ಬೆಂಗಳೂರು: ಮುಂದಿನ ದಿನಗಳಲ್ಲಿ ಸಂಪುಟ ಪುನರ್ ರಚನ್ ಆಗುತ್ತೆ ಎಂದು ಸಿಎಂ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು
2017ರಲ್ಲಿ ಪ್ರತಿಮೆ ಮಾಡಿದ್ರು. ದಿನನಿತ್ಯ ಶಾಸಕರು, ಮಂತ್ರಿಗಳು ಈ ಪ್ರತಿಮೆಯನ್ನ ನೋಡಬೇಕು ಎಂದರು.
ಯಾವ ಮೌಲ್ಯಗಳಿಗೋಸ್ಕರ ಬದುಕಿದ್ರೋ ಅವರಿಗೆ ನಮನ ಸಲ್ಲಿಸಿದ್ದೇವೆ ವಾಲ್ಮೀಕಿ ಸಮುದಾಯದ ನಾಯಕರಿಗೆ ಸಚಿವ ಸ್ಥಾನ ನೀಡುವ ವಿಚಾರದ ಬಗ್ಗೆ ಮಾತನಾಡಿದ ಅವರು
ಮುಂದಿನ ದಿನಗಳಲ್ಲಿ ಸಂಪುಟ ಪುನರ್ ರಚನ್ ಆಗುತ್ತೆ.ಆಗ ನೋಡೋಣ ಎಂದಿದ್ದಾರೆ.
ಜಡ್ಜ್ ಮೇಲೆ ಶೂ ಎಸೆದ ಬಗ್ಗೆ ಮಾತನಾಡಿದ ಅವರು ಗವಾಯಿ ಅವರೇ ಕ್ಷಮಿಸಿದ್ದಾರೆ.ಶೂ ಎಸೆಯೋ ಮನಸು ಖಂಡಿಸುತ್ತೇನೆ. ತೀವ್ರವಾಗಿ ಖಂಡಿಸುತ್ತೇನೆಇದು ಮನುವಾದಿಗಳ ಪ್ರಯತ್ನ ಅದು.ಸಿಜೆ ಅವರು ಅದಕ್ಕೆ ವಿಚಲಿತ ಆಗಿಲ್ಲ.
ಅವರ ಕೆಲಸ ಅವರು ಮಾಡಿದ್ದಾರೆ. ಅವರು ಕ್ಷಮೆ ಮಾಡಿದ್ದಾರೆ, ಅದು ಅವರ ದೊಡ್ಡ ಗುಣ. ಇದು ಸನಾತನವಾದಿಗಳು, ಮನುವಾದಿಗಳ ಕೆಲಸವೇ ಎಂದಿದ್ದಾರೆ.











