ಮನೆ Latest News ಸಿದ್ದರಾಮಯ್ಯ ಯಾವ ದೇವರನ್ನು ನಂಬುತ್ತಾರೋ,ಆ ದೇವರನ್ನು ಮುಟ್ಟಿ ಟ್ಯಾಪ್ ಮಾಡಿಲ್ಲ ಎಂದು ಪ್ರಮಾಣ ಮಾಡಲಿ: ವಿಧಾನ...

ಸಿದ್ದರಾಮಯ್ಯ ಯಾವ ದೇವರನ್ನು ನಂಬುತ್ತಾರೋ,ಆ ದೇವರನ್ನು ಮುಟ್ಟಿ ಟ್ಯಾಪ್ ಮಾಡಿಲ್ಲ ಎಂದು ಪ್ರಮಾಣ ಮಾಡಲಿ: ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆ

0

ಬೆಂಗಳೂರು: ಸಿದ್ದರಾಮಯ್ಯ ಯಾವ ದೇವರನ್ನು ನಂಬುತ್ತಾರೋ,ಆ ದೇವರನ್ನು ಮುಟ್ಟಿ ಟ್ಯಾಪ್ ಮಾಡಿಲ್ಲ ಎಂದು ಪ್ರಮಾಣ ಮಾಡಲಿ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ಪೋನ್ ಟ್ಯಾಪಿಂಗ್ ಆರೋಪದ ಬಗ್ಗೆ ಸಿಎಂ ಸ್ಪಷ್ಟೀಕರಣ ವಿಚಾರದ ಬಗ್ಗೆ ಮಾತನಾಡಿದ ಅವರು ಸಿದ್ದರಾಮಯ್ಯ ಯಾವ ದೇವರನ್ನು ನಂಬುತ್ತಾರೋ,ಆ ದೇವರನ್ನು ಮುಟ್ಟಿ ಟ್ಯಾಪ್ ಮಾಡಿಲ್ಲ ಎಂದು ಪ್ರಮಾಣ ಮಾಡಲಿ. ಇಲ್ಲವೇ ಸೆಂಟ್ರಲ್ ಏಜೆನ್ಸಿಗೆ ಕೊಟ್ಟು ತನಿಖೆ ಮಾಡಿಸಲಿ. ಎಲ್ಲೆಲ್ಲಿ ಫೋನ್ ಟ್ಯಾಪ್ ಆಗುತ್ತಿದೆ ಎನ್ನುವುದು ನಮಗೂ ಗೊತ್ತು.

ಕುಮಾರಸ್ವಾಮಿಯವರಿಗೆ ವ್ಯವಸ್ಥೆ ಏನೂ ಎನ್ನುವುದು ಗೊತ್ತು, ಅದಕ್ಕೆ ಹೇಳಿದ್ದಾರೆ. ಸಿದ್ದರಾಮಯ್ಯನವರು ದೇವೇಗೌಡರ ಬಗ್ಗೆ ಹಗುರ ಮಾತಾಡುವುದು ಸರಿಯಲ್ಲ. ಪದೇ ಪದೇ ದೇವೇಗೌಡರ ಹೆಸರು ಹೇಳುವುದು ಸರಿಯೇ? ಎಂದು ಪ್ರಶ್ನಿಸಿದ್ದಾರೆ.

ಶಾಸಕರ ಚಲನವಲನ ಅರಿಯಲು ಫೋನ್ ಟ್ಯಾಪ್ ಎಂದು ಎಲ್ಲರೂ ಹೇಳುತ್ತಿದ್ದಾರೆ. ಬಿಜೆಪಿ- ಜೆಡಿಎಸ್ ಕೆಲಸವಿಲ್ಲದೇ ಆರೋಪ ಮಾಡುತ್ತಿದ್ದಾರೆ ಎಂದು ಸಿಎಂ ಹೇಳಿದ್ದಾರೆ. ಸಿದ್ದರಾಮಯ್ಯನವರೇ ಅಧಿಕಾರ ಕಳೆದುಕೊಂಡಾಗ ನೀವು ನಿರುದ್ಯೋಗಿ ಆಗಿದ್ರಾ? ಡಿ.ಕೆ. ಶಿವಕುಮಾರ್, ಪರಮೇಶ್ವರ್ ಅಥವಾ ಸಿಎಂ ಆಗಬೇಕೆನ್ನುವವರ ಫೋನ್ ಟ್ಯಾಪ್.ಹಾಲು ಜೇನಿನಂತಹ ಸಂಬಂಧ ನಿಮ್ಮದು! ಕಾಂಗ್ರೆಸ್ ಗೆ ಬಂದವರು ನೀವು ನಿಷ್ಠಾವಂತರು ಅಂತಾ ಡಿ.ಕೆ. ಶಿವಕುಮಾರ್ ಗೆ ಸರ್ಟಿಫಿಕೇಟ್ ಕೊಡಬೇಕಾ? ಎಂದಿದ್ದಾರೆ.

ಮಾರ್ಚ್ 6 ರಂದು ಪ್ರತಿಭಟನೆ ವಿಚಾರದ ಬಗ್ಗೆ ಮಾತನಾಡಿದ ಅವರು ಈ ಸರ್ಕಾರ ಪಾಪರ್ ಚೀಟಿ ಸರ್ಕಾರ. ಸಾಲ ತೆಗೆದುಕೊಂಡ ಮೇಲೆ ಹಣ ಕಟ್ಟಲಾಗದೇ ಪಾಪರ್ ಚೀಟಿ ಕರೆಯುತ್ತಾರೆ.ಮಾನ್ಯ ಮುಖ್ಯಮಂತ್ರಿಗಳಿಗೆ ಇದೇ ಪರಿಸ್ಥಿತಿ ಬಂದಿದೆ. ಕಲ್ಬುರ್ಗಿ ಡಿಸಿ ಕಾರು ಹಣ ಕಟ್ಟಿರಲಿಲ್ಲ ಅಂತ ಜಪ್ತಿ ಮಾಡಿದ್ದರು. ಕಂಟ್ರಾಕ್ಟರ್ ಗಳು ಎಲ್ಲಿಂದ ಕಮಿಷನ್  ಕೊಡುತ್ತಾರೆ?. ಯಾರು ಹೆಚ್ಚು ಕಮಿಷನ್ ಕೊಡುತ್ತಾರೋ ಅವರಿಗೆ ಹಣ ಬಿಡುಗಡೆ ಮಾಡುತ್ತಾರೆ.60%-70% ಕಮಿಷನ್ ಕೊಟ್ಟರೆ ಎಲ್ಲಿ ಕಾಮಗಾರಿ ಮಾಡುತ್ತಾರೆ. ಅದಕ್ಕೆ ಕಲ್ಬುರ್ಗಿಯಲ್ಲಿ ಛಾವಣಿ ಕುಸಿದಿದೆ.ಜನವರಿ 11ರಂದು ಪ್ರಬುದ್ಧರು ಉದ್ಘಾಟನೆ ಮಾಡಿದ್ದರು!.ಉದ್ಘಾಟನೆ ಮಾಡಿ 50 ದಿನ ಕಳೆದಿದೆ ಅಷ್ಟೇ.ಈಗ ಮಂತ್ರಿಗೆ ಬಹುಮಾನ ಕೊಡಬೇಕಾ ಅಥವಾ ಕಂಟ್ರಾಕ್ಟರ್ ಗೆ ಬಹುಮಾನ ಕೊಡಬೇಕಾ?.ಪ್ರಬುದ್ಧರು ಇದಕ್ಕೆ ಉತ್ತರ ಕೊಡಲಿ ಎಂದಿದ್ದಾರೆ.

ಪ್ರಜ್ವಲ್ ರೇವಣ್ಣ ಜೈಲಿಗೆ ಕಳಿಸಿದ್ದು ಹೆಚ್.ಡಿ. ಕುಮಾರಸ್ವಾಮಿ ಎಂಬ ಮದ್ದೂರು ಶಾಸಕ ಕದಲೂರು ಉದಯ ಹೇಳಿಕೆ ವಿಚಾರದ ಬಗ್ಗೆ  ತಮ್ಮ ಕಣ್ಣನ್ನು ತಾವೇ ಯಾರೂ ಚುಚ್ಚಿಕೊಳ್ಳಲ್ಲ.  ಕ್ಯಾಸಿನೋದಲ್ಲಿ ಇಸ್ಪಿಟ್ ಆಡಿಸಿ ದುಡ್ದು ಮಾಡಿದವರನ್ನುಶಾಸಕರನ್ನಾಗಿ ಮಾಡಿದ್ರೆ ಹೇಗೆ?.ಕಾಂಗ್ರೆಸ್ ಅಧ್ಯಕ್ಷರು ಇದರ ಬಗ್ಗೆ ಹೇಳಬೇಕು. ಈ ರೀತಿ ದುಡ್ಡು ಮಾಡಿದವರು, ಒಂದೋ‌ ಜೈಲು ಇಲ್ಲವೇ ಬೇಲ್.ದೇವೇಗೌಡರ ಕುಟುಂಬ ಎಂದೂ ಒಡೆದಿಲ್ಲ. ಶಾಸಕ ಕದಲೂರು ಉದಯ ದೇವೇಗೌಡರ ಕುಟುಂಬದ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವರ ಕ್ಷೇತ್ರದ ಜನರು ಇವರನ್ನು ಕ್ಷಮಿಸಲ್ಲ ಎಂದಿದ್ದಾರೆ.

ಎಸ್‌ಸಿಎಸ್‌ಪಿ-ಟಿಎಸ್‌ಪಿ ವಿಚಾರದಲ್ಲಿ ಸಭೆ ನಡೆಸಿದ್ದೇವೆ. ಸರ್ಕಾರ 35 ಸಾವಿರ ಕೋಟಿ ರೂ. ಬೇರೆ ಉದ್ದೇಶಕ್ಕೆ ಬಳಸಿದೆ. 60 ಕ್ಕೂ ಹೆಚ್ಚು ಸಂಘಟನೆಗಳು ಇವತ್ತು ಸಭೆ ಮಾಡಿದ್ದೇವೆ. ಈ ಬಜೆಟ್ ನಲ್ಲೂ ದಲಿತರ ಹಣ ದುರ್ಬಳಕೆ ಮಾಡಿದರೆ ದೊಡ್ಡ ಹೋರಾಟ.ಗ್ಯಾರಂಟಿಗಳಿಗೆ 52 ಸಾವಿರ  ಕೋಟಿ ರೂ. ಬೇಕು. ಇಷ್ಟು ಹಣ ಗ್ಯಾರಂಟಿಗಳಿಗೆ ಇಟ್ಟು ದಲಿತರ ಹಣ ಬೇರೆ ಬೇಕಾ?. ಒಕ್ಕಲಿಗರಿಗೆ, ಲಿಂಗಾಯತರಿಗೆ ಅವರ ಅಭಿವೃದ್ಧಿ ಮಂಡಳಿಯಿಂದ ತೆಗೆದು ಕೊಡುತ್ತೀರಾ? ದಲಿತರಿಗೆ ಮಾತ್ರ ಏಕೆ ಈ ವಂಚನೆ, ಈ ಮೋಸ? ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣ 42 ಸಾವಿರ ಕೋಟಿ ರೂ.ಇಟ್ಟಿದೀವಿ ಅಂತ ಜನರಿಗೆ ತೋರಿಸುತ್ತೀರಿ. ಅದರಲ್ಲಿ 14 ಸಾವಿರ ಕೋಟಿ ರೂ. ಗ್ಯಾರಂಟಿಗಳಿಗೆ ಕೊಟ್ಟಿದ್ದೀರಿ.ಈ ಬಜೆಟ್ ನಲ್ಲಿ ದಲಿತರ ಹಣ ದಲಿತರ ಶೇಯೋಭಿವೃದ್ಧಿಗೆ ಮಾತ್ರವೇ ಬಳಸಬೇಕು.ಈ ಹಣ ಬೇರೆ ಉದ್ದೇಶಕ್ಕೆ ಬಳಸಿದರೆ ದಲಿತರ ವಿರೋಧ ಎದುರಿಸಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ.