ಮನೆ Latest News ಸಿದ್ದರಾಮಯ್ಯನವರಿಗೆ ನೈತಿಕವಾಗಿ ಕುಟುಂಬ ರಾಜಕೀಯದ ಬಗ್ಗೆ ಮಾತನಾಡೋ ಅರ್ಹತೆ ಇಲ್ಲ; ರಾಯಚೂರಿನಲ್ಲಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ...

ಸಿದ್ದರಾಮಯ್ಯನವರಿಗೆ ನೈತಿಕವಾಗಿ ಕುಟುಂಬ ರಾಜಕೀಯದ ಬಗ್ಗೆ ಮಾತನಾಡೋ ಅರ್ಹತೆ ಇಲ್ಲ; ರಾಯಚೂರಿನಲ್ಲಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ

0

ರಾಯಚೂರು: ಸಿದ್ದರಾಮಯ್ಯನವರಿಗೆ ನೈತಿಕವಾಗಿ ಕುಟುಂಬ ರಾಜಕೀಯದ ಬಗ್ಗೆ ಮಾತನಾಡೋ ಅರ್ಹತೆ ಇಲ್ಲ ಎಂದು ರಾಯಚೂರಿನಲ್ಲಿ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

ರಾಯಚೂರು ಜಿಲ್ಲೆ ಸಿಂಧನೂರು ನಗರದಲ್ಲಿ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯರಿಂದ ದೇವೆಗೌಡ ಕುಟುಂಬ ರಾಜಕಾರಣದ ಬಗ್ಗೆ ಮತ್ತೆ ಮತ್ತೆ ಪ್ರಸ್ತಾಪ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಅಯ್ಯೋ ರಾಮ.. ಸಿದ್ದರಾಮಯ್ಯನವರು ಮಾಡ್ತಿರೋದೇನು..? ಸಿದ್ದರಾಮಯ್ಯ ಮಾಡ್ತಿರೋದು ಯಾವ ರಾಜಕೀಯ. ಸಿದ್ದರಾಮಯ್ಯನವರಿಗೆ ನೈತಿಕವಾಗಿ ಕುಟುಂಬ ರಾಜಕೀಯದ ಬಗ್ಗೆ ಮಾತನಾಡೋ ಅರ್ಹತೆ ಇಲ್ಲ ಎಂದಿದ್ದಾರೆ.

ಬಾಗಲಕೋಟೆ,ದಾವಣಗೆರೆ ಉಪ ಚುನಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು ಎರಡು ಸ್ಥಾನದಲ್ಲಿ ಗೆಲ್ತಿವಿ ಬನ್ನಿ ಬ್ರದರ್ ಎಂದಿದ್ದಾರೆ. ಈ ಬಗ್ಗೆ ಮಹಿಳೆಯರನ್ನ ಸ್ವಾವಲಂಬಿ ಮಾಡ್ತಿದ್ದಿವಿ ಅಂತ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರ‌‌ಕ್ಕೆ ರಿಯ್ಯಾಕ್ಟ್ ಮಾಡಿ ನನ್ನ ಮನೆ ಹತ್ರ ಬಂದ್ರೆ ಪ್ರತಿದಿನ ತೋರಿಸ್ತಿನಿ. ಹೆಣ್ಮಕ್ಕಳು ಸ್ವಾವಲಂಬಿಗಳು ಆಗಿದ್ದಾರಾ..?ಇಲ್ಲವಾ ಅನ್ನೋದನ್ನ ತೋರಿಸ್ತಿನಿ. ಬಡವರು ಯಾವ ರೀತಿ ಸ್ವಾವಂಬಿಗಳಾಗಿದ್ದಾರೆ. ನನ್ನ ಮನೆ ಹತ್ರ ಬಂದ್ರೆ ನಿಮಗೆ ಪ್ರತ್ಯಕ್ಷ ದರ್ಶನ ಮಾಡಿಸ್ತೇನೆ ಅಂತಾ ಎಚ್ ಡಿಕೆ ವ್ಯಂಗ್ಯವಾಡಿದ್ದಾರೆ.