ಮನೆ Latest News ಮೂಡಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಗಂಭೀರ ಆರೋಪ‌ ವಿಚಾರ: ನಾನು ನಿನ್ನೆಯ ಕಮಿಷನರ್ ಜೊತೆ ಮಾತನಾಡಿ...

ಮೂಡಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಗಂಭೀರ ಆರೋಪ‌ ವಿಚಾರ: ನಾನು ನಿನ್ನೆಯ ಕಮಿಷನರ್ ಜೊತೆ ಮಾತನಾಡಿ ವರದಿ ಕೇಳಿದ್ದೇನೆ ಎಂದ ಪರಮೇಶ್ವರ್

0

ಬೆಂಗಳೂರು; ಮೂಡಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಗಂಭೀರ ಆರೋಪ‌ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ ಜಿ ಪರಮೇಶ್ವರ್ ನಾನು ನಿನ್ನೆಯ ಕಮಿಷನರ್ ಜೊತೆ ಮಾತನಾಡಿ ವರದಿ ಕೇಳಿದ್ದೇನೆ ಎಂದಿದ್ದಾರೆ.

ವರದಿ ಬಂದ‌ ಮೇಲೆ ಏನು ಆಕ್ಷನ್ ತೆಗೆದುಕೊಳ್ಳಬೇಕು ತೆಗೆದುಕೊಳ್ಳುತ್ತೇನೆ. ಮಹಿಳೆ ಏನು ಆರೋಪ ಮಾಡಿದ್ದಾರೆ. ಇವರು ಯಾವ ರೀತಿ ನಡವಳಿಕೆ ತೋರಿದ್ದಾರೆ. ಇದೆಲ್ಲದರ ಬಗ್ಗೆ ವರದಿ ಕೊಡಿ ಅಂತ ಕೇಳಿದ್ದೇನೆ. ನಾನೇ ನಿನ್ನೆ ಮಂಗಳೂರು ಕಮಿಷನರ್‌ಗೆ ಮಾತನಾಡಿ ವರದಿ ಕೇಳಿದ್ದೇನೆ. ಅವರು ತಕ್ಷಣ ವರದಿ ಕಳಿಸುತ್ತಾರೆ .ಕಾನೂನು ಸುವ್ಯವಸ್ಥೆ ಎಡಿಜಿಪಿಗೆ ಸೂಚನೆ ಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ.

50 ಲಕ್ಷ ಕೊಟ್ಟು ಪೋಸ್ಟಿಂಗ್ ಹಾಕಿಸಿಕೊಂಡಿದ್ದೇನೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಎರಡು ರೀತಿಯ ವಿಚಾರ ಇದೆ. ಅಷ್ಟು ಹಣ ಕೊಟ್ಟು ಪೋಸ್ಟಿಂಗ್ ಬಂದಿದ್ದಾರೆ ಅಂತ ಮಹಿಳೆ ಹೇಳಿದ್ದಾರಾ?. ಅಥವಾ ಇವರೇ ಹೇಳಿಕೊಂಡಿದ್ದಾರಾ ಅನ್ನೋದ್ರ ಬಗ್ಗೆ ಪರಿಶೀಲನೆ ಮಾಡಿ ವರದಿ ಕೊಡಿ ಅಂತ ಹೇಳಿದ್ದೇನೆ. ವರದಿ ಬಂದ ಕೂಡಲೇ ಕ್ರಮ ಕೈಗೊಳ್ತೇನೆ ಎಂದು ಹೇಳಿದ್ದಾರೆ.

ಕೆಎಸ್‌ಸಿಎ ಜೊತೆಗಿನ ಸಭೆ ವಿಚಾರದ ಬಗ್ಗೆ ಮಾತನಾಡಿದ ಅವರು ಜಸ್ಟೀಸ್ ಕುನ್ಹಾ ವರದಿಯ ಶಿಫಾರಸು ಪ್ರಕಾರ ಪೂರ್ಣಗೊಳಿಸಲು ಹೇಳಿದ್ವಿ. ಅದನ್ನ ಪರಿಶೀಲಿಸಲು ಮಹೇಶ್ವರ್ ರಾವ್ ನೇತೃತ್ವದಲ್ಲಿ ಕಮಿಟಿ ಮಾಡಿದ್ವಿ.ಕಮಿಟಿಯವರು ಎರಡು ಮೂರು ಬಾರಿ ವಿಸಿಟ್ ಮಾಡಿದ್ರು. ನಾವು ಹಾಕಿದ್ದ ಷರತ್ತನ್ನ ಪೂರ್ಣಗೊಳಿಸಿದ್ದಾರಾ ಅಂತ ನೋಡಿದ್ವಿ.ಮೊನ್ನೆ ಅವರು ಎಲ್ಲವೂ ಪರಿಶೀಲಿಸಿ ವರದಿ ಕೊಟ್ಟಿದ್ದಾರೆ. ವರದಿ ಆಧಾರದ ಮೇಲೆ ನೆನ್ನೆ ಕೆಎಸ್‌ಸಿಎ ಜೊತೆ ಸಭೆ ಮಾಡಿದ್ವಿ.ಎಲ್ಲವನ್ನೂ ಪರಿಶೀಲನೆ ಮಾಡಿದ್ದೇವೆ.ಒಂದಷ್ಟು ಮೌಖಿಕ ಸೂಚನೆಗಳನ್ನು ಕೊಟ್ಟಿದ್ದೇವೆ. ಅವರು ಕೂಡ ಒಪ್ಪಿಕೊಂಡಿದ್ದಾರೆ. ಮ್ಯಾಚ್ ಗೆ ಯಾವುದೇ ರೀತಿ ತೊಂದರೆ ಆಗದ ರೀತಿ ಮಾಡಬೇಕು ಅಂತ ಹೇಳಿದ್ದೇವೆ. ಪಂದ್ಯ ನಡೆಯಲು ಏನೇನಾಗಬೇಕು ಅನ್ನೋದ್ರ ಬಗ್ಗೆ ಸೂಚನೆ ಕೊಟ್ಟಿದ್ದೇವೆ ಎಂದು ಅವರು ತಿಳಿಸಿದ್ದಾರೆ.