ಒಕ್ಕಲಿಗ ಜಾತಿಯನ್ನು ಕೆಡಿಸಲು ಸರ್ಕಾರ ಹುನ್ನಾರ ಮಾಡುತ್ತಿದೆ ಎಂದು ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಜಾತಿಗಣತಿ ಮುಂದುವರಿಕೆ ಬಗ್ಗೆ ಸಿಎಂ ಹೇಳಿಕೆ ಬಗ್ಗೆ ಮಾತನಾಡಿದ ಆರ್ ಅಶೋಕ್ ಈಗಾಗಲೇ ಒಬಿಸಿ, ಎಸ್ ಸಿ, ಎಸ್ಟಿ ಎಲ್ಲರೂ ಸಭೆ ಮಾಡಿದ್ದಾರೆ. ನಾಳೆ ಒಕ್ಕಲಿಗರೂ ಸಭೆ ಸೇರುತ್ತಿದ್ದೇವೆ. ಒಕ್ಕಲಿಗ ಜಾತಿಯನ್ನು ಕೆಡಿಸಲು ಸರ್ಕಾರ ಹುನ್ನಾರ ಮಾಡುತ್ತಿದೆ. ಸಿದ್ದರಾಮಯ್ಯ ಸುತ್ತ ಇರುವ ನಗರ ನಕ್ಸಲರು ಇದ್ದಾರೆ. ಒಕ್ಕಲಿಗ ಮುಸ್ಲಿಂ, ಒಕ್ಕಲಿಗ ಕ್ರಿಶ್ಚಿಯನ್ ಅಂತಾ ಮಾಡಲು ಯಾರೋ ಸಿದ್ದರಾಮಯ್ಯಗೆ ಟಾಸ್ಕ್ ಕೊಟ್ಟಿರಬೇಕು ಎಂದಿದ್ದಾರೆ.
ಯಾರೂ ಮಾಡಿರದ ಅಧರ್ಮದ ಕೆಲಸವನ್ನು ಸಿದ್ದರಾಮಯ್ಯ ಮಾಡಲು ಹೊರಟಿದ್ದಾರೆ ಎಂದರೆ ಅವರಿಗೆ ಹೈಕಮಾಂಡ್ ಟಾಸ್ಕ್ ಕೊಟ್ಟಿರಬೇಕು. ಸೋನಿಯಾ ಗಾಂಧಿ ಕ್ರಿಶ್ಚಿಯನ್ ಇರುವುದರಿಂದ ಸಿದ್ದರಾಮಯ್ಯ ಅವರಿಗೆ ಈ ಟಾಸ್ಕ್ ಕೊಟ್ಟಿರಬೇಕು.
ಇಲ್ಲದಿದ್ದರೆ ಅನುಭವಿ ರಾಜಕಾರಣಿ ಸಿದ್ದರಾಮಯ್ಯ ಈ ಕೆಲಸ ಮಾಡುತ್ತಿರಲಿಲ್ಲ. ವಿಷ ಬೀಜ ಬಿತ್ತುವ ಕೆಲಸವನ್ನು ವ್ಯವಸ್ಥಿತವಾಗಿ ಸಿದ್ದರಾಮಯ್ಯ ಮಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಜನಪ್ರಿಯತೆ ಕುಸಿಯುತ್ತಿರುವ ಬಗ್ಗೆ ನಮ್ಮ ಸಭೆಯಲ್ಲಿ ಚರ್ಚೆಯಾಗಿದೆ. ಜಾತಿ ಗಣತಿಗೂ ಸಿದ್ದರಾಮಯ್ಯಗೂ ಕಾಂಗ್ರೆಸ್ ಸರ್ಕಾರಕ್ಕೂ ಏನು ಸಂಬಂಧ?. ಬಿಜೆಪಿ ನಡೆದು ಬಂದ ಹಾದಿಯಲ್ಲಿ ನಾವು ಹೇಗಿರಬೇಕು, ಕಾಂಗ್ರೆಸ್ ಸರ್ಕಾರ ಜನಪ್ರಿಯತೆ ಕುಸಿಯುತ್ತಿರುವಾಗ ನಾವೇನು ಮಾಡಬೇಕು, 2028ರ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ ಎಂದು ಹೇಳಿದ್ದಾರೆ.











