ಮನೆ Latest News ಇಂದು ನಟ ದರ್ಶನ್ ಜಾಮೀನು ಭವಿಷ್ಯ ನಿರ್ಧಾರ; ಡಿ ಬಾಸ್ ಅನ್ನು ಹೊರಗಡೆ ತರ್ತಾರ...

ಇಂದು ನಟ ದರ್ಶನ್ ಜಾಮೀನು ಭವಿಷ್ಯ ನಿರ್ಧಾರ; ಡಿ ಬಾಸ್ ಅನ್ನು ಹೊರಗಡೆ ತರ್ತಾರ ಹಿರಿಯ ವಕೀಲ ಸಿ ವಿ ನಾಗೇಶ್

0
darshan bail

ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರ ಜಾಮೀನು ಅರ್ಜಿಯ ವಿಚಾರಣೆ ನಿನ್ನೆ 57ನೇ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ನಡೆಯಿತು.

ಈ ವೇಳೆ ದರ್ಶನ್  ಅವರ ಪರವಾಗಿ ಇದೇ ಮೊದಲ ಬಾರಿಗೆ ಹಿರಿಯ ವಕೀಲ  ಸಿ ವಿ ನಾಗೇಶ್ ಅವರು ವಾದವನ್ನು ಮಂಡಿಸಿದರು. ತಮ್ಮ ವಾದದುದ್ದಕ್ಕೂ ಸಿ ವಿ ನಾಗೇಶ್ ಅವರು ತನಿಖೆಯಲ್ಲಿ ಲೋಪದೋಷಗಳನ್ನು ಎತ್ತಿ ಹಿಡಿದರು.

ದರ್ಶನ್‌ ಪರ ವಾದ ಮಂಡಿಸಿದ ಹಿರಿಯ ಕ್ರಿಮಿನಲ್ ಲಾಯರ್ ಸಿ  ವಿ  ನಾಗೇಶ್ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಅತ್ಯಂತ ಕೆಟ್ಟ ತನಿಖೆ. ಈ ಪ್ರಕರಣದಲ್ಲಿ ದರ್ಶನ್ ಅವರನ್ನು ಆರೋಪಿಯನ್ನಾಗಿ ಮಾಡಬೇಕು ಎಂದು ಹಲವು ಸಾಕ್ಷ್ಯಗಳನ್ನು ಪೊಲೀಸರೇ ಸೃಷ್ಟಿ ಮಾಡಿದ್ದಾರೆ ಎಂದು ಸಿ ವಿ ನಾಗೇಶ್ ಹೇಳಿದ್ರು.

ಇನ್ನು ಘಟನೆ ನಡೆದ ದಿನ ತಾವು ಧರಿಸಿದ್ದ ವಸ್ತುಗಳನ್ನು ನಾನು ಬೇಕಾದರೆ ತೋರಿಸುತ್ತೇನೆ ಎಂದು ದರ್ಶನ್ ಹೇಳಿದ್ದರು.ಆದರೆ ಪೊಲೀಸರು ಘಟನೆ ನಡೆದ ದಿನ ಡಿ ಬಾಸ್ ದರ್ಶನ್ ಜೀನ್ಸ್ ಪ್ಯಾಂಟ್, ಟೀ ಶರ್ಟ್ ಮತ್ತು ಶೂ ಹಾಕಿದ್ದರು ಎಂದು ದಾಖಲಿಸಿದ್ದಾರೆ. ಆದರೆ ಅಸಲಿಗೆ ಅಸಲಿ ವಿಚಾರ ಅಂದ್ರೆ  ದರ್ಶನ್ ಕೃತ್ಯ ನಡೆದ ದಿನ ಶೂ ಬದಲಿಗೆ ಚಪ್ಪಲಿ ಧರಿಸಿದ್ದರು ಎಂದಿದ್ದಾರೆ. ಅಷ್ಟು ಮಾತ್ರವಲ್ಲದೆ ಪಂಚನಾಮೆಯಲ್ಲೂ ಇದನ್ನು ಉಲ್ಲೇಖ ಮಾಡಿದ್ದಾರೆ ಎಂದು ತಿಳಿಸಿದ್ರು.

ಇಲ್ಲಿ ಪೊಲೀಸರು ತಮಗೆ ಬೇಕಾದ  ಎಲ್ಲ ಸಾಕ್ಷಿಗಳನ್ನು ಸೃಷ್ಟಿ ಮಾಡಿದ್ದಾರೆ. ಮರದ ಕೊಂಬೆ, ಹಗ್ಗದ ತುಂಡು ಇದನ್ನೆಲ್ಲಾ ಜೂನ್ 12 ರಂದು ವಶಕ್ಕೆ ಪಡೆದಿರುವುದಾಗಿ ಪೊಲೀಸರು ಹೇಳಿಕೊಂಡಿದ್ದಾರೆ ಆದರೆ ಜೂನ್ 9 ರಂದೇ ಇದೆಲ್ಲ ಪೋಲೀಸರ ವಶದಲ್ಲಿತ್ತು ಎಂದು ವಕೀಲ ನಾಗೇಶ್ ವಾದ ಮಂಡಿಸಿದ್ದಾರೆ.

ಜೂನ್ 12ಕ್ಕೆ  ದರ್ಶನ್ ಅವರು ರೇಣುಕಾಸ್ವಾಮಿ ಕೊಲೆಯಾದ ದಿನ ಧರಿಸಿದ್ದ ಬಟ್ಟೆಯನ್ನು ಪೊಲೀಸರು ವಶಕ್ಕೆ ಪಡಿಸಿಕೊಂಡಿರುವುದಾಗಿ ಹೇಳಿದ್ದಾರೆ. ಇಲ್ಲಿರುವ ಪೊಲೀಸರು ವಶ ಪಡೆದ ಬಟ್ಟೆಯನ್ನು ಒಂಬತ್ತನೇ ತಾರೀಖಿನಂದೇ ಒಗೆಯಲಾಗಿತ್ತು. ಅದೂ ಕೂಡ ಸರ್ಫ್ ಪೌಡರ್ ಹಾಕಿ ಒಗೆಯಲಾಗಿತ್ತು ಸರ್ಫ್ ಪೌಡರ್ ಹಾಕಿ ಒಗೆದ ಬಟ್ಟೆಗಳಲ್ಲಿ ರಕ್ತದ ಕಲೆ ಇರಲು ಹೇಗೆ ಸಾಧ್ಯ ಎಂದು ವಕೀಲರು ಮಾಡಿದ್ದಾರೆ. ಇನ್ನು ವಾದ ಆಲಿಸಿದ ನ್ಯಾಯಾಧೀಶರು ಇದು ಮಧ್ನಾಹ್ನ 12 ಗೆ ಮುಂದೂಡಿಕೆ ಮಾಡಿದ್ದಾರೆ. ಸದ್ಯ ದರ್ಶನ್ ಪರವಾಗಿ ಹಿರಿಯ ವಕೀಲ ಸಿ ವಿ ನಾಗೇಶ್ ಅವರೇ ವಾದ ಮಂಡಿಸಿಕರೋದರಿಂದ ಇದು ಬಹುತೇಕ ದರ್ಶನ್ ಗೆ ಜಾಮೀನು ಸಿಗುತ್ತೆ ಎನ್ನಲಾಗಿದೆ.