ಮನೆ Latest News ನಾನು ಯಾವ ಕಾಂಗ್ರೆಸ್ ಪಾರ್ಟಿಯಲ್ಲೂ ಭಾಗಿಯಾಗಿಲ್ಲ; ಬೆಂಗಳೂರಿನಲ್ಲಿ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಹೇಳಿಕೆ

ನಾನು ಯಾವ ಕಾಂಗ್ರೆಸ್ ಪಾರ್ಟಿಯಲ್ಲೂ ಭಾಗಿಯಾಗಿಲ್ಲ; ಬೆಂಗಳೂರಿನಲ್ಲಿ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಹೇಳಿಕೆ

0

ಬೆಂಗಳೂರು:  ಬಿಜೆಪಿಯಿಂದ ಶೋಕಾಸ್ ನೋಟೀಸ್ ಜಾರಿಯಾದ ಬೆನ್ನಲ್ಲೇ ಶಾಸಕ ಎಸ್ ಟಿ ಸೋಮಶೇಖರ್ ಸುದ್ದಿಗೋಷ್ಟಿ ನಡೆಸಿದ್ರು. ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ನಾನು ಬೆಳಗ್ಗೆ ನೋಟೀಸ್ ಪ್ರತಿ  ತರಿಸಿಕೊಂಡಿದ್ದೇನೆ.ನಾನು ಯಾವ ಕಾಂಗ್ರೆಸ್ ಪಾರ್ಟಿಯಲ್ಲೂ ಭಾಗಿಯಾಗಿಲ್ಲ.ಇದು ಬಿಜೆಪಿ ಆರೋಪ ಅಷ್ಟೇ. ನಾನು ಬೆಳಗಾವಿಯಲ್ಲಿ ಗಾಂಧಿ ಕಾರ್ಯಕ್ರಮ ಕ್ಕೆ ಭಾಗಿ ಆಗಿದ್ದೆ.  ನಾನು ನೂರಕ್ಕೆ ನೂರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎಲ್ಲಾ ಮಂತ್ರಿಗಳ ಜೊತೆ ಮಾತಾಡುತ್ತೇನೆ ಎಂದರು.

ಡಿಸಿಎಂ ನಮ್ಮ‌ ಕ್ಷೇತ್ರಕ್ಕೆ ಬಂದಾಗ ಭೇಟಿ ಆಗಿದ್ದೇನೆ. ಕುರುಬ ಸಮುದಾಯದ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದೆ.ನಾನು ಕಾಂಗ್ರೆಸ್ ಪಾರ್ಟಿಯ ಯಾವುದೇ ಕಾರ್ಯಕ್ರಮಕ್ಕೆ ಭಾಗಿ ಆಗಿಲ್ಲ. ಈ ನೋಟೀಸ್ ಗೆ ಉತ್ತರ ನೀಡುತ್ತೇನೆ. ಇನ್ನೂ ನೋಟೀಸ್ ಬಗ್ಗೆ ಯಾರ ಜೊತೆಗೂ ಚರ್ಚೆ ಮಾಡಿಲ್ಲ. ನಾನು ಕಾಂಗ್ರೆಸ್ ಪಕ್ಷದ ಯಾವ ಸಭೆಯಲ್ಲೂ ಭಾಗವಹಿಸಿಲ್ಲ. ಹೀಗೆಲ್ಲಾ ಬಿಜೆಪಿಯವರೇ ಅಪಪ್ರಚಾರ ಮಾಡಿದ್ದಾರೆ. ಬೆಳಗಾವಿಯಲ್ಲಿ ಕಾಂಗ್ರೆಸ್ ಸಭೆಯಲ್ಲಿ ಭಾಗವಹಿಸಿಲ್ಲ, ಅದು ಸರ್ಕಾರದ ಕಾರ್ಯಕ್ರಮ ಆಗಿತ್ತು.ಕ್ಷೇತ್ರದ ವಿಚಾರಕ್ಕೆ ನಾನು ಮಂತ್ರಿಗಳನ್ನು ಭೇಟಿ ಮಾಡಲೇಬೇಕಾಗುತ್ತದೆ, ಮಾಡಿದ್ದೇನೆ.ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆ ಹೊರತು ಕಾಂಗ್ರೆಸ್ ಸಭೆಗಳಲ್ಲಿ ಭಾಗವಹಿಸಿಲ್ಲ. ಪಕ್ಷದ ಶಿಸ್ತು ನಾನು ಉಲ್ಲಂಘಿಸಿಲ್ಲ. ನೋಟೀಸ್ ಗೆ ಉತ್ತರ ಕೊಡಬೇಕು, ಕೊಡುತ್ತೇನೆ.ಬಜೆಟ್ ಸಭೆ, ಬೆಂಗಳೂರು ಅಭಿವೃದ್ಧಿ ಸಂಬಂಧದ ಸಭೆಯಲ್ಲಿ ಭಾಗವಹಿಸಿದ್ದೆ. ಆದರೆ ಇದ್ಯಾವುದೂ ಪಕ್ಷ ವಿರೋಧಿ ಚಟುವಟಿಕೆ ಅಲ್ಲ ಎಂದಿದ್ದಾರೆ.

ಯಾವ ಕಾರಣಕ್ಕೂ ಬಿಜೆಪಿಗೆ ಮುಜುಗರ ಆಗುವಂತಹ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿಲ್ಲ. ನಾನು ನನ್ನ ವಕೀಲರ ಜೊತೆ ಚರ್ಚಿಸಿ ನೋಟೀಸ್ ಗೆ ಉತ್ತರ ಕೊಡುತ್ತೇನೆ.ನಾನು ಯಾವ ಬಿಜೆಪಿ ನಾಯಕರ ವಿರುದ್ಧವೂ ಮಾತಾಡಿಲ್ಲ.ಪಕ್ಷಕ್ಕೆ ಮುಜುಗರ ಮಾಡುವವರೇ ಬೇರೆಯವರು ಇದ್ದಾರೆ.ಕಾಂಗ್ರೆಸ್ ನಿಂದ ಬಂದು ಮಂತ್ರಿಯಾಗಿ ಕೆಲಸ ಮಾಡಿದ್ದೇನೆ.ಕ್ಷೇತ್ರಕ್ಕೆ ಉಪಯೋಗವಾಗುವ ಕೆಲಸ‌ ಮಾಡಿದ್ದೇನೆ. ಡಿ.ಕೆ. ಶಿವಕುಮಾರ್ ಜೊತೆ ಆಪ್ತತೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಅಧ್ಯಕ್ಷರು ಇರಬಹುದು. ಆದರೆ ಅವರು ಡಿಸಿಎಂ, ಬೆಂಗಳೂರು ಸಚಿವರು. ನನ್ನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎಲ್ಲವೂ ಡಿ.ಕೆ. ಶಿವಕುಮಾರ್ ಗೇ ಬರುತ್ತದೆ, ಹಾಗಾಗಿ ಅವರನ್ನು ಭೇಟಿ ಮಾಡಿದ್ದೇನೆ. ಡಿ.ಕೆ. ಶಿವಕುಮಾರ್ ಅವರನ್ನು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಭೇಟಿ ಮಾಡಿಲ್ಲ.ಪಕ್ಷಕ್ಕೆ ಡ್ಯಾಮೇಜ್ ಮಾಡಿದ ಕ್ರಿಯೆ ನೊಟೀಸ್ ಕೊಡಲ್ಲ ಇವರು.ಹೆಚ್‌ಐವಿ ಇಂಜೆಕ್ಷನ್ ಚುಚ್ಚುವವರಿಗೆ, ಒಕ್ಕಲಿಗ ಹೆಣ್ಮಕ್ಕಳ ಬಗ್ಗೆ ಅಶ್ಲೀಲವಾ್ಇ ಮಾತಾಡುವವರಿಗೆ ನೊಟೀಸ್ ಕೊಡಲ್ಲ ಇವರು ಎಂದಿದ್ದಾರೆ.

ಜೆಡಿಎಸ್ ಪರ ಮತ ಹಾಕುವಂತೆ ರಾಜ್ಯಸಭೆ ಚುನಾವಣೆಯಲ್ಲಿ ಸೂಚನೆ ನೀಡಿದ್ದರು.ಹೀಗಾಗಿ ನಾನು ಕ್ರಾಸ್ ವೋಟ್ ಹಾಕಿದೆ‌.ಚನ್ನಪಟ್ಟಣ ನಮ್ಮ ಊರು, ಹಾಗಾಗಿ ಉಪಚುನಾವಣೆಯಲ್ಲಿ ನಾನು ಅಲ್ಲಿ ಕ್ಯಾಂಪೇನ್ ಮಾಡಿದ್ದೇನೆ. ಬಿಜೆಪಿಯಲ್ಲಿ ಕೆಲವು ದೊಡ್ಡ ದೊಡ್ಡ ನಾಯಕರೇ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆ.ಸಣ್ಣ ಪುಟ್ಟ ನಾಯಕರ ಮೇಲೆ ಯಾಕೆ ಕ್ರಮ?. ನಾನು ಒಂದೇ ಒಂದು ದಿನ ಕಾಂಗ್ರೆಸ್ ಕಚೇರಿಗೆ ಹೋಗಿದ್ನಾ?. ಸಣ್ಣವರಿಗೆ ಒಂದು, ಬಲಾಢ್ಯರಿಗೆ ಒಂದಾ? ನನಗೂ ಶಕ್ತಿ ಇದೆ, ಎದುರಿಸುತ್ತೇನೆ.ಹೈಕಮಾಂಡ್ ನೊಟೀಸ್ ಬಂದಿದ್ದಕ್ಕೆ ಬೇಸರ ಆಗಿಲ್ಲ,  ಖುಷಿ ಆಗಿದೆ.ನಾನು ವಿಜಯೇಂದ್ರ ಪರ, ಯತ್ನಾಳ್ ವಿರುದ್ಧ ಎಂದು ಅಲ್ಲ.ಮಾಧ್ಯಮದವರು ಕೇಳಿದಾಗ ನಾನು ಇರುವುದನ್ನು ಇದ್ದ ಹಾಗೆ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದ್ರು.

ಅಧಿವೇಶನ ಸಂದರ್ಭದಲ್ಲಿ ಬಿಜೆಪಿ 100% ವಿಫಲವಾಗಿದೆ. ಏನೇ ವಿಚಾರ ಬಂದರೂ ಸರ್ಕಾರಕ್ಕೆ ಅಲ್ಲೇ ಬಿಸಿ ಮುಟ್ಟಿಸಬೇಕಿತ್ತು. ಗ್ರೇಟರ್ ಬೆಂಗಳೂರು ವಿಧೇಯಕ ಎರಡೂ ಸದನದಲ್ಲಿ ಪಾಸ್ ಆಗಿದೆ. ರಾಜ್ಯಪಾಲರ ಬಳಿ ಹೋಗಿ ದೂರು ಕೊಡುತ್ತಾರೆ, ಇಲ್ಲಿ ಒಗ್ಗಟ್ಟಿಲ್ಲ. ಅಧಿವೇಶನ ಸಂಧರ್ಭದಲ್ಲಿ ಸ್ಪೀಕರ್ ಪೀಠದಬಳಿ ಬಡಪಾಯಿಗಳನ್ನು ಹತ್ತಿಸಿದ್ದಾರೆ. ಬಲಾಡ್ಯರು ಯಾಕೆ ಹತ್ತಲಿಲ್ಲ? ಎಂದು ಪ್ರಶ್ನಿಸಿದ್ದಾರೆ.

ನಾನು ಪಕ್ಷಕ್ಕೆ ಬಂದಾಗ ಯಾವುದೇ ಅನ್ಯಾಯ ಚುನಾವಣೆ ಸಂದರ್ಭದಲ್ಲಿ ಇವೆಲ್ಲಾ ಬರುತ್ತವೆ, ನೀವು ತಲೆ ಕೆಡಿಸಿಕೊಳ್ಳಬೇಡಿ ಅಂದರು. ಅವರಲ್ಲೇ ಒಂದು ಗುಂಪು ಸೋಮಶೇಖರ್ ಕಾಂಗ್ರೆಸ್ ಗೆ ಹೋಗುತ್ತಾನೆ ಅಂದರು. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಜೊತೆ ಹೋಗಬಾರದಾ?. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪೋಸ್ಟರ್ ಗಳಲ್ಲಿ ನನ್ನ ಫೋಟೋ ಹಾಕಲಿಲ್ಲ. ಚುನಾವಣಾ ಪ್ರಚಾರಕ್ಕೆ ನನ್ನ ಕರೆಯಲಿಲ್ಲ.ಪಕ್ಷದ ಕಾರ್ಯಕ್ರಮಗಳಿಗೆ ಯಾರೂ ಕರೆದಿಲ್ಲ. ಬೆಂಗಳೂರು ಅಭಿವೃದ್ಧಿ ಕುರಿತ ಸಭೆಗೂ ನನ್ನ ಕರೆಯಲಿಲ್ಲ. ನಾನು ಪಾಸಿಟಿವ್ ಯೋಚನೆಯಲ್ಲೇ ರಾಜಕೀಯ ಮಾಡಿಕೊಂಡು ಬಂದವನು. ಬಿಜೆಪಿ ಹೈಕಮಾಂಡ್ ಏನೇ ತೀರ್ಮಾನ ತೆಗೆದುಕೊಂಡರೂ ಸ್ವಾಗತವೇ. 2028ಕ್ಕೆ ವಿಧಾನಸಭೆ ಚುನಾವಣೆ ಬರುತ್ತದೆ. ಅಷ್ಟರೊಳಗೆ ಬಿಜೆಪಿಯವರು ತೀರ್ಮಾನ ಆಗಲಿಲ್ಲ. ಸಂಘ ಪರಿವಾರದಿಂದಲೂ ಅನ್ಯಾಯ ಆಗಿಲ್ಲ. ನನ್ನ ಸಮಸ್ಯೆಯನ್ನು ಸರಿಯಾಗಿ ಪರಿಹರಿಸಲಿಲ್ಲ. ಮಾಡಲಿ.ಇಲ್ಲದಿದ್ದರೆ 2028 ರ ಚುನಾವಣೆ ವೇಳೆ ನಾನೇ ಮುಂದಿನ ತೀರ್ಮಾನ ಮಾಡುತ್ತೇನೆ ಎಂದಿದ್ದಾರೆ.