಅಸಮಾಧಾನ ವಿಚಾರದ ಬಗ್ಗೆ ಮಾತನಾಡಿ  ಇರಬಹುದು ಶಾಸಕರಿಗೆ ಅವರ ಕ್ಷೇತ್ರದಲ್ಲಿ ಕೆಲಸ ಆಗಬೇಕು ಅವರು ದೂರದಿಂದ ಬಂದಿರುತ್ತಾರೆ. ಕೆಲವು ಸಚಿವರು ಸಿಗಲ್ಲ ಎಲ್ಲೋ ಟೂರ್ ಹೋಗಿರುತ್ತಾರೆ. ಅವರು ಬಂದಂತಹ ಸಂದರ್ಭದಲ್ಲಿ ಶಾಸಕರು ಬಂದು ವಾಪಸ್ ಹೋಗ್ತಾರೆ. ಸಹಜವಾಗಿ ಬೇಸರ ಆಗುತ್ತೆ ಅಸಮಾಧಾನ ಆಗುತ್ತೆ. ಸಚಿವರು ಆಗ ಶಾಸಕರಿಗೆ ಫೋನ್ ಸಂಪರ್ಕ ಮಾಡಿ ಏನ್ ಸಮಸ್ಯೆ ಅಂತ ಮಾತಾಡಬೇಕು ನನ್ನನ್ನು ಸೇರಿ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ದೆಹಲಿ ರಾಜಕಾರಣಕ್ಕೆ ಹೋಗ್ತಾರ ಎಂಬ ವಿಚಾರದ ಬಗ್ಗೆ ಮಾತನಾಡಿ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಬಲ ಆಗೋದಿಕ್ಕೆ ಸಿದ್ದರಾಮಯ್ಯನವರ ನಾಯಕತ್ವ ಅವರ ವರ್ಚಸ್ಸನ್ನ ಬಳಸಿಕೊಳ್ಳಬೇಕೊಳ್ಳಲು ಸಹಕಾರ ಕೊಡ್ತಾರೆ. ಆದರೆ ಸಿದ್ದರಾಮಯ್ಯನವರು ರಾಜ್ಯ ರಾಜಕಾರಣದಲ್ಲಿ ಉಳಿದುಕೊಳ್ಳುತ್ತಾರೆ ಎಂದು ಸಚಿವ ಹೆಚ್.ಸಿ ಮಹದೇವಪ್ಪ ಹೇಳಿದ್ದಾರೆ.