ಮನೆ ಪ್ರಸ್ತುತ ವಿದ್ಯಮಾನ ಮಾಜಿ ಸಚಿವ ಕುಮಾರ ಬಂಗಾರಪ್ಪ ವಿರುದ್ಧ ದಾವಣಗೆರೆಯಲ್ಲಿ ಎಂ ಪಿ‌ ರೇಣುಕಾಚಾರ್ಯ ತೀವ್ರ ವಾಗ್ದಾಳಿ

ಮಾಜಿ ಸಚಿವ ಕುಮಾರ ಬಂಗಾರಪ್ಪ ವಿರುದ್ಧ ದಾವಣಗೆರೆಯಲ್ಲಿ ಎಂ ಪಿ‌ ರೇಣುಕಾಚಾರ್ಯ ತೀವ್ರ ವಾಗ್ದಾಳಿ

0

ದಾವಣಗೆರೆ; ಮಾಜಿ ಸಚಿವ ಕುಮಾರ ಬಂಗಾರಪ್ಪ ವಿರುದ್ಧ ದಾವಣಗೆರೆಯಲ್ಲಿ ಎಂ ಪಿ‌ ರೇಣುಕಾಚಾರ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನಿನೇನು ರಾಷ್ಟ್ರೀಯ ಅಧ್ಯಕ್ಷನಾ, ನಿನಗೆ ರಾಜಕೀಯ ಪುನರ್ ಜನ್ಮ ಕೊಟ್ಟಿದ್ದು ಯಡಿಯೂರಪ್ಪ. ನೂರಕ್ಕೆ ನೂರು ರಾಜ್ಯಾಧ್ಯಕ್ಷರ ಬದಲಾವಣೆ ಆಗುತ್ತದೆ ಎಂದು ಹೇಳುವ ನೀನು ರಾಷ್ಟ್ರೀಯ ಅಧ್ಯಕ್ಷನಾ. ನಿನಗೆ ಬಿಜೆಪಿ ಸಿದ್ದಾಂತ ಗೊತ್ತಿಲ್ಲ. ಶಿವಮೊಗ್ಗ ಬಿಜೆಪಿ ಸಂಘಟನೆ ಜೊತೆಗೆ ನೀ ಇಲ್ಲ. ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೀವು ಭಿನ್ನ ಮತಿಯ ‌ನಾಯಕರು ಹರಿಶ್ಚಂದ್ರನ ಮಕ್ಕಳಾ. ಸಾಚಾಗಳಾ. ಕಾಂಗ್ರೆಸ್ ಜೊತೆಗೆ ಒಳ ಒಪ್ಪಂದ ಮಾಡಿಕೊಂಡು ನಮಗೆ ಪಾಠ ಮಾಡುತ್ತೀರಾ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಅಲ್ಲದೇ  ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧವೂ ರೇಣುಕಾಚಾರ್ಯ ಗುಡುಗಿದ್ದಾರೆ. ಯತ್ನಾಳ್ ದು ಲೂಸ್ ಟಾಕಿಂಗ್ . ಅವರಿಗೆ ಬೈಯ್ಯೋದೆ ಕೆಲಸ ಆಗಿದೆ. ಅವರಿಗೆ ಭಾರತೀಯ ಜನತಾ ಪಾರ್ಟಿ ಮೇಲೆ ಅಭಿಮಾನ ಇದ್ದಿದ್ದರೆ ಈ ರೀತಿ ಹಾದಿ ಬೀದಿಯಲ್ಲಿ ಮಾತನಾಡಬಾರದು. ಶಿಸ್ತು ಸಮಿತಿಯ ಅಧ್ಯಕ್ಷರು ನೋಟಿಸ್ ನೀಡಿದಾಗ ಫೇಕ್ ನೋಟಿಸ್ ಅಂದ್ರು. ಜಯೇಂದ್ರ ಬಗ್ಗೆ ಮಾತನಾಡೋಕೆ ನಿಂಗೆ ಏನು ನೈತಿಕತೆ ಇದೆ? ಬಬಲೇಶ್ವರದಲ್ಲಿ ನಿನ್ನ ಕ್ಷೇತ್ರ ಅಲ್ಲಿಂದ ಸ್ಪರ್ಧೆ ಮಾಡು.ಅದನ್ನ ಬಿಟ್ಟು ಪ್ರಭಾವಿ ಸಚಿವರ ವಿರುದ್ಧ ಹೊಂದಾಣಿಕೆ ಮಾಡಿಕೊಂಡಿದ್ದೀಯಾ. ಕುಟುಂಬ ರಾಜಕಾರಣ ಅಂತ ಮಾತನಾಡುತ್ತೀಯ ನಿನ್ನ ಮಕ್ಕಳನ್ನ ಸರ್ಕಾರಿ ಕಾರ್ಯಕ್ರಮದಲ್ಲಿ ಕರೆ ತರ್ತೀಯಾ ಎಂದು ಯತ್ನಾಳ್ ವಿರುದ್ಧ ದಾವಣಗೆರೆಯಲ್ಲಿ ರೇಣುಕಾಚಾರ್ಯ ಆಕ್ರೋಶ ಹೊರ ಹಾಕಿದ್ದಾರೆ.

ಈ ತಿಂಗಳು 12 ತಾರೀಕು ಸಭೆ ನಿಯೋಜನೆ ಮಾಡಿದ್ವಿ .ಆದರೆ ಅಧ್ಯಕ್ಷರು ಬೇಡ ಅಂದ್ರು ಅದಕ್ಕೆ ಸುಮ್ಮನೆ ಆದ್ವಿ.ಸೂರ್ಯಚಂದ್ರ ಇರೋದು ಎಷ್ಟು ಸತ್ಯವೋ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರೆಯೋದು ಅಷ್ಟೆ ಸತ್ಯ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರೆಯುತ್ತಾರೆ. ಅವರ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮುಂದಿನ ವಿಧಾನಸಭಾ ಚುನಾವಣೆ ಅವರ ನೇತೃತ್ವದಲ್ಲಿ ನಡೆಯುತ್ತೆ. ದಾವಣಗೆರೆಯಲ್ಲಿ ರೇಣುಕಾಚಾರ್ಯ ಬಣದಿಂದ ಯಡಿಯೂರಪ್ಪ ಹುಟ್ಟುಹಬ್ಬ ಆಚರಿಸುವ ಬಗ್ಗೆ ಮಾತನಾಡಿದ ಅವರು ನಮಗೆ ರಾಜ್ಯಾಧ್ಯಕ್ಷರು ಸೂಚನೆ ಕೊಟ್ಟಿದ್ದಾರೆ. ಯಾವುದೇ ಸಮಾವೇಶ ಮಾಡದಂತೆ ಸೂಚನೆ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರೂ ಸೇರಿ ದಿನಾಂಕ ನಿಗಧಿ ಮಾಡಿ ಸಮಾವೇಶ ಮಾಡ್ತೀವಿ.ಬೆಳಗಾವಿಯಲ್ಲಿ ನಡೆದ ಗಲಾಟೆ ಪಕ್ಷಾತೀತ ಎಲ್ಲರೂ ಖಂಡಿಸಬೇಕು. ಕಂಡಕ್ಟರ್ ಮೇಲೆ ಕೇಸ್ ಮಾಡಿದ್ದು ತಪ್ಪು. ನಾವೆಲ್ಲಾ ಕನ್ನಡ ತಾಯಿ ಒಂದೇ ಮಕ್ಕಳಾಗಿ ಇರಬೇಕು‌ ಎಂದ ಅವರು ಹಿಜಾಬ್ ವಿಚಾರದಲ್ಲಿ ಸರ್ಕಾರ ನಿಲುವು ಬದಲಿಸಿದ್ರೆ ನಾವು ಕೇಸರಿ ಹಾಕತೀವಿ ಎಂದ ಎಚ್ಚರಿಸಿದ್ದಾರೆ.