ಬಾಗಲಕೋಟೆ; ಸತೀಶ್ ಅಣ್ಣ ನೀ ಶಸ್ತ್ರ ತ್ಯಾಗ ಮಾಡಬೇಡ, ಇದೇ ಡಿಸೆಂಬರ್ ನಲ್ಲಿ ಮುಖ್ಯಮಂತ್ರಿ ಆಗಬೇಕು ಎಂದು ಮೊದಲ ಹುತಾತ್ಮ ವೀರ ಜಡಗನ್ನ ಬಾಲಣ್ಣರ ಕಂಚಿನ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಚಿವರನ್ನು ಬಿಜೆಪಿ ಮಾಜಿ ಸಚಿವ ರಾಜು ಗೌಡ ಹಾಡಿ ಹೊಗಳಿದ್ದಾರೆ.
ಮುಧೋಳದಲ್ಲಿ ನಡೆದ ವೀರ ಜಡಗಣ್ಣ ಬಾಲಣ್ಣ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸತೀಶ್ ಅಣ್ಣ ನಿ ಶಸ್ತ್ರ ತ್ಯಾಗ ಮಾಡಬೇಡ, ಇದೇ ಡಿಸೆಂಬರ್ ನಲ್ಲಿ ಮುಖ್ಯಮಂತ್ರಿ ಆಗಬೇಕು . ಸಿಎಂ ರೇಸ್ ನಿಂದ ಹಿಂದೆ ಸರಿಯದಂತೆ ಬಿಜೆಪಿ ಮಾಜಿ ಸಚಿವ ರಾಜುಗೌಡ ನಾಯಕ ಬಹಿರಂಗ ಸಲಹೆ ಕೊಟ್ಟಿದ್ದಾರೆ.
ಬಿಜೆಪಿಯ ಮಾಜಿ ಸಚಿವ ರಾಜುಗೌಡ ಸಚಿವ ಸತೀಶ್ ಜಾರಕಿಹೊಳಿಯನ್ನ ಹಾಡಿ ಹೊಗಳಿದ್ದಾರೆ. ಸತೀಶ್ ಜಾರಕಿಹೊಳಿಯನ್ನ ಸ್ವತಂತ್ರ ವೀರ ಯೋಧ ಜಡಗಣ್ಣ ಬಾಲಣ್ಣಗೆ ರಾಜುಗೌಡ ಹೋಲಿಸಿದ್ದಾರೆ. ನಮ್ಮ ಸಮಾಜಕ್ಕೆ ಸತೀಶಣ್ಣ (ಸತೀಶ್ ಜಾರಕಿಹೊಳಿ) ಜಡಗಣ್ಣ ಬಾಲಣ್ಣ ಇದ್ದಂತೆ. ಮಾತು ಕಡಿಮೆ ಆದ್ರೆ ಪ್ಲಾನ್ ಹಾಕಿದ್ರೆ ಕರೆಕ್ಟ್ ಏಟು ಹಾಕ್ತಾನೆ ನಮ್ಮಣ್ಣ. ವೀರ ಯೋಧ ಜಡಗಣ್ಣ ಬಾಲಣ್ಣ ಅವ್ರು ಬ್ರಿಟೀಶರ ಎದುರು ಶಸ್ತ್ರತ್ಯಾಗ ಮಾಡಿರಲಿಲ್ಲ. ನೀನು ಶಸತ್ರತ್ಯಾಗ ಮಾಡಬ್ಯಾಡ.ಹಾಗೆ ನಿಮ್ಮ ಬಾಯಲ್ಲೂ ಏನೋ ಕೇಳ್ತಿದ್ದೇವೆ. ಈ ಬಾರಿ ನಾನು ಮುಖ್ಯಮಂತ್ರಿ ಅಭಿಲಾಷೆ ಇಲ್ಲ, ಮುಂದಿನ ನಸಾರಿ ಅಂತಿದ್ದೀಯಾ. ಅದೆಲ್ಲ ಬೇಡ ಇದೇ ಡಿಸೆಂಬರ್ ನಲ್ಲಿ ನೀ ಮುಖ್ಯಮಂತ್ರಿ ಆಗು ಎಂದಿದ್ದಾರೆ.
ನಿಮ್ಮನ್ನ ನಾವು ಮುಖ್ಯಮಂತ್ರಿ ಆಗಿ ನೋಡಬೇಕೆಂಬ ಆಸೆ ನಮ್ದು. ಮುಂದಿನ ಸಿಎಂ ಸತೀಶಣ್ಣನೇ ಆಗ್ಲೀ ಎಂದು ರಾಜುಗೌಡ ಹೇಳಿದ್ದಾರೆ. ನಾವು ನಿಮ್ಮ ರಕ್ತವನ್ನೇ ಹಂಚಿಕೊಂಡು ಹುಟ್ಟೀವಿ, ನಾವೇನು ಹಗುರಿಲ್ಲ ಸುರಪುರ ಬ್ಯಾಡ್ರು ಎಂದು ರಾಜುಗೌಡ ಹೇಳಿದ್ದಾರೆ. ಹಿಂದಿನ ದಿನದಲ್ಲಿ ಬ್ರಿಟೀಷರನ್ನೂ ಬಿಟ್ಟಿಲ್ಲ, ಔರಂಗಜೇಬನ್ನೂ ಬಿಟ್ಟಿಲ್ಲ, 2028ಕ್ಕೆ ಸಿಎಂ ಸ್ಥಾನದ ಬಗ್ಗೆ ಆಲೋಚನೆ ಎಂಬ ಸತೀಶ್ ಮಾತಿಗೆ ರಾಜುಗೌಡ ಕೌಂಟರ್ ಕೊಟ್ಟಿದ್ದಾರೆ.
2028ರ ವರೆಗೆ ಕಾಯೋಕೆ ಆಗಲ್ಲ, ಇದೇ ನವೆಂಬರ್ ನಲ್ಲಿ ಸಿಎಂ ಆಗು. ಶಸ್ತ್ರತ್ಯಾಗ ಮಾಡಬೇಡ, ಇದೇ ಡಿಸೆಂಬರ್ ನಲ್ಲಿ ನೀವು ಸಿಎಂ ಆದ್ರೆ ನಮ್ಮ ಆಸೆ ಇಡೇರುತ್ತೆ ಎಂದು ಪರೋಕ್ಷವಾಗಿ ಡಿಸಿಎಂ ಡಿಕೆಶಿ ಸಿಎಂ ಆಸೆಗೆ ರಾಜುಗೌಡ ಕೌಂಟರ್ ಕೊಟ್ಟಿದ್ದಾರೆ.
2028ಕ್ಕೆ (ಕಾಂಗ್ರೆಸ್) ನೀವು ಬರಲ್ಲ , ಮತ್ತೆ ನಾವು (ಬಿಜೆಪಿ) ಬರ್ತೇವೆ, ನಿಮಗೆ ಬಿಟ್ಟುಕೊಡಲ್ಲ. ಈಗ ಆದ್ರೆ ನಮ್ಮ ಆಸೆ ಇಡೇರುತ್ತೆ, ನಿಮ್ಮ ಆಸೆನೂ ಇಡೇರುತ್ತೆ ಎಂದ ರಾಜುಗೌಡ ಇದೇ ವೇಳೆ ಹೇಳಿದ್ದಾರೆ. ಮುಧೋಳ ನಗರದಲ್ಲಿ ಆಯೋಜಿಸಿದ್ದ ಜಡಗಣ್ಣ ಬಾಲಣ್ಣ ಕಂಚಿನ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಇಂತಹದ್ದೊಂದು ಅಚ್ಚರಿಯ ಹೇಳಿಕೆಯನ್ನು ರಾಜುಗೌಡ ನೀಡಿದ್ದು, ಇದು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ.











