ಮನೆ Latest News ನನ್ನ ಜೊತಗೆ ಹೈಕಮಾಂಡ್ ನಾಯಕರು ಯಾರು ಮಾತನಾಡಿಲ್ಲ: ಸತೀಶ್ ಜಾರಕಿಹೊಳಿ‌ ಹೇಳಿಕೆ

ನನ್ನ ಜೊತಗೆ ಹೈಕಮಾಂಡ್ ನಾಯಕರು ಯಾರು ಮಾತನಾಡಿಲ್ಲ: ಸತೀಶ್ ಜಾರಕಿಹೊಳಿ‌ ಹೇಳಿಕೆ

0

ಬೆಂಗಳೂರು: ನನ್ನ ಜೊತಗೆ ಹೈಕಮಾಂಡ್ ನಾಯಕರು ಯಾರು ಮಾತನಾಡಿಲ್ಲ ಎಂದು ಡಿನ್ನರ್ ಪಾಲಿಟಿಕ್ಸ್ ಗೆ ಸಂಬಂಧಪಟ್ಟಂತೆ ಸಚಿವ ಸತೀಶ್ ಜಾರಕಿಹೊಳಿ‌ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಡಿನ್ನರ್ ಸಭೆ ಹೊಸದೇನಲ್ಲ.ಮುಸುಕಿನ ಗುದ್ದಾಟ ಏನು ಅಲ್ಲ. ಹೈಕಮಾಂಡ್ ಗೆ ನಮ್ಮ ಅಜೆಂಡಾ ಹೇಳಿ‌ ಸಭೆ ಮಾಡಬಹುದು. ಹೈಕಮಾಂಡ್ ಕೂಡ ಒಪ್ಪಿಗೆ ಕೊಡಬಹುದು. ನನ್ನ ಜೊತಗೆ ಹೈಕಮಾಂಡ್ ನಾಯಕರು ಯಾರು ಮಾತನಾಡಿಲ್ಲ. ನಾನು ಕೂಡ ಹೋಮ್ ಮಿನಿಸ್ಟರ್ ಜೊತೆ ಮಾತನಾಡುತ್ತೇವೆ. ಹೈಕಮಾಂಡ್ ಪರ್ಮಿಷನ್ ಪಡೆದಯಲು ಮಾತನಾಡುತ್ತೇನೆ.ನಾನು ರಾಜಕೀಯ ಕೇಂದ್ರ ಬಿಂದು ಅಲ್ಲ. ತಾನಾಗೆ ಕೇಂದ್ರ ಬಿಂದು ಆದ್ರೆ ಏನು ಮಾಡೋಕೆ ಆಗಲ್ಲ. ನಾನು‌ ಹೈಕಮಾಂಡ್ ಗೆ ಕನ್ವಿನ್ಸ್ ಮಾಡಲು ಹೇಳುತ್ತೇನೆ. ಹೈಕಮಾಂಡ್ ಗಮನಕ್ಕೆ ‌ನಮ್ಮ ಸಮಸ್ಯೆ ತರುತ್ತೇವೆ. ಅವಾಗ ಸಭೆಗೆ ಒಪ್ಪಿಗೆ ಸಿಗುತ್ತೆ ಎಂದಿದ್ದಾರೆ.

ರಾಜಕೀಯದಲ್ಲಿ ಹಿನ್ನಡೆ ಮುನ್ನಡೆ ಇರುತ್ತೆ. ಇದಕ್ಕೆ ಬೇಸರ ಮಾಡಿಕೊಳ್ಳಬಾರದು. ಇವತ್ತು ಅವರು ಮುಂದೆ ಹೋದ್ರೆ ನಾಳೆ ನಾವು ಮುಂದೆ ಹೋಗುತ್ತೇವೆ. ಸಭೆನೇ ಮಾಡಬೇಕು ಅಂತಲ್ಲ. ನಾವು ದೂರವಾಣಿ ಮೂಲಕ ‌ಮಾತನಾಡಬಹುದು. ಅಲ್ಲೇ ಸಭೆ ಮಾಡಬಹುದು. ಅದನ್ನು ಯಾರು ತಡೆಯಲು ಆಗಲ್ಲ. ನಮ್ಮ ಊಟ, ನಮ್ಮ ಅಜೆಂಡಾ ಬೇರೆಯವರಿಗೆ ಆತಂಕ ಯಾಕೆ ಎಂದಿದ್ದಾರೆ.

ಗುತ್ತಿಗೆದಾರ ಸಂಘದ ಅಧ್ಯಕ್ಷರ ಆರೋಪ ವಿಚಾರದ ಬಗ್ಗೆ ಮಾತನಾಡಿ ಅವರು ಆಧಾರ ಕೊಟ್ಟು ಮಾತನಾಡಲಿ. ನಾವು ತನಿಖೆ ಮಾಡಿಸುತ್ತೇವೆ. ನಮ್ಮ ಮೇಲೆ ಕೋರ್ಟ್ ಕೂಡ ಇದೆ. ಆಧಾರ ಕೊಟ್ರೆ ತನಿಖೆ ಮಾಡಿಸುತ್ತೇವೆ ಎಂದಿದ್ದಾರೆ.