ಮನೆ Latest News ಜ.20-21ಕ್ಕೆ ದೆಹಲಿ ಹೋಗ್ತಿದ್ದೇನೆ, ಕೇಳ್ಕೊಂಡ್ ಬಂದು ಹೇಳ್ತೀನಿ;ಸತೀಶ್ ಜಾರಕಿಹೊಳಿ ಹೇಳಿಕೆ

ಜ.20-21ಕ್ಕೆ ದೆಹಲಿ ಹೋಗ್ತಿದ್ದೇನೆ, ಕೇಳ್ಕೊಂಡ್ ಬಂದು ಹೇಳ್ತೀನಿ;ಸತೀಶ್ ಜಾರಕಿಹೊಳಿ ಹೇಳಿಕೆ

0

ಬೆಂಗಳೂರು; ಜ.20-21ಕ್ಕೆ ದೆಹಲಿ ಹೋಗ್ತಿದ್ದೇನೆ. ಜನರಲ್‌ ಸೆಕ್ರೆಟರಿ ಭೇಟಿ ಮಾಡುತ್ತೇನೆ. ಇಲಾಖೆಯ ಕೆಲಸ ಇದೆ.

ಅಧ್ಯಕ್ಷರು ಸಿಕ್ಕರೇ ಅವರನ್ನೇ ಭೇಟಿ ಮಾಡ್ತೀನಿ. ಗೊಂದಲದ ಬಗ್ಗೆ ಪದೇಪದೆ ಹೇಳೋದು ಅವಶ್ಯಕತೆ ಇಲ್ಲ. ಹೈಕಮಾಂಡ್ ಹೇಳಿದ್ಯಲ್ಲ. ದೆಹಲಿಗೆ ಹೋಗ್ತಿದ್ದೇನೆ ಕೇಳ್ಕೊಂಡ್ ಬಂದು ಹೇಳ್ತೀನಿ ಎಂದು ನಕ್ಕ ತೆರಳಿದ್ದಾರೆ ಸತೀಶ್ ಜಾರಕಿಹೊಳಿ. ಇನ್ನು ಫಾರಿನ್ ಟ್ರಿಪ್ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಸಫಾರಿ ಟೂರ್ ಹೋಗಿದ್ದೆ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಡಿಕೆ ರಾಹುಲ್ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು ರಾಜಕಾರಣದಲ್ಲಿ ಪ್ರತ್ಯೇಕವಾಗಿ ಮಾತನಾಡೋದು ವಿಶೇಷ. ಡಿಕೆ ದೆಹಲಿ ಪ್ರವಾಸ ಗೊತ್ತಿಲ್ಲ, ಯಾವ ಕಾರಣಕ್ಕೆ. ಎಲೆಕ್ಷನ್ ಮಾಡೋಕೆ ನೇಮಿಸಿದ್ದಾರೆ. ಚುನಾವಣಾ ಕೆಲಸ ಇದೆ ಜವಾಬ್ದಾರಿ ಕೊಟ್ಟಿದ್ದಾರೆ. ನಾಯಕತ್ವ ಬದಲಾವಣೆ ಗೊತ್ತಿಲ್ಲ.ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳು ಇದ್ದಾರೆ. ಸಂಪುಟ ಪುನರ್ ರಚನೆ ಗೆ ಸಾಕಷ್ಟು ಆಕಾಂಕ್ಷಿಗಳು ಇದ್ದಾರೆ ಎಂದು ಹೇಳಿದ್ದಾರೆ.

ನಾಯಕತ್ವ ಗೊಂದಲ ಆಡಳಿತ ಯಂತ್ರದ ಮೇಲೆ ಪ್ರಭಾವ ವಿಚಾರದ ಬಗ್ಗೆ ಮಾತನಾಡಿದ ಅವರು ಡ್ಯಾಮೇಜ್ ಸರ್ಕಾರದ ಮೇಲೆ ಇದ್ದೇ ಇರುತ್ತೆ. ಹೆಚ್ಚು ಡ್ಯಾಮೇಜ್ ಆಗದಂತೆ ನೋಡಿಕೊಳ್ಳಬೇಕು. ನಾಯಕತ್ವದ ವಿಚಾರದಿಂದ ಸ್ಥಳೀಯ ಚುನಾವಣೆಗಳಿಗೆ ತೊಂದರೆ ಆಗಲ್ಲ. ಸ್ಥಳೀಯ ನಾಯಕರನ್ನ ನೋಡಿ ಚುನಾವಣೆಯಲ್ಲಿ ಮತ ಹಾಕುತ್ತಾರೆ.

ಎಂಎಲ್‌ಎ ಗಳು ಉತ್ತಮ ಸಂಬಂಧ ಇಟ್ಟುಕೊಂಡರೆ ಸಮಸ್ಯೆ ಆಗಲ್ಲ. 1 ಲಕ್ಷ ಕೋಟಿಗೂ ಅಧಿಕ ಖರ್ಚು ಮಾಡೇ ಮಾಡ್ತೀವಿ. ಗ್ಯಾರೆಂಟಿಗೇ ಬೇರೆ ದುಡ್ಡು, ಇದೇ ಬೇರೆಯದ್ದು ಎಂದಿದ್ದಾರೆ.

ರಾಜಣ್ಣ ನಿವಾಸದಲ್ಲಿ ಸಿಎಂ ಊಟಕ್ಕೆ ಹೋಗಿದ್ರು. ಕಳೆದ ಬಾರಿ ಯಾಕೆ ಹೋಗಿಲ್ಲ ಅಂತ ನೀವೇ ಕೇಳಿದ್ರು. ಕಳೆದ ಬಾರಿಯಿಂದ ನಾಟಿ ಕೋಳಿ ಹಾಗೇ ಇಟ್ಟಿಕೊಂಡಿದ್ರು. ಅದನ್ನ ನಿನ್ನೆ ಮಾಡಿದ್ದಾರೆ ಅನ್ಸುತ್ತೆ. ಅಪೆಕ್ಸ್ ಬ್ಯಾಂಕ್ ಸಿಎಂ, ಅಧ್ಯಕ್ಷರು ನಿರ್ಧಾರ ಮಾಡ್ತಾರೆ. ಇವರಿಬ್ಬರು ಹೇಳಿದ್ದೇ ಅಂತಿಮ. ಸಿಎಂ ಸೂಚನೆ ಮಾಡಿದ್ಮೇಲೆ ಕೆಎಂಎಫ್ ಸೇರಿ ಐದು ಹಂತದಲ್ಲಿ ತೀರ್ಮಾನ ಆಗುತ್ತೆ. ಸೂಚನೆ ಕೊಟ್ಟ‌ ಮೇಲೆ ತೀರ್ಮಾನ ಮಾಡುತ್ತಾರೆ ಅಂದಿದ್ದಾರೆ.

ರಾಜಣ್ಣನಿಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ನೀಡುವಂತೆ ಸದ್ಯಕ್ಕೆ ಒತ್ತಡ ಇಲ್ಲ. ಎಲ್ಲ ಸರ್ಕಾರದಲ್ಲೂ ಗುಂಡಿ‌ ಇತ್ತು. ಗುಂಡಿ ಮುಚ್ಚಿ ಗಿಡ ಹಾಕೋದು ಮಾಮೂಲಿ. ಯಾವುದೇ ಸರ್ಕಾರ ಬಂದ್ರೂ ಇದು ನಿರಂತರ. ಬಿಜೆಪಿ, ಜೆಡಿಎಸ್ ಬಂದ್ರೂ ಇದೇ ರೀತಿ ಇರುತ್ತೆ.ಯಾವುದೇ ರಸ್ತೆಯಲ್ಲಿ ಇರೋದು ಇಡೀ ಬೆಂಗಳೂರಿಗೆ ಸಮಸ್ಯೆ ಆಗಲ್ಲ. ಬೆಂಗಳೂರಿನಲ್ಲಿನ ಸಮಸ್ಯೆ ಇಡೀ ರಾಜ್ಯದ ಸಮಸ್ಯೆ ಆಗಲ್ಲ. ಎಲ್ಲೋ ಒಂದು ಆಗಿರುತ್ತೆ ಅಷ್ಟೆ, ಡಿಸಿಎಂ ನೇತೃತ್ವ ಇದೆ. ನಾವು ಅಧ್ಯಕ್ಷರಾಗುತ್ತೀರೋ ಏನು ಬೆಂಗಳೂರು ಅಧ್ಯಕ್ಷರು ಡಿಕೆಶಿ ಅವ್ರೇ. 40 ವರ್ಷದಿಂದ ಅವರು ಬೆಂಗಳೂರಿನಲ್ಲಿ ಇದ್ದಾರೆ. ಎಲ್ಲಾ ಜವಾಬ್ದಾರಿ ಡಿಕೆಶಿ ಅವರದ್ದೇ.ಗೆಲ್ಲಿಸುವ ಜವಾಬ್ದಾರಿಯೂ ಅವರದ್ದೇ ಎಂದು ಹೇಳಿದ್ದಾರೆ.

ಬಿಜೆಪಿ ಸಮಾವೇಶ ವಿಚಾರದ ಬಗ್ಗೆ ಮಾತನಾಡಿದ ಅವರು ಪ್ರತಿಭಟನೆಗೆ ಅವಕಾಶ ಇದೆ, ಅನುಮತಿ ಕೊಟ್ಟಿದ್ದಾರೆ. ಜಿಲ್ಲಾಡಳಿತ ನೋಡಿಕೊಳ್ತಿದೆ. ಹೋರಾಟ, ಪಾದಯಾತ್ರೆ ಯಾವುದಾದ್ರೂ ಮಾಡಲಿ ಎಂದಿದ್ದಾರೆ. ಸತೀಶ್ ಜಾರಕಿಹೊಳಿ ಅವರನ್ನ ಮಾಜಿ ಮಾಡುತ್ತೇನೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಆ ಹೇಳಿಕೆ ನಾನು ನೋಡಿಲ್ಲ. ಪಕ್ಷದ ವೇದಿಕೆ ಮೇಲೆ ಹೇಳಿಕೆ ಕೊಡಲೇಬೇಕು ಅಲ್ವಾ?. ಮನೆಯಲ್ಲಿ ಎಲ್ಲರೂ ಸಾಹುಕಾರ್ ಅಷ್ಟೆ ಎಂದಿದ್ದಾರೆ.

ಅಧಿಕಾರಿಗೆ ರಕ್ಷಣೆ ಇಲ್ಲ ಎಂಬ ಆರ್.ಅಶೋಕ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಎಲ್ಲಾ ಅವಧಿಯಲ್ಲೂ ಘಟನೆಗಳು ಆಗಿವೆ. ದೂರು ಕೊಟ್ಟರೆ ಕ್ರಮ ಆಗುತ್ತೆ. ಇದು ಅಲ್ಲಿಗೆ ಸೀಮಿತವಾದ ವಿಚಾರ. ಶಿಡ್ಲಘಟ್ಟದ ಆ ಮಹಿಳೆ ದೂರು ಕೊಡಬೇಕು ಅಲ್ವಾ?. ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡ್ತಾರೆ. ಪೊಲೀಸರು ಕ್ರಮ ತಗೊಳ್ತಾರೆ. ಕುಮಾರಸ್ವಾಮಿ ಅವರೂ ಸಹ ಸಿಎಸ್ ಬಗ್ಗೆ ಮಾತಾಡಿರಲಿಲ್ವಾ ಎಂದು ಪ್ರಶ್ನಿಸಿದ್ದಾರೆ.