ಮನೆ Latest News ಡಿಕೆಶಿ ಬಿಜೆಪಿ ಗೆ ಬರ್ತಾರೆ ಎನ್ನುವ ವದಂತಿ: ದಾವಣಗೆರೆಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಪ್ರತಿಕ್ರಿಯೆ

ಡಿಕೆಶಿ ಬಿಜೆಪಿ ಗೆ ಬರ್ತಾರೆ ಎನ್ನುವ ವದಂತಿ: ದಾವಣಗೆರೆಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಪ್ರತಿಕ್ರಿಯೆ

0

ದಾವಣಗೆರೆ:  ಡಿಕೆಶಿ ಬಿಜೆಪಿ ಗೆ ಬರ್ತಾರೆ ಎನ್ನುವ ವದಂತಿ ಬಗ್ಗೆ  ದಾವಣಗೆರೆಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತೀಯ ಪಕ್ಷದ ಸಿದ್ಧಾಂತ ಒಪ್ಪಿ ಯಾರು ಬೇಕಾದರೂ ಬರಬಹುದು. ಆದ್ರೆ ಕಾಂಗ್ರೆಸ್ ಸಂಸ್ಕೃತಿ ಸಿದ್ದಾಂತ ಇಲ್ಲಿ ಒಗ್ಗಲ್ಲ .ರಾಜ್ಯ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡಿದ್ರೆ ಅದಕ್ಕೆ ಒಪ್ಪುತ್ತೇವೆ. ಡಿಕೆಶಿ ಆರ್ಎಸ್ಎಸ್ ಗೀತೆಯಾಡಿ ಮಾರನೇ ದಿನವೇ ಉಲ್ಟಾ ಹೊಡೆದರು. ಇದು ಬಿಜೆಪಿ ಪಕ್ಷದ ತತ್ವ ಸಿದ್ದಾಂತಕ್ಕೆ ಒಪ್ಪೋದಿಲ್ಲ ಎಂದು ಪರೋಕ್ಷವಾಗಿ ಡಿಕೆಶಿಯನ್ನು ಎಂಪಿ ರೇಣುಕಾಚಾರ್ಯ ಸ್ವಾಗತ ಮಾಡಿದ್ದಾರೆ.

ಸುಳ್ಳು ಭರವಸೆ ಕೊಟ್ಟು ಬಂದ ಕಾಂಗ್ರೇಸ್ ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ. ಶಾಸಕರು ಸಚಿವರು ಯಾರ ಮನೆಗೆ ಭೇಟಿ ನೀಡಬೇಕು ಎನ್ನುವ ಗೊಂದಲದಲ್ಲಿ ಇದ್ದಾರೆ. ಕಾಂಗ್ರೆಸ್ ನಲ್ಲಿ ಹೈಕಮಾಂಡ್ ಇಲ್ಲ ಲೋ ಕಮಾಂಡ್ ಆಗಿದೆ .ಸಿದ್ದರಾಮಯ್ಯ ಹಾಗೂ ಡಿಕೆಶಿ  ಮಧ್ಯೆ ಟ್ವಿಟ್ ವಾರ್ ಆರಂಭವಾಗಿದೆ. ಕೊಟ್ಟ ಮಾತು ಉಳಿಸಿಕೊಳ್ಳಬೇಕು ಅಂತಾ ಉಪಮುಖ್ಯ ಮಂತ್ರಿ ಹೇಳುತ್ತಾರೆ .ಕೊಟ್ಟ ಭರವಸೆಗಳನ್ನು ಈಡೇರಿಸಿಕೊಳ್ಳಬೇಕು ಅಂತಾ ಸಿಎಂ ಹೇಳುತ್ತಾರೆ. ಇವೆರಡರ ಮದ್ಯೆ ಪರಮೇಶ್ವರ್ ದಲಿತ ಮುಖ್ಯಮಂತ್ರಿ ಆಗಬೇಕು ಅನ್ನುತ್ತಾರೆ . ರಾಜ್ಯದಲ್ಲಿ ರೈತರು ಬೀದಿಪಾಲಾಗಿ ಅತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ. ದೆಹಲಿ, ಬೆಂಗಳೂರಿನಲ್ಲಿ ಕುದುರೆ ವ್ಯಾಪಾರ ಆರಂಭವಾಗಿದೆ. ಇವರ ಗೊಂದಲದ ನಡುವೆ ಜಾತಿ ಜಾತಿಗಳ ನಡುವೆ ವಾಗ್ವಾದ ಗಲಾಟೆಗಳು ನಡೆಯುತ್ತಿವೆ. ಹಲವು ಸಮಾಜದ ಮುಖಂಡರು ನಮ್ಮ ಸಮಾಜದ ಮುಖಂಡ ಮುಖ್ಯಮಂತ್ರಿ ಆಗಬೇಕು ಎಂದು ಹೇಳುತ್ತಾರೆ . ಇದರಿಂದ ರಾಜ್ಯದಲ್ಲಿ ಜಾತಿ ಸಂಘರ್ಷ ಆಗುತ್ತೆ. ಅದೃಷ್ಟದಿಂದ ಸರ್ಕಾರ ಅಧಿಕಾರಕ್ಕೆ ಬಂದಿದೆ ಅಂದಿದ್ದಾರೆ.

ಕಬ್ಬು ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಕೊಟ್ಟು ಅಗತ್ಯ ವಸ್ತುಗಳ ಬೆಲೆ ಇಳಿಸಿ. ರೈತರ ಸಂಕಷ್ಟಕ್ಕೆ ಸ್ಪಂಧಿಸಿ ನಿಮ್ಮ ಬಲಬಲಾ ಗಂಡಸ್ತನ ತೋರಿಸಿ. ಮಗೆ ದೆಹಲಿ ವರಿಷ್ಟರು ಆಟಕ್ಕೂಂಟು ಲೆಕ್ಕಕ್ಕೇ ಇಲ್ಲ. ಮೆಕ್ಕೆಜೋಳ ಭತ್ತ ಖರೀದಿ ಕೇಂದ್ರ ಸ್ಥಾಪಿಸಲು ಯಾಕೆ ಆಗುತ್ತಿಲ್ಲ . ಕೂಡಲೇ ರಾಜ್ಯಪಾಲರು ಮಧ್ಯ ಪ್ರವೇಶ ಮಾಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇವೆ.ಏನು ಒಪ್ಪಂದ ಆಗಿದೆ ಎನ್ನುವುದರ ಬಗ್ಗೆ ಇಬ್ಬರು ಬಹಿರಂಗವಾಗಿ ಹೇಳಲಿ. ಡಿಕೆಶಿ ಯವರೇ ನಿಮ್ಮ ಹೈಕಮಾಂಡ್ ಏನೂ ಒಪ್ಪಂದ ಆಗಿದೆ ಭರವಸೆ ನೀಡಿದೆ ಬಹಿರಂಗಪಡಿಸಬೇಕು. ೨೨೪ ಕ್ಷೇತ್ರದಲ್ಲೂ ಬಿಜೆಪಿ ಸಂಘಟನೆ, ಅಭ್ಯರ್ಥಿಗಳು ಸಮರ್ಥರಿದ್ದಾರೆ . ಬಿಜೆಪಿ ಅಧ್ಯಕ್ಷರು ನಾಯಕರು ರೈತರ ಪರವಾಗಿ ಹೋರಾಟ ನಡೆಸುತ್ತಿದ್ದಾರೆ. ನಾನು ಜೋತಿಷ್ಯಿ ಅಲ್ಲ  ಸರ್ಕಾರದ ಭವಿಷ್ಯ ಹೇಳಲು. ಸರ್ಕಾರ ನಿಷ್ಕ್ರಿಯ ಆಗಿದೆ ಸರ್ಕಾರ ಗೊಂದಲದ ಗೂಡಾಗಿದೆ. ಹಿಂದೆ ವೀರಪ್ಪ ಮೊಯ್ಲಿ ಅವರ ಕಾಲದಲ್ಲಿ ನಡೆದ ಘಟನೆ ಮರುಕಳಿಸಬಹುದು. ಆಗಿನ ಚಾಕು ಚೂರಿ ಸಂಸ್ಕೃತಿ ಮತ್ತೆ ಮರುಕಳಿಸುವ ಸಾಧ್ಯತೆ ಇದೆ. ಅಂತರಿಕ ಕಚ್ಚಾಟದಿಂದ ಸರ್ಕಾರ ಪತನ ಆಗಬಹುದು. ರಾಜ್ಯಕಾರಣದಲ್ಲಿ ಸ್ವಾಮೀಜಿ ಗಳ ಮದ್ಯೆ ಪ್ರವೇಶ ಬಗ್ಗೆ ನೋ ಕಾಮೆಂಟ್ . ಸಮಾಜದ ಪರ ಸ್ವಾಮೀಜಿ ಗಳು ಬರೋದು ಸಹಜ . ಸಮಾಜಗಳ ಮದ್ಯೆ ಸಂಘರ್ಷ ಆಗಬಾರದು ಎಂದು ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.