ಬೆಂಗಳೂರು; ಸಿದ್ದರಾಮಯ್ಯ ಕೆಲಸಕ್ಕೆ ಬಾರದ ಕೆಲಸ ಸೃಷ್ಟಿ ಮಾಡಿದ್ದಾರೆ ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವ ವಿ ಸೋಮಣ್ಣ ಹೇಳಿದ್ದಾರೆ.
ಜಾತಿ ಗಣತಿಗಾಗಿ ನಮ್ಮ ಮನೆಗೆ ಬಂದಾಗ ಸುಮಾರು 1 ಗಂಟೆ 4 ನಿಮಿಷ ನನ್ನ ಮಾಹಿತಿ ಪಡೆದಿದ್ದಾರೆ. ಇದೊಂದು ಅವೈಜ್ಞಾನಿಕ ಸಮೀಕ್ಷೆ ಆಗಿದೆ. ತಾಂತ್ರಿಕ ಸಮಸ್ಯೆಯಿಂದ ಕೂಡಿದೆ. ಇನ್ನೊಂದು ಕಾಂತರಾಜ್ ಸಮಿತಿ ಆಗುತ್ತೆ ಅಷ್ಟೇ.11 ವರ್ಷದಲ್ಲಿ ಮೋದಿಯವರು ಭಾರತದ ಅಭಿವೃದ್ಧಿ ಬಗ್ಗೆ ದಿಕ್ಸೂಚಿ ಕೊಟ್ಟಿದ್ದಾರೆ. ಅನಾವಶ್ಯಕವಾಗಿ ಮಾಡುವ ಗೊಂದಲದಿಂದ ಸರ್ಕಾರಕ್ಕೆ ಸರಿಯಾದ ಮಾಹಿತಿ ಕೊಡಲ್ಲ. ಇದರಲ್ಲಿ ಸರ್ಕಾರ ಸಾಧನೆ ಮಾಡಲು ಯಾವುದು ಸಿಗಲ್ಲ. ಅವೈಜ್ಞಾನಿಕ ಗಣತಿಯಿಂದ ಮಾಹಿತಿ ಸಿಗಲ್ಲ. ಇದನ್ನು ಇನ್ನೂ ಸರಳೀಕರಣ ಮಾಡಿ. ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಗೊತ್ತಿಲ್ಲ. ಸುಮಾರು ಅಧಿಕಾರಿಗಳು ಕೇಳಿದ ಮಾಹಿತಿ ಅನಾವಶ್ಯಕವಾಗಿತ್ತು. ಇದರಿಂದ ಜನರು ಗೊಂದಲ ಆಗ್ತಾರೆ. ಸಮೀಕ್ಷೆ ಸರಳೀಕರಣ ಮಾಡಿ ಎಂದು ಸಿದ್ದರಾಮಯ್ಯಗೆ ಸೋಮಣ್ಣ ವಿನಂತಿ ಮಾಡಿದ್ದಾರೆ.
ಇದನ್ನು ಮಾಡೋಕೆ 6 ತಿಂಗಳು ಬೇಕು. ಇದು ಕಾಂತರಾಜ್ ಸಮಿತಿಗಿಂತಲು ಕೆಟ್ಟದಾಗಿ ಆಗುತ್ತೆ.. ಈ ಸರ್ಕಾರಕ್ಕೆ ಜಾತಿ ಬಿಟ್ಟಿರೆ ಬೇರೆ ಅವಶ್ಯಕತೆ ಇಲ್ಲ. ಯಾವ ಸಮಾಜಕ್ಕೆ ಅನ್ಯಾಯ ಮಾಡಬೇಕು ಎಂಬುದು ನಿಮ್ಮ ತಲೆಯಲ್ಲಿ ಇದೆ. ಸಿದ್ದರಾಮಯ್ಯರ ಬಗ್ಗೆ ಕಾಂಗ್ರೆಸ್ ಅವರೇ ಮಾತಾಡ್ತಾರೆ. ಇದು ನಿಮಗೆ ಶೋಭೆ ತರಲ್ಲ. ಈ ರೀತಿಯಲ್ಲಿ ಮಾಡೋಕೆ ಹೋದ್ರೆ ಒಂದು ವರ್ಷ ಆಗುತ್ತೆ. ದಯವಿಟ್ಟು ಈಗಲೇ ರದ್ದುಗೊಳಿಸಿ. ಸಿದ್ದರಾಮಯ್ಯ ಸಾಹೆಬ್ರೆ ಇನ್ನೂ ನಾವು ಕಲಿಯಬೇಕು. ತಾಂತ್ರಿಕ ಸಲಹಾ ಸಮಿತಿ ಮಾಡಿ ಅವರಿಂದ ವರದಿ ಪಡೆದು ಇನ್ನು ಆರು ತಿಂಗಳು ಆಗಲಿ. ಇಷ್ಟು ಅನುಭವ ನನಗೆ ಇವತ್ತು ಆಗಿದೆ. ಇದರಿಂದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ಇದು ನಿಮಗೆ ಪಾಪದ ಹೊರೆ ಆಗಲಿದೆ ಎಂದಿದ್ದಾರೆ.
ಡಿ.ಕೆ ಶಿವಕುಮಾರ್ ಸಹ ಇದರ ಒಂದು ಭಾಗ. ಯಾರ್ ಮೇಲೆ ಎಷ್ಟು ಟೋಪಿ ಹಾಕ್ತಾರೆ. ಡಿ.ಕೆ ಶಿವಕುಮಾರ್ ಸಹ ಇದಕ್ಕೆ ಪಾಲುದಾರರು.ದಯವಿಟ್ಟು ಇಲ್ಲಿಗೆ ನಿಲ್ಲಿಸಿ. ಹುಚ್ಚರ ಸಂತೆಯಲ್ಲಿ ಯಾರು ಬಂದು ನಿಲ್ಲಬೇಡಿ.ದೇವರಾಜ ಅರಸು ಪೋಟೋ ಹಾಕಿ ಸಮೀಕ್ಷೆ ಮಾಡ್ತೀರಾ .ಮೇಲ್ಜಾತಿ ಅಥವಾ ಬೇರೆ ಯಾವುದೋ ಜಾತಿ ತುಳಿಯುವ ಕೆಲಸ ಮಾಡಬೇಡಿ. ವಾಂತಿ ಮಾಡುವ ಕೆಲಸ ಇದು. ಅವೈಜ್ಞಾನಿಕ ಹಾಗೂ ಅಸಹ್ಯದ ಕೆಲಸ ಎಂದು ಗುಡುಗಿದ್ದಾರೆ.











