ಮನೆ Latest News ಬೈರತಿ ಸುರೇಶ್ ಹೇಳಿಕೆಗೆ ನವದೆಹಲಿಯಲ್ಲಿ ಸುದ್ದಿಗೋಷ್ಟಿ ನಡೆಸಿ ತಿರುಗೇಟು ಕೊಟ್ಟ ಸಚಿವೆ ಶೋಭಾ ಕರಂದ್ಲಾಜೆ

ಬೈರತಿ ಸುರೇಶ್ ಹೇಳಿಕೆಗೆ ನವದೆಹಲಿಯಲ್ಲಿ ಸುದ್ದಿಗೋಷ್ಟಿ ನಡೆಸಿ ತಿರುಗೇಟು ಕೊಟ್ಟ ಸಚಿವೆ ಶೋಭಾ ಕರಂದ್ಲಾಜೆ

0

ನವದೆಹಲಿ; ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪತ್ನಿ ಮೈತ್ರಾದೇವಿ ಅವರ ಸಾವಿನ ಬಗ್ಗೆ ಮರು ತನಿಖೆಯಾಗಬೇಕ. ಇದಕ್ಕೆ ಸಂಬಂಧಪಟ್ಟಂತೆಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಬಂಧಿಸಬೇಕು ಎಂದು ಹೇಳಿಕೆ ನೀಡಿರುವ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿಕೆಗೆ ಸುದ್ದಿಗೋಷ್ಟಿ ಮೂಲಕ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ  ಬೈರತಿ ತಿರುಗೇಟು ಕೊಟ್ಟಿದ್ದಾರೆ.

ಕಾಂಗ್ರೆಸ್ ಮನೆಯಲ್ಲಿ ಬೆಂಕಿ ಹತ್ತಿಕೊಂಡಿದೆ.ಬೈರತಿ ಸುರೇಶ್ ಆರೋಪ ಇದಕ್ಕೆ ಒಂದೆ ಉದಾಹರಣೆ.ದರೋಡೆಕೋರರನ್ನು ಪೊಲೀಸರು ಹಿಡಿತಾರೆ.ದರೋಡೆಕೋರರು ಪೊಲೀಸರಿಂದ ತಪ್ಪಿಸಿಕೊಳ್ಳು ಗುಂಡು ಹಾರಿಸ್ತಾರೆ.ಬೈರತಿ ಸುರೇಶ್ ಕೂಡ ಅದೇ ಕೆಲಸ ಮಾಡುತ್ತಾರೆ.ದರೋಡೆಕೋರ, ಭಯೋತ್ಪಾಕರ ಕೆಲಸವನ್ನು ಸುರೇಶ್ ಮಾಡಿದ್ದಾರೆ.ಸಿದ್ದರಾಮಯ್ಯ ಇಂತಹವರನ್ನು ಯಾಕೆ ಇಟ್ಟುಕೊಂಡಿದ್ದಾರೆ.ಕೌರವರ ಜೊತೆ ಶಕುನಿ ಯಾಕೆ ಇದ್ದ.ಅವರನ್ನು ಮುಗಿಸಲೇಂದೆ ಸುರೇಶ್ ಇದ್ದಾರೆ.ಸುರೇಶ್ ಭಯದಿಂದ ಇಂತಹ ಆರೋಪ ಮಾಡಿದ್ದಾರೆ.ರಾಕೇಶ್ ಸಿದ್ದರಾಮಯ್ಯ ಸಾವಿಗೆ ಸುರೇಶ್ ಕಾರಣ ಅಂತಾ ಜನ ಮಾಡ್ತಿದ್ದಾರೆ.ಇದನ್ನು ನೀವು ಒಪ್ಪಿಕೊಳ್ತಿರಾ..?ಸಿದ್ದರಾಮಯ್ಯ ಆಸ್ತಿ ಹೊಡೆಯೋಕೆ ಸಾಯಿಸಿದ್ರು ಅಂತಾ ಜನ ಮಾತಾಡ್ತಾರೆ.ನಿಮ್ಮನ್ನು ಹೆಬ್ಬಾಳದಿಂದ ಓಡಿಸುವ ಕೆಲಸ ಮಾಡ್ತಿನಿ.ಫೈಲು ಸುಟ್ಟಾಗಿದ್ದನ್ನು ಹೇಳೊಕೆ ಬಂದ್ರೆ ಆರೋಪ ಮಾಡ್ತಿರಾ. ಶೋಭಾ ಕರಂದ್ಲಾಜೆ ಓಡಿ ಹೋಗುವವಳಲ್ಲ. ನಾಲಿಗೆ ಬಿಗಿ‌ ಹಿಡಿದು ಮಾತನಾಡಿ.ಸಿದ್ದರಾಮಯ್ಯ ಕುಟುಂಬಕ್ಕೆ ಕಳಂಕ ತಂದವರು ಇವರೇ ಎಂದಿದ್ದಾರೆ.

ಇನ್ನು ಉಪಚುನಾವಣೆಗೆ ಕಾಂಗ್ರೆಸ್ ಟಿಕೆಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಅಲ್ಮೋಸ್ಟ್ ಎಲ್ಲಾ ಫೈನಾಲಿಸ್ ಮಾಡಿದ್ದೇವೆ.ಸಚಿವರಿಗೆ  ಜವಾಬ್ದಾರಿ ನೀಡಿದ್ದೇವೆ ಅವರು ನೋಡಿಕೊಳ್ತಾರೆ.ನಮ್ಮ ಪ್ರಸ್ತಾವನೆಯನ್ನ ದೆಹಲಿಗೆ ಕಳುಹಿಸುತ್ತೇವೆ.ದೆಹಲಿ‌ ನಾಯಕರು ಅಂತಿಮ ತೀರ್ಮಾನ ಮಾಡ್ತಾರೆ ಎಂದಿದ್ದಾರೆ.

ನಿನ್ನೆ ಬೈರತಿ ಸುರೇಶ್ ಹೇಳಿದ್ದೇನು?

ನಿನ್ನೆ ಬೆಂಗಳೂರಿನಲ್ಲಿ ಮಾತನಾಡಿದ್ದ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಭೈರತಿ ಸುರೇಶ್, ಶೋಭಾ ಕರಂದ್ಲಾಜೆ ಗಾಳಿಯಲ್ಲಿ ಗುಂಡು ಹಾಕೋದು ಬಿಡಬೇಕು.ನಾನೂ ಹಾಗಾದ್ರೆ ಆರೋಪ ಮಾಡ್ತೇನೆ.ಯಡಿಯೂರಪ್ಪ ಪಾಪ ಒಳ್ಳೆಯವರು.ಆದರೆ ಯಡಿಯೂರಪ್ಪ ಪತ್ನಿ ಮೈತ್ರಾದೇವಿ ಸಾವು ಹೇಗಾಯ್ತು ಅಂತ ನಾನೂ ಕೇಳ್ತೀನಿ. ಯಡಿಯೂರಪ್ಪ ಒಳ್ಳೆಯವರು.ಮೈತ್ರಾದೇವಿ ಸಾವು ತನಿಖೆ ಆಗಿ ಶೋಭಾ ಕರಂದ್ಲಾಜೆ ಯನ್ನು ಬಂಧಿಸಬೇಕು ಅಂತ ನಾನು ಹೇಳ್ತೀನಿ.ಅವರ ಸಾವಿನಲ್ಲಿ ಶೋಭಾ ಕರಂದ್ಲಾಜೆ ಪಾತ್ರವಿದೆ ಅಂತ ನಾನೂ ಆರೋಪ ಮಾಡ್ತೇನೆ ಎಂದಿದ್ದರು.

ಅದರ ಬಗ್ಗೆ ನಾನೂ ತನಿಖೆ ಆಗ್ಲಿ ಅಂತ ಹೇಳ್ತೇನೆ.ಇದನ್ನು ಶೋಭಾ ಕರಂದ್ಲಾಜೆ ಒಪ್ಪಿಕೊಳ್ತಾರಾ.ಆ ಯಮ್ಮ ಕೇಂದ್ರ ಸಚಿವರು, ಹೀಗೆ ಸುಳ್ಳು ಹೇಳಬಾರದು.ಇವರು ಹೇಳಿದಂಗೆ ಇಡಿ ಯವರು ಮಾತು ಕೇಳುತ್ತಾರಾ ಹಾಗಾದ್ರೆ?.ಶೋಭಾ ಕರಂದ್ಲಾಜೆ ಗಿಂತ ಹೆಚ್ಚು ಇಡಿ ಬಗ್ಗೆ ಗೌರವ ವಿಶ್ವಾಸ ನಮಗೆ ಇದೆ.ಇವರ ಸಂಸ್ಥೆಗಳು ಕ್ಲಾರಿಫಿಕೇಷನ್ ಕೊಟ್ಟರೆ ನಾನೂ ದಾಖಲೆ ಕೊಡ್ತೇನೆ ಎಂದಿದ್ದರು.