ಹಾಸನ ; ಶಿರಾಡಿಘಾಟ್ ನ ದೊಡ್ಡತಪ್ಲು ಬಳಿ ಗುಡ್ಡ ಕುಸಿತವಾದ ಸ್ಥಳಕ್ಕೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಡಿಸಿ, ಎಸ್ಪಿ ಹಾಗು ಅದಧಿಕಾರಿಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿಘಾಟ್ ನಲ್ಲಿ ನಿನ್ನೆ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದು ಸಂಚಾರ ಸ್ಥಗಿತವಾಗಿತ್ತು.ಇಂದು ಸ್ಥಳಕ್ಕೆ ಆಗಮಿಸಿದ ಸಚಿವರು ಪರಿಶೀಲನೆ ನಡೆಸಿದ್ದಾರೆ.ಬಳಿಕ ಮಾತನಾಡಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಹಾಸನ ನೆನ್ನೆ ಗುಡ್ಸ ಕುಸಿತ ಆಗಿದೆ.ನಮ್ಮ ಅದೃಷ್ಟ ಯಾರಿಗೆ ಏನೂ ತೊಂದರೆ ಆಗಿಲ್ಲ.ಗುಡ್ಡ ಕುಸಿದು ಮಣ್ಣಿನ ಅಡಿ ಸಿಲುಕಿದ್ದ ವಾಹನಗಳನ್ನ ನಮ್ಮ ಸಿಬ್ಬಂದಿ ಹೊರ ತೆಗೆದಿದ್ದಾರೆ.ಶಿರಾಡಿಘಾಟ್ ಸಮಸ್ಯೆ ಇಂದು ನಿನ್ನೆಯದಲ್ಲ.ಇದು ಹಲವು ವರ್ಷಗಳಿಂದ ಸಮಸ್ಯೆ ಇದೆ.ಗುಡ್ಡಗಳನ್ನು ನೇರವಾಗಿ ಕಡಿದಿದ್ದರಿಂದ ಸಮಸ್ಯೆ ಆಗಿದೆ.ಇಲ್ಲಿನ ಸಮಸ್ಯೆ ಬಗ್ಗೆ ನಾವು ಸಿಎಂ ಇಂದನು ಕೂಡ ಪತ್ರ ಬರೆಸುತ್ತೇವೆ.ಸೂಕ್ತ ಬಂದೊ ಬಸ್ತ್ ಮಾಡದೆ ರಸ್ತೆ ಮಾಡಿ ಸಮಸ್ಯೆ ಆಗಿದೆ. ಇಲ್ಲಿನ ಸಮಸ್ಯೆ ಬಗ್ಗೆ ಜಿಯೊಲಜಿಕಲ್ ಸರ್ವೆ ಆಫ್ ಇಂಡಿಯಾ ದಿಂದ ವರದಿ ಪಡೆಯುತ್ತೇವೆ ಈಗ ಏನಾಗಿದೆ, ಯಾವ ರೀತಿ ಆಗಬೇಕು ಎಂದು ವರದಿ ಪಡೆಯುತ್ತೇವೆ ಎಂದರು.
ಸಿಎಂ ಮೂಲಕ ಎನ್ ಎಚ್ ಎ ಗೆ ಪತ್ರ ಬರೆದು ಸಮಸ್ಯೆ ಬಗೆಹರಿಸಲು ತಾಕೀತು ಮಾಡುತ್ತೇವೆ.ನಮ್ಮ ರಾಜ್ಯದ ಹಲವು ಕಡೆ ಗುಡ್ಡ ಕುಸಿತ ಆಗಿದೆ.ಒಟ್ಟು 300 ಕೋಟಿ ವೆಚ್ಚದಲ್ಲಿ ಭೂ ಕುಸಿತ ಆಗೋ ಸಾದ್ಯತೆ ಕಡೆಗಳಲ್ಲಿ ಕಾಮಗಾರಿ ಮಾಡುತ್ತೇವೆ.ಈ ಬಗ್ಗೆ ಶೀಘ್ರವಾಗಿ ಡಿಸಿಗಳಿಂದ ಪ್ರಸ್ತಾವನೆ ಪಡೆದು ತಡೆ ಕ್ರಮಗಳ ನ್ನು ಕೈಗೊಳ್ಳುತ್ತೇವೆ.ನಿನ್ನೆ ವಯನಾಡಿನಲ್ಲಿ ನಡೆದ ಘಟನೆ ನಮಗೆ ಎಚ್ಚರಿಕೆ ಗಂಟೆ.ನಮಗೆ ಇಷ್ಟ ಬಂದ ಹಾಗೆ ಕೆಲಸ ಮಾಡಿದ್ರೆ ಏನಾಗುತ್ತೆ ಎಂದು ಅದು ತೋರಿಸಿದೆ.ಅಲ್ಲಿಗೆ ನಮ್ಮ ಸರ್ಕಾರದಿಂದ ಇಬ್ಬರು ಅಧಿಕಾರಿಗಳನ್ನು ಕಳಿಸಲಾಗಿದೆ ಎಂದರು.
ಇನ್ನು ಕೇರಳ ಸರ್ಕಾರ ಕ್ಕೆ ಬೇಕಾದ ನೆರವು ಕೂಡ ನೀಡ್ತೇವೆ.ಇಂದು ಕೇರಳದಲ್ಲಿ ಆಗಿದೆ ನಾಳೆ ಎಲ್ಲಿ ಬೇಕಿದ್ದರು ಆಗಬಹುದು.ಜನರು, ಸರ್ಕಾರ ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದರು.
ಶಿರಾಡಿ ಘಾಟ್ ನಲ್ಲಿ ಮತ್ತೆ ಭೂಕುಸಿತ;ಮಣ್ಣಿನಡಿ ಸಿಲುಕಿದ ವಾಹನಗಳು
ಹಾಸನ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಲ್ಲಿ ಭೂಕುಸಿತ ಉಂಟಾಗುತ್ತಿದೆ. ಇನ್ನು ಮೊನ್ನೆ ಶಿರಾಡಿ ಘಾಟ್ ನಲ್ಲಿ ಭೂಕುಸಿತ ಉಂಟಾಗಿತ್ತು. ಚಲಿಸುತ್ತಿದ್ದ ಓಮ್ನಿ ಕಾರಿನ ಮೇಲೆಯೇ ಗುಡ್ಡ ಕುಸಿದು ಬಿದ್ದಿತ್ತು. ಇದೀಗ ಮತ್ತೆ ಶಿರಾಡಿ ಘಾಟ್ ನಲ್ಲಿ ಭೂ ಕುಸಿತ ಆಗಿದೆ.
ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿ ಘಾಟಿಯ ದೊಡ್ಡತಪ್ಲೆ ಬಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಮತ್ತೆ ಭಾರೀ ಭೂಕುಸಿತ ಉಂಟಾಗಿದೆ. ಪರಿಣಾಮ ಆರು ವಾಹನಗಳು ಮಣ್ಣನಡಿ ಸಿಲುಕಿವೆ. ಎರಡು ಕಾರು, ಒಂದು ಟ್ಯಾಂಕರ್ ಸೇರಿ ಒಟ್ಟು ಆರು ವಾಹನಗಳನ್ನು ಮಣ್ಣಿನಡಿ ಸಿಲುಕಿವೆ ಎನ್ನಲಾಗಿದೆ
ಭಾರೀ ಮಳೆಯಿಂದಾಗಿ ಮಣ್ಣು ತೆರವು ಕಾರ್ಯಾಚರಣೆ ಕೂಡ ಕಷ್ಟವಾಗಿದೆ. ಕಿಲೋ ಮೀಟರ್ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿವೆ. ರಕ್ಷಣಾ ಸಿಬ್ಬಂದಿ ಜೆಸಿಬಿ ಮೂಲಕ ಮಣ್ಣು ತೆರವು ಮಾಡುತ್ತಿದ್ದಾರೆ.ಇನ್ನು ಮತ್ತಷ್ಟು ಮಣ್ಣು ಕುಸಿಯುವ ಭೀತಿ ಇರೋದರಿಂದ ಸದ್ಯಕ್ಕೆ ಶಿರಾಡಿ ಘಾಟಿಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇನ್ನು ಸಂಚಾರ ದಟ್ಟಣೆ ಆಗುವ ಹಿನ್ನೆಲೆ ಸದ್ಯಕ್ಕೆ ಸಕಲೇಶಪುರ ರಸ್ತೆಯಲ್ಲಿ ವಾಹನ ಸವಾರರು ಸಂಚರಿಸಬಾರದೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಮನವಿಮಾಡಿದ್ದಾರೆ.
ಇದರ ಮಧ್ಯೆ ಸಕಲೇಶಪುರದಲ್ಲಿ ಬೃಹತ್ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿದೆ. ಸಕಲೇಶಪುರ ತಾಲೂಕಿನ ಕುಂಬರಡಿ ಹಾಗೂ ಹಾರ್ಲೇ ಎಸ್ಟೇಟ್ ಮಧ್ಯೆ ಭಾರೀ ಭೂ ಕುಸಿತ ಉಂಟಾಗಿದೆ. ರಸ್ತೆಯ ಸಮೇತ ಭೂಮಿ ಕೊಚ್ಚಿ ಹೋಗಿದೆ.200 ಮೀಟರ್ ಗೂ ಹೆಚ್ಚು ದೂರು ರಸ್ತೆ ಕೊಚ್ಚಿ ಹೋಗಿದೆ.ರಸ್ತೆಯೇ ಕೊಚ್ಚಿಹೋಗಿರೋದ್ರಿಂದ ಹತ್ತಾರು ಗ್ರಾಮಗಳ ಸಂಪರ್ಕ ಕಡಿತವಾಗಿದೆ.ರಸ್ತೆಯ ಪಕ್ಕದಲ್ಲಿ ಎತ್ತಿನಹೊಳೆ ಕಾಮಗಾರಿ ಮಾಡಲಾಗಿದ್ದು, ಎತ್ತಿನಹೊಳೆ ಅವೈಜ್ಞಾನಿಕ ಕಾಮಗಾರಿಯಿಂದಲೇ ಭೂಕುಸಿತವಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕುತ್ತಿದ್ದಾರೆ.