ಮೈಸೂರು; ಜೀವ ತೆಗೆಯುವರನ್ನು ಸಿದ್ದರಾಮಯ್ಯ ಸಾಕಿಕೊಂಡಿದ್ದಾರೆ ಎಂದು ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ.
ಬಳ್ಳಾರಿ ಗಲಾಟೆ ವಿಚಾರದ ಬಗ್ಗೆ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ ಅವರೇ ನಿಮ್ಮ ಸುತ್ತಲೂ ಎಂತಹವರನ್ನ ಸಾಕಿಕೊಂಡಿದ್ದೀರಾ ನೋಡಿ. ಜೀವ ತೆಗೆಯುವರನ್ನು ಸಿದ್ದರಾಮಯ್ಯ ಸಾಕಿಕೊಂಡಿದ್ದಾರೆ. ಭರತ್ ರೆಡ್ಡಿಯ ಈ ವರ್ತನೆಗೆ ಅವನು ಮಾತ್ರ ಕಾರಣ ಅಲ್ಲಾ ತಪ್ಪು ಅವನ್ನದ್ದು ಮಾತ್ರ ಅಲ್ಲ ಅವನನ್ನು ಸಾಕಿಕೊಂಡಿರುವವರ ತಪ್ಪಿದೆ. ಭರತ್ ರೆಡ್ಡಿಯ ವರ್ತನೆಯನ್ನ ನಾಗರಿಕ ಸಮಾಜ ಸಹಿಸಿಕೊಳ್ಳುವುದಿಲ್ಲ. ಬಳ್ಳಾರಿಯ ಘಟನೆಯಿಂದ ಇಡೀ ರಾಜ್ಯವೇ ತಲೆ ತಗ್ಗಿಸುವ ಸ್ಥಿತಿ ಬಂದಿದೆ ಎಂದಿದ್ದಾರೆ.
ಇಂತಹ ಘಟನೆ ಮೊದಲು ಯುಪಿ ಬಿಹಾರಗಳಲ್ಲಿ ನಡೆಯುತ್ತಿತ್ತು. ಈಗ ಕರ್ನಾಟಕದಲ್ಲೂ ನಡೆದಿದೆ.ಭರತ್ ರೆಡ್ಡಿ ವಿಧಾನಸಭೆಯಲ್ಲಿ ಉನ್ಮಾದಿಂದ ಮಾತನಾಡುವಾಗಲೇ ಸ್ಪೀಕರ ಕ್ರಮ ತೆಗೆದುಕೊಳ್ಳಬೇಕಿತ್ತು. ಆ ಉನ್ಮಾದ ಮಾತನ್ನ ಪೋಷಿಸಿದ ಕಾರಣ ಭರತ್ ರೆಡ್ಡಿ ಈ ಲೆವಲ್ ಗೆ ಬಂದಿದ್ದಾನೆ. ಸಿದ್ದರಾಮಯ್ಯ ಕೊಟ್ಟ ಸ್ವತಂತ್ರದಿಂದ ಇವರೆಲ್ಲಾ ಈ ರೀತಿ ಮಾಡುತ್ತಿದ್ದಾರೆ.ಬಳ್ಳಾರಿಯಲ್ಲಿ ಜೀವ ಹೋಗಿರುವುದು ಕಾಂಗ್ರೆಸ್ ಕಾರ್ಯಕರ್ತನದಲ್ಲ ಅದು ಒಬ್ಬ ಕನ್ನಡಿಗನ ಜೀವ. ಇದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಜನಾರ್ಧನ್ ರೆಡ್ಡಿಯನ್ನ ಈ ಪ್ರಕರಣದಲ್ಲಿ ಎ೧ ಹೇಗೆ ಮಾಡಿದಿರಿ ?.ಸಿದ್ದರಾಮಯ್ಯ ಯಾವ ಮೇಲ್ಪಂಕ್ತಿಯನ್ನು ಹಾಕುತ್ತಿದ್ದಾರೆ ಗೊತ್ತಾಗುತ್ತಿಲ್ಲ ?.ಸಿದ್ದರಾಮಯ್ಯ ದೇವರಾಜ ಅರಸು ರೆಕಾರ್ಡ್ ಮುರಿಯುತ್ತಾರೆ. ಆದರೆ ದೇವರಾಜ ಅರಸು ಆಡಳಿತ ವೈಖರಿಯನ್ನ ನೀವು ಪಾಲಿಸಲು ಆಗಲ್ಲ ಬಿಡಿ ಎಂದು ಮೈಸೂರಿನಲ್ಲಿ ಸಿಎಂ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ನಾನು ರಾಜ್ಯ ರಾಜಕಾರಣಕ್ಕೆ ಬಂದಿದ್ದೇನೆ ಇದು ಸಹಜ. ಕೇಂದ್ರದ ರಾಜಕಾರಣ ಮುಗಿದ ಮೇಲೆ ರಾಜ್ಯ ರಾಜಕಾರಣಕ್ಕೆ ಬರಬೇಕು ತಾನೇ ?.ಎಲ್ಲಾ ದೃಷ್ಟಿಯಿಂದಲೂ ಚಾಮರಾಜ ಕ್ಷೇತ್ರ ನನಗೆ ಅನುಕೂಲಕರವಾಗಿದೆ. ಹೀಗಾಗಿ ಸಹಜವಾಗಿಯೇ ಚಾಮರಾಜ ಕ್ಷೇತ್ರ ನನ್ನ ಆಯ್ಕೆಯಾಗಿರುತ್ತದೆ. ಈ ಹಿಂದೆ ಶಂಕರಲಿಂಗೇಗೌಡರು ನಾಲ್ಕು ಬಾರಿ ಚಾಮರಾಜ ಕ್ಷೇತ್ರದಿಂದ ಬಿಜೆಪಿಯಿಂದ ಗೆದ್ದಿದ್ದಾರೆ ಇದು ಬಿಜೆಪಿ ಕ್ಷೇತ್ರ.ಹೀಗಾಗಿ ಇಲ್ಲಿಂದಲೇ ಚಟುವಟಿಕೆ ಆರಂಭಿಸಿದ್ದೇನೆ.ಚಾಮರಾಜ ಕ್ಷೇತ್ರ ಹಣದ ಪ್ಯಾಕೇಟ್ ಕೊಟ್ಟು ಗೆಲ್ಲುವ ಕ್ಷೇತ್ರ ಅಲ್ಲ.ಇಲ್ಲಿಯ ಮತದಾರರು ಕೆಲಸ ನೋಡಿ ಪ್ರೀತಿ ತೋರಿಸುವ ಜನ.ಬರಿ ಒಕ್ಕಲಿಗ ಲೆಕ್ಕದಲ್ಲೇ ಈ ಕ್ಷೇತ್ರ ನೋಡುತ್ತಿಲ್ಲ. ಇಲ್ಲಿ ಎಲ್ಲ ರೀತಿಯ ವರ್ಗದ ಜನರು ಇದ್ದಾರೆ. ಪ್ರಜ್ಞಾವಂತ ಬುದ್ಧಿವಂತರಿದ್ದಾರೆ.ಹೀಗಾಗಿ ಸಹಜವಾಗಿ ನನ್ನ ಆಯ್ಕೆಯಾಗಿದೆ ಎಂದು ಪ್ರತಾಪ ಸಿಂಹ ಹೇಳಿದ್ದಾರೆ.











