ಬೆಂಗಳೂರು; ಮೀಸಲಾತಿಯ ಕಾರಣದಿಂದ ಇಂದು ನನ್ನ ಊರು ಸುಳ್ಯದಲ್ಲಿ ಅಷ್ಟು ದೀರ್ಘ ಅವಧಿಗೆ ಅಂಗಾರ ಮತ್ತು ಭಾಗೀರಥಿ ಶಾಸಕರಾಗಿದ್ದಾರೆ . ಪರಿಶಿಷ್ಟ ಮೀಸಲಾತಿ ಇಲ್ಲದೇ ಇರುತ್ತಿದ್ದರೆ ಅಲ್ಲಿ ಒಕ್ಕಲಿಗರೋ ಅಥವಾ ಇನ್ಯಾರೋ ಶಾಸಕರಾಗಿರುತ್ತಿದ್ದರು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ,
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಹಿಳಾ ರಾಜಕೀಯ ಮೀಸಲಾತಿ ವಿಚಾರದ ಬಗ್ಗೆ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹದಿನೈದು ವರ್ಷಗಳ ಹಿಂದೆ ಕೆಲವು ರಾಜಕೀಯ ಪಕ್ಷಗಳು ಮಹಿಳಾ ಮೀಸಲಾತಿ ವಿಧೇಯಕವನ್ನು ಹರಿದು ಹಾಕಿದ್ದವು. ಮಹಿಳಾ ಮೀಸಲಾತಿ ಕೊಡಬಾರದು ಎಂಬ ಭಾವನೆ ಇತ್ತು. ಹತ್ತು ವರ್ಷಗಳ ಕಾಲ ಯುಪಿಎ ಸರ್ಕಾರದಲ್ಲಿ ಕೂಡಾ ಇದು ಸಾಧ್ಯವಾಗಲಿಲ್ಲ. ನರೇಂದ್ರ ಮೋದಿ ಸರ್ಕಾರ ಬಂದಾಗ ಇದನ್ನು ಮುನ್ನೆಲೆಗೆ ತರಲು ಪ್ರಯತ್ನ ಮಾಡಿದರು. ರಾಜ್ಯದಲ್ಲಿ ನಾನು ಇಂಧನ ಸಚಿವೆ ಆಗಿದ್ದಾಗ ನನಗೂ ಭಯ ಇತ್ತು. ಆಗ ಬೇರೆಯವರು ಇದರ ಬಗ್ಗೆ ಆಡಿಕೊಂಡಿದ್ದರು. ಮಹಿಳೆಯರಿಗೂ ಬೇರೆ ಇಲಾಖೆ ನಡೆಸಲು ಬರುತ್ತದೆ ಎಂದು ತೋರಿಸುವ ಸವಾಲು ನನಗೆ ಆಗ ಇತ್ತು. ನೀತಿ ನಿರೂಪಣೆಯಲ್ಲಿ ಮಹಿಳೆ ಇರಬೇಕು ಎಂಬುದು ಮೋದಿ ಪರಿಕಲ್ಪನೆ ಎಂದಿದ್ದಾರೆ.
ಮೀಸಲಾತಿಯ ಕಾರಣದಿಂದ ಇಂದು ನನ್ನ ಊರು ಸುಳ್ಯದಲ್ಲಿ ಅಷ್ಟು ದೀರ್ಘ ಅವಧಿಗೆ ಅಂಗಾರ ಮತ್ತು ಭಾಗೀರಥಿ ಶಾಸಕರಾಗಿದ್ದಾರೆ. ಪರಿಶಿಷ್ಟ ಮೀಸಲಾತಿ ಇಲ್ಲದೇ ಇರುತ್ತಿದ್ದರೆ ಅಲ್ಲಿ ಒಕ್ಕಲಿಗರೋ ಅಥವಾ ಇನ್ಯಾರೋ ಶಾಸಕರಾಗಿರುತ್ತಿದ್ದರು. ಕೇಂದ್ರ ಸರ್ಕಾರದ ಬೇರೆ ಬೇರೆ ಯೋಜನೆಗಳಲ್ಲಿ ಮಹಿಳೆಯರಿಗೆ ಹೆಚ್ಚು ತರಬೇತಿ, ಸಾಲ ನೀಡಲಾಗಿದೆ. ದೇಶದ ಮೊದಲ ಚುನಾವಣೆಯಲ್ಲಿ 3% ಮಹಿಳೆಯರಿಗೆ ಅವಕಾಶ ಇತ್ತು. ಮಹಿಳೆಯರು ಮನೆಯಿಂದ ಹೊರಬರದ ಸ್ಥಿತಿ ಇದ್ದಾಗ 22 ಮಹಿಳೆಯರು ಸಂಸತ್ತಿನಲ್ಲಿದ್ದರು. ಇಂದು ಸಂಸತ್ತಿನಲ್ಲಿ ಮಹಿಳೆಯರ ಸಂಖ್ಯೆ 75ಕ್ಕೆ ಏರಿದೆ. ಮಹಿಳೆಯರಿಗೆ ಆದ್ಯತೆ ನೀಡಲು ಪ್ರಧಾನಿ ವಿಶೇಷ ಒತ್ತು ಕೊಡುತ್ತಿದ್ದಾರೆ. 33% ಮೀಸಲಾತಿ ಕುರಿತು 16,17 ಮತ್ತು 18 ರಂದು ವಿಶೇಷ ಸಂಸತ್ ಅಧಿವೇಶನದಲ್ಲಿ ಚರ್ಚೆ ನಡೆಯಲಿದೆ. ಯಾವುದೇ ರಾಜಕೀಯ ಪಕ್ಷ ಮಹಿಳಾ ಮೀಸಲಾತಿಗೆ ವಿರೋಧಿಸಲ್ಲ ಎಂಬ ವಿಶ್ವಾಸ ಇದೆ ಎಂದು ಅವರು ಹೇಳಿದ್ದಾರೆ.











