ಮನೆ Latest News ಚಾರ್ಜ್ ಶೀಟ್ ನಲ್ಲಿ ರೇಣುಕಾಸ್ವಾಮಿ ವಿರುದ್ಧ ಡಿ ಗ್ಯಾಂಗ್ ಮೆರೆದ ಕ್ರೌರ್ಯದ ಇಂಚಿಂಚೂ ಅನಾವರಣ;ರೇಣುಕಾಸ್ವಾಮಿ ಬಿಟ್...

ಚಾರ್ಜ್ ಶೀಟ್ ನಲ್ಲಿ ರೇಣುಕಾಸ್ವಾಮಿ ವಿರುದ್ಧ ಡಿ ಗ್ಯಾಂಗ್ ಮೆರೆದ ಕ್ರೌರ್ಯದ ಇಂಚಿಂಚೂ ಅನಾವರಣ;ರೇಣುಕಾಸ್ವಾಮಿ ಬಿಟ್ ಬಿಡಿ ದಮ್ಮಯ್ಯ ಅಂತಾ ಬೇಡಿಕೊಳ್ಳುತ್ತಿರುವ ಫೋಟೋ ವೈರಲ್

0

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಪಟ್ಟಂತೆ ನಿನ್ನೆ ಪೊಲೀಸರು ಕೋರ್ಟ್ ಗೆ 3,991 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಚಾರ್ಜ್ ಶೀಟ್ ನಲ್ಲಿ ಡಿ ಗ್ಯಾಂಗ್ ರೇಣುಕಾಸ್ವಾಮಿಯನ್ನು ಯಾವ ರೀತಿ ಕೊಲೆ ಮಾಡಿದೆ ಎಂಬ ಇಂಚಿಂಚೂ ಮಾಹಿತಿ ಕೂಡ ಅನಾವರಣವಾಗಿದೆ.

ಬೆಂಗಳೂರಿನ ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಶೆಡ್ ನಲ್ಲಿ ರೇಣುಕಾಸ್ವಾಮಿಯನ್ನು ಡಿ ಗ್ಯಾಂಗ್ ಯಾವ ರೀತಿ ಹಲ್ಲೆ ಮಾಡಿ ಕೊಲೆ ಮಾಡಿತು ಅನ್ನೋದಕ್ಕೆ ಸಂಬಂಧಪಟ್ಟಂತೆ  ಫೋಟೋ ರಿವೀಲ್ ಆಗಿದೆ. ಗಡ್ಡಿ ಮನುಷ್ಯನಂತಿದ್ದ ರೇಣುಕಾಸ್ವಾಮಿ ಬಿಟ್ ಬಿಡಿ ನನ್ನ ದಮ್ಮಯ್ಯ ಅಂತಾ ಬೇಡಿಕೊಳ್ಳುತ್ತಿರುವ ಫೋಟೋ ವೈರಲ್ ಆಗಿದೆ. ಫೋಟೋ ನೋಡಿದ್ರೇನೆ ಗೊತ್ತಾಗುತ್ತೆ. ಡಿ ಗ್ಯಾಂಗ್ ಯಾವ ರೀತಿ ಚಿತ್ರಹಿಂಸೆ ನೀಡಿ ಆತನನ್ನು ಕೊಲೆ ಮಾಡಿದೆ ಅಂತಾ.

ಈಗಾಗಲೇ ಪೊಲೀಸರು ದರ್ಶನ್, ಅವರ ಸ್ನೇಹಿತೆ ಪವಿತ್ರಾ ಗೌಡ ಮತ್ತು 15 ಸಹಚರರ ವಿರುದ್ಧ 24ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ನ್ಯಾಯಾಲಯಕ್ಕೆ 3,991 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಪಿತೂರಿ, ಯೋಜನೆ, ಅಪಹರಣ, ಚಿತ್ರಹಿಂಸೆ, ಕೊಲೆ, ಸಾಕ್ಷ್ಯ ನಾಶದಲ್ಲಿ ದರ್ಶನ್, ಪವಿತ್ರ ಗೌಡರ ಪಾತ್ರ ಮತ್ತು ಅವರ ಅಭಿಮಾನಿ ರೇಣುಕಾಸ್ವಾಮಿ ಹತ್ಯೆಗೆ ಸಂಬಂಧಿಸಿದಂತೆ ಅವರ ನಾಲ್ವರು ಸಹಚರರನ್ನು ಪೊಲೀಸರಿಗೆ ಶರಣಾಗುವಂತೆ ಮಾಡುವ ಮೂಲಕ ಪೊಲೀಸರನ್ನು ದಾರಿ ತಪ್ಪಿಸುವ ಯೋಜನೆಯನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.

ಪವಿತ್ರಾಗೆ ಅಶ್ಲೀಲ ಮೆಸೇಜ್ ಗಳನ್ನು ಕಳುಹಿಸಿದ್ದಕ್ಕಾಗಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಅಪ್ರೂವರ್ ಆಗಲು ಒಪ್ಪಿಕೊಂಡ ಆರೋಪಿಗಳಲ್ಲಿ ಒಬ್ಬ ನೀಡಿರುವ ಹೇಳಿಕೆಯನ್ನು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.  ಅಲ್ಲದೇ ಪ್ರಕರಣದಲ್ಲಿ ದರ್ಶನ್ ಮತ್ತು ಇತರೆ ಆರೋಪಿಗಳ ಪಾತ್ರದ ಬಗ್ಗೆ  ಚಾರ್ಚ್ ಶೀಟ್ ನಲ್ಲಿ ವಿವರಿಸಲಾಗಿದೆ.

ಕೊನೆಗೂ ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆ

ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊನೆಗೂ ಪೊಲೀಸರು ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ಡಿ ಬಾಸ್ ದರ್ಶನ್, ಪವಿತ್ರಗೌಡ ಸೇರಿ ಎಲ್ಲಾ 17 ಆರೋಪಿಗಳ ವಿರುದ್ಧ ಪೊಲೀಸರು 3,991 ಪುಟಗಳಷ್ಟು ಚಾರ್ಜ್‌ಶೀಟ್ ಬೆಂಗಳೂರಿನ 24 ನೇ ಎಸಿಎಂಎಂ ಕೋರ್ಟ್ ಗೆ ಸಲ್ಲಿಸಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣ ದಾಖಲಾಗಿ ಸೆಪ್ಟೆಂಬರ್ 9 ಕ್ಕೆ 3 ತಿಂಗಳಾಗುತ್ತದೆ. ಅಂದರೆ 90 ದಿನಗಳಾಗುತ್ತವೆ.ಯಾವುದೇ ಪ್ರಕರಣ ದಾಖಲಾಗಿ 90 ದಿನಗಳ ಒಳಗಾಗಿ ಚಾರ್ಚ್ ಶೀಟ್ ಸಲ್ಲಿಸಬೇಕಾಗುತ್ತದೆ. ಹಾಗಾಗಿ ಇದೀಗ ಪ್ರಕರಣದ ತನಿಖಾಧಿಕಾರಿಯಾಗಿರುವ ಎಸಿಪಿ ಚಂದನ್ ಅವರು ಬೆಂಗಳೂರಿನ 24 ನೇ ಎಸಿಎಂಎಂ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಈ ಚಾರ್ಜ್ ಶೀಟ್ ನಲ್ಲಿ 200 ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ. ಅಲ್ಲದೇ ಈ ಬಗ್ಗೆ ಈಗಾಗಲೇ ಕಾನೂನು ತಜ್ಞರಿಂದ ಪೊಲೀಸ್ ಇಲಾಖೆ ಸಲಹೆ ಪಡೆದಿದೆ ಎನ್ನಲಾಗಿದೆ. ಎರಡ್ಮೂರು ಬಾರಿ ಪರಿಶೀಲನೆಯನ್ನೂ ಮಾಡಲಾಗಿದೆ ಎನ್ನಲಾಗಿದೆ.

ಇನ್ನು ಇಷ್ಟು ದಿನ ಜಾಮೀನಿಗೆ ಅರ್ಜಿ ಸಲ್ಲಿಸಲು ಪೊಲೀಸರು ಯಾವಾಗ ಚಾರ್ಜ್ ಶೀಟ್ ಸಲ್ಲಿಸುತ್ತಾರೆ ಎಂದು ಕಾದು ಕೂತಿದ್ದರು. ಇದೀಗ ಜಾರ್ಜ್ ಶೀಟ್ ಸಲ್ಲಿಕೆಯಾಗಿದ್ದು ಇನ್ನು ಆರೋಪಿಗಳು ಬೆಲ್ ಗಾಗಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.