ಬೆಂಗಳೂರು; ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಶಾಸಕ ಎಸ್.ಟಿ ಸೋಮಶೇಖರ್ ಭೇಟಿಯಾಗಿದ್ದಾರೆ. ಭೇಟಿಯಾದ ಬಳಿಕ ಮಾತನಾಡಿದ ಶಾಸಕ ಎಸ್ ಟಿ ಸೋಮಶೇಖರ್, ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಿಗೆ ಅಭಿನಂದಿಸಲು ಬಂದಿದ್ದೆ. ಯಶವಂತಪುರ ಕ್ಷೇತ್ರಕ್ಕೆ 75 ಕೋಟಿ ಅನುದಾನ ಕೊಟ್ಟಿದ್ದಾರೆ. ಚನ್ನಪಟ್ಟಣ ಕೂಡ ನನ್ನ ಹುಟ್ಟೂರು. ಅಲ್ಲಿಗೂ ಸಾಕಷ್ಟು ಅನುದಾನ ಕೊಟ್ಟಿದ್ದಾರೆ ಎಂದಿದ್ದಾರೆ.
ಇನ್ನು ಚನ್ನಪಟ್ಟಣ ಉಪಚುನಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಯೋಗೇಶ್ವರ್ ಕಲಾಪುರುಷ, ಯೋಗಪುರುಷ. ಬಿಜೆಪಿ, ಜೆಡಿಎಸ್ ತಮ್ಮ ತನು ಮನ ಧನ ಖರ್ಚು ಮಾಡಿದ್ರು. ಜನಕ್ಕೆ ನಿಖಿಲ್ ಮೇಲೆ ಕೋಪ ಅಲ್ಲ. ಕುಮಾರಸ್ವಾಮಿ ಮೇಲೆ ಕೋಪ. ಕೇಂದ್ರ ಸಚಿವರಾಗಿ, ಎಲ್ಲೂ ಕೂಡಾ ಇಂಡಸ್ಟ್ರಿ ತರ್ತೀನಿ ಅನ್ನಲಿಲ್ಲ.ಸಿದ್ದರಾಮಯ್ಯ, ಡಿಕೆ ಮೇಲೆ ಆರೋಪ ಮಾಡ್ತಾ ಬಂದ್ರು. ಹಾಗಾಗಿ ಜನ ಕುಮಾರಸ್ವಾಮಿ ಅವರನ್ನು ನಂಬಲಿಲ್ಲ. ಅಭಿವೃದ್ಧಿ ಬಗ್ಗೆ ಮಾತಾಡದೇ, ಕೇವಲ ಟೀಕೆ ಮಾಡ್ತಾ ಬಂದ್ರು. ದೇವೇಗೌಡ ಅಂತಹವರೇ ಕೋತ್ವಾಲ್ ರಾಮಚಂದ್ರ ಹೆಸರು ಹೇಳಿ ಟೀಕೆ ಮಾಡಿದ್ರು. ಆದ್ರೆ ಯೋಗೇಶ್ವರ್ ಅಭಿವೃದ್ಧಿ ಬಗ್ಗೆ ಮಾತ್ರ ಮಾತಾಡಿ ಮತ ಕೇಳ್ತಾ ಇದ್ರು. ಹಾಗಾಗಿ ಜನ ಯೋಗೇಶ್ವರ್ ಅವರನ್ನು ಆಯ್ಕೆ ಮಾಡಿಕೊಂಡರು. ದೇವೇಗೌಡರು ಪ್ರಚಾರ ಮಾಡಲಿ. ಆದ್ರೆ ಸರ್ಕಾರವನ್ನು ಕಿತ್ತು ಹಾಕ್ತೀನಿ ಅನ್ನೋದು, ಡಿಕೆಶಿ ವಿರುದ್ದ ಮಾತನಾಡುವುದು ಸರಿಯೇ?. ಇದೆಲ್ಲಾ ಕಾರಣಗಳಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಜನ ಇವರ ಕಣ್ಣೀರಿಗೂ ಕರಗಲಿಲ್ಲ. ಯಾರು, ಯಾವಾಗ ಕಣ್ಣೀರು ಹಾಕ್ತಾರೆ ಅನ್ನೊ ಮಾಹಿತಿ ಚನ್ನಪಟ್ಟಣ ಜನತೆಗೆ ಇದೆ. ಜನ ಕಣ್ಣೀರಿಗೆ ಕರಗಲಿಲ್ಲ ಎಂದಿದ್ದಾರೆ.
ಡಿಕೆಶಿ ಒಕ್ಕಲಿಗ ಲೀಡರ್ ಅಲ್ಲ ಎಂಬ ಆರ್.ಅಶೋಕ್ ಹೇಳಿಕೆ ವಿಚಾರ; ನಾನು ಲೀಡರ್ ಅಲ್ಲ, ನಾನು ಯಾವತ್ತು ಲೀಡರ್ ಅಂದಿದ್ದೇನೆ ಎಂದ ಡಿಕೆಶಿ
ಬೆಂಗಳೂರು; ಡಿಕೆಶಿ ಒಕ್ಕಲಿಗ ಲೀಡರ್ ಅಲ್ಲ ಎಂಬ ಆರ್.ಅಶೋಕ್ ಹೇಳಿಕೆ ವಿಚಾರಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ನಾನು ಲೀಡರ್ ಅಲ್ಲ, ನಾನು ಯಾವತ್ತು ಲೀಡರ್ ಅಂದಿದ್ದೇನೆ ಎಂದು ಡಿಕೆಶಿ ಹೇಳಿದ್ದಾರೆ.
ಹೌದು ತಮ್ಮನನ್ನು ನಾನು ಗೆಲ್ಲಿಸಲು ಆಗಿಲ್ಲ. ಆದರೆ ಅಶೋಕಣ್ಣ ಕನಕಪುರಕ್ಕೆ ಬಂದು ಎಷ್ಟು ವೋಟ್ ತೆಗೆದುಕೊಂಡರು?. ಕುಸ್ತಿ ಮಾಡ್ತೀನಿ, ಡಿಚ್ಚಿ ಹೊಡೆಯುತ್ತೇನೆ ಎಂದು ಬಂದು ಎಷ್ಟು ವೋಟ್ ಬಂತಯ್ಯ ನಿನಗೆ?. ತನ್ನ ತಮ್ಮ ಸೋತಿದ್ದು ನಿಜ, ಆದರೆ ಅದರ ಕೊಂಡಿಗಳು ಕಳೆದುಕೊಳ್ಳುತ್ತಿದೆಯಲ್ವಾ? .ರಾಜರಾಜೇಶ್ವರನಗರ, ಚನ್ನಪಟ್ಟಣದಲ್ಲಿ ಏನಾಯ್ತು? ಎಂದಿದ್ದಾರೆ.
ಜೆಡಿಎಸ್ ಇಬ್ಬಾಗದ ಕುರಿತು ಸಿ.ಪಿ. ಯೋಗೇಶ್ವರ್ ಹೇಳಿಕೆ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ನನಗೆ ಅದು ಗೊತ್ತಿಲ್ಲ, ಅದರ ಬಗ್ಗೆ ಮಾತನಾಡಲ್ಲ. ಜಿಟಿ ದೇವೇಗೌಡ ಹಿರಿಯ ನಾಯಕ. ಅವರು ಆ ಪಕ್ಷಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ನಾವು ಈ ಹಿಂದೆ ಆಫರ್ ಮಾಡಿದ್ದೆವು . ಆದರೆ ದಳದಲ್ಲಿ ಇರುತ್ತೇವೆ ಎಂದಿದ್ದರು. ಆದರೆ ಇವಾಗ ಅವರಿಗೆ ಅಸಮಾಧಾನ ಆಗಿದೆ. ಆದರೆ ನನ್ನ ಬಳಿ ಚರ್ಚೆ ಮಾಡಿಲ್ಲ ಎಂದಿದ್ದಾರೆ.











