ಬೆಂಗಳೂರು; ಯತ್ನಾಳ್ ಒಬ್ಬ ಗೋಮುಖ ವ್ಯಾಘ್ರ ಎಂದು ಮಾಜಿ ಸಚಿವ ರೇಣುಕಾಚಾರ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ನಾನು ನೇರವಾಗಿ ಮಾತಾಡ್ತಿದ್ದೀನಿ. ಯತ್ನಾಳ್ ಅವರೆ ಹಿಂದೆ ಬಿಜೆಪಿ ಬಿಟ್ಟು ಹೋಗಿದ್ದು ನೆನಪು ಆಯ್ತ. ಉಚ್ಚಾಟನೆ ಆಗಿ ಜೆಡಿಎಸ್ ಗೆ ಹೋಗಿದ್ರಿ. ಯಡಿಯೂರಪ್ಪ ಕಾಲು ಹಿಡಿದು ಬಂದ್ರಿ. ಯಡಿಯೂರಪ್ಪ ಅವರ ಬಗ್ಗೆ ಮಾತಾಡುವ ಯಾವ ನೈತಿಕತೆ ಇದೆ.
ರಾಷ್ಟ್ರೀಯ ನಾಯಕರ ಆಶೀರ್ವಾದ ರಾಜ್ಯ ನಾಯಕರ ಸಹಕಾರದಿಂದ ಕಾಲಿಗೆ ಚಕ್ರ ಕಟ್ಟಿ ಪಕ್ಷ ಕಟ್ಟಿದ್ದಾರೆ. ಸೈಕಲ್ ,ಬಸ್ ನಲ್ಲಿ ಓಡಾಡಿದ್ದಾರೆ. ಯಡಿಯೂರಪ್ಪ ರಾಜಕಾರಣಕ್ಕೆ ಬಂದಾಗ ಕಣ್ಣು ಬಿಟ್ಟಿದ್ದಾರೆ. ಸಂಘ ಪರಿಹಾರ ಅಭಿಪ್ರಾಯ ಸಂಗ್ರಹಿಸಿ ವಿಜಯೇಂದ್ರ ಪಕ್ಷ ಸಂಘಟನೆ ಮಾಡಿಲ್ವಾ. ಉಪಚುನಾವಣೆಯಲ್ಲಿ ಸಾಮರ್ಥ್ಯ ತೋರಿಸಿಲ್ವಾ. ಇನ್ನು 30 ವರ್ಷ ಯೋಚನೆ ಮಾಡಿ ವಿಜಯೇಂದ್ರ ಅವರನ್ನ ಅಧ್ಯಕ್ಷರು ಮಾಡಿದ್ದಾರೆ. 17 ಲೋಕಸಭಾ ಗೆದ್ವು, ಮೂಡ ಹಗಣರ ಬೆಳಕಿಗೆ ಬಂದಿದ್ದು ವಿಜಯೇಂದ್ರ ಅವರ ಪಾದಯಾತ್ರೆಯಿಂದ. ಏನ್ ಬೇಕಾದ್ರು ಮಾಡಿ ಅವರ ವರ್ಚಸ್ಸು ಕುಗ್ಗಲ್ವಾ. ಅನೇಕ ಬಾರಿ ಯಡಿಯೂರಪ್ಪ ಜೈಲಿಗೆ ಹೋಗಿದ್ರು, ಹೋರಾಟ ಮಾಡಿದ್ರು. ಅದಕ್ಕೆ ಅಧಿಕಾರಕ್ಕೆ ಬಂದಿದ್ದು. ಗೋಮುಖ ವ್ಯಾಘ್ರ ನೀವು. ಕಾಂಗ್ರೆಸ್ ನ ಏಜೆಂಟ್ ರಂತೆ ವರ್ತಿಸುತ್ತಿದ್ದಾರೆ. ಯಡಿಯೂರಪ್ಪ ವಿಜಯೇಂದ್ರ ಬಗ್ಗೆ ಮಾತಾಡ್ತಿದ್ದಾರೆ. ಮಗು ಚುವುಟಿ ತೊಟ್ಟಿಲು ತೂಗ್ತಿದ್ದಾರೆ ಕೆಲವರು. ದೆಹಲಿಯಲ್ಲಿರುವರಲ್ಲ ಇಲ್ಲು ಇದ್ದಾರೆ ಅವರು ಯತ್ನಾಳ್ ಅವರನ್ನು ಎತ್ತಿಕಟ್ಟುತ್ತಿದ್ದಾರೆ ಎಂದಿದ್ದಾರೆ.
ಯತ್ನಾಳ್ ಕಾಂಗ್ರೆಸ್ ಏಜೆಂಟ್. ಶನಿವಾರ ಸಭೆ ಕರಿತಿವೆ, ದೆಹಲಿಗೆ ಹೋಗ್ತಿವಿ. ಮಾತಾಡುವುದನ್ನ ಕಲಿಯಿರಿ. ತಂದೆ ತಾಯಿ ಇಲ್ವಾ ನಿಮಗೆ. ಹತಾಶೆಯಿಂದ ಮಾತಾಡ್ತಿದ್ದಾರೆ. ೨೦೦೯/೧೦ ರಲ್ಲಿ ಸಿಎಂ ಪದವಿ ತ್ಯಾಗ ಮಾಡಿದ್ರು. ಕೆಜೆಪಿಯಿಂದ ಬಿಜೆಪಿ ಗೆ ಬಂದಮೇಲೆ ಅದ್ಬುತ ಜಯ ಸಿಕ್ತು. ರಾಜ್ಯಾಧ್ಯಕ್ಷರಾದಾಗಲು ಕೆಲವರನ್ನ ಎತ್ತಿ ಕಟ್ಟಿದ್ರು. ಯಡಿಯೂರಪ್ಪ ಅವರನ್ನ ಇಳಿಸಿದಾಗ ಏನಾಯ್ತು 64 ಸೀಟು ಬಂತು. ಅನಗತ್ಯವಾಗಿ ಟೀಕೆ ಮಾಡ್ತಿದ್ದಾರೆ ಇದನ್ನ ಸಹಿಸಲ್ಲ. ಯತ್ನಾಳ್ ಮೂರು ಲೆಬಲ್ ಇಟ್ಟುಕೊಂಡಿದ್ದಾರೆ,.ಉತ್ತರ ಕರ್ನಾಟಕದ ಹುಲಿ ಎಂದು ಅಭಿವೃದ್ಧಿ ಮಾಡಿದ್ದಾರಾ. ಹಿಂದು ಹುಲಿಯಾಗಿದ್ರೆ, ಟಿಪ್ಪು ಖಡ್ಗ ಹಾಕಿ, ಟಿಪ್ಪು ಡ್ರೆಸ್ ಹಾಕೊಂಡು ಅವರ ಜೊತೆ ಊಟ ಮಾಡದಲಪ್ಪ. ಪಂಚಮಸಾಲಿ ಹೋರಾಟದಲ್ಲಿ ಬೆಳಗಾವಿಯಲ್ಲಿ ಲಾಠಿ ಚಾರ್ಜ್ ಆದಾಗ ಅಮಾಯಕರ ಮೇಲೆ ಸ್ವಾಮೀಜಿ ನೊಂದುಕೊಂಡ್ರು. ನಾವು 2 ಎ ಮೀಸಲಾತಿ ಕೇಳಿಲ್ಲಾ ಅಂದ್ರು. ಯತ್ನಾಳ್ ಮೂರು ಮುಖವಾಡ ಹಾಕಿಕೊಂಡಿದ್ದಾರೆ. ಅವರ ಸ್ವಾರ್ಥಕ್ಕಾಗಿ ಅವರ ಮೂರು ಮುಖವಾಡ ಕಳಚಿದೆ.ನಿಮ್ಮ ಹಿಂದೆ ಯಾರಿದ್ದಾರೆ, ಅವರ ಹೆಸರು ಹೇಳಿ . ರಾಷ್ಟ್ರೀಯ ನಾಯಕರು ನಿಮ್ಮನ್ನ ಒಪ್ಪಿಕೊಳ್ತಾರಾ..? ಪ್ರಧಾನಿ, ಅಮಿತ್ ಶಾ , ನಡ್ಡಾ , ಸಂತೋಷ್ ಜಿ ಅವರು ವಿಜಯೇಂದ್ರ ಅವರನ್ನ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಏಕವಚನದಲ್ಲಿ ವಿಜಯೇಂದ್ರ ಬಚ್ಚಾ ಅಂತಿರಲ್ಲಾ..೧೭ ಜನ ಯಾರು ನಿಮಗೆ ಕರೆ ಮಾಡಿಲ್ಲಾ , ಸುಳ್ಳು ಹೇಳಬೇಡಿ ಎಂದರು.