ಮನೆ Latest News ಸರೋಜ ದೇವಿ ಖಾಸಗಿ ಜೀವನದಲ್ಲೂ ಶಿಸ್ತು ಬದ್ಧ ಜೀವನ ನಡೆಸುತ್ತಿದ್ದರು; ಅಂತಿಮ ದರ್ಶನ ಪಡೆದ...

ಸರೋಜ ದೇವಿ ಖಾಸಗಿ ಜೀವನದಲ್ಲೂ ಶಿಸ್ತು ಬದ್ಧ ಜೀವನ ನಡೆಸುತ್ತಿದ್ದರು; ಅಂತಿಮ ದರ್ಶನ ಪಡೆದ ಬಳಿಕ ಸಿದ್ದರಾಮಯ್ಯ ಹೇಳಿಕೆ

0

ಬೆಂಗಳೂರು; ಸಿಎಂ ಸಿದ್ದರಾಮ್ಯ ಅವರು ಮಲ್ಲೇಶ್ವರಂ ನಲ್ಲಿರುವ ನಟಿ ಸರೋಜಾದೇವಿ ನಿವಾಸದಲ್ಲಿ ಅವರ ಅಂತಿಮ ದರ್ಶನ ಪಡೆದರು. ಸಿಎಂ ಜೊತೆ ಸಚಿವ ಹೆಚ್ ಸಿ ಮಹಾದೇವಪ್ಪ ಆಗಮಿಸಿದರು,

ಸರೋಜಾದೇವಿ ಅವರ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಸರೋಜಾದೇವಿ ಅವರ ನಿಧನ ಇಡೀ ಚಿತ್ರರಂಗಕ್ಕೆ ದೊಡ್ಡ ಆಘಾತ ಉಂಟು ಮಾಡಿದೆ. ಅವರು ಚಿಕ್ಕ ವಯಸ್ಸಿನಲ್ಲಿ ಸಿನಿಮಾ ರಂಗ ಪ್ರವೇಶಿಸಿದರು. 7೦ ದಶಕ ಕಾಲ ಚಿತ್ರರಂಗದಲ್ಲೇ ಇದ್ದರು. ಅವರಿಗೆ ಅಭಿನಯ ಸರಸ್ವತಿ ಅಂತ ಬಿರುದು ಬಂತು. ಅವರು ಮೇರು ನಟಿ. ಕನ್ನಡ ಅಷ್ಟೇ ಅಲ್ಲ, ಹಿಂದಿ ತಮಿಳು, ತೆಲಗು ನಲ್ಲಿ ನಟಿಸಿ ಸೈ ಎನಿಸಿದರು, ಅದ್ಭುತ ನಟಿ. ಎಲ್ಲಾ ಭಾಷೆ ಯ ನಟರ ಜೊತೆ ನಟಿಸಿದರು. ದಿಲೀಪ್ ಕುಮಾರ್, ಎನ್ ಟಿ ಆರ್ ನಾಗೇಶ್ವರ ರಾವ್, ರಾಜಕುಮಾರ ಅವರ ಜೊತೆ ನಟಿಸಿದರು. ಅವರು ಮಾಡಿರೋ ಪಾತ್ರಕ್ಕೆ ಜೀವ ತುಂಬುವ ಕೆಲಸ ಮಾಡಿದರು. ಖಾಸಗಿ ಜೀವನದಲ್ಲೂ ಶಿಸ್ತು ಬದ್ಧ ಜೀವನ ನಡೆಸುತ್ತಿದ್ದರು. ಕನ್ನಡ ಚಿತ್ರ ಬೇಳೆಯೋಕೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಅವರ ಸಾವಿನಿಂದ ಚಿತ್ರರಂಗಕ್ಕೆ ನಷ್ಟ ಆಗಿದೆ.ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಕುಟುಂಬ ವರ್ಗದವರಿಗೆ ಅವರ ಸಾವಿನ ದುಃಖ ಭರಿಸುವ ಶಕ್ತಿ ನೀಡಲಿ ಎಂದರು.

ಸರ್ಕಾರದ ವತಿಯಿಂದ ಸಕಲ ಸರ್ಕಾರಿ ಗೌರವ ದಿಂದ ಅಂತ್ಯ ಕ್ರಿಯೆ ನಡೆಯಲಿದೆ.  ನಾನು ಹಿಂದೆ ಅನೇಕ ಸರಿ ಅವರನ್ನ ಭೇಟಿ ಮಾಡಿದ್ದೆ. ಎಲ್ಲರ ಜೊತೆ ಆತ್ಮೀಯ ವಾಗಿ, ಪ್ರೀತಿಯಿಂದ ಮಾತು ಅಡುತ್ತಿದ್ದರು. ನಾನು ಅವರ ಸಿನಿಮಾ ನೋಡಿದ್ದೇನೆ. ಬಹಳ ಸಿನಿಮಾ ಅವರು ಮಾತಾಡಿದ್ದಾರೆ. ಕಿತ್ತೂರು ರಾಣಿ ಚನ್ನಮ್ಮ, ಭಾಗ್ಯವಂತರು, ಬಬ್ರುವಾಹನ ಸೇರಿ ಅನೇಕ ಚಿತ್ರ ಮಾಡಿದ್ದಾರೆ.