ಚಿತ್ರದುರ್ಗ; ದರ್ಶನ್ ಹಾಗೂ ಗ್ಯಾಂಗ್ ನಿಂದ ಕೊಲೆಯಾದ ರೇಣುಕಾಸ್ವಾಮಿ ಪುತ್ರನಿಗೆ ನಾಮಕರಣ ಶಾಸ್ತ್ರ ನೆರವೇರಿದೆ. ಶಶಿಧರ್ ಸ್ವಾಮಿ ಎಂದು ಕುಟುಂಬಸ್ಥರು ನಾಮಕರಣ ಮಾಡಿದ್ದಾರೆ. ರೇಣುಕಸ್ವಾಮಿ ಸಹೋದರಿ ಸುಚೇತ ನಾಮಕರಣ ನೆರವೇರಿಸಿದ್ದಾರೆ. ಮಗುವಿಗೆ ಜೇನುತುಪ್ಪ ತಿನ್ನಿಸಿ ಸುಚೇತ ನಾಮಕರಣ ನೆರವೇರಿಸಿದ್ದಾರೆ. ಕಿವಿಯಲ್ಲಿ ಹೆಸರು ಹೇಳಿ ನಾಮಕರಣ ಮಾಡಿದ್ದಾರೆ. ಈ ವೇಳೆ ಕಂದಮ್ಮ ಶಶಿಧರ್ ಸ್ವಾಮಿ ಕೈ ಬೆರಳಿಗೆ ಉಂಗುರ ಹಾಕಿ ಕಾಶಿನಾಥ್ ಶಿವನ ಗೌಡ್ರು ಸಂಭ್ರಮಿಸಿದ್ದಾರೆ.ರೇಣುಕಸ್ವಾಮಿ ತಾಯಿ ರತ್ನಪ್ರಭ ಬೆಳ್ಳಿ ಉಡುದಾರ ಹಾಕಿದ್ದಾರೆ.
ಚಿತ್ರದುರ್ಗದ ವಿಆರ್ ಎಸ್ ಬಡಾವಣೆಯ ಮನೆಯಲ್ಲಿ ತೊಟ್ಟಿಲು ಶಾಸ್ತ್ರ ನೆರವೇರಿಸಿದ್ದಾರೆ. ಇನ್ನು ರೇಣುಕಾಸ್ವಾಮಿ ಪುತ್ರನಿಗೆ ನಾಮಕರಣ ಬಳಿಕ ಮಾತನಾಡಿದ ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ ಹರಿಹರದಿಂದ ನನ್ನ ಸೊಸೆ ಸಹನಾ, ಮೊಮ್ಮಗ ಮನೆಗೆ ಬಂದಿದ್ದಾರೆ. ಮಗುವಿಗೆ ಐದು ತಿಂಗಳಲ್ಲಿದ್ದು ಇಂದು ನಾಮಕರಣ ಶಾಸ್ತ್ರ ಮಾಡಿದ್ದೇವೆ. ನಮ್ಮ ಸಂಪ್ರದಾಯದಂತೆ ನಾಮಕರಣ ಶಾಸ್ತ್ರ ಮಾಡಿದ್ದೇವೆ. ಶಶಿಧರ ಎಂದು ಮಗುವಿಗೆ ನಾಮಕರಣ ಮಾಡಿದ್ದೇವೆ. ಗುರುಗಳ ಆಶೀರ್ವಾದದಿಂದ ನಾಮಕರಣ, ಸಂಕ್ಷಿಪ್ತ ಕಾರ್ಯಕ್ರಮ ನಡೆದಿದೆ. ವಿಶೇಷ ಪ್ರಕರಣವೆಂದು ಪರಿಗಣಿಸಿ ಸೊಸೆಗೆ ನೌಕರಿ ನೀಡಲು ಮನವಿ ಮಾಡಿದ್ದೇವೆ, ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಿದ್ದು ಪುರಸ್ಕರಿಸಲು ಮನವಿ ಮಾಡಿದ್ದೇವೆ. ಆರಂಭದಲ್ಲಿ ಶ ಎಂದು ಬಂದಿರುವ ಕಾರಣ ಶಶಿಧರ ಎಂದು ನಾಮಕರಣ ಮಾಡಲಾಗಿದೆ. ಪುತ್ರ ರೇಣುಕಾಸ್ವಾಮಿಯೇ ಹುಟ್ಟಿ ಬಂದಷ್ಟು ಖುಷಿ ಆಗಿದೆ.ಸಂತೋಷ ಇದೆ, ಆದ್ರೆ ಹಳೆಯ ಕಹಿ ಘಟನೆ ಮರೆಯಲು ಆಗದು. ಸೊಸೆ, ಮಗನ ಮನೆ ತುಂಬಿಸಿಕೊಂಡ ಸಂತೋಷದಲ್ಲಿದ್ದೇವೆ.ಸಹನಾ ಸಹೋದರ, ಮಗುವಿನ ಸೋದರ ಮಾವ ತೊಟ್ಟಿಲು ಕೊಡಿಸಿದ್ದಾರೆ. ರೇಣುಕಾಸ್ವಾಮಿ ಸಹೋದರಿ, ಸೋದರತ್ತೆ ಸುಚೇತಾ ನಾಮಕರಣ ಮಾಡಿದ್ದಾರೆ.ಸೊಸೆ, ಮೊಮ್ಮಗನ ಭವಿಷ್ಯ ರೂಪಿಸುವಲ್ಲಿ ನಮ್ಮೆಲ್ಲರ ಜವಾಬ್ದಾರಿಯಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ಗೆ ನ್ಯಾಯ ಸಿಗಬೇಕು . ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಬೇಕೆಂಬುದು ನಮ್ಮ ಆಗ್ರಹ.ಸೊಸೆ ಸಹನಾ ಜೀವನಕ್ಕೆ ಆಧಾರ ನೀಡುವ ಕೆಲಸ ಆಗಬೇಕು. ಸರ್ಕಾರಿ ಕೆಲಸದ ಬಗ್ಗೆ ಕಾನೂನಲ್ಲಿ ಅವಕಾಶವಿಲ್ಲ ಎಂದು ಸರ್ಕಾರ ತಿಳಿಸಿದೆ.ಆದ್ರೆ ಪುನರ್ ಪರಿಶೀಲಿಸಲು ನಾವು ಅರ್ಜಿ ಸಲ್ಲಿಸಿದ್ದೇವೆ. ಕಣ್ವಕುಪ್ಪೆ, ರಂಭಾಪುರಿ ಸಲಹೆ ಪಡೆದು ಇಂದು ನಾಮಕರಣ ಮಾಡಿದ್ದೇವೆ. ನಿನ್ನೆ ಸಂಬಂಧಿಕರು
ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಮಾತನಾಡಿ ನನ್ನ ಪುತ್ರ ರೇಣುಕಾಸ್ವಾಮಿಯೇ ಹುಟ್ಟಿ ಬಂದಿದ್ದಾನೆ.ರೇಣುಕಾಸ್ವಾಮಿ ಬದುಕಿದ್ದರೆ ಇಂದು ಇನ್ನೂ ಸಂಭ್ರಮದಿಂದ ನಾಮಕರಣ ಮಾಡುತ್ತಿದ್ದೆವು. ಸಭಾಂಗಣದಲ್ಲಿ ನಾಮಕರಣ ಮಾಡಿ ಸಂಭ್ರಮಿಸುತ್ತಿದ್ದೆವು. ರೇಣುಕಾಸ್ವಾಮಿಗೆ ಪುತ್ರ ಹುಟ್ಟಿ ಬಂದಿದ್ದು ಖುಷಿ ಆಗಿದೆ. ಸೊಸೆ, ಮೊಮ್ಮಗ ಮನೆ ತುಂಬಿಸಿಕೊಂಡಿದ್ದು ಖುಷಿ ಆಗಿದೆ. ಮಗು ನೋಡಿ ಸಂತೋಷ ಆಗಿದೆ, ಒಳಗೆ ದುಃಖ ಇದ್ದೇ ಇದೆ ಎಂದ್ರು.











