ಮನೆ Latest News ಭಯ, ಆತಂಕದ ಬಜೆಟ್ ಮಂಡನೆ ಮಾಡಿದ್ದಾರೆ: ನಿಖಿಲ್ ಕುಮಾರಸ್ವಾಮಿ ಹೇಳಿಕೆ

ಭಯ, ಆತಂಕದ ಬಜೆಟ್ ಮಂಡನೆ ಮಾಡಿದ್ದಾರೆ: ನಿಖಿಲ್ ಕುಮಾರಸ್ವಾಮಿ ಹೇಳಿಕೆ

0

ಬೆಂಗಳೂರು; ಭಯ, ಆತಂಕದ ಬಜೆಟ್ ಮಂಡನೆ ಮಾಡಿದ್ದಾರೆ ಎಂದು  ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ ರಾಜ್ಯ ಬಜೆಟ್ ಸಿಎಂ ಸಿದ್ದರಾಮಣ್ಣ ಮೂರು ಗಂಟೆ ನಿಂತು ಮಂಡಿಸಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಸಿಎಂ ಅವರ ಬಜೆಟ್ ನ ಆತ್ಮವಿಶ್ವಾಸ ಇರಲಿಲ್ಲ.ಭಯ, ಆತಂಕದ ಬಜೆಟ್ ಮಂಡನೆ ಮಾಡಿದ್ದಾರೆ. ಈ ಬಜೆಟ್ ರಾಜಕೀಯವಾಗಿ ಕೊನೆಯ ಬಜೆಟ್ ನಂತೆ ಕಾಣ್ತಿದೆ. ಅವರ ಪಕ್ಷದ ಶಾಸಕರು ಸಿಎಂ ಕುರ್ಚಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡುತ್ತಿದ್ದಾರೆ. ಇದನ್ನು ನೋಡಿದ್ರೆ ಇದು ಸಿಎಂ ಅವರ ಕೊನೆಯ ಬಜೆಟ್ ಎನಿಸುತ್ತದೆ.17 ನೇ ಬಜೆಟ್ ನೋಡೋದಾದ್ರೆ ರಾಜ್ಯವನ್ನು ಸಾಲದ ಸುಳಿಗೆ ದೂಡಿದ್ದಾರೆ. ಪ್ರತಿವರ್ಷ ಸಾಲದ ಹೊರೆ ನಾಗರಿಕರ ಮೇಲೆ‌ ಹೇರುತ್ತಿದ್ದಾರೆ. ಮೊದಲ, ಎರಡನೇ ಬಜೆಟ್ ನಲ್ಲಿ ಒಂದೊಂದು ಲಕ್ಷ ಕೋಟಿ ಸಾಲ ಹೇರಿದ್ರ.ಈಗ ಮೂರನೇ ಬಜೆಟ್ ‌ನಲ್ಲಿ ಒಂದೂವರೆ ಲಕ್ಷ ಕೋಟಿ ಹೇರಿದ್ದಾರೆ. ಮೂರು ವರ್ಷದಲ್ಲಿ 8.24 ಲಕ್ಷ ಕೋಟಿ ಸಾಲ ಹೇರುತ್ತಿದ್ದಾರೆ.ನಾವು ಯಾಕೆ ಕಪ್ಪು ಪತ್ರ ಬಿಡುಗಡೆ ಮಾಡಿದ್ದೇವೆ ಎಂದ್ರೆ, ಜನರ ಮುಂದೆ ಮೂರು ವರ್ಷದ ಆರ್ಥಿಕ ದಿವಾಳಿತನ ಆಗಿರೋದನ್ನ ಇಟ್ಟಿದ್ದೇವೆ.ಎಕಾನಮಿಕ ಚಾರ್ಜ್ ಶೀಟ್ ನಿಮ್ಮ ಮುಂದೆ ಬಿಡುಗಡೆ ಮಾಡಿದ್ದೇವೆ. ಜನರ ಮುಂದೆ ಶ್ವೇತ ಪತ್ರ ಹೊರಡಿಸಬೇಕು. ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಜನರ ಮುಂದೆ ಇಡೋದ್ರಲ್ಲಿ ತಪ್ಪಿಲ್ಲ ಎಂದಿದ್ದಾರೆ.

ಈ‌ ಹಿಂದೆ ಸಿಎಂ ಆಗಿದ್ದ ಎಸ್.ಎಂ ಕೃಷ್ಣ ಕರ್ನಾಟಕ ಫಿಸಿಕಲ್‌ ಆಕ್ಟ್ ಜಾರಿಗೆ ತಂದರು. ಅಲ್ಲದೇ ಅವರು ಶ್ವೇತ ಪತ್ರ ಹೊರಡಿಸಿದ್ರು. ಕೃಷ್ಣ ಬಳಿಕ ಹಿಂದಿನ ಸರ್ಕಾರ ಶ್ವೇತ ಪತ್ರ‌ ಹೊರಡಿಸುತ್ತಲೇ‌ ಬಂದಿದೆ. ಆದ್ರೆ ಇದನ್ನು ಸಿದ್ದರಾಮಯ್ಯ ಸಿಎಂ ಆದ್ಮೇಲೆ ನಿಲ್ಲಿಸಿದ್ರು. ಹೀಗಾಗಿ ನಾವೆಲ್ಲರೂ ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ. ಸರ್ಕಾರ ಶ್ವೇತ ಪತ್ರ ಹೊರಡಿಸಬೇಕು. 2006/ 08 ರಲ್ಲಿ ‌ಕುಮಾರಣ್ಣ ಸಿಎಂ‌ ಆಗಿದ್ರು. ಆಗ ರಾಜ್ಯದ ಜಿಡಿಪಿ 12.30 ಇತ್ತು. ಅವರ ಬಳಿಕ ಬಿಜೆಪಿ ಮತ್ತು ಸಿದ್ದರಾಮಯ್ಯ ಸರ್ಕಾರ ಇದ್ದಾಗ 08.00 ಜಿಡಿಪಿ ಇಳಿಕೆ ಆಯ್ತು. ಸದ್ಯ 6.30 ಜಿಡಿಪಿ ಬೆಳವಣಿಗೆ ಇದೆ. ರಾಜ್ಯದ ಜಿಡಿಪಿ ಎಷ್ಟು ಕುಸಿತ ಆಗಿದೆ ಅನ್ನೋದು ಇದರಿಂದ ಗೊತ್ತಾಗುತ್ತದೆ. 45.6 ಸಾವಿರ ಕೋಟಿ‌ ಸಾಲದ ಬಡ್ಡಿ ಕಟ್ಟುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಆಲ್ಕೋಹಾಲ್ ಪರ್ಸೇಂಟೇಜ್ ಮೇಲೆ‌ ದರ ನಿಗದಿ ಮಾಡ್ತಾರಂತೆ. ಬಡವರು ಮದ್ಯಪಾನ ಮಾಡೋ ಆಲ್ಕೋಹಾಲ್ ನಲ್ಲಿ ಪರ್ಸಂಟೇಜ್ ಜಾಸ್ತಿ ಇರುತ್ತದೆ. ಶ್ರೀಮಂತರು ಆಲ್ಕೋಹಾಲ್ ನಲ್ಲಿ ಪರ್ಸೆಂಟೇಜ್ ಕಮ್ಮಿ ಇರುತ್ತದೆ. ಹೀಗಾದ್ರೆ ಬಡವರು ಎಲ್ಲಿ ಹೋಗಬೇಕು . ಸಿದ್ದರಾಮಯ್ಯ ಅವರ ಬಜೆಟ್ ‌ನಲ್ಲಿ ಹೊಸದು ಏನಿಲ್ಲ. ಸುಮ್ಮನೆ ಮೂರು ಗಂಟೆ ನಿಂತು ಭಾಷಣ ಮಾಡಿದ್ದಾರೆ. ಗಂಟೆಗೆ 28 ಸಾವಿರ ಕೋಟಿ ಸಾಲ ಹೆಚ್ಚಾಗುತ್ತಿದೆ. ಇದನ್ನು ಮಾಡೋದು ಬಿಟ್ಟು ಐದು ವರ್ಷದ ಒಂದೇ ಬಜೆಟ್ ಮಾಡಿ. ಯಕೆಪಿ ಯೋಜನೆ ಬಗ್ಗೆ ಹೇಳಿದ್ದಾರೆ. ಸದನದ ಒಳಗೆ ಗ್ಯಾರಂಟಿ ಬಗ್ಗೆ ಸಚಿವರು ಸುಳ್ಳು ಹೇಳಿದ್ದಾರೆ. ಸಾರಿಗೆ ಇಲಾಖೆಗೆ 4000 ರಿಂದ 5.500 ಕೋಟಿ ಬಾಕಿ ಇದೆ. ಬೆಸ್ಕಾಂ‌ ಬಿಲ್ ಬಾಕಿ ಇದೆ. ಇದೆಲ್ಲ ನೋಡಿದ್ರೆ ಎಲ್ಲಿಗೆ ಹೋಗ್ತಿದೆ ಹಣ? ಎಂದು ಪ್ರಶ್ನಿಸಿದ್ದಾರೆ.