ಬೆಂಗಳೂರು; ನಟಿ ರನ್ಯಾ ರಾವ್ ಪ್ರಕರಣದಲ್ಲಿ ಸಿಐಡಿ ಕೇಸ್ ವಾಪಾಸ್ ಪಡೆದ ವಿಚಾರಕ್ಕೆ ಸಂಬಂಧಪಟ್ಟಂತೆ ಶಾಸಕ ಎಸ್.ಆರ್. ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ನಟಿ ರನ್ಯಾ ರಾವ್ ಪ್ರಕರಣದಲ್ಲಿ ಸಿಐಡಿ ಕೇಸ್ ವಾಪಾಸ್ ಪಡೆದ ವಿಚಾರದ ಬಗ್ಗೆ ಮಾತನಾಡಿದ ಅವರು ಸಿಒಡಿ ತನಿಖೆ ವಾಪಸ್ ಪಡೆದಿದ್ದಾರೆ.,ಸರ್ಕಾರಕ್ಕೆ ಮುಜುಗರ ಆಗಬಾರದೆಂದು ಅವರು ವಾಪಸ್ ಪಡೆದಿದ್ದಾರೆ. ಇಡಿ, ಸಿಬಿಐ ತನಿಖೆಗಳು ನಡೆಯುತ್ತಿವೆ ಎಂದಿದ್ದಾರೆ.
ಏವಿಯೇಶನ್ ಮಿನಿಸ್ಟರ್ ಭಾಗಿ ಎಂಬ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ಆ ರೀತಿ ಇದ್ದಿದ್ರೆ ಮದ್ವೆಗೆ ಹೋಗ್ತಿದ್ರು. ಸಚಿವ ಸಂತೋಷ್ ಒಬ್ಬ ಸಜ್ಜನ ರಾಜಕಾರಣಿ. ಅವರ ಬಾಯಲ್ಲಿ ಈ ಮಾತು ಬಂದಿರಬಹುದು. ತನಿಖೆ ಆಗ್ತಿದೆ ಹೊರ ಬರಲಿ. ಎಸ್.ಟಿ ಸೋಮಶೇಖರ್ ಬಿಜೆಪಿ ಹಾಗಾದರೇ ಅವರೇ ಯಾಕೆ ಆಗಿರಬಾರದು?. ಕೇಂದ್ರ ಸಚಿವರು ಅಂದ್ರೆ ಬೆಂಗಳೂರೇ ಯಾಕೆ, ಇಡೀ ದೇಶವೇ ಇರಬಹುದು ಅಲ್ವಾ ? ಎಂದು ಪ್ರಶ್ನಿಸಿದ್ದಾರೆ.
ನಾವು ಯಾರನ್ನ ಡಿಫೆಂಡ್ ಮಾಡಲ್ಲ; ರನ್ಯಾ ಪ್ರಕರಣದ ಬಗ್ಗೆ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ
ಬೆಂಗಳೂರು: ನಾವು ಯಾರನ್ನ ಡಿಫೆಂಡ್ ಮಾಡಲ್ಲ ಎಂದು ರನ್ಯಾ ಪ್ರಕರಣದ ಬಗ್ಗೆ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು ಪ್ರೋಟೋಕಾಲ್ ಬೈಪಾಸ್ ಸಂಬಡಿ. ಆದರೆ ಕೇಂದ್ರದ ಡಿಪ್ಲಮೋಟ್ ಅದರಲ್ಲಿರುತ್ತೆ. ನಾವು ಯಾರನ್ನ ಡಿಫೆಂಡ್ ಮಾಡಲ್ಲ. ಗೋಲ್ಡ್ ಈ ರೀತಿ ಬರೋದು ವೈಯಲೇಶನ್. ಡಿಆರ್ ಪಾಸ್ ಆಗಿ ಹೇಗೆ ಹೊರ ಬರೋಕೆ ಸಾಧ್ಯ?. ಎಂದಿದ್ದಾರೆ.
ಇದು ಒಂದೇ ಏರ್ಪೋರ್ಟ್ ಅಲ್ಲ. ಬೇರೆಡೆಯೂ ಆಗಿರಬಹುದು ಯಾಕೆ ಆಗಿರಲ್ಲ. ತನಿಖೆ ಮಾಡಿದರೆ ತಾನೇ ಹೊರಬರೋದು. ಕಸ್ಟಮ್ಸ್ ಯಾಕೆ ಬೈಪಾಸ್ ಮಾಡ್ತಾರೆ. ಲೀಗಲ್ ಆಗಿ ತಂದರೆ ಏನೂ ಸಮಸ್ಯೆ ಇಲ್ಲ.ದುಬೈನವರು ಎಷ್ಟು ಖರೀದಿ ಮಾಡಿದ್ರೂ ಕೊಡ್ತಾರೆ. ಅಫೀಶಿಯಲಿ ನೀವು ಖರೀದಿ ಮಾಡಿ ತರಬಹುದು. ನಮ್ಮಲ್ಲಿ ಕಸ್ಟಮ್ಸ್ ಇದ್ದಾರೆ, ಅವರನ್ನ ಪಾಸ್ ಮಾಡಿದ್ರೆ ತಾನೇ ಹೊರಬರೋದು. ದುಬೈನಲ್ಲಿ ಕಳ್ಳತನ ಆಗೋದಿಲ್ಲ. ಅಲ್ಲಿ ೧೦೦ ಕೆ.ಜಿ ಚಿನ್ನ ಬೇಕಾದ್ರೂ ಕೊಡ್ತಾರೆ.ಆದರೆ ಇಲ್ಲಿ ಕಸ್ಟಮ್ಸ್ ನವರು ಬಿಟ್ಟಿದ್ದೇಕೆ?
ಕರ್ನಾಟಕ ದ ಎಲ್ಲಾ ಕೆಪಿಎಸ್ಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಪರವಾಗಿ ಸರ್ಕಾರ ನಿಲ್ಲುತ್ತೆ ಎಂಬ ಭರವಸೆ ಇದೆ; ಶಾಸಕ ಪ್ರದೀಪ್ ಈಶ್ವರ್ ಹೇಳಿಕೆ
ಬೆಂಗಳೂರು; ಕರ್ನಾಟಕ ದ ಎಲ್ಲಾ ಕೆಪಿಎಸ್ಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಪರವಾಗಿ ಸರ್ಕಾರ ನಿಲ್ಲುತ್ತೆ ಎಂಬ ಭರವಸೆ ಇದೆ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.
ಕರ್ನಾಟಕ ದ ಎಲ್ಲಾ ಕೆಪಿಎಸ್ಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಪರವಾಗಿ ಸರ್ಕಾರ ನಿಲ್ಲುತ್ತೆ ಎಂಬ ಭರವಸೆ ಇದೆ. ಯುಪಿಎಸ್ಸಿ ಮಾದರಿಯಲ್ಲಿ ಪರೀಕ್ಷೆ ನಡೆದರೆ ಒಳ್ಳೆಯದು. ಪ್ರತಿವರ್ಷ ಯುಪಿಎಸ್ಸಿ ರೀತಿ ಪರೀಕ್ಷೆ ನಡೆಯಬೇಕು. ನಾಲ್ಕು ವರ್ಷಕ್ಕೆ ಒಮ್ಮೆ ಪರೀಕ್ಷೆ ನಡೆಸುವುದು ವಿದ್ಯಾರ್ಥಿಗಳಿಗೆ ಕೂಡಾ ತೊಂದರೆ. ಕೆಪಿಎಸ್ಸಿ ಯಲ್ಲಿ ಕೂಡಾ ಹದಿನೈದು ದಿನಗಳಲ್ಲಿ ಫಲಿತಾಂಶ ಬರಬೇಕು. ಇಂಗ್ಲೀಷ್ ನಲ್ಲಿ ಪ್ರಶ್ನೆ ಪತ್ರಿಕೆ ಸರಿಯಾಗಿ ಇರುತ್ತೆ.ಕನ್ನಡಕ್ಕೆ ಭಾಷಾಂತರ ಮಾಡುವಾಗ ಎಐ ಬಳಸಿ ಬಾಷಾಂತರ ಮಾಡ್ತಾ ಇದ್ದಾರೆ ಯೇ ಎಂಬ ಅನುಮಾನ ಮೂಡುತ್ತದೆ ಎಂದಿದ್ದಾರೆ.











