ಮನೆ Latest News ಕ್ಯಾನ್ಸರ್ ಚಿಕಿತ್ಸೆಗಾಗಿ ಅಮೇರಿಕಾಗೆ ತೆರಳಿದ ನಟ ಶಿವರಾಜ್ ಕುಮಾರ್ ; ಕುಟುಂಬದವರನ್ನು ನೋಡಿ ಭಾವುಕರಾದ ಶಿವಣ್ಣ

ಕ್ಯಾನ್ಸರ್ ಚಿಕಿತ್ಸೆಗಾಗಿ ಅಮೇರಿಕಾಗೆ ತೆರಳಿದ ನಟ ಶಿವರಾಜ್ ಕುಮಾರ್ ; ಕುಟುಂಬದವರನ್ನು ನೋಡಿ ಭಾವುಕರಾದ ಶಿವಣ್ಣ

0

ಬೆಂಗಳೂರು: ಕಾನ್ಯರ್ ನಿಂದ ಬಳಲುತ್ತಿರುವ ನಟ ಶಿವರಾಜ್ ಕುಮಾರ್ ಅವರು ಇಂದು ಚಿಕಿತ್ಸೆಗಾಗಿ ಅಮೇರಿಕಾಗೆ ತೆರಳಿದ್ರು. ಈ ವೇಳೆ ಅವರನ್ನು ಬೀಳ್ಕೊಡಲು ಬಂದ ಕುಟುಂಬದವರನ್ನು ನೋಡಿ ಭಾವುಕರಾದ್ರು.

ಇನ್ನು ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶಿವರಾಜ್ ಎಲ್ಲಾ ಚೆಕ್ ಅಪ್ ಮಾಡಿಸಲಾಗಿದೆ. ಎಲ್ಲವೂ ಸರಿಯಾಗಿದೆ. ಒಂದಷ್ಟು ಆತಂಕ ಅನ್ನೋದು ಇರುತ್ತೆ. ಹೀಗಾಗಿ ಫ್ಯಾಮಿಲಿಯವರು, ಫ್ರೆಂಡ್ಸ್ ಬಂದು ಧೈರ್ಯ ಹೇಳ್ತಿದ್ದಾರೆ. 24ನೇ ತಾರೀಖು ಸರ್ಜರಿ ಆಗುತ್ತೆ. ಇಷ್ಟು ದಿನಗಳಾಗಿರೋದ್ರಿಂದ ಒಂದಷ್ಟು ಆತಂಕ ಇರುತ್ತೆ ಎಂದಿದ್ದಾರೆ.

ಮುರುಗೇಶ್ ಎಂಬ ಡಾಕ್ಟರ್ ಚಿಕಿತ್ಸೆ ನೀಡ್ತಾರೆ. ಆರಾಮಾಗಿ ಬನ್ನಿ ಸಾರ್.. ಭಯ ಪಡಬೇಕಿಲ್ಲ ಅಂತಾ ಹೇಳಿದ್ರು. 25ಗೆ ಫ್ಲೈಟ್ ಹತ್ತಿ 26ಗೆ ನಾನು ಇಲ್ಲಿರ್ತೀನಿ. ಜನವರಿ ಫಸ್ಟ್ ಅನ್ನು ಮಿಸ್ ಮಾಡ್ಕೋತಿನಿ. ಎಲ್ಲರಿಗೂ 2025 ಒಳ್ಳೆಯದನ್ನು ಮಾಡಲಿ. ಸುದೀಪ್ ಮ್ಯಾಕ್ಸ್ ಸಿನಿಮಾಗೆ ಒಳ್ಳೆಯದಾಗಲಿ. ಇಯರ್ ಎಂಡ್ ಅಲ್ಲಿ ರಿಲೀಸ್ ಆಗ್ತಿರುವ ಎಲ್ಲಾ ಸಿನಿಮಾಗಳಿಗೂ ಒಳ್ಳೆಯದಾಗಲಿ. ಯಾರೂ ಆತಂಕ ಪಡಬೇಕಿಲ್ಲ.. ಎಲ್ಲಾ ವೈದ್ಯರೂ ಧೈರ್ಯ ತುಂಬಿದ್ದಾರೆ. ಅಪರೇಷನ್ ಮಾಡುವ ಡಾ.ಮುರುಗೇಶ್ ಜೊತೆ ಮಾತನಾಡಿದ್ದೀನಿ. ಅಮೇರಿಕಾದ MSK ಕ್ಯಾನ್ಸರ್ ಆಸ್ಪತ್ರೆಯಲ್ಲಿ ಅಪರೇಷನ್ ಆಗುತ್ತೆ. ನ್ಯೂರಾಲಜಿಸ್ಟ್ ಕೂಡ ಒಂದಷ್ಟು ಸಲಹೆ ನೀಡಿದ್ದಾರೆ. ಬ್ಲಡ್ ರಿಪೋರ್ಟ್ ಸೇರಿ ಎಲ್ಲಾ ರಿಪೋರ್ಟ್ ಗಳು ಪಾಸಿಟಿವ್ ಆಗಿಯೇ ಬಂದಿವೆ. ಅಭಿಮಾನಿಗಳು ಬಂದಿದಾರೆ.. ಇಂತಹ ಟೈಮಲ್ಲಿ ನಮಗೆ ಧೈರ್ಯ ಹೇಳ್ತಿದ್ದಾರೆ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.

ಇನ್ನು ಅಮೇರಿಕಾ ತೆರಳುವ ಮುನ್ನ ನಟ ಕಿಚ್ಚ ಸುದೀಪ್ ಅವರು ಶಿವರಾಜ್ ಕುಮಾರ್ ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ರು. ಶಿವಣ್ಣನಿಗೆ ಧೈರ್ಯ ಕೂಡ ಹೇಳಿದ್ರು.

ಸರ್ಜರಿ ಇಲ್ಲದೇ ಆಸ್ಪತ್ರೆಯಿಂದ  ಡಿಸ್ಚಾರ್ಜ್ ಆದ ಡಿ ಬಾಸ್ ದರ್ಶನ್; ಹಾಗಾದ್ರೆ ಇಷ್ಟು ದಿನ ಮಾಡಿದ್ದು ಬೆನ್ನುನೋವಿನ ನಾಟಕನಾ?

ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿದ್ದ ನಟ ದರ್ಶನ್ ಅವರು ಬೆನ್ನುನೋವಿನ ಕಾರಣಕ್ಕೆ ಮಧ್ಯಂತರ ಜಾಮೀನು ಪಡೆದು ಬೆಂಗಳೂರಿನ ಕೆಂಗೇರಿಯ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಡಿಸೆಂಬರ್ 13 ರಂದು ನಟ ದರ್ಶನ್ ಅವರಿಗೆ ಹೈಕೋರ್ಟ್ ನಿಂದ ಷರತ್ತು ಬದ್ಧ ಜಾಮೀನು ಮಂಜೂರಾಗಿತ್ತು. ಅದರ ಬೆನ್ನಲ್ಲೇ 5 ದಿನಗಳ ಬಳಿಕ ಅಂದ್ರೆ ಇಂದು ಬೆಳಗ್ಗೆಯೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.ಅವರ ಪುತ್ರ ವಿನೀಶ್, ಅಕ್ಕನ ಮಗ ಚಂದನ್ ಆಸ್ಪತ್ರೆಯಿಂದ ದರ್ಶನ್ ಅವರನ್ನು ಮನೆಗೆ ಕರೆದೊಯ್ದರು.

ಇನ್ನು ನಟ ದರ್ಶನ್ ಅವರಿಗೆ ತೀವ್ರವಾದ ಬೆನ್ನು ನೋವಿದೆ. ಅವರಿಗೆ ಸರ್ಜರಿ ಆಗ್ಬೇಕು ಎಂದು ಹೈಕೋರ್ಟ್ ನಿಂದ ಮಧ್ಯಂತರ ಬೇಲ್ ಅನ್ನು ಪಡೆದುಕೊಂಡಿದ್ದರು. ಅದರಂತೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ 6 ವಾರಗಳ ಕಾಲ ಆಸ್ಪತ್ರೆಯಲ್ಲಿದ್ದರೂ ದರ್ಶನ್ ಸರ್ಜರಿ ಮಾಡಿಸಿಕೊಂಡಿಲ್ಲ. ಹಾಗಾದ್ರೆ ಇಷ್ಟು ದಿನ ದರ್ಶನ್ ಮಾಡಿದ್ದು ನಾಟಕನಾ ಅನ್ನೋ ಅನುಮಾನ ವ್ಯಕ್ತವಾಗ್ತಿದೆ. ಸರ್ಜರಿ ಇಲ್ಲದೇ ಇವತ್ತು ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಜಸ್ಟ್ ಬೇಲ್ ಗೋಸ್ಕರ ದರ್ಶನ್ ಇಷ್ಟೆಲ್ಲಾ ಹಾಗಾದ್ರೆ ಮಾಡಿದ್ರಾ ಅನ್ನೋ ಪ್ರಶಅನೆ ಜನರನ್ನು ಕಾಡ್ತಿದೆ.

ಇನ್ನು ನಿನ್ನೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಳೆದ 6 ತಿಂಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ  ಪ್ರಕರಣದ ಎ1 ಆರೋಪಿ ಪವಿತ್ರ ಗೌಡ ಜೈಲಿನಿಂದ ರಿಲೀಸ್ ಆದ್ರು.  ಡಿಸೆಂಬರ್ 13 ರಂದು ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಆದರೆ ಶುಕ್ರವಾರ ಜಾಮೀನು ಮಂಜೂರಾಗಿದ್ರು ಪವಿತ್ರಗೌಡ ಇಂದು ಬಿಡುಗಡೆ ಭಾಗ್ಯ ಸಿಕ್ಕಿರಲಿಲ್ಲ. ಜಾಮೀನು ಸಿಕ್ರೂ ಕ ನಾಲ್ಕು ದಿನಗಳಿಂದ ಪವಿತ್ರ ಗೌಡ ಜೈಲಿನಲ್ಲೇ ಕಳೆಯುವಂತಾಗಿತ್ತು.

ಅಂದ್ಹಾಗೆ ಡಿಸೆಂಬರ್ 16 ರಂದು ಪವಿತ್ರ ಗೌಡ ಅವರಿಗೆ ಷ್ಯೂರಿಟಿ ಸಿಕ್ಕಿತ್ತು. ಆದರೆ ಕೋರ್ಡ್ ಆರ್ಡರ್ ಕಾಪಿ ಜೈಲಾಧಿಕಾರಿಗಳಿಗೆ ತಡವಾಗಿ ಸಿಕ್ಕಿದ್ರಿಂದ ಪವಿತ್ರ ಮೊನ್ನೆ ರಿಲೀಸ್ ಆಗಿರಲಿಲ್ಲ. ನಿನ್ನೆ ಬೆಳಗ್ಗೆ 9 ಗಂಟೆ ಸುಮಾರಿಗೆ ಜೈಲಿಂದ ರಿಲೀಸ್ ಆದ್ರು.

ಜೈಲಿನಿಂದ ಹೊರಗೆ ಬರುತ್ತಲೇ ಪವಿತ್ರ ಗೌಡ ಕ್ಯಾಮರಾ ನೋಡಿ ಸ್ಮೈಲ್ ಮಾಡಿದ್ರು. ಯಾವುದೇ ಪಶ್ಚಾತಾಪವಿಲ್ಲದೇ ಪವಿತ್ರ ಗೌಡ ಆರಾಮಾವಾಗೇ ಸ್ಟೈಲ್ ಆಗಿ ಹೊರ ಬಂದ್ರು. ಅಲ್ಲಿಂದ ನೇರವಾಗಿ ತಲಘಟ್ಟಪುರದಲ್ಲಿರುವ ವಜ್ರ ಮುನೇಶ್ವರ ದೇಗುಲಕ್ಕೆ ತೆರಳಿದ ಪವಿತ್ರ ಅಲ್ಲಿ ಪುಣ್ಯ ಸ್ನಾನ ಮಾಾಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ರು. ಈ ವೇಳೆ ಪವಿತ್ರ ತಾಯಿ ಭಾಗ್ಯಮ್ಮ ದರ್ಶನ್ ಅವರ ಹೆಸರಲ್ಲಿ ಅರ್ಚನೆ ಮಾಡಿದ್ದು ಎಲ್ಲರ ಅಚ್ಚರಿಗೆ ಕಾರಣವಾಯಿತು.