ಮನೆ Latest News ಭಾರತ ಬೀಫ್ ರಫ್ತು ವಿನಲ್ಲಿ ಎರಡನೇ ದೊಡ್ಡ ದೇಶ, ಯಾವುದು ಹಲಾಲ್?; ಸಚಿವ ಸಂತೋಷ್ ಲಾಡ್...

ಭಾರತ ಬೀಫ್ ರಫ್ತು ವಿನಲ್ಲಿ ಎರಡನೇ ದೊಡ್ಡ ದೇಶ, ಯಾವುದು ಹಲಾಲ್?; ಸಚಿವ ಸಂತೋಷ್ ಲಾಡ್ ಪ್ರಶ್ನೆ

0

ಬೆಂಗಳೂರು: ರಾಜ್ಯ ಬಜೆಟ್ ನ್ನು  ಹಲಾಲ್ ಬಜೆಟ್ ಅಂತ ಬಿಜೆಪಿ ಟೀಕಿಸುತ್ತಿರೋದಕ್ಕೆ ಸಚಿವ ಸಂತೋಷ್ ಲಾಡ್ ತಿರುಗೇಟು ಕೊಟ್ಟಿದ್ದಾರೆ.

ಹಲಾಲ್ ಬಜೆಟ್ ಅಂತ ಬಿಜೆಪಿ ಹೇಳ್ತಿದೆ. ನಾನು ಪ್ರಶ್ನೆ ಕೇಳ್ತಿನಿ ಭಾರತ ಬೀಫ್ ರಫ್ತು ವಿನಲ್ಲಿ ಎರಡನೇ ದೊಡ್ಡ ದೇಶ, ಯಾವುದು ಹಲಾಲ್? ಎಂದಿದ್ದಾರೆ. ಸಾಲ ಮಾಡಿರೋದು ನಿಜ ಇದೆ, ಆದ್ರೆ ಜಿಎಸ್‌ಡಿಪಿಗೆ ಅನುಸಾರ ಸಾಲ ಮಾಡಲಾಗಿದೆ.ಧರ್ಮದ ಆಧಾರದಲ್ಲೇ ಬಿಜೆಪಿಯವ್ರು ಮತ ಕೇಳ್ತಾ ಬಂದಿದ್ದಾರೆ. ಮಂಗಳಸೂತ್ರ, ತಾಳಿ ಮೇಲೆಯೇ ಮತ ಕೇಳಿರೋದು.ಬಿಜೆಪಿಯವ್ರಿಗೆ ಇದೇ ಬೇಕಿರೋದು, ಮುಸ್ಲಿಂ ಗುತ್ತಿಗೆ ಮೀಸಲನ್ನೂ ಹೀಗಾಗಿಯೇ ವಿರೋಧಿಸ್ತಿದ್ದಾರೆ. ಕೇಂದ್ರದ ಸಾಲ ಬಗ್ಗೆ ಯಾಕೆ ಮಾತಾಡಲ್ಲ ಯಾರೂ. ಬಿಜೆಪಿಯವ್ರೂ ಮಾತಾಡಲ್ಲ.ನಾವು ಸಾಲ‌ ಮಾಡಿದೀವಿ, ಅದನ್ನ ಡಿಬಿಟಿ ಮೂಲಕ ಜನರಿಗೆ ಕೊಡ್ತೀವಿ ಎಂದಿದ್ದಾರೆ.

ಬೀಫ್ ಎಕ್ಸ್ ಪೋರ್ಟ್ ನಲ್ಲಿ ಎರಡನೇ ಸ್ಥಾನದಲ್ಲಿ ಇದ್ದೇವೆ. ಇದರಲ್ಲಿ ಯಾರು ಹಲಾಲ್ ಎಂದು ಕೇಳಬೇಕು ಅಲ್ಲವೇ .ಇವರು ಮಾಡಿದ್ರೆ ಪಾಕಿಸ್ತಾನ ಅಂತಾರೆ. ಇವರು ಮಾಡಿದ್ರೆ ಬೇರೆ ನಾವು ಮಾಡಿದ್ದರೆ ಮುಸ್ಲಿಂ ಪರ ಅಂತಾರೆ. ಮೋದಿ ಅವರು ಹೇಳಿದಂತೆ ನಾವು ಮಾಡಿದ್ದೇವೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಾಡುತ್ತೇವೆ. ಬಡ ಕುಟುಂಬಕ್ಕೆ ಹೋಗುತ್ತಿದೆ

 

ಎಲ್ಲ ಇಲಾಖೆಗೆ ಹಣ ಸಿಕ್ಕಿದೆ, ನಮ್ಮ ಇಲಾಖೆಗೆ ಹೆಚ್ಚು ಸಿಕ್ಕಿಲ್ಲ ಆದ್ರೂ ತೃಪ್ತಿದಾಯಕ ಬಜೆಟ್ ಇದೆ.ಸಾಲ ಹೆಚ್ಚಾದರೂ ಒಳ್ಳೆಯ ಬಜೆಟ್ ಇದೆ. ಕರ್ನಾಟಕ ನಂಬರ್ ಮೂರು ಸ್ಥಾನದಲ್ಲಿವೆ. ಅವರ ನೀತಿ ಆಯೋಗದ ರಿಪೋರ್ಟ್ ಕೊಟ್ಟಿದೆ. ದೇಶದ ಸಾಲ ಎಷ್ಟು ಇದೆ, ಸಾಲ ಇರೋದು ಸಹಜ. ಸಾಲದ ಮಿತಿ ಒಳಗೆ ನಾವು ಇದ್ದೇವೆ ಎಂದಿದ್ದಾರೆ.

ಈ ಬಾರಿಯ ಬಜೆಟ್ ನಲ್ಲಿ ಆಡಳಿತಾತ್ಮಕ ಸುಧಾರಣೆ, ಹಣಕಾಸಿನ ಸುವ್ಯವಸ್ಥೆ ಎದ್ದು ಕಾಣುತ್ತಿದೆ; ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ

ಬೆಂಗಳೂರು; ಈ ಬಾರಿಯ ಬಜೆಟ್ ನಲ್ಲಿ ಆಡಳಿತಾತ್ಮಕ ಸುಧಾರಣೆ, ಹಣಕಾಸಿನ ಸುವ್ಯವಸ್ಥೆ ಎದ್ದು ಕಾಣುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಆಡಳಿತಾತ್ಮಕ ಸುಧಾರಣೆ, ಹಣಕಾಸಿನ ಸುವ್ಯವಸ್ಥೆ ಎದ್ದು ಕಾಣುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ಸುವ್ಯವಸ್ಥೆ ಇದೆ. ತೆರಿಗೆ ನೀಡುವುದ್ರಲ್ಲಿ 2 ನೇ ಸ್ಥಾನದಲ್ಲಿ ಕರ್ನಾಟಕ ಇದೆ.ಹಲಾಲ್ ಬಜೆಟ್ ಅಂತ ಹೇಳುತ್ತಿದ್ದಾರೆ.ಅವರಿಗೆ ಏನು ಹೇಳಬೇಕು ಅಂತ ಗೊತ್ತಾಗುತ್ತಿಲ್ಲ.ಹೊಗಳಲು ಅವರ ಕೈಯಲ್ಲಿ ಆಗುವುದಿಲ್ಲ.ರಾಜ್ಯಕ್ಕೆ ಕೇಂದ್ರದಿಂದ ಅನ್ಯಾಯ ಆಗುತ್ತಿದ್ರು ಬಾಯಿ ಬಿಟ್ಟು ಹೇಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಸ್ವಲ್ಪ ಓದಿಕೊಳ್ಳಿ ಬಿಜೆಪಿ ಅವರು.. ನನ್ನ ಇಲಾಖೆಗೆ ಕ್ರಾಂತಿಕಾರಿ ಬಜೆಟ್ ಇದಾಗಿದೆ.. ಎಂದಿದ್ದಾರೆ.

ಗೃಹ ಆರೋಗ್ಯ, ಬಾಣಂತಿಯ ಸಾವು ಶೂನ್ಯಕ್ಕಿಳಿಸಲು ಯೋಜನೆ ಮಾಡಲಾಗಿದೆ. ಕಂದಾಯ, ಆರೋಗ್ಯ ಇಲಾಖೆ ಸೇರಿದಂತೆ ಎಲ್ಲ ಇಲಾಖೆಯಲ್ಲಿ ಪಾರದರ್ಶಕತೆ ಮಾಡಲಾಗುವುದು. ಬಿಜೆಪಿ ಕೋಮುವಾದಿ ಪಕ್ಷ. ಆದ್ರಿಂದ ಎಲ್ಲವನ್ನೂ ಅವರು ವಿರೋದಿಸಲು ಮುಂದಾಗುತ್ತಿದ್ದಾರೆ. ರಾಜ್ಯ 3 ಲಕ್ಷ ನೌಕರರಿಗೆ ಆರೋಗ್ಯ ಕವಚ ಘೋಷಣೆ ಮಾಡಿದ್ದಾರೆ. ಇದು ರಾಜ್ಯದ ಹಿತ ಕಾಪಾಡುವ ಬಜೆಟ್‌. ರಾಜ್ಯ ಈಗಾಗಲೇ ಅಭಿವೃದ್ಧಿ ಆಗುತ್ತಿದೆ ಎಂದು ಬಜೆಟ್ ನ್ನು ಸಮರ್ಥಿಸಿಕೊಂಡಿದ್ದಾರೆ.

ರಾಷ್ಟ್ರದ ಬೊಕ್ಕಸಕ್ಕೆ ರಾಜ್ಯದಿಂದ ಹೆಚ್ಚು ತೆರಿಗೆ ಹೋಗುತ್ತಿದೆ. ಈ ಬಜೆಟ್ ನಲ್ಲಿ ಸಾಮಾಜಿಕ ನ್ಯಾಯ, ಆರ್ಥಿಕ ಶಿಸ್ತಿಗೆ ಗಮನ ಕೊಡಲಾಗಿದೆ. ಇದೊಂದು ಐತಿಹಾಸಿಕ ಬಜೆಟ್. ಬೆಂಗಳೂರಿಗೆ 7000 ಕೊಟ್ಟಿದ್ದಾರೆ. ಎಲ್ಲ ವರ್ಗಗಳಿಗೂ ಸಮರ್ಪಕ ಅನುದಾನ. ಆರೋಗ್ಯ ಇಲಾಖೆಗೆ ಕೇಳಿದ್ದಕ್ಕಿಂತ ಹೆಚ್ಚು ಕೊಟ್ಟಿದ್ದಾರೆ. ಸುಮಾರು ನಲವತ್ತು ಸಾವಿರ ದೇಗುಲಗಳ ಅರ್ಚಕರಿಗೆ ತಸ್ತೀಕ್ ಹೆಚ್ಚಿಸಿದ್ದಾರೆ. ಬಿಜೆಪಿಯವರಿಗೆ ಈ ಒಳ್ಳೆಯ ಬಜೆಟ್ ಸಹಿಸಲು ಆಗದೇ ಹಲಾಲ್ ಅಂದಿದ್ದಾರೆ. ಬಿಜೆಪಿ ಜನರ ದಾರಿ ತಪ್ಪಿಸ್ತಿದ್ದಾರೆ. ಅವರಿಗೆ ಬಜೆಟ್ ನೋಡಿ ಏನು ಹೇಳಬೇಕು ಅಂತ ಗೊತ್ತಾಗ್ತಿಲ್ಲ. ಕೇಂದ್ರದಿಂದ ರಾಜ್ಯಕ್ಕೆ ನ್ಯಾಯ ಕೊಡಿಸಲು ಆಗಿಲ್ಲ ಅವರಿಂದ ಎಂದು ಲೇವಡಿ ಮಾಡಿದ್ದಾರೆ.