ಮನೆ ಪ್ರಸ್ತುತ ವಿದ್ಯಮಾನ ಮುಂದುವರೆದರೆ ನಾವೂ ಸರಿಯಾದ ಉತ್ತರ ಕೊಡಬೇಕಾಗುತ್ತದೆ; ಸಚಿವ ಶಿವರಾಜ್ ತಂಗಡಗಿ ಹೇಳಿಕೆ

ಮುಂದುವರೆದರೆ ನಾವೂ ಸರಿಯಾದ ಉತ್ತರ ಕೊಡಬೇಕಾಗುತ್ತದೆ; ಸಚಿವ ಶಿವರಾಜ್ ತಂಗಡಗಿ ಹೇಳಿಕೆ

0

ಬೆಂಗಳೂರು; ಮಹರಾಷ್ಟ್ರ ಪುಂಡರ ಹಾವಳಿ ವಿಚಾರಕ್ಕೆ ಸಂಬಂಧಪಟ್ಟಂತೆ ಸಚಿವ ಶಿವರಾಜ್ ತಂಗಡಗಿ ಪ್ರತಿಕ್ರಿಯಿಸಿದ್ದಾರೆ. ಈಗಾಗಲೇ ಎಚ್ಚರಿಕೆ ಕೊಡೋ ಕೆಲಸ ಆಗಿದೆ.ಇದೆಲ್ಲ ಸರಿ ಇರಲ್ಲ ಅಂತ ಹೇಳಿದ್ದೇವೆ.ಮುಂದುವರೆದರೆ ನಾವೂ ಸರಿಯಾದ ಉತ್ತರ ಕೊಡಬೇಕಾಗುತ್ತದೆ.ಈಗಾಗಲೇ ಸಿಎಂ ಗೃಹ ಸಚಿವರಿಗೂ ಹೇಳಿದ್ದೇವೆ.ಕನ್ನಡದ ವಿಚಾರಕ್ಕೆ ಬಂದರೆ ಅವರಿಗೆ ಶಿಸ್ತು ಕಲಿಸಬೇಕಾಗುತ್ತೆ.ಇಲ್ಲಿಯ ಗಾಳಿ, ನೀರು, ಅನ್ನ ತಿಂದು ಬೇರೆ  ಭಾಷೆ ಬಗ್ಗೆ ವ್ಯಾಮೋಹ ಇದ್ರೆ ಸರಿ ಇರಲ್ಲ.ಅಂತವರ ವಿರುದ್ಧ ಗೂಂಡಾ ಕೇಸ್ ಹಾಕ್ತೀವಿ.ನಾವು ಕೂಡ ಬೇರೆ ಭಾಷೆ ಪ್ರೀತಿಸುತ್ತೇವೆ ಆದರೆ ಗೂಂಡಾ ವರ್ತನೆ ಮಾಡೊದಿಲ್ಲ.ಇಂತವೆಲ್ಲಾ ಮಾಡಿದರೆ ಸರಿಯಾದ ಉತ್ತರ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ನಾಡು ನುಡಿ ಅಂಥ ಬಂದಾಗ ಯಾಕೆ ಮಾತಾಡಬಾರದು.ನಾವು ಅವರ ಜಾಗದಲ್ಲೆ ಬಂದು ಉತ್ತರ ಕೊಡ್ತೀವಿ.ನಮ್ಮ ಕಂಡಕ್ಟರ್ ಯಾಕೆ ಮರಾಠಿ ಮಾತಾಡಬೇಕು .ಅವರು ಕನ್ನಡದವರು ಕನ್ನಡನೇ ಮಾತನಾಡುತ್ತಾರೆ.ಅವರ ಮೇಲೆ ಯಾಕೆ ಪೋಕ್ಸೋ ಕಾಯ್ದೆ ಹಾಕಬೇಕು.ಹಿಂದೆ ಕರಾಳ ದಿನ ಆಚರಿಸೋದನ್ನ ಕಂಟ್ರೋಲ್ ಮಾಡಿದ್ದೇವೆ. ಮುಡಾ ಕೇಸ್ ನಲ್ಲಿ ಲೋಕಾಯುಕ್ತಕ್ಕೆ ಇಡಿ ನಿರ್ದೇಶನ ವಿಚಾರದ ಬಗ್ಗೆ ಮಾತನಾಡಿ ಸಚಿವ ಶಿವರಾಜ ತಂಗಡಗಿ ನಮ್ಮ ಸ್ವಾಯತ್ತ ಸಂಸ್ಥೆ ಬಗ್ಗೆ ನಮಗೆ ನಂಬಿಕೆ ಇದೆ.ಇನ್ನೊಂದು ತನಿಖಾ ಸಂಸ್ಥೆ ಲೋಕಾಯುಕ್ತಕ್ಕೆ ನಿರ್ದೇಶನ ನೀಡಬೇಕಿಲ್ಲ ಎಂದರು,

ಅರ್ಹರಿಗೆ ಗ್ಯಾರಂಟಿ ವಿಚಾರದ ಬಗ್ಗೆ ಮಾತನಾಡಿ ಗ್ಯಾರಂಟಿ ಯೋಜನೆಗಳು ನಮಗೆ ಹೊರೆ ಆಗಿಲ್ಲ.ಈಗಾಗಲೇ ಎರಡೂ ವರ್ಷ ಗ್ಯಾರಂಟಿ ಕೊಟ್ಟಿದ್ದೇವೆ..ಮುಂದಿನ ಮೂರು ವರ್ಷ ಕೂಡ ಗ್ಯಾರಂಟಿ ಕೊಡ್ತೇವೆ.ಮುಂದೆ ನಮ್ಮ ಸರ್ಕಾರವೇ ಬರುತ್ತೆ, ಗ್ಯಾರಂಟಿಗಳು ಮುಂದುವರಿಯುತ್ತವೆ.ನಮ್ಮ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆಯಿಲ್ಲ ಎಂದ್ರು.ಮೂಡ ತನಿಖೆಗೆ ಲೋಕಾಯುಕ್ತಕ್ಕೆ ಇಡಿ ನಿರ್ದೇಶನ ವಿಚಾರದ ಬಗ್ಗೆ ಮಾತನಾಡಿ ಯಾವುದೇ ತನಿಖೆಗೆ ಇನ್ನೊಂದು ತನಿಖಾ ಸಂಸ್ಥೆ ಈ ರೀತಿ ಮಾಡಿ ಅಂತ ಹೇಳುವ ಅವಶ್ಯಕತೆ ಇಲ್ಲ.ಲೋಕಾಯುಕ್ತ ಬಹಳ ಸಮರ್ಥವಾಗಿದೆ ಅದು ತನ್ನ ಕೆಲಸ ತಾನು ಮಾಡುತ್ತಿದೆ.ಯಾರು ಲೋಕಾಯುಕ್ತ ತನಿಕೆಗೆ ಪ್ರಭಾವ ಬೀರಿಲ್ಲ.ಅವರು ನೇರವಾಗಿ ಮುಖ್ಯಮಂತ್ರಿಗಳಿಗೂ ತನಿಖೆ ಮಾಡಿದ್ದಾರೆ .ಅವರ ಪತ್ನಿಯನ್ನು ತನಿಖೆ ಮಾಡಿದ್ದಾರೆ .ಏನಿದೆ ಅದನ್ನು ಕರೆಕ್ಟಾಗಿ ಕೊಡ್ತಾರೆ .ನಮ್ಮ ಸಂಸ್ಥೆಯ ಬಗ್ಗೆ ನಮಗೆ ಗೌರವ ಇರಲಿ.ಸಂಸದ ಕುಮಾರ್ ನಾಯಕ್ ಕರ್ತವ್ಯ ಲೋಪದ ಬಗ್ಗೆ ತನಿಖೆಗೆ ಶಿಫಾರಸು ಮಾಡಿರುವ ವಿಚಾರದ ಬಗ್ಗೆ ಮಾತನಾಡಿ ಅವರ ಕರ್ತವ್ಯ ಲೋಪ ಆಗಿದ್ರೆ ಕ್ರಮ ವಹಿಸಲಿ .ಕಾನೂನು ಬದ್ಧವಾಗಿ ಏನೋ ಕ್ರಮ ವಹಿಸಬೇಕು ಮಾಡಲಿ.ಅವರ ಕರ್ತವ್ಯ ಲೋಪ ಆಗಿದೆ ಅನ್ನೋದ್ರ ಬಗ್ಗೆ ನಾನು ನೋಡಿಲ್ಲ .ಆ ರೀತಿ ಆಗಿದ್ದರೆ ಕ್ರಮ ವಹಿಸುವ ಕೆಲಸ ಮಾಡುತ್ತಾರೆ ಎಂದಿದ್ದಾರೆ.