ಮನೆ Latest News ದರ್ಶನ್ ಭೇಟಿಗೆಂದು ಬಂದು ಭೇಟಿ ಸಾಧ್ಯವಾಗದೇ ವಾಪಾಸ್ ತೆರಳಿದ ನಟ ಸಾಧುಕೋಕಿಲ

ದರ್ಶನ್ ಭೇಟಿಗೆಂದು ಬಂದು ಭೇಟಿ ಸಾಧ್ಯವಾಗದೇ ವಾಪಾಸ್ ತೆರಳಿದ ನಟ ಸಾಧುಕೋಕಿಲ

0

ಬೆಂಗಳೂರು; ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿ ಒಂದು ತಿಂಗಳಾಯತ್ತು. ಈಗಾಗಲೇ ದರ್ಸನ್ ಅವರ ಕುಟುಂಬಸ್ಥರು ಸೇರಿದಂತೆ ಅನೇಕ ನಟರು, ನಟಿಯರು ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ. ಇನ್ನು ಇಂದು ದರ್ಶನ್ ಅವರನ್ನು ಭೇಟಿ ಮಾಡಲು ಅವರ ಸ್ನೇಹಿತ, ಸಾಕಷ್ಟು ಸಿನಿಮಾಗಳಲ್ಲಿ ಅವರ ಜೊತೆ ಅಭಿನಯಿಸಿದ್ದ ಸಾಧು ಕೋಕಿಲ ಅವರು ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದರು. ಆದ್ರೆ ಅವರಿಗೆ ದರ್ಶನ್ ಅವರನ್ನು ಭೇಟಿ ಮಾಡಲು ಸಾಧ್ಯವಾಗದೇ ವಾಪಾಸ್ ಹೋಗಿದ್ದಾರೆ ಎನ್ನಲಾಗಿದೆ.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಈಗಾಗಲೇ ಈ ವಾರ ದರ್ಶನ್ ಅವರ ಭೇಟಿಗೆ ಇರುವ ಅವಕಾಶ ಮುಕ್ತಾಯವಾಗಿದೆ. ಇದೇ ಗುರುವಾರ ದರ್ಶನ್ ಅವರ ಕುಟುಂಬದವರು ಅವರ ಭೇಟಿಗಾಗಿ ಬರುತ್ತಾರೆ. ಆಗ ನಾನು  ಅವರೊಂದಿಗೆ ಬಂದು ದರ್ಶನ್ ಭೇಟಿ ಮಾಡುತ್ತೇನೆ ಎಂದಿದ್ದಾರೆ. ನಾನು ಒಬ್ಬನೇ  ಹೋಗಿ ನೋಡಿದರೆ ಒಂದು ಭೇಟಿಯ ಸಂಪೂರ್ಣ ಅವಕಾಶವೇ ಮುಗಿದು ಹೋಗುತ್ತೆ. ಅಲ್ಲದೇ ಇವತ್ತು ನಾನು ಅವರನ್ನು ಭೇಟಿಯಾದರೆ ಈ ವಾರದಲ್ಲಿ ಮತ್ತೆ  ಬೇರೆಯವರಿಗೆ ಅವರನ್ನು ಭೇಟಿಯಾಗೋದಕ್ಕೆ ಅವಕಾಶ ಸಿಗಲ್ಲ.  ಹಾಗಾಗಿ ಗುರುವಾರ ಅವರ ಕುಟುಂಬದವರ ಜೊತೆ ಅವರ ಭೇಟಿಗೆ ಬರ್ತೀನಿ ಎಂದು ಸಾಧುಕೋಕಿಲ ಹೇಳಿದ್ದಾರೆ.

 

ನಟ ದರ್ಶನ್ ಅವರನ್ನು ನೋಡಿ ಕಣ್ಣೀರು ಹಾಕಿದ ನಟ ವಿನೋದ್ ರಾಜ್

ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿ ನಿನ್ನೆಗೆ (ಜುಲೈ 22)ಕ್ಕೆ ಒಂದು ತಿಂಗಳಾಯ್ತು. ಈ ಒಂದು ತಿಂಗಳಲ್ಲಿ ಸಾಕಷ್ಟು ಮಂದಿ ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ.

ದರ್ಶನ್ ಕುಟುಂಬಸ್ಥರು ಮಾತ್ರವಲ್ಲದೇ ಅನೇಕ ನಟ ನಟಿಯರು ದರ್ಶನ್ ಅವರನ್ನು ಭೇಟಿಯಾಗಿದ್ದಾರೆ. ರಕ್ಷಿತಾ, ಪ್ರೇಮ್, ವಿನೋದ್ ರಾಜ್, ಧನ್ವೀರ್, ತರುಣ್ ಸುಧೀರ್ ಹೀಗೆ ಅನೇಕರು ಡಿ ಬಾಸ್ ನ್ನು ಭೇಟಿ ಮಾಡಿ ಅವರಿಗೆ ಧೈರ್ಯ ಹೇಳಿದ್ದಾರೆ.

ಇನ್ನು ನಿನ್ನೆ ದರ್ಶನ್ ಅವರನ್ನು ನೋಡೋದಕ್ಕೆ ಹಿರಿಯ ನಟ ವಿನೋದ್ ರಾಜ್ ಅವರು ಒಂದಷ್ಟು ತಿನಿಸುಗಳ ಸಹಿತ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ಬಂದಿದ್ದರು. ಅವರನ್ನು ದರ್ಶನ್ ಅವರನ್ನು ಭೇಟಿಯಾಗಿ ಕೆಲ ಹೊತ್ತು ಮಾತನಾಡಿದ್ದಾರೆ. ಇನ್ನು ಭೇಟಿಯ ಬಳಿಕ ವಿನೋದ್ ರಾಜ್ ತೀರಾ ಭಾವುಕರಾಗಿದ್ದರು.

ಮಾಧ್ಯಮದ ಜೊತೆ ಮಾತನಾಡಿದ ಅವರು ದರ್ಶನ್ ಅವರನ್ನು ಭೇಟಿ ಮಾಡಲು ನಾವು ಐದು ಜನ ಹೋಗಿದ್ದೆವು. ನಾನು, ವಿಜಯಲಕ್ಷ್ಮೀ, ದಿನಕರ್ ತೂಗುದೀಪ್, ದರ್ಶನ್ ಪರ ವಕೀಲರು ಹೋಗಿದ್ದೆವು. ಆದರೆ ನನಗೆ ಹೆಚ್ಚೇನು ಮಾತನಾಡಲು ಸಾಧ್ಯವಾಗಲಿಲ್ಲ. ಹೀಗೆ ಕಷ್ಟ ಸುಖ ಅಷ್ಟೇ ಮಾತನಾಡಿದೆವು. ಅವರ ವಕೀಲರು ದರ್ಶನ್ ಜೊತೆ ಮಾತನಾಡಿದರು. ಜೈಲಿನ ಒಂದಷ್ಟು ನಿಯಮಗಳು ಇರುತ್ತವೆ. ಅದರಂತೆ ನಡೆದುಕೊಳ್ಳಬೇಕಾಗುತ್ತದೆ. ಅವರನ್ನು ಈ ಸ್ಥಿತಿ ನೋಡ ಬೇಕಾಯಿತಲ್ವಾ ಅಂತಾ ನನಗೆ ಅನ್ನಿಸ್ತು. ನನ್ನ ಕಣ್ಣುಗಳನ್ನು ನಾನೇ ನಂಬದಾದೆ. ನನಗೆ ಕಣ್ಣೀರು ಬಿಟ್ಟು ಬೇರೇನು ಗೊತ್ತಿಲ್ಲ ಎಂದು ತೀರಾ ಭಾವುಕರಾಗಿದ್ದಾರೆ ವಿನೋದ್ ರಾಜ್. ದರ್ಶನ್ ಅವರು ಆದಷ್ಟು ಬೇಗ ಹೊರ ಬರಲಿ ಅವರ ಸಂಸಾರ, ಅಭಿಮಾನಿಗಳ ಜೊತೆ ಅವರು ಖುಷಿಯಾಗಿರಲಿ ಎಂದು ವಿನೋದ್ ರಾಜ್ ಹಾರೈಸಿದ್ದಾರೆ. ಅಲ್ಲದೇ ದರ್ಶನ್ ಆ ನಾಲ್ಕು ಗೋಡೆಗಳ ಮಧ್ಯೆ ಏಕಾಂಗಿಯಾಗಿ ಸಮಯ ಕಳೆಯಲು ಅದೆಷ್ಟು ಕಷ್ಟಪಡುತ್ತಿರಬಹುದು ಎಂದಿದ್ದಾರೆ.

ಇನ್ನು ನೀವೇನು ದರ್ಶನ್ ಅವರ ಜೊತೆ ಮಾತನಾಡಿದ್ರಿ ಅಂತಾ ಕೇಳಿದ್ದಕ್ಕೆ ಉತ್ತರಿಸಿದ ವಿನೋದ್ ರಾಜ್ ಏನು ಅಪ್ಪಾಜಿ ಈ ರೀತಿ ಪರಿಸ್ಥಿತಿ ಆಗೋಯ್ತಲ್ವಾ ಎಂದು ನಾನು ಅವರನ್ನು  ಕೇಳಿದೆ. ಅದಕ್ಕೆ ಅವರು ‘ಏನ್ ಮಾಡೋಕೆ ಆಗುತ್ತಣ್ಣಾ ಎಂದ್ರು. ಏನು ಆಗಬೇಕು ಅದು ವಿಧಿ ಲಿಖಿತ ಅಂತಾ ಅತ್ಯಂತ ನೋವಿನಿಂದ ಹೇಳಿದ್ರು ಅಂತಾ ವಿನೋದ್ ರಾಜ್  ಹೇಳಿದ್ದಾರೆ.