ಬೆಂಗಳೂರು; ವಿಜಯೇಂದ್ರ ಅವರು ವಿರುದ್ಧ ಸಂಸದ ಡಾ ಕೆ ಸುಧಾಕರ್ ಅವರು ನೀಡಿರುವ ಹೇಳಿಕೆಗೆ ಶಾಸಕ ಎಸ್.ಆರ್. ವಿಶ್ವನಾಥ್ ತಿರುಗೇಟು ಕೊಟ್ಟಿದ್ದಾರೆ.
ವಿಜಯೇಂದ್ರ ಅವರಿಗೆ ದುರಂಹಕಾರ ಎಂದು ನೀನು ಹೇಳುತ್ತಿ. ಆದರೆ ನೀನು ಮಂತ್ರಿ ಆಗಿದ್ದಾಗ ದುರಂಹಕಾರಿ ಆಗಿರಲಿಲ್ವಾ? ಶಾಸಕರ, ಮಂತ್ರಿಗಳ ಫೋನ್ ತೆಗೆಯುತ್ತಿದ್ಯಾ ನೀನು?.ಯಲಹಂಕ ಕಾರ್ಯಕರ್ತರು ಹೋದರೆ ನೀನು ಮನೆಗೆ ಸೇರಿಸುತ್ತಿದ್ಯಾ?.ನಿನಗೆ ತಾಕತ್ ಇದ್ದರೆ ಬೇರೆ ಪಕ್ಷದಿಂದ ಚುನಾವಣೆಗೆ ನಿಂತುಕೋ.ಯಲಹಂಕದಲ್ಲಿ ನೀನು ಒಂದು ವೋಟ್ ಲೀಡ್ ತೆಗೆದುಕೋ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಕೋವಿಡ್ ನಲ್ಲಿ ಸತ್ತ ಆತ್ಮಗಳ ಆಶೀರ್ವಾದ ನಿನಗೆ ಚೆನ್ನಾಗಿ ಇರಬೇಕು. ಪಕ್ಷದ ಸಿಸ್ಟಂ ನಿನಗೆ ಗೊತ್ತಿರಲಿ ಸುಧಾಕರ್.ನನ್ನ ಕ್ಷೇತ್ರದಲ್ಲಿ ಬಂದು ನನ್ನ ವಿರುದ್ಧವೇ ಎತ್ತಿ ಕಟ್ಟುವ ಕೆಲಸ ಮಾಡಿದೆ. ನಮ್ಮಲ್ಲಿ ಅದೆಲ್ಲಾ ನಡೆಯಲ್ಲ.ಕೇವಲ ಒಂದು ಜಿಲ್ಲಾಧ್ಯಕ್ಷರ ವಿಚಾರಕ್ಕೆ ಬಹಿರಂಗವಾಗಿ ಹೇಳಿದ್ದು ತಪ್ಪಲ್ವಾ?.ಏನು ವರಿಷ್ಠರ ಜೊತೆ ಮಾತಾಡಿ ನೀನು ತೀರ್ಮಾನ ತೆಗೆದುಕೊಳ್ಳುವುದು?ಏನು ಪಕ್ಷ ಬಿಟ್ಟು ಹೋಗ್ತಿಯಾ?.ನಿನ್ನ ದುಡ್ಡು, ಪ್ರಭಾವ ಎಲ್ಲಾ ನಡೆಯಲ್ಲ.ಗೌರಿಬಿದನೂರಿನಲ್ಲಿ ಪಕ್ಷೇತರ ಅಭ್ಯರ್ಥಿಗೆ ಸಪೋರ್ಟ್ ಮಾಡಿದ್ದು ಊರಿಗೆ ಗೊತ್ತಿಲ್ವಾ?.ಇಷ್ಟ ಇದ್ದರೆ ಇರು.ನಿನ್ನಂತಹವರು ಲಕ್ಷಾಂತರ ಜನ ಪಕ್ಷದಲ್ಲಿ ಇದ್ದಾರೆ. ನಲ್ವತ್ತು ವರ್ಷ ರಾಜಕೀಯ ಮಾಡಿ ನಾವೇ ಬಾಯಿ ಮುಚ್ಚಿಕೊಂಡು ಇದ್ದೇವೆ. ನಾವು ಚುನಾವಣೆಯಲ್ಲಿ ಅಧಿಕಾರಕ್ಕೆ ಬರದೇ ಇರಲು ನೀವು ಮಾಡಿದ ಕೋವಿಡ್ ಹಗರಣಗಳೇ ಕಾರಣ ಎಂದು ಸ್ಪೋಟಕ ಹೇಳಿಕೆ ಕೊಟ್ಟಿದ್ದಾರೆ.
ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕಾತಿ ಕುರಿತು ಸಂಸದ ಡಾ. ಸುಧಾಕರ್ ಅಸಮಾಧಾನ ವಿಚಾರದ ಬಗ್ಗೆ ಮಾತನಾಡಿದ ಅವರು ಸನ್ಮಾನ್ಯ, ಗೌರವಾನ್ವಿತ ಸಂಸದ ಡಾ. ಸುಧಾಕರ್ ರಾಜ್ಯಾಧ್ಯಕ್ಷ ವಿಜಯೇಂದ್ರ ಬಗ್ಗೆ ಬಹಳ ಕೇವಲವಾಗಿ ಮಾತಾಡಿದ್ದಾರೆ.ಅವರು ಮಾತಾಡಿರುವುದು ನಮಗೆ ಹಿಡಿಸಿಲ್ಲ.ಏನೇ ಇದ್ದರೂ ರಾಜ್ಯಾಧ್ಯಕ್ಷರ ಜೊತೆ ಮಾತಾಡಬಹುದಿತ್ತು. ಪರೋಕ್ಷವಾಗಿ ನನ್ನ ಕ್ಷೇತ್ರದ ಬಗ್ಗೆಯೂ ಮಾತಾಡಿದ್ದಾರೆ.ನಾನೇನು ದಡ್ಡ ಅಲ್ಲ.ಸುಧಾಕರ್ ನನ್ನಿಂದಲೇ ಸರ್ಕಾರ ರಚನೆ ಆಯಿತು ಅಂತಾ ಹೇಳಿದ್ದಾರೆ.17 ಶಾಸಕರು ಬಂದಾಗ ಕೊನೆಯದಾಗಿ ಮೆಜಾರಿಟಿ ಆದ ಬಳಿಕ ಬಂದವರು ಸುಧಾಕರ್.ವಿಧಾನಸೌಧದಲ್ಲಿ ಸುಧಾಕರ್ ಮೇಲೆ ಹಲ್ಲೆ ಆದಾಗ ರಕ್ಷಣೆ ಮಾಡಿ ಮನೆಗೆ ಕರೆದುಕೊಂಡು ಹೋಗಿ ಬಿಟ್ಟವನು ನಾನು.ಸಮರ್ಥ ಸಚಿವರಾಗಿದ್ದೂ ಸಾಕಷ್ಟು ಅನುದಾನ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಹಾಕಿದರೂ ಯಾಕೆ ನೀವು ಸೋತಿರಿ?.ನಿಮಗೆ ಅಸಮಾಧಾನ ಇರಬಹುದು, ಆದರೆ ವಿಜಯೇಂದ್ರ ಬಗ್ಗೆ ಬಹಿರಂಗವಾಗಿ ಮಾತಾಡಿದ್ರಿ?.ನನಗೂ ವಿಜಯೇಂದ್ರ ಬಗ್ಗೆ ಸಣ್ಣ ಪುಟ್ಟ ಅಸಮಾಧಾನ ಇದ್ದರೂ ನಾನು ಎಲ್ಲೂ ಹೊರಗೆ ಮಾತಾಡಿಲ್ಲ.ಲೋಕಸಭಾ ಚುನಾವಣೆ ವೇಳೆ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ನಿಲ್ಲುವ ಬಗ್ಗೆ ಮಾತಾಡಿದ್ದು ಸುಳ್ಳಾ?.ಎಲ್ಲಿ ಪ್ರಮಾಣ ಮಾಡಬೇಕು ಹೇಳಿ ಬನ್ನಿ, ನಾನು ಬರುತ್ತೇನೆ. ಆಗ ಎಲ್ಲಿ ಹೋಗಿತ್ತು ನಿಮ್ಮ ಪಕ್ಷ ನಿಷ್ಠೆ.ಹೌದು ಆಗ ನಾವು ವಿರೋಧ ಮಾಡಿದ್ದು ನಿಜ, ಆಗ ನಾನು ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ನನ್ನ ಮಗನ ಹೆಸರು ಹೇಳಿದ್ದೆ ಅಷ್ಟೇ ಎಂದಿದ್ದಾರೆ.
ನೀನು ಎಷ್ಟು ಲೀಡ್ ತಗೊಂಡೆ?.ಚಿಕ್ಕಬಳ್ಳಾಪುರದಲ್ಲಿ ಯಾಕೆ ಸೋತೆ ನೀನು?.ಬಾಗೇಪಲ್ಲಿಯಲ್ಲಿ ಯಾಕೆ ಸೋತೆ?.ಯಲಹಂಕ ಕ್ಷೇತ್ರದ ಕಾರ್ಯಕರ್ತರ ಬಗ್ಗೆ ನಿನ್ನೆ ಮಾತಾಡಿದ್ದೀರಿ.ಅಮಿತ್ ಷಾ ಕರೆದು ಮಾತಾಡಿದ ಮೇಲೆ ನಾನು ಚುನಾವಣೆಗೆ ಕೆಲಸ ಮಾಡಿದ್ದೇನೆ.ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದು ಸಾಬೀತು ಮಾಡಿದರೆ ರಾಜಕೀಯ ಬಿಟ್ಟು ಬಿಡುತ್ತೇನೆ.ನಾನು ಯಲಹಂಕ ಕ್ಷೇತ್ರಕ್ಕೆ ಸುಧಾಕರ್ ಕರೆಸಿದ್ದು ಮೂರೇ ದಿನ. ನನಗೆ ರಾಜ್ಯಾಧ್ಯಕ್ಷರು ಜವಾಬ್ದಾರಿ ಕೊಡಲಿ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಸಂಘಟನೆ ಮಾಡಿ ತೋರಿಸುತ್ತೇನೆ, ಚಾಲೆಂಜ್ ಇದು.ನನ್ನ ಸಹವಾಸ ಗೊತ್ತಿಲ್ಲ ಇನ್ನೂ ಕೂಡಾ.ನಾನು ಸ್ನೇಹಕ್ಕೂ ಸಿದ್ಧ, ಸಮರಕ್ಕೂ ಸಿದ್ಧ.ನೂರಕ್ಕೆ ನೂರು ನೀನು ಪಕ್ಷದಲ್ಲಿ ಇರಲ್ಲ.ಒಂದು ಕಾಲು ಹೊರಗೆ ಇಟ್ಟೇ ರಾಜಕೀಯ ಮಾಡುತ್ತಿದ್ದಾರೆ.ಎಲ್ಲಿ ಅಧಿಕಾರ ಇರುತ್ತದೋ ಅಲ್ಲಿ ಹೋಗುತ್ತಾರೆ.ಪಕ್ಷವನ್ನೇ ಅಲ್ಲಾಡಿಸಲು ಹೋದರೆ?.ಬಂದು ಅಧಿಕಾರ ಅನುಭವಿಸಿದವನು ನೀನು.ನೀವು ಬರಲಿಲ್ಲ ಅಂದರೆ ನಾವು ಇಂದು ಪೂರ್ಣ ಬಹುಮತದಲ್ಲಿ ಸರ್ಕಾರ ಮಾಡುತ್ತಿದ್ದೆವು.ಚಿಕ್ಕಬಳ್ಳಾಪುರದಲ್ಲಿ ನೀನು ಗೆದ್ದಿದ್ದು ನಿನ್ನ ಹೆಸರಿನಿಂದ ಅಲ್ಲ ನೆನಪಿರಲಿ.ಸಂಘಟನೆಯಲ್ಲಿ ಜಿಲ್ಲೆ ನನ್ನದು ಬೆಂಗಳೂರು ಉತ್ತರ, ಲೋಕಸಭಾ ಕ್ಷೇತ್ರ ಮಾತ್ರ ಚಿಕ್ಕಬಳ್ಳಾಪುರ. ಸಂದೀಪ್ ರೆಡ್ಡಿ ನನ್ನ ಶಿಷ್ಯ ಅಂತಾ ಹೇಳುತ್ತಿದ್ದೀರಿ. ಜಿಲ್ಲಾಧ್ಯಕ್ಷರ ವಿಚಾರದಲ್ಲಿ ನನ್ನದು ಏನೂ ಅಸಮಾಧಾನ ಇಲ್ಲ.ಅನಾವಶ್ಯಕವಾಗಿ ನನ್ನ ಬಗ್ಗೆ, ಕ್ಷೇತ್ರದ ಬಗ್ಗೆ ಮಾತಾಡಿದರೆ ನಾನು ಸುಮ್ಮನೆ ಇರಲ್ಲ, ನಾನು ಬೇರೆಯ ರೀತಿಯಲ್ಲಿ ಪ್ರತಿಕ್ರಿಯೆ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.











