ಬೆಂಗಳೂರು; ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಪಾತ್ರ ಇಲ್ಲ, ಇದು ಕೇವಲ ರಾಜಕೀಯ ಆರೋಪ ಎಂದು ವಿಧಾನಸೌಧದಲ್ಲಿ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದ್ದಾರೆ.
ಮುಡಾ ಪ್ರಕರಣದಲ್ಲಿ ಸಿಎಂಗೆ ಹೈಕೋರ್ಟ್ ರಿಲೀಫ್ ನೀಡಿದ ವಿಚಾರದ ಬಗ್ಗೆ ಮಾತಾಡಿದ ಅವರು ಸತ್ಯ ಮೇವ ಜಯತೆ, ಸತ್ಯಕ್ಕೆ ಜಯ ಇದ್ದೇ ಇರುತ್ತೆ.ಸಿದ್ದರಾಮಯ್ಯ ಪಾತ್ರ ಇಲ್ಲ, ಇದು ಕೇವಲ ರಾಜಕೀಯ ಆರೋಪ. ವಿಪಕ್ಷಗಳು ಟೀಕೆಗಳ ಹೇಳಿಕೆ ನೀಡಿ ಹೆಸರು ಹಾಳು ಮಾಡುವ ಕೆಲಸ ಮಾಡ್ತು.ಇದು ಸತ್ಯಕ್ಕೆ ಸಂದ ಜಯ, ಸಿಬಿಐ ಮೂಲಕ ವಿಚಾರಣೆ ಮಾಡಿಸಬೇಕು ಬಿಜೆಪಿಯವರು ಇದ್ದರು.ಬಿಜೆಪಿಯೇತರ ಮುಖಂಡರ ಮೇಲೆ ತೊಂದರೆ ಕೊಡುವ ಕೆಲಸ.ಈ ತೀರ್ಪು ವಿಪಕ್ಷಗಳಿಗೆ ಕಪಾಳ ಮೋಕ್ಷ ನೀಡಿದೆ ಎಂದರು.
ನಿರಪರಾಧಿ ಅಂತ ಕೋರ್ಟ್ ಹೇಳಿಲ್ಲ ಎಂಬ ಆರ್.ಅಶೋಕ್, ವಿಜಯೇಂದ್ರ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಇದು ರಾಜಕೀಯ ಪ್ರೇರಿತ ಅಂತ ಕೋರ್ಟ್ ಗೆ ಅನ್ನಿಸಿದೆ.ಅವರ ಪಕ್ಷ ಅವರು ನೋಡಿಕೊಳ್ಳಲಿ.ಕಳೆದ 45 ವರ್ಷಗಳಿಂದ ಪ್ರಮಾಣಿಕವಾಗಿ ಸಿದ್ದರಾಮಯ್ಯ ಸಿದ್ದಾಂತಗಳ ಮೇಲೆ ರಾಜಕಾರಣ ಮಾಡಿದ್ದಾರೆ.ಅವರಿಗೆ ಕಪ್ಪು ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದರು.
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಪಾತ್ರ ಇಲ್ಲ ಅಂತ ಬಿಜೆಪಿಯವರಿಗೂ ಗೊತ್ತು.ನಾಳೆ ದೆಹಲಿಯ ಚುನಾವಣಾ ಫಲಿತಾಂಶ ವಿಚಾರದ ಬಗ್ಗೆ ಮಾತನಾಡಿ ನಾನೂ ಎರಡು ದಿನ ಪ್ರಚಾರ ಮಾಡಿದ್ದೇನೆ.ಚೆನ್ನಾಗಿತ್ತು, ಎಷ್ಟು ಸೀಟ್ ಬರುತ್ತೆ ಅಂತ ಹೇಳೋಕೆ ಆಗೊಲ್ಲ.ಆಪ್ ನಿಂದ ಜನ ಬೇಸತ್ತಿದ್ದಾರೆ, ಕೇಂದ್ರ ಬಿಜೆಪಿಯಿಂದ ಏನೂ ಕೆಲಸ.ರಾಜ್ಯಪಾಲರು ಸುಗ್ರೀವಾಜ್ಞೆ ವಾಪಾಸ್ ಕಳುಹಿಸಿದ ವಿಚಾರ.ರಾಜ್ಯಪಾಲರು ತಿರಸ್ಕಾರ ಮಾಡಿಲ್ಲ.ಅದರ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲ ಮಾಹಿತಿ ಪಡೆದು ಮಾತನಾಡುತ್ತೇನೆ ಎಂದು ಸಲೀಂ ಅಹ್ಮದ್ ಹೇಳಿದ್ದಾರೆ.
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್: ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್