ಮನೆ Latest News ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳು ಕೋರ್ಟ್ ಗೆ ಹಾಜರು

ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳು ಕೋರ್ಟ್ ಗೆ ಹಾಜರು

0

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪ್ರಕರಣದಲ್ಲಿ  ಜೈಲು ಸೇರಿ ಜಾಮೀನು ಮೇಲೆ ಬಿಡುಗಡೆಯಾಗಿರುವ ಎಲ್ಲಾ 17 ಆರೋಪಿಗಳು ಕೋರ್ಟ್ ಗೆ ಹಾಜರಾಗಿದ್ದಾರೆ . ಎ1 ಪವಿತ್ರಾ ಗೌಡ, ಎ2 ದರ್ಶನ್, ಎ3 ಪವನ್, ಎ4 ರಾಘವೇಂದ್ರ ಸೇರಿದಂತೆ ಎಲ್ಲ 17 ಮಂದಿ ಆರೋಪಿಗಳು ಮಂಗಳವಾರ ಕೋರ್ಟಿಗೆ ಹಾಜರಾಗಿದ್ದಾರೆ.

ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು ಮಂಜೂರಾಗಿದ್ದು ಅದರಲ್ಲಿ ಹಾಕಿರುವ ಷರತ್ತಿನಂತೆ ಆರೋಪಿಗಳು ಪ್ರತಿ ವಿಚಾರಣೆಗೆ ಹಾಜರಾಗಬೇಕು. ಅದರಂತೆ ಎಲ್ಲ ಆರೋಪಿಗಳು ಕೋರ್ಟ್‌ಗೆ ಹಾಜರಾಗಿದ್ದಾರೆ. ಮಂಗಳವಾರ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟಿ ನಲ್ಲಿ 17 ಆರೋಪಿಗಳ ವಿಚಾರಣೆ ನಡೆಯಿತು. ಕೋರ್ಟ್‌ನಲ್ಲಿ ಆರೋಪಿಗಳು ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ಮುಂದಿನ ವಿಚಾರಣೆಯನ್ನು ಏ.8ಕ್ಕೆ ಕೋರ್ಟ್ ಮುಂದೂಡಿದೆ.

ಇನ್ನು ಕೋರ್ಟ್ ನಲ್ಲಿ ದರ್ಶನ್ – ಪವಿತ್ರಾ ಗೌಡ ಕೋರ್ಟ್‌ನಲ್ಲಿ ಮುಖಾಮುಖಿ ಆದರೂ ಪರಸ್ಪರ ಮಾತನಾಡದೆ ತೆರಳಿದ್ದಾರೆ ಎನ್ನಲಾಗಿದೆ. ಕಳೆದ ಬಾರಿ ಕೋರ್ಟ್‌ಗೆ ಬಂದಾಗ ದರ್ಶನ್ – ಪವಿತ್ರಾ ಮಾತನಾಡಿದ್ದರು. ಈ ಬಾರಿ ಮಾತನಾಡದೆ ತೆರಳಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ ಜೂನ್ 8ರಂದು ರೇಣುಕಾಸ್ವಾಮಿ ಕೊಲೆ ನಡೆದಿತ್ತು. ಈ ಸಂಬಂಧ ದರ್ಶನ್, ಪವಿತ್ರಾ ಗೌಡ ಸೇರಿ 17 ಮಂದಿಯನ್ನು ಪೊಲೀಸರು ಹಂತ ಹಂತವಾಗಿ ಬಂಧಿಸಿದ್ದರು.

ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಪುತ್ರನಿಗೆ ನಾಮಕರಣ

ಚಿತ್ರದುರ್ಗ; ದರ್ಶನ್ ಹಾಗೂ ಗ್ಯಾಂಗ್ ನಿಂದ ಕೊಲೆಯಾದ ರೇಣುಕಾಸ್ವಾಮಿ ಪುತ್ರನಿಗೆ ನಾಮಕರಣ ಶಾಸ್ತ್ರ ನೆರವೇರಿದೆ. ಶಶಿಧರ್ ಸ್ವಾಮಿ  ಎಂದು ಕುಟುಂಬಸ್ಥರು ನಾಮಕರಣ ಮಾಡಿದ್ದಾರೆ. ರೇಣುಕಸ್ವಾಮಿ ಸಹೋದರಿ ಸುಚೇತ ನಾಮಕರಣ ನೆರವೇರಿಸಿದ್ದಾರೆ. ಮಗುವಿಗೆ ಜೇನುತುಪ್ಪ ತಿನ್ನಿಸಿ ಸುಚೇತ  ನಾಮಕರಣ  ನೆರವೇರಿಸಿದ್ದಾರೆ. ಕಿವಿಯಲ್ಲಿ ಹೆಸರು ಹೇಳಿ ನಾಮಕರಣ ಮಾಡಿದ್ದಾರೆ. ಈ ವೇಳೆ ಕಂದಮ್ಮ ಶಶಿಧರ್ ಸ್ವಾಮಿ ಕೈ ಬೆರಳಿಗೆ ಉಂಗುರ ಹಾಕಿ ಕಾಶಿನಾಥ್ ಶಿವನ ಗೌಡ್ರು ಸಂಭ್ರಮಿಸಿದ್ದಾರೆ.ರೇಣುಕಸ್ವಾಮಿ ತಾಯಿ ರತ್ನಪ್ರಭ ಬೆಳ್ಳಿ ಉಡುದಾರ ಹಾಕಿದ್ದಾರೆ.

ಚಿತ್ರದುರ್ಗದ ವಿಆರ್ ಎಸ್ ಬಡಾವಣೆಯ ಮನೆಯಲ್ಲಿ ತೊಟ್ಟಿಲು ಶಾಸ್ತ್ರ ನೆರವೇರಿಸಿದ್ದಾರೆ. ಇನ್ನು ರೇಣುಕಾಸ್ವಾಮಿ ಪುತ್ರನಿಗೆ ನಾಮಕರಣ ಬಳಿಕ ಮಾತನಾಡಿದ ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ  ಹರಿಹರದಿಂದ ನನ್ನ ಸೊಸೆ ಸಹನಾ,  ಮೊಮ್ಮಗ ಮನೆಗೆ ಬಂದಿದ್ದಾರೆ. ಮಗುವಿಗೆ ಐದು ತಿಂಗಳಲ್ಲಿದ್ದು ಇಂದು ನಾಮಕರಣ ಶಾಸ್ತ್ರ ಮಾಡಿದ್ದೇವೆ. ನಮ್ಮ ಸಂಪ್ರದಾಯದಂತೆ ನಾಮಕರಣ ಶಾಸ್ತ್ರ ಮಾಡಿದ್ದೇವೆ. ಶಶಿಧರ ಎಂದು ಮಗುವಿಗೆ ನಾಮಕರಣ ಮಾಡಿದ್ದೇವೆ. ಗುರುಗಳ ಆಶೀರ್ವಾದದಿಂದ ನಾಮಕರಣ, ಸಂಕ್ಷಿಪ್ತ ಕಾರ್ಯಕ್ರಮ ನಡೆದಿದೆ. ವಿಶೇಷ ಪ್ರಕರಣವೆಂದು ಪರಿಗಣಿಸಿ  ಸೊಸೆಗೆ ನೌಕರಿ ನೀಡಲು ಮನವಿ ಮಾಡಿದ್ದೇವೆ, ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಿದ್ದು ಪುರಸ್ಕರಿಸಲು ಮನವಿ ಮಾಡಿದ್ದೇವೆ. ಆರಂಭದಲ್ಲಿ ಶ ಎಂದು ಬಂದಿರುವ ಕಾರಣ ಶಶಿಧರ ಎಂದು ನಾಮಕರಣ ಮಾಡಲಾಗಿದೆ. ಪುತ್ರ ರೇಣುಕಾಸ್ವಾಮಿಯೇ ಹುಟ್ಟಿ ಬಂದಷ್ಟು ಖುಷಿ ಆಗಿದೆ.ಸಂತೋಷ ಇದೆ, ಆದ್ರೆ ಹಳೆಯ ಕಹಿ ಘಟನೆ ಮರೆಯಲು ಆಗದು. ಸೊಸೆ, ಮಗನ ಮನೆ ತುಂಬಿಸಿಕೊಂಡ ಸಂತೋಷದಲ್ಲಿದ್ದೇವೆ.ಸಹನಾ ಸಹೋದರ, ಮಗುವಿನ ಸೋದರ ಮಾವ ತೊಟ್ಟಿಲು ಕೊಡಿಸಿದ್ದಾರೆ. ರೇಣುಕಾಸ್ವಾಮಿ ಸಹೋದರಿ, ಸೋದರತ್ತೆ ಸುಚೇತಾ ನಾಮಕರಣ ಮಾಡಿದ್ದಾರೆ.ಸೊಸೆ, ಮೊಮ್ಮಗನ ಭವಿಷ್ಯ ರೂಪಿಸುವಲ್ಲಿ ನಮ್ಮೆಲ್ಲರ ಜವಾಬ್ದಾರಿಯಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ಗೆ ನ್ಯಾಯ ಸಿಗಬೇಕು . ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಬೇಕೆಂಬುದು ನಮ್ಮ ಆಗ್ರಹ.ಸೊಸೆ ಸಹನಾ ಜೀವನಕ್ಕೆ ಆಧಾರ ನೀಡುವ ಕೆಲಸ ಆಗಬೇಕು. ಸರ್ಕಾರಿ ಕೆಲಸದ ಬಗ್ಗೆ ಕಾನೂನಲ್ಲಿ ಅವಕಾಶವಿಲ್ಲ ಎಂದು ಸರ್ಕಾರ ತಿಳಿಸಿದೆ.ಆದ್ರೆ ಪುನರ್ ಪರಿಶೀಲಿಸಲು ನಾವು ಅರ್ಜಿ ಸಲ್ಲಿಸಿದ್ದೇವೆ. ಕಣ್ವಕುಪ್ಪೆ, ರಂಭಾಪುರಿ ಸಲಹೆ ಪಡೆದು ಇಂದು ನಾಮಕರಣ ಮಾಡಿದ್ದೇವೆ. ನಿನ್ನೆ ಸಂಬಂಧಿಕರು

ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಮಾತನಾಡಿ ನನ್ನ ಪುತ್ರ ರೇಣುಕಾಸ್ವಾಮಿಯೇ ಹುಟ್ಟಿ ಬಂದಿದ್ದಾನೆ.ರೇಣುಕಾಸ್ವಾಮಿ ಬದುಕಿದ್ದರೆ ಇಂದು ಇನ್ನೂ ಸಂಭ್ರಮದಿಂದ ನಾಮಕರಣ ಮಾಡುತ್ತಿದ್ದೆವು. ಸಭಾಂಗಣದಲ್ಲಿ ನಾಮಕರಣ ಮಾಡಿ ಸಂಭ್ರಮಿಸುತ್ತಿದ್ದೆವು. ರೇಣುಕಾಸ್ವಾಮಿಗೆ ಪುತ್ರ ಹುಟ್ಟಿ ಬಂದಿದ್ದು ಖುಷಿ ಆಗಿದೆ. ಸೊಸೆ, ಮೊಮ್ಮಗ ಮನೆ ತುಂಬಿಸಿಕೊಂಡಿದ್ದು ಖುಷಿ ಆಗಿದೆ. ಮಗು ನೋಡಿ ಸಂತೋಷ ಆಗಿದೆ, ಒಳಗೆ ದುಃಖ ಇದ್ದೇ ಇದೆ ಎಂದ್ರು.