ಮನೆ Latest News ಧರ್ಮ, ಜಾತಿ-ಜಾತಿಗಳ‌ ಮಧ್ಯೆ ಸಿದ್ದರಾಮಯ್ಯ ವಿಷ ಬೀಜ‌ ಬಿತ್ತಿದ್ದಾರೆ: ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್‌....

ಧರ್ಮ, ಜಾತಿ-ಜಾತಿಗಳ‌ ಮಧ್ಯೆ ಸಿದ್ದರಾಮಯ್ಯ ವಿಷ ಬೀಜ‌ ಬಿತ್ತಿದ್ದಾರೆ: ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್‌. ಅಶೋಕ್ ಹೇಳಿಕೆ

0

ಬೆಂಗಳೂರು: ಧರ್ಮ, ಜಾತಿ-ಜಾತಿಗಳ‌ ಮಧ್ಯೆ ಸಿದ್ದರಾಮಯ್ಯ ವಿಷ ಬೀಜ‌ ಬಿತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್‌. ಅಶೋಕ್ ಹೇಳಿದ್ದಾರೆ.

ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ವಿಚಾರದ ಬಗ್ಗೆ ಮಾತನಾಡಿದ ಅವರು ವರದಿ ಮಂಡನೆ ದುರದೃಷ್ಟಕರ.ಇದು ಅವೈಜ್ಞಾನಿಕವಾಗಿ ಅಗಿಲ್ಲ. ಸಿದ್ದರಾಮಯ್ಯ ಹೇಳಿ ಮಾಡಿಸಿರುವ ಸಮೀಕ್ಷೆ. ಇದರಲ್ಲಿ ರಾಜಕೀಯದ ಗಂಧ ಇರುವುದರಿಂದ ಒಪ್ಪಲು ಸಾಧ್ಯವಿಲ್ಲ. ನಾವ್ಯಾರೂ ಜಾತಿಗಣತಿಯ ವಿರೋಧಿಗಳಲ್ಲ.ಇದು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಿದ್ದರಾಮಯ್ಯ ಹುನ್ನಾರ. ಈಗಾಗಲೇ ಹಿಂದೂ- ಮುಸ್ಲಿಮರು ಸೇರಿದಂತೆ ಜಾತಿ ಜಾತಿಗಳ‌ ಮಧ್ಯೆ ಸಿದ್ದರಾಮಯ್ಯ ವಿಷ ಬೀಜ‌ ಬಿತ್ತಿದ್ದಾರೆ.ವರದಿ‌ ಬಗ್ಗೆ ಈಗಾಗಲೇ ರಾಜ್ಯವ್ಯಾಪಿ ಹೋರಾಟ ನಡೆದಿದೆ. ದುರುಳ‌ ಕಾಂಗ್ರೆಸ್ ನವರಿಗೆ ಇದೇ ಬೇಕಾಗಿರೋದು. ಏನಾಗುತ್ತದೆ ನೋಡೋಣ ಎಂದಿದ್ದಾರೆ.

ಬಿಜೆಪಿ ವಿರುದ್ಧ ಕಾಂಗ್ರೆಸ್ ಏ. 17 ರಂದು ಪ್ರತಿಭಟನೆ ವಿಚಾರದ ಬಗ್ಗೆ ಮಾತನಾಡಿದ ಅವರು ಜನಾಕ್ರೋಶ ಅವರು ಯಾಕೆ ಮಾಡಬೇಕು ಅಂದರೆ ಕಂಟ್ರಾಕ್ಟರ್ ಗಳು ಆರೋಪ ಮಾಡಿರುವುದಕ್ಕೆ ಮಾಡಬೇಕಿತ್ತು.17 ರಂದು ಕಂಟ್ರಾಕ್ಟರ್ ಅಸೋಸಿಯೇಷನ್ ಜೊತೆ ಸಭೆ ಮಾಡಬೇಕಿತ್ತು.ಯಾವ್ಯಾವ ಖಾತೆಗಳಲ್ಲಿ ಲೂಟಿ ನಡೆಯುತ್ತಿದೆ ಅಂತಾ ಇಲಾಖೆ ಸಮೇತ ಹೇಳಿದ್ದಾರೆ. ಸ್ಪಾಟ್ ನಲ್ಲಿ ಟಕಾಟಕ್ ಅಂತಾ 10% ಕೊಟ್ಟರೆ ಬಿಲ್ ಪಾಸ್ ಆಗುತ್ತದೆ. ಸಿಎಂ ಚಕಾರವನ್ನೇ ಎತ್ತುತ್ತಿಲ್ಲ.ಕಾಂಗ್ರೆಸ್ ನವರು ಭ್ರಷ್ಟಾಚಾರವೇ ನಮ್ಮ ದೇವರು, ಭ್ರಷ್ಟಾಚಾರವೇ ನಮ್ಮ ಬಂದು ಬಳಗ ಅಂತಾ ಪುಣ್ಯಕೋಟಿ ಸ್ಲೋಗನ್ ಅನ್ನೇ ಬದಲಾಯಿಸಿದ್ದಾರೆ.ಕರ್ನಾಟಕದ ಇತಿಹಾಸದಲ್ಲಿ 60% ಕಮಿಷನ್ ಪಡೆದಿದ ಏಕೈಕ ಸರ್ಕಾರ ಸಿದ್ದರಾಮಯ್ಯ ಸರ್ಕಾರ. ನವೆಂಬರ್ ನಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೊಡಬಾರದು ಅಂತಾ ಈ ದುಡ್ಡು ಸಂಗ್ರಹ ಮಾಡುತ್ತಿದ್ದಾರೆ. ಕುರ್ಚಿ ಕಿತ್ತುಕೊಳ್ಳಲು ಡಿ.ಕೆ. ಶಿವಕುಮಾರ್ ದುಡ್ಡು ಸಂಗ್ರಹ ಮಾಡಿ ಕೊಡುತ್ತಿದ್ದಾರೆ.ಎಲ್ಲಾದರೂ ನವೆಂಬರ್ ನಲ್ಲಿ ಸಿಎಂ ಬದಲಾವಣೆ ಆದರೆ ಕರಿಮಣಿ ಮಾಲೀಕ ಯಾರು ಅಂತಾ ತೀರ್ಮಾನ ಆಗುತ್ತದೆ.ಆ ಕರಿಮಣಿ ಮಾಲೀಕ ಯಾರಾಗುತ್ತಾರೋ ಆಗ ಮಂತ್ರಿಯಾಗಲು ಸಿಎಂಗೆ ದುಡ್ಡು ಕೊಡಬೇಕಲ್ವಾ ಅದಕ್ಕೆ ಮಂತ್ರಿಗಳು ಎದ್ದು ಬಿದ್ದು ದುಡ್ಡು ಸಂಗ್ರಹ ಮಾಡುತ್ತಿದ್ದಾರೆ ಎಂದರು.

ವಿಧಾನಸೌಧದ ಯಾವದೇ ಮಂತ್ರಿ ಆಫೀಸ್ ಕಲೆಕ್ಷನ್ ಸೆಂಟರ್ ಆಗಿದೆ. ಅವರು ಬಂಧುಗಳಲ್ಲ, ಕಲೆಕ್ಷನ್ ಏಜೆಂಟ್ ಗಳು.ಗ್ಯಾರಂಟಿಗೆ 55 ಸಾವಿರ ಕೋಟಿ ಬೇಕಿದ್ದರೂ 80 ಸಾವಿರ ಟ್ಯಾಕ್ಸ್ ಹಾಕಿದ್ದಾರೆ. ಕಸವನ್ನೂ ಬಿಡುತ್ತಿಲ್ಲ, ಕಸದಿಂದ ರಸ ತೆಗೆಯುವ ಕಳ್ಳರು ದೇಶದಲ್ಲಿ ಯಾರಾದರೂ ಇದ್ದರೆ ಅದು ಕಾಂಗ್ರೆಸ್ ನವರು.ಕರ್ನಾಟಕದಲ್ಲಿ ಕಾಂಗ್ರೆಸ್ ಕಾಲದಲ್ಲಿ ಅಲಿಬಾಬಾ ಮತ್ತು 40 ಕಳ್ಳರು ತಪ್ಪಿಸಿಕೊಂಡು ಇಲ್ಲಿಗೆ ಬಂದಿದ್ದಾರೆ ಎಂದ್ರು. ನಾಳೆ ಸರ್ಕಾರದ ವಿರುದ್ಧ ಜೆಡಿಎಸ್ ಪ್ರತಿಭಟನೆ ವಿಚಾರದ ಬಗ್ಗೆ ಮಾತನಾಡಿದ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ.ಜೆಡಿಎಸ್ ಗೆ ನಮ್ಮ ಬೆಂಬಲ ಇದೆ.ನಮ್ಮ ಅವರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ.ಈಗಾಗಲೇ ಕುಮಾರಸ್ವಾಮಿ ಜೊತೆ ನಾನೂ ಮಾತಾಡಿದ್ದೇವೆ.ಮುಂದೆ ಚುನಾವಣೆ ಬಂದಾಗ ನಾವು ಒಟ್ಟಿಗೆ ಹೋಗುತ್ತೇವೆ.ಸಮಯ ಬಂದಾಗ ಸಮನ್ವಯ ಸಮಿತಿ ಬಗ್ಗೆ ಕುಮಾರಸ್ವಾಮಿ ‌ಜೊತೆ ಮಾತಾಡುತ್ತೇನೆ.ಯಾವ್ಯಾವ ಹೋರಾಟ ಒಟ್ಟಿಗೆ ಹೋಗಬೇಕು, ಯಾವ್ಯಾವ ಹೋರಾಟ ಪ್ರತ್ಯೇಕ ಮಾಡಬೇಕು ಅಂತಾ ತೀರ್ಮಾನ ಮಾಡುತ್ತೇವೆ.ಕುಮಾರಸ್ವಾಮಿ ಮತ್ತು ನಮ್ಮ ಬಾಂಧವ್ಯಕ್ಕೆ ಯಾರೂ ಹುಳಿ ಹಿಂಡಲು ಸಾಧ್ಯವಿಲ್ಲ. ಜೆಡಿಎಸ್ ಮತ್ತು ಬಿಜೆಪಿ ಬಾಂಧವ್ಯಕ್ಕೆ ಯಾರೂ ಹುಳಿ ಹಿಂಡಲು ಸಾಧ್ಯವಿಲ್ಲ ಎಂದರು.