ಮನೆ ಪ್ರಸ್ತುತ ವಿದ್ಯಮಾನ ಇಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮದಿನೋತ್ಸವ ಹಿನ್ನೆಲೆ;ಮೆಜೆಸ್ಟಿಕ್ ಬಳಿ ರಾಯಣ್ಣ ಪ್ರತಿಮೆಗೆ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ

ಇಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮದಿನೋತ್ಸವ ಹಿನ್ನೆಲೆ;ಮೆಜೆಸ್ಟಿಕ್ ಬಳಿ ರಾಯಣ್ಣ ಪ್ರತಿಮೆಗೆ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ

0

ಬೆಂಗಳೂರು ; ಇಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮದಿನೋತ್ಸವ ಹಿನ್ನೆಲೆ, ಮೆಜೆಸ್ಟಿಕ್ ಬಳಿ ರಾಯಣ್ಣ ಪ್ರತಿಮೆಗೆ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡಿದ್ರು. ರಾಯಣ್ಣ ಪ್ರತಿಷ್ಠಾನ ಹಾಗೂ ಬಿಬಿಎಂಪಿ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹೆಚ್.ಎಂ.ರೇವಣ್ಣ, ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ, ಬಿಬಿಎಂಪಿ ಆಡಳಿತಾಧಿಕಾರಿ ಎಸ್.ಆರ್ ಉಮಾಶಂಕರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.ಟ್ರಾಫಿಕ್ ಕಿರಿಕಿರಿಯ ಮಧ್ಯೆಯೇ ರಾಯಣ್ಣ ಜನ್ಮದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದಕ್ಕಾಗಿ ಬಿಬಿಎಂಪಿ ಅಧಿಕಾರಿಗಳ ವಿರುದ್ದ ಸಿಎಂ ಸಿದ್ದರಾಮಯ್ಯ ಗರಂ ಆದ್ರು.ವೇದಿಕೆಗೆ ಆಗಮಿಸದೇ ವಾಪಾಸ್ ಹೋಗಲು ಸಿದ್ಧರಾಗಿದ್ರು. ಕೊನೆಗೆ ಸಿಎಂ ಸಿದ್ದರಾಮಯ್ಯ ಅವರು ನೇರವಾಗಿ ಭಾಷಣ ಆರಂಭಿಸಿದ್ರು. ಅಲ್ಲದೇ  ಇನ್ಮುಂದೆ ರವೀಂದ್ರ ಕಲಾಕ್ಷೇತ್ರದಲ್ಲಿ ರಾಯಣ್ಣ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಿ ಎಂದು ಬಿಬಿಎಂಪಿ‌ ಆಯುಕ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.

ದೊಡ್ಡ ಮಟ್ಟದಲ್ಲಿ ರಾಯಣ್ಣ ಜನ್ಮದಿನೋತ್ಸವ ಕಾರ್ಯಕ್ರಮ ಆಯೋಜನೆ ಮಾಡಬೇಕು.ಸ್ವಾತಂತ್ರ್ಯ ದಿನದಂದೇ ಸಂಗೊಳ್ಳಿ ರಾಯಣ್ಣ ಅವರು ಜನ್ಮತಾಳಿದ್ದು.ಅವರನ್ನ ನೇಣಿಗೇರಿಸಿದ್ದು ಗಣರಾಜ್ಯೋತ್ಸವದಂದು.ಈ ಎರಡೂ ಕಾರ್ಯಕ್ರಮಗಳನ್ನು ರವೀಂದ್ರ ಕಲಾಕ್ಷೇತ್ರದಲ್ಲೇ ಆಯೋಜನೆ ಮಾಡಬೇಕು.ರಾಜ್ಯಕ್ಕೆ ಈ ಎರಡೂ ದಿನಗಳು ಮಹತ್ವವಾದವು.ತರಾತುರಿಯಲ್ಲಿ ಇಲ್ಲಿ ಕಾರ್ಯಕ್ರಮ ಆಯೋಜನೆ ಮಾಡಬೇಡಿ ಎಂದು ಬಿಬಿಎಂಪಿ ಅಧಿಕಾರಿಗಳನ್ನು ಸಿಎಂ ಸಿದ್ದ ರಾಮಯ್ಯ ಅವರು ತರಾಟೆಗೆ ತೆಗೆದುಕೊಂಡರು.

[ಇನ್ನು ಕಾರ್ಯಕ್ರಮದ ವೇಳೆ  ಸಿಎಂ ಸಿದ್ದರಾಮಯ್ಯ ಕೈಯಲ್ಲಿ ಇದ್ದ ನಿಂಬೆಹಣ್ಣು ಗಮನ ಸೆಳೆಯಿತು.ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ  ಮಾಡಿದ ಬಳಿಕ ಸಿಎಂ ಸಿದ್ದರಾಮಯ್ಯ ಅವರಿಗೆ ಅರ್ಚಕರು ನಿಂಬೆಹಣ್ಣು ನೀಡಿದರು.ಸಿಎಂ ಸಿದ್ದರಾಮಯ್ಯ ಅವರ ಕೈ ಎಳೆದು ಅರ್ಚಕರು ನಿಂಬೆಹಣ್ಣು ಕೈಗಿತ್ತಿದ್ದಾರೆ.  ಬಳಿಕ ನಿಂಬೆಹಣ್ಣು ತೆಗೆದುಕೊಂಡು ಸಿಎಂ ಸಿದ್ದರಾಮಯ್ಯ ಕೈಮುಗಿದಿದ್ದಾರೆ. ಕಾರ್ಯಕ್ರಮದಲ್ಲಿ ಭಾಷಣ ಮಾಡುವಾಗಲೂ ಸಿಎಂ ಸಿದ್ದರಾಮಯ್ಯ ನಿಂಬೆಹಣ್ಣು ಕೈಯಲ್ಲಿ ಹಿಡಿದುಕೊಂಡಿದ್ದರು.

ರಾಯಣ್ಣ ಜಯಂತೋತ್ಸವ ಕಾರ್ಯಕ್ರಮದಲ್ಲಿ ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಭಾಗಿಯಾಗಿದ್ದರು.ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಎಲ್ಲ ಸರ್ಕಾರಿ ಕಚೇರಿಗಳು,‌ ಶಾಲಾ-ಕಾಲೇಜುಗಳಲ್ಲಿ‌ ಸಂಗೊಳ್ಳಿ ರಾಯಣ್ಣ ಭಾವಚಿತ್ರ ಇಡುವಂತೆ ಮನವಿ ಮಾಡಿದ್ರು. ಈ ವೇಳೆ ಮಾತನಾಡಿದ ಅವರು ರಾಯಣ್ಣ ನಿಜವಾದ ದೇಶಭಕ್ತ. ಅವರ ಸಾಧನೆ, ದೇಶಪ್ರೇಮ ಎಲ್ಲರಿಗೂ ತಿಳಿಯಬೇಕು. ಹಾಗಾಗಿ ಎಲ್ಲ ಸರ್ಕಾರಿ ಕಚೇರಿಗಳು,‌ ಶಾಲಾ-ಕಾಲೇಜುಗಳಲ್ಲಿ‌ ಸಂಗೊಳ್ಳಿ ರಾಯಣ್ಣ ಭಾವಚಿತ್ರ ಇಡುವಂತೆ ಸಿಎಂ ಸಿದ್ದರಾಮಯ್ಯ ಬಳಿ ಮನವಿ ಮಾಡಿದ್ರು.

ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರು ಸಂಗೊಳ್ಳಿ ರಾಯಣ್ಣ ಕಾರ್ಯಕ್ರಮವನ್ನು ಇನ್ಮುಂದೆ ರವೀಂದ್ರ ಕಲಾಕ್ಷೇತ್ರದಲ್ಲಿ ಮಾಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದ್ರು.ನಾನು ಹಿಂದೆ ಹೇಳಿದ್ದೆ, ಇಲ್ಲಿ ಜಾಗ ಕಡಿಮೆ ಇದೆ. ತರಾತುರಿಯಲ್ಲಿ ಮಾಡಬಾರದು  ಅಂತಾ.ಸಂಗೊಳ್ಳಿ ರಾಯಣ್ಣ ಹುಟ್ಟಿದ ದಿನ ಹಾಗೂ ಪುಣ್ಯ ತಿಥಿ ಎರಡೂ ಕಾರ್ಯಕ್ರಮ ದೊಡ್ಡದಾಗಿ ಮಾಡಬೇಕು.ನಾನು ಕಾರ್ಪೊರೇಷನ್ ಅವ್ರಿಗೆ ಸೂಚನೆ ಕೊಟ್ಟಿದ್ದೇನೆ.ಮುಂದೆ ಪುಣ್ಯತಿಥಿಯನ್ನ ರವಿಂದ್ರ ಕಲಾಕ್ಷೇತ್ರದಲ್ಲಿ ಮಾಡಲು ಹೇಳಿದ್ದೇನೆ. ಅವರ ಜನ್ಮದಿನ ಸ್ವಾತಂತ್ರ್ಯ ದಿನದಂದು ಇದೆ.ಅವರನ್ನ ಗಲ್ಲಿಗೆ ಹಾಕಿದ್ದು ಗಣರಾಜ್ಯೋತ್ಸವದ ದಿನದಂದು ಹಾಗಾಗಿ ಎರಡೂ‌ ಕಾರ್ಯಕ್ರಮ ದೊಡ್ಡದಾಗಿ ಮಾಡಲು ಸೂಚಿಸಿದ್ದೇನೆ.ಎಲ್ಲರಿಗೂ 78ನೇ ಸ್ವಾತಂತ್ರ್ಯೋತ್ಸವದ ದಿನದ ಶುಭಾಶಯಗಳು .ಹಾಗೇಯೆ ಸಂಗೊಳ್ಳಿ ರಾಯಣ್ಣ ಜನ್ಮದಿನದ ಶುಭಾಶಯಗಳು.ಸಂಗೊಳ್ಳಿ ರಾಯಣ್ಣ ಎಲ್ಲರಿಗೂ ಸ್ಪೂರ್ತಿ ಆಗಲೀ .ಮುಂದಿನ ವರ್ಷದಿಂದ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ರು.