ಮನೆ Latest News ಸಿದ್ದರಾಮಯ್ಯ ಅವರೇ ರಾಜಕೀಯ ಹಿತಾಸಕ್ತಿ ಯಿಂದ,ಯಾರಿಗೂ ಜಗ್ಗದೇ ಬಗ್ಗದೇ ವರದಿ ಬಹಿರಂಗ ಪಡಿಸಿ: ಮಾಜಿ ಸಚಿವ...

ಸಿದ್ದರಾಮಯ್ಯ ಅವರೇ ರಾಜಕೀಯ ಹಿತಾಸಕ್ತಿ ಯಿಂದ,ಯಾರಿಗೂ ಜಗ್ಗದೇ ಬಗ್ಗದೇ ವರದಿ ಬಹಿರಂಗ ಪಡಿಸಿ: ಮಾಜಿ ಸಚಿವ ಹೆಚ್ ಆಂಜನೇಯ ಹೇಳಿಕೆ

0

ಬೆಂಗಳೂರು;  ಸಿದ್ದರಾಮಯ್ಯ ಅವರೇ ರಾಜಕೀಯ ಹಿತಾಸಕ್ತಿ ಯಿಂದ,ಯಾರಿಗೂ ಜಗ್ಗದೇ ಬಗ್ಗದೇ ವರದಿ ಬಹಿರಂಗ ಪಡಿಸಿ ಎಂದು ಮಾಜಿ ಸಚಿವ ಹೆಚ್ ಆಂಜನೇಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಜಾತಿಗಣತಿಗೆ ಸಮುದಾಯ ಗಳ ವಿರೋಧ ವಿಚಾರದ ಬಗ್ಗೆ ಮಾತನಾಡಿದ ಅವರು ನಿಮ್ಮಗೆಲ್ಲರಿಗೂ ಗೊತ್ತಿದೆ. ಮಂಡಲ ಆಯೋಗದ ವರದಿ, ಚಿನ್ನಪ್ಪ ವರದಿ ಸ್ವಾಗತ ಮಾಡಿದ್ರಾ?.ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಾಮಾಜಿಕ ಶೈಕ್ಷಣಿಕ ವರದಿ ಮಾಡಲಾಗಿದೆ. ವಿಧಾನಸಭೆ ವಿಶೇಷ ಅಧಿವೇಶನ ನಡೆಸಬೇಕು.ಕುಣಿಗಲ್ ರಂಗನಾಥ್ ವಿರೋಧ ವಿಚಾರದ ಬಗ್ಗೆ ಇದೇ ವೇಳೆ ಮಾತನಾಡಿ ಪಾಪ ಅವರು ನೋಡಿಲ್ಲ . ಅದರಲ್ಲಿ ನ್ಯೂನತೆ ಇದ್ರೆ ಸರ್ಕಾರ ಸರಿ ಪಡಿಸೋ ಅವಕಾಶ ಇದೆ.ಅನಾವಶ್ಯಕ ವಾಗಿ ವಿರೋಧ ಮಾಡೋದು ಸರಿ ಇಲ್ಲ ಎಂದಿದ್ದಾರೆ.

ಎಲ್ಲರು ಒಪ್ಪಬೇಕು, ನೀವು ನೋಡಿದ್ದೀರಾ? ಸಮೀಕ್ಷೆ ಪ್ರಕಾರ ಆಗಿದೆ.ಯಾವ್ಯಾವ ಹಳ್ಳಿಯಲ್ಲಿ, ಎಲ್ಲಿಲ್ಲಿ ಏನಿದೆ ಎಲ್ಲವೂ ಸಮೀಕ್ಷೆ ನಡೆಸಲಾಗಿದೆ.ಹಿರಿಯ ಅಧಿಕಾರಿ ಗಳ ಉಸ್ತುವಾರಿ ಯಲ್ಲಿ ವರದಿ, ಸಮೀಕ್ಷೆ ನಡೆಸಲಾಗಿದೆ.ಇದರಲ್ಲಿ ಯಾರೂ ಕೂಡ ತಕರಾರು ಮಾಡುವ ಹಾಗಿಲ್ಲ.ಸಿದ್ದರಾಮಯ್ಯ ಅವರೇ ರಾಜಕೀಯ ಹಿತಾಸಕ್ತಿ ಯಿಂದ,ಯಾರಿಗೂ ಜಗ್ಗದೇ ಬಗ್ಗದೇ ವರದಿ ಬಹಿರಂಗ ಪಡಿಸಿ ಎಂದರು. ಇನ್ನು ಹಾವನೂರು, ಮಂಡಲ್  ವರದಿ ಜಾರಿಗೆ ಬಂದಾಗ ಸ್ವಾಗತ ಮಾಡಿದ್ರಾ? ಕೋಟ್ಯಾಂತರ ವೆಚ್ಚಮಾಡಿ ಸಿದ್ದರಾಮಯ್ಯ ಇಡೀ ರಾಜ್ಯದ ಜಾತಿಗಳ ಸ್ಥಿತಿಗತಿಗಳ ಸಾಮಾಜಿಕ ಶೈಕ್ಷಣಿಕ ವರದಿ ನಡೆದಿದೆ.ವರದಿ ಎಲ್ಲರಿಗೂ ಸಿಗಲಿ ಸಾರ್ವಜನಿಕರಿಗೂ ಇದರ ವರದಿ ಕೊಡಲಿ.ಏನು ತಪ್ಪಾಗಿದೆ ಅಂದ್ರೆ ಅದನ್ನ ಸರಿಪಡಿಸಬಹುದು. ಅವೈಜ್ಞಾನಿಕವಾಗಿದೆ ಅನ್ನೋದು ತಪ್ಪಲ್ಲ ಎಂದ್ರು.

ವರದಿಯಲ್ಲಿ ಮುಸ್ಲಿಂಮರೆ  ನಂಬರ್ ಒನ್ ಇದ್ದಾರೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಎಲ್ಲರು ಒಪ್ಪಬೇಕು ಯಾರು ಜಾಸ್ತಿ ಇದ್ದಾರೆ ಅದು ಸರ್ವೆ ಪ್ರಕಾರ ಅಗಿದೆ.ಎಲ್ಲವನ್ನ ವೆಬ್ ಸೈಟ್ ಗೆ ಹಾಕಿ ಪ್ರಿಂಟ್ ತಗೊಳಿ.ನಿಖರವಾಗಿ ವೈಜ್ಞಾನಿಕವಾಗಿ ನಾನೆ ಮಂತ್ರಿಯಾಗಿ ಮಾಡಿಸಿದ್ದೇನೆ. ಜಿಲ್ಲಾಧಿಕಾರಿಗಳು ಸೇರಿದಂತೆ ಅಧಿಕಾರಿಗಳಿ ಮಾಡಿರೋದು ಸರ್ವೆ.ಹೊರಬರೋದಕ್ಕು ಮೊದಲೆ ತಕರಾರು ಮಾಡೋದು ಸರಿಯಲ್ಲ.ಸಿದ್ದರಾಮಯ್ಯ ಅವರೇ ಯಾವುದಕ್ಕೂ ಜಗ್ಗದೆ ಬಗ್ಗದೆ ನ್ಯಾಯ ಕೊಡಿ ಎಂದಿದ್ದಾರೆ.

೧೦ ವರ್ಷಗಳ ಹಿಂದಿನದ್ದು ಕಾಂತರಾಜ್ ವರದಿ. ರಾಹುಲ್ ಗಾಂಧಿ ಅವರನ್ನ ತೃಪ್ತಿ ಪಡಿಸಲು ಜಾತಿ ಜನಗಣತಿ ವರದಿ ಜಾರಿಗೆ ಮಾಡ್ತಿದ್ದಾರೆ.ನಿಮ್ಮ ಮೇಲೆ ಯಾರು ಜಗಳ ಮಾಡಲ್ಲ. ರೈಟ್ ನವರು ಲೆಫ್ಟ್ ನವರಲ್ಲಿ ಜಗಳ ಹೆಚ್ಚುತ್ತೆ. ಬಿಜೆಪಿ ನಿಲುವು ಏನಂತಾ ತಿಳಿಸಲಿ ಎಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಅವರದ್ದೆ ಕ್ಲಿಯರ್ ಸ್ಟಾಂಡ್ ಇಲ್ಲ.ಸರ್ಕಾರದ ಸ್ಟಾಂಡೇ ಬಸ್ ಸ್ಟಾಂಡ್ ಎಂದಿದ್ದಾರೆ.