ಬೆಂಗಳೂರು; ಮಾಜಿ ಸಚಿವ, ಮಾಜಿ ಸಂಸದ, ಬಿಜೆಪಿ ಮುಖಂಡ ಎಲ್ ಆರ್ ಶಿವರಾಮೇಗೌಡ, ಅವರ ಪುತ್ರ ಚೇತನ್ ಗೌಡ ಹಾಗೂ ಆಪ್ ಮುಖಂಡ ಬ್ರಿಜೇಶ್ ಕಾಳಪ್ಪ ಅವರು ತಮ್ಮ ಬೆಂಬಲಿಗರ ಸಮೇತ ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ ಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಕಾಂಗ್ರೆಸ್ ಗೆ ಸೇರ್ಪಡೆಯಾದರು.
ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ, ರಾಜ್ಯಸಭೆ ಸದಸ್ಯ ಡಾ. ಜಿ ಸಿ ಚಂದ್ರಶೇಖರ್ ಹಾಗೂ ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಮತ್ತು ಮಾಧ್ಯಮ ಸಲಹೆಗಾರ ದೀಪಕ್ ತಿಮಯ ಮತ್ತು ಇತರೆ ಮುಖಂಡರು ಉಪಸ್ಥಿತರಿದ್ದರು.
ಇನ್ನು ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ ಶಿವಕುಮಾರ್ ಚುನಾವಣೆ ಬಹಳ ದೂರ ಇದೆ. ಆದರೂ ನಮ್ಮ ಪಕ್ಷಕ್ಕೆ ಹಂತ ಹಂತವಾಗಿ ದಾಖಲು ಮಾಡಲು ಮುಂದಾಗುತ್ತಿದ್ದಾರೆ. ದಳ, ಬಿಜೆಪಿ ಪಕ್ಷಕ್ಕೆ ಹೋಗಿದ್ರು. ಜನತಾದಳದಿಂದ ಎಲ್.ಆರ್. ಶಿವರಾಮೇಗೌಡ ಸಂಸದರಾಗಿದ್ರು. ಕಾಂಗ್ರೆಸ್ ಪಕ್ಷಕ್ಕೆ ಬರಲು ಅರ್ಜಿ ಸಲ್ಲಿಸಿದ್ದಾರೆ. ಬ್ರಿಜೇಶ್ ಕಾಳಪ್ಪ ಆಪ್ ಪಕ್ಷಕ್ಕೆ ಹೋಗಿದ್ರು.ಮತ್ತೆ ನಾವು ಕಾಂಗ್ರೆಸ್ ನಲ್ಲಿ ಸೇವೆ ಮಾಡ್ಬೇಕು, ಭವಿಷ್ಯ ರೂಪಿಸಿಕೊಳ್ಳಬೇಕು ಪಕ್ಷಕ್ಕೆ ಮರಳಿದ್ದಾರೆ. ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪಗೆ ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತ.ಪಕ್ಷಕ್ಕೆ ಅಧಿಕೃತವಾಗಿ ದಾಖಲು ಮಾಡಿಕೊಳ್ಳುವ ಕೆಲಸ ಮಾಡ್ತೀನಿ ಎಂದರು.
ಬಹಳ ದಿನದ ನಂತರ ನಮ್ಮಗಾಂಧಿ ಭಾರತದ ಕಾರ್ಯಕ್ರಮ, ಜೈ ಭೀಮ್, ಜೈ ಗಾಂಧಿ ಕಾರ್ಯಕ್ರಮ ಬಳಿಕ ಇಲ್ಲಿ ಮಾತನಾಡಿರಲಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾವು ಸಿದ್ದಗಳನ್ನ ಮಾಡಿಕೊಳ್ಳಬೇಕು. ಕೋರ್ಟ್ ನಿಂದ ನಿರ್ದೇಶನ ಬರುವ ಹಂತದಲ್ಲಿದೆ. ಗ್ರೇಟರ್ ಬೆಂಗಳೂರು ವರದಿ ರಿಜ್ವಾನ್ ಅರ್ಷದ್ ಸಲ್ಲಿಕೆ ಮಾಡಲಿದ್ದಾರೆ.ಯಾವ ಕ್ಷಣದಲ್ಲಿ ಬೇಕಾದ್ರೂ ಚುನಾವಣೆ ಘೋಷಣೆಯಾಗಬಹುದು. ಪ್ರತಿಯೊಂದು ವಿಭಾಗವಾರು ಎಲ್ಲಾ ಚುನಾವಣೆಗೂ ಪ್ರತ್ಯೇಕವಾದ ಸಮಿತಿ ಮಾಡಲಾಗುತ್ತದೆ. ಮಾರ್ಚ್ ನಿಂದ ಪ್ರವಾಸ ಮಾಡಿ ಜವಾಬ್ದಾರಿ ಹಂಚಿಕೆ.ಅಭ್ಯರ್ಥಿ ತಯಾರಿ ವರದಿ ಸಲ್ಲಿಕೆ ಮಾಡುವ ಜವಾಬ್ದಾರಿ ಹಂಚಿಕೆ ಮಾಡ್ತೀವಿ. ಮಾರ್ಚ್ ಮೊದಲ ವಾರದಲ್ಲಿ ರಾಹುಲ್ ಗೆ ದಿನಾಂಕ ಕೊಡಲು ಮನವಿ ಮಾಡಿದ್ದೇನೆ. 100 ಕಾಂಗ್ರೆಸ್ ಕಚೇರಿ ಕಟ್ಟಲು ನಿರ್ಧಾರ ಮಾಡಿದ್ದೀವಿ. 104 ಕಾಂಗ್ರೆಸ್ ಕಚೇರಿ ಕಟ್ಟಲು ಮುಂದೆ ಬಂದಿದ್ದಾರೆ. ಕಿಮ್ಮನೆ ರತ್ನಾಕರ್, ಬಿವಿ ಶ್ರೀನಿವಾಸ್ ಭೇಟಿ ಮಾಡಿ ವರದಿ ಕೊಡಲಿದ್ದಾರೆ. ಕಾಂಗ್ರೆಸ್ ಹೆಸರಿನಲ್ಲಿ ನೋಂದಣಿ ಆಗದಿದ್ದರೆ ಪಾಯ ಹಾಕುವುದಿಲ್ಲ ಎಂದರು.
ಆನಂದ್ ರಾವ್ ಸರ್ಕಲ್ ಬಳಿ ಕಚೇರಿ ಇದೆ. ಅಲ್ಲೂ ಕಟ್ಟಡ ಕಟ್ಟುತ್ತೇವೆ, ಸಮಿತಿ ಮಾಡಿದ್ದೇವೆ. ಮಾ.10ರೊಳಗೆ ದಿನಾಂಕ ಕೊಡಲಿದ್ದಾರೆ. ಪೌಂಡೇಷನ್ ಹಾಕಲು ರಾಹುಲ್ ಬಳಿ ಮನವಿ ಮಾಡಿದ್ದೇನೆ. ಯಾರ ಕಚೇರಿಯನ್ನೂ ವೈಜ್ಞಾನಿಕ, ಬೇರೆ ಟ್ರಸ್ಟ್ ನಲ್ಲಿ ಇರಬಾರದು. ಇದು ನನಗೆ ದೆಹಲಿಯಿಂದ ಬಂದ ನಿರ್ದೇಶನ . ಗಾಂಧೀ ಕಾಂಗ್ರೆಸ್ ನಾಯಕತ್ವ ವಹಿಸಿ 100 ವರ್ಷ ಆಯ್ತು. ಕಾಂಗ್ರೆಸ್ ಪಕ್ಷ ದೊಡ್ಡ ಸಮುದ್ರದಂತೆ.ಎಲ್ಲ ನದಿಗಳು ಸಮುದ್ರ ಸೇರಿದಂತೆ ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ. ಸೇರ್ಪಡೆಯಾಗುವವರು ಇನ್ನೂ ದೊಡ್ಡ ಪಟ್ಟಿಯೇ ಇದೆ. ಸಾಕಷ್ಟು ಶಾಸಕರು ಪಟ್ಟಿಯಲ್ಲಿದ್ದಾರೆ.ಗೌಪ್ಯವಾಗಿದೆ, ಚರ್ಚೆ ಮಾಡೋಕೆ ಆಗೊಲ್ಲ ಎಂದು ತಿಳಿಸಿದ್ರು.
ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿಗಳು: ಕೆಪಿಸಿಸಿ ಕಚೇರಿಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ
ಬೆಂಗಳೂರು; ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿಗಳು ಎಂದು ಕೆಪಿಸಿಸಿ ಕಚೇರಿಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಪುತ್ರ ಚೇತನ್ ಹಾಗೂ ಆಪ್ ಮುಖಂಡ ಬ್ರಿಜೇಶ್ ಕಾಳಪ್ಪ ಕಾಂಗ್ರೆಸ್ ಸೇರ್ಪಡೆಗೊಂಡ ವೇಳೆ ಮಾತನಾಡಿದ ಅವರು ಮುಂದಿನ ಚುನಾವಣೆಗೂ ಸಿಎಂ ಬೇಕೆ ಬೇಕು ಎನ್ನುವ ಸಚಿವರುಗಳ ಹೇಳಿಕೆ ಬಗ್ಗೆ ಮಾತನಾಡಿ ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿಗಳು. ಅವರು ಎಲ್ಲಾ ಚುನಾವಣೆಗಳಿಗೂ ಬೇಕು.ಹಿ ಇಸ್ ಅವರ್ ಲೀಡರ್ ಎಂದಿದ್ದಾರೆ. ಕಾಂಗ್ರೆಸ್ ಪಕ್ಷ ಎರಡು ಬಾರಿ ಸಿಎಂ ಆಗೋ ಅವಕಾಶ ಕೊಟ್ಟಿದೆ.ದಿನ ಬೆಳಗಾದರೆ ಅವರ ಸುದ್ದಿ ಎತ್ತಿಕೊಂಡು ಅವರ ಹೆಸರು ದುರುಪಯೋಗ ಮಾಡೋದು ಬೇಡ .ಸ್ಥಳೀಯ ಚುನಾವಣೆಯಿಂದ ಹಿಡಿದು ಲೋಕಸಭಾ ಚುನಾವಣೆವರೆಗೂ ಸಿಎಂ ಸಿದ್ದರಾಮಯ್ಯ ಬೇಕು. ಹಿ ಈಸ್ ಅವರ್ ಲೀಡರ್. ಎರಡನೇ ಬಾರಿ ಸಿಎಂ ಆಗಿ ಒಳ್ಳೆ ಕೆಲಸ ಮಾಡ್ತಾ ಇದ್ದಾರೆ. ಮಾಧ್ಯಮಗಳ ಮುಂದೆ ಮಾತನಾಡಿ ಆಹಾರ ಆಗಬಾರದು.ನಮ್ಮಲ್ಲಿ ಗೊಂದಲದ ಯಾವ ಹೇಳಿಕೆಯೂ ಇಲ್ಲ.ಕಾಂಗ್ರೆಸ್ ಪಕ್ಷ ಎಲ್ಲವನ್ನು ಗಮನಿಸುತ್ತಿದೆ ಎಂದರು.
ಇದೇ ವೇಳೆ ಕುಡಿಯುವ ನೀರಿಗಾಗಿ ಪಕ್ಷಾತೀತ ಹೋರಾಟ ಅನ್ನೋ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಅವರು ಸಹಿ ಮಾಡಿಸುತ್ತೇನೆ ಎಂದು ಹೇಳಿದ್ದಾರೆ ಸಹಿ ಮಾಡಿಸಲಿ. ಒಂದೇ ದಿನದಲ್ಲಿ ಪರ್ಮಿಷನ್ ಕೊಡುತ್ತೇನೆ ಅಂದಿದ್ದರು ಕೊಡಿಸಲಿ. ಇದು ಅವರ ಹೋರಾಟ ಅಲ್ಲ ಇದು ರಾಜ್ಯದ ಹೋರಾಟ.ಮಹಾದಾಯಿ ವಿಚಾರ ನಾನು ರಿಕ್ವೆಸ್ಟ್ ಮಾಡಿದ್ದೇನೆ. ಅವರು ಅಧಿಕಾರದಲ್ಲಿ ಇದ್ದಾರೆ ನಾವು ಹೋರಾಟ ಮಾಡಬೇಕಾಗಿದೆ.ನಮಗೆ ರಾಜಕೀಯ ಪಕ್ಷಗಳು ಮಾಡೋ ಅವಶ್ಯಕತೆ ಇಲ್ಲ.ನಾವು ರಾಜಕಾರಣ ಮಾಡಲ್ಲ, ಅವರಿಗೆ ರಾಜಕಾರಣ ಮಾಡಿ ರೂಢಿ ಇದೆ. ಅದರ ಅವಶ್ಯಕತೆ ಇಲ್ಲ.ನಮಗೆ ಸಿಕ್ಕ ಅವಕಾಶದಲ್ಲಿ ಹೋರಾಟ ಮಾಡಿದ್ದೇವೆ.ನಾವು ಹೋರಾಟ ಮಾಡಿದಾಗ ಯಾವ ರೀತಿ ಟೀಕೆ ಮಾಡಿದ್ರು ಗೊತ್ತಿದೆ. ಆದರೂ ಚಿಂತೆಯಿಲ್ಲ ಅದನ್ನೆಲ್ಲಾ ಮರೆತು ರಾಜ್ಯದ ಹಿತಕ್ಕೆ ಕೆಲಸ ಮಾಡ್ತೀವಿ.ಮೇಕೆದಾಟು, ಮಹದಾಯಿ, ಅಪ್ಪರ್ ಭದ್ರ ಯಾವುದೇ ವಿಚಾರ ಇರಲಿ. ಮಾತಾಡೋವ್ರು ಒಂದು ದಿನನಾದ್ರೂ ಸಂಸತ್ ನಲ್ಲಿ ಹಣ ಕೇಳಿದ್ರಾ?.ಬಜೆಟ್ ನಲ್ಲಿ ಈ ಯೋಜನೆಗಳಿಗೆ ೫ ಸಾವಿರದ ೪೦೦ ಕೋಟಿ ಘೋಷಣೆ ಆಗಿದೆ ಅದನ್ನ ಕೊಡಿ ಅಂತ ಕೇಳಲಿಲ್ವಾ?. ನಾನು ಕುಮಾರಸ್ವಾಮಿ, ದೇವೇಗೌಡರು ಸೇರಿ ಸಂಸದರ ಬಳಿ ಇದನ್ನ ನಿರೀಕ್ಷೆ ಮಾಡಿದ್ದೆ.ಆದರೆ ಒಬ್ಬರೂ ಕೂಡ ಇದನ್ನ ಕೇಳಲಿಲ್ಲ. ಅವರು ಒಕ್ಕೊರಲಿನಿಂದ ರಾಜ್ಯದ ಹಿತ ಕಾಯ್ತಾರೆ ಅಂದುಕೊಂಡಿದ್ದೆ.ಅದರಲ್ಲಿ ವಿಫಲ ಆಗಿದ್ದಾರೆ ಅದನ್ನ ಮಾಡಲಿ ಮೊದಲು ಎಂದು ತಿರುಗೇಟು ಕೊಟ್ರು.
ಕಾವೇರಿ- ಗೋದಾವರಿ ಜೋಡಣೆ ಮಾಡಲಿ ಎಂಬ ದೇವೇಗೌಡರ ಹೇಳಿಕೆ ಪ್ರತಿಕ್ರಿಯಿಸಿ ಮಾಡಲಿ ಬಹಳ ಸಂತೋಷ. ತರಲಿ ಮೊದಲು ಯೋಜನೆ. ಏನು ಬೇಕು ನಮ್ಮಿಂದ ಸಪೋರ್ಟ್ ಕೊಡ್ತೀವಿ.ಇಲ್ಲಿಂದಲೇ ನಾವು ಸಾಷ್ಟಾಂಗ ನಮಸ್ಕಾರ ಹಾಕ್ತೀವಿ. ಬೆಂಗಳೂರು ನೀರಿಗೆ ಏನು ಬೇಕೋ ಅದನ್ನ ಮಾಡ್ತಾ ಇದ್ದಾರೆ. ಅವರ ಪಕ್ಷದ ಕಡೆಯಿಂದ ಗೊಂದಲ ಹೇಳಿಕೆ ಕೊಡಿಸ್ತಾ ಇದ್ದಾರೆ .ಡಿಸಿ ತಮ್ಮಣ್ಣ ಅವರಿಗೆ ಅಂಕಿ ಅಂಶ ಗೊತ್ತಿಲ್ಲ.ಎಷ್ಟು ಏನು ನೀರು ಲಾಸ್ ಆಗ್ತಿದೆ ಅಂತ ಗೊತ್ತಿಲ್ಲ. ಡಿಪಿಆರ್ ಮಾಡಿದ್ದಾರೆ ಅಷ್ಟೆ ನಾವು ತೀರ್ಮಾನ ಮಾಡಿಲ್ಲ.ನಾವು ಬಂದ ತಕ್ಷಣ 6 ಟಿಎಂಸಿ ನೀರು ಹುಡುಕಿ ನಾವು ಸ್ಟೋರೇಜ್ ಏನು ಕೊಡಬಹದು ಅಂತ ನೋಡಿ ಸರ್ಕಾರದ ಆರ್ಡರ್ ಮಾಡಿಸಿದ್ವಿ ಎಂದ್ರು.
ಬೆಂಗಳೂರಲ್ಲಿ ೧೫೦ ಕಿಮೀ ಕಾಮಗಾರಿ ಆಗ್ತಿದೆ. ೩೦ ವರ್ಷ ಏನೂ ಆಗಬಾರದು. ೧೫೦೦ ಕೋಟಿ ಹೂಡಿಕೆ ಮಾಡ್ತಿದ್ದೇವೆ. ಮಳೆ ಬಂದಿದೆ. ಹೀಗಾಗಿ ಲೇಟ್ ಆಗಿದೆ. ಕ್ವಾಲಿಟಿ ಮೇಂಟೇನ್ ಮಾಡ್ತಿದ್ದೀನಿ. ನನಗೂ ಅರಿವಿದೆ, ನಾನು ಚೆಕ್ ಮಾಡಿದ್ದೀನಿ. ಟೆಕ್ನಿಕಲ್ ಟೀಮ್ ಪರಿಶೀಲನೆ ಮಾಡ್ತಿದೆ ಎಂದು ಸ್ಪಷ್ಟಪಡಿಸಿದ್ರು.











