ಬೆಂಗಳೂರು; ಶ್ರೀರಾಮುಲು ಅವರು ಪಕ್ಷ ಬಿಡಲ್ಲ ಎಂಬ ವಿಶ್ವಾಸ ನಮಗಿದೆ ಎಂದು ಮಾಜಿ ಸಿಎಂ ಡಿ ವಿ ಸದಾನಂದ ಗೌಡ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿ ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಂವಿಧಾನಬದ್ಧ ಚುನಾವಣೆ ಆಗುತ್ತದೆ. ಸಹಮತ ಆಗದಿದ್ದರೆ ಚುನಾವಣೆ ಆಗಬಹುದು. ಬಿಜೆಪಿಯಲ್ಲಿ ಒಂದು ಹಂತದವರೆಗೆ ಎಲ್ಲವನ್ನೂ ಹೈಕಮಾಂಡ್ ಸರಿ ಮಾಡುತ್ತಾರೆ ಎಂಬ ಚರ್ಚೆ ನಡೆಯುತ್ತಿತ್ತು. ಆದ್ರೆ ಯಾಕೋ ಏನೋ ಕೇಂದ್ರದವರು ಆಂತರಿಕ ಸಂಘರ್ಷ ಕೊನೆಗೊಳಿಸುವ ಪ್ರಯತ್ನ ಮಾಡಲಿಲ್ಲ..ಅದಕ್ಕಾಗಿ ಈ ಬಾರಿಯ ಕೋರ್ ಕಮಿಟಿಯಲ್ಲಿ ಸುದೀರ್ಘವಾಗಿ ಮನಸಿನ ಅಂತರಾಳದ ಮಾತುಗಳನ್ನು ಆಡಿದೆವು.ಇತ್ತೀಚೆಗೆ ಕೋರ್ ಕಮಿಟಿ ಪ್ರಭಾವಿಯಾಗಿ ಇರಲಿಲ್ಲ, ಆದರೆ ಮೊನ್ನೆಯ ಸಭೆ ಚೆನ್ನಾಗಿ ಆಗಿದೆ. ಎಲ್ಲವನ್ನೂ ಗಂಭೀರವಾಗಿ ಚರ್ಚೆ ಮಾಡಿದ್ದೇವೆ. ಹೈಕಮಾಂಡ್ ಕೋರ್ ಕಮಿಟಿ ಚರ್ಚೆಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತಿರಲಿಲ್ಲ.ಪಕ್ಷದ ಒಳಗಿನ ಆಂತರಿಕ ಸಂಘರ್ಷದ ಪರ್ವತವೇ ಸೃಷ್ಟಿಯಾಗಿದೆ, ಮೊದಲು ಇದನ್ನು ಸರಿಪಡಿಸಬೇಕು.ಆಂತರಿಕ ಕಚ್ಚಾಟ ಸರಿಪಡಿಸದೇ ಯಾವ ಸಂಘಟನಾ ಪರ್ವ ಮಾಡಿದರೂ ಪ್ರಯೋಜನ ಇಲ್ಲ ಎಂದಿದ್ದಾರೆ.
ಕೋರ್ ಕಮಿಟಿಯಲ್ಲಿ ಪಕ್ಷದಲ್ಲಿ ಎಲ್ಲಿ ಏನಾಗುತ್ತಿದೆ, ಎಲ್ಲಿ ತಪ್ಪಾಗಿದೆ ಅಂತ ತಿಳಿಸಿದ್ದೇವೆ.ಹಿಂದಿನ ಕೋರ್ ಕಮಿಟಿ ಸಭೆಯಲ್ಲಿ ಇಬ್ಬರು ಶಾಸಕರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿತ್ತು, ಆದರೂ ಏನೂ ಕ್ರಮ ಆಗಿಲ್ಲ.ಶಿಸ್ತು ಸಮಿತಿಯಿಂದ ಯತ್ನಾಳ್ ಗೆ ನೋಟೀಸ್ ಕೊಟ್ಟರು, ಅದರ ಮುಂದಿನ ಪ್ರಕ್ರಿಯೆ ಆಗಲೇ ಇಲ್ಲ.ಕರ್ನಾಟಕ ಬಿಜೆಪಿ ಬಗ್ಗೆ ಕೇಂದ್ರದ ಬಿಜೆಪಿಯವರಿಗೆ ಯಾವ ಅಭಿಪ್ರಾಯ ಇದೆ ಅಂತ ಗೊತ್ತಾಗಬೇಕು. ಮನೆಯಲ್ಲಿ ಹಿರಿಯರು ಸಭೆ ಸೇರಿದ್ದು ನಿಜ.ಆದರೆ ಅದು ಯಾವುದೇ ಗುಂಪುಗಾರಿಕೆ ಸಭೆ ಅಲ್ಲ. ಕೋರ್ ಕಮಿಟಿ ಚರ್ಚೆಗಳ ಅನುಷ್ಠಾನಕ್ಕೆ ನಮ್ಮ ಮನೆಯಲ್ಲಿ ಸಭೆ ಮಾಡಿದ್ದೆವು.ಕೋರ್ ಕಮಿಟಿ ಸ್ಟ್ರಾಂಗ್ ಆದರೆ ಗುಂಪುಗಾರಿಕೆ ನಿಲ್ಲಬಹುದು.ಹಲವು ಸಂಗತಿಗಳು ಕೋರ್ ಕಮಿಟಿ ಚರ್ಚೆಯಲ್ಲಿ ಆಗಿದೆ.ಕೋರ್ ಕಮಿಟಿ ಚರ್ಚೆಗಳನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಬೇಕು.ನಾನು ಈಗ ಸ್ವಲ್ಪ ಹೊತ್ತಿನ ಹಿಂದೆ ಶ್ರೀರಾಮುಲು ಜತೆ ಮಾತಾಡಿದೆ.ಮಾಧ್ಯಮಗಳಲ್ಲಿ ಮಾತಾಡುವುದು ಬೇಡ ಅಂತ ಹೇಳಿದ್ದೇನೆ.ಅವರು ಪಕ್ಷ ಬಿಡಲ್ಲ ಎಂಬ ವಿಶ್ವಾಸ ನಮಗಿದೆ.ಆದರೆ ಮಾಧ್ಯಮಗಳಲ್ಲಿ ಪಕ್ಷ ಬಿಡುತ್ತಾರೆ ಅಂತ ಸುದ್ದಿಗಳು ಬರುತ್ತಿವೆ ಎಂದಿದ್ದಾರೆ.ನಾನು ಪಕ್ಷ ಬಿಡಲ್ಲ ಅಂತ ಹೇಳಿದ್ದಾರೆ. ಶ್ರೀರಾಮುಲು ಒಬ್ಬ ನಿಷ್ಠಾವಂತ ನಾಯಕ ಎಂದು ಅವರು ಹೊಗಳಿದ್ದಾರೆ.